ಸಿದ್ದರಾಮಯ್ಯ ರಿಟೈರ್ಮೆಂಟ್ಗೆ ಹತ್ತಿರವಿರುವ ಔಟ್ಗೋಯಿಂಗ್ ಚೀಫ್ ಮಿನಿಸ್ಟರ್: ಆರ್ ಅಶೋಕ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತೀರ ಹದಗೆಟ್ಟು ಹೋಗಿದೆ, ಗೃಹ ಸಚಿವರು ಕೇವಲ ತಮ್ಮ ಗೃಹಕ್ಕೆ ಮಾತ್ರ ಸಚಿವರಾಗಿದ್ದಾರೆ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವೂ ತಪ್ಪುವ ಲಕ್ಷಣಗಳಿವೆ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಕಡೆಯಂತೂ ಯಾರೂ ತಿರುಗಿ ನೋಡುವ ಹಾಗಿಲ್ಲ, ಇವೆರಡು ಜಿಲ್ಲೆಗಳು ಮುಖ್ಯಮಂತ್ರಿಯವರ ಕುಟುಂಬದ ನಿಗ್ರಾಣಿಯಲ್ಲಿವೆ ಎಂದು ಅಶೋಕ ವ್ಯಂಗ್ಯವಾಡಿದರು.
ಮೈಸೂರು, ಜೂನ್ 12: ಸಿದ್ದರಾಮಯ್ಯ (Siddaramaiah) ಬೇರೆ ಸರ್ಕಾರಗಳ ಬಗ್ಗೆ ಕಾಮೆಂಟ್ ಮಾಡೋದು, ಮಾರ್ಕ್ಸ್ ನೀಡೋದು ಯಾರಿಗೂ ಬೇಕಾಗಿಲ್ಲ, ಅವರೇನೋ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿರಬಹುದು, ಅದರೆ 6ತಿಂಗಳು ನಂತರ ಅವರ ಅಧಿಕಾರದ್ದೇ ಗ್ಯಾರಂಟಿ ಇಲ್ಲ, ಅವರೊಬ್ಬ ಔಟ್ ಗೋಯಿಂಗ್ ಚೀಫ್ ಮಿನಿಸ್ಟರ್, ನಿವೃತ್ತ ಜೀವನಕ್ಕೆ ಹತ್ತಿರದಲ್ಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಹೇಳಿದರು. ಮೈಸೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಕಳೆದ ಎರಡು ವರ್ಷಗಳಲ್ಲಿ ಸಿದ್ದರಾಮಯ್ಯರ ಅಭಿವೃದ್ಧಿಹೀನ ಸರ್ಕಾರಕ್ಕೆ ಸೊನ್ನೆ ನಂಬರನ್ನೂ ಕೊಡಲಾಗಲ್ಲ, ಅದೇನಿದ್ದರೂ ಮೈನಸ್ನಲ್ಲಿ ಕೊಡಬೇಕು ಎಂದು ಅಶೋಕ ಹೇಳಿದರು.
ಇದನ್ನೂ ಓದಿ: ಭೂಮಿಕ್ನನ್ನು ಕಳೆದುಕೊಂಡಿರುವ ಲಕ್ಷ್ಮಣ ಅವರಿಗೆ ಸಮಾಧಾನ ಹೇಳಲು ಬಂದಿದ್ದೇನೆ, ರಾಜಕೀಯಕ್ಕಲ್ಲ: ಅರ್ ಅಶೋಕ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ