ಕಾಬೂಲ್​ನಿಂದ ಒಂದೇ ದಿನದಲ್ಲಿ 21,600 ಜನರನ್ನು ಸ್ಥಳಾಂತರಿಸಿದ ಅಮೆರಿಕ

ಆಗಸ್ಟ್​ 14ರಿಂದ ಈವರೆಗೆ ಒಟ್ಟು 63,900 ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಅಮೆರಿಕ ಶ್ವೇತ ಭವನದ ಅಧಿಕಾರಿಗಳು ಹೇಳಿದ್ದಾರೆ.

ಕಾಬೂಲ್​ನಿಂದ ಒಂದೇ ದಿನದಲ್ಲಿ 21,600 ಜನರನ್ನು ಸ್ಥಳಾಂತರಿಸಿದ ಅಮೆರಿಕ
ಕಾಬೂಲ್ ವಿಮಾನ ನಿಲ್ದಾಣದಿಂದ ಅಮೆರಿಕ ಮಿಲಿಟರಿ ವಿಮಾನಗಳಲ್ಲಿ ಜನರನ್ನು ಕರೆದೊಯ್ಯಲಾಯಿತು.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 24, 2021 | 7:36 PM

ವಾಷಿಂಗ್​ಟನ್: ಕಾಬೂಲ್ ವಿಮಾನ ನಿಲ್ದಾಣದಿಂದ ಸೋಮವಾರ ಒಂದೇ ದಿನ 12,700 ಜನರನ್ನು ಅಮೆರಿಕ ಏರ್​ಲಿಫ್ಟ್ ಮಾಡಿದೆ. 37 ಮಿಲಿಟರಿ ವಿಮಾನಗಳು ಕಾರ್ಯಾಚರಣೆ ನಡೆಸಿವೆ. ಅಮೆರಿಕ ಮಿತ್ರಪಡೆಗಳು 57 ವಿಮಾನಗಳ ಮೂಲಕ 8,900 ಮಂದಿಯನ್ನು ಸ್ಥಳಾಂತರಿಸಿದೆ. ಆಗಸ್ಟ್​ 14ರಿಂದ ಈವರೆಗೆ ಒಟ್ಟು 63,900 ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಅಮೆರಿಕ ಶ್ವೇತ ಭವನದ ಅಧಿಕಾರಿಗಳು ಹೇಳಿದ್ದಾರೆ. ಕಾಬೂಲ್​ನಿಂದ ಮಂಗಳವಾರ 6,273 ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಕಾಬೂಲ್​ನಲ್ಲಿರುವ ಅಮೆರಿಕ ವಕ್ತಾರರು ತಿಳಿಸಿದ್ದಾರೆ.

ಅಫ್ಘಾನಿಸ್ತಾನದ ಮಹಿಳಾ ಹಕ್ಕು ಹೋರಾಟಗಾರ್ತಿ ಝಾರಿಫಾ ಘಫಾರಿ ತಮ್ಮ ಕುಟುಂಬದೊಂದಿಗೆ ಜರ್ಮನಿಗೆ ಪಲಾಯನ ಮಾಡಿದ್ದು, ಅಲ್ಲಿಯೇ ಅಶ್ರಯ ಪಡೆದಿದ್ದಾರೆ.

ಸ್ಥಳಾಂತರ ಬೇಡ: ತಾಲಿಬಾನ್ ಅಫ್ಘಾನಿಸ್ತಾನ ನಿವಾಸಿಗಳ ಸ್ಥಳಾಂತರಕ್ಕೆ ಅಮೆರಿಕ ಪ್ರೋತ್ಸಾಹಿಸಬಾರದು ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ. ಪಂಜ್​ಶಿರ್ ಪ್ರದೇಶದ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ತಾಲಿಬಾನ್ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಪಂಜ್​ಶಿರ್​ ಪ್ರಾಂತ್ಯದಲ್ಲಿ ಮುಂದುವರಿದ ಹೋರಾಟ ಅಫ್ಘಾನಿಸ್ತಾನದ ಪಂಜ್‌ಶಿರ್​ ಪ್ರಾಂತ್ಯದಲ್ಲಿ ತಾಲಿಬಾನ್ ಮತ್ತು ನಾರ್ದರ್ನ್ ಅಲಯನ್ಸ್​ ಮೈತ್ರಿಪಡೆಗಳ ನಡುವೆ ಗುಂಡಿನ ಚಕಮಕಿ ಮುಂದುವರಿದಿದೆ. ನೆರೆಯ ತಜಕಿಸ್ತಾನದಿಂದ ಹೆಲಿಕಾಪ್ಟರ್​ಗಳಲ್ಲಿ ಹೋರಾಟಗಾರರು ಪಂಜ್​ಶಿರ್​ಗೆ ಬಂದಿದ್ದಾರೆ. ತಾಲಿಬಾನ್​ ಉಗ್ರರು ಮತ್ತಷ್ಟು ಪಡೆಗಳನ್ನು ರವಾನಿಸಿದ್ದು ಹೋರಾಟ ತೀವ್ರವಾಗುತ್ತಿದೆ.

(America Evacuates 21600 people from Kabul helps coalition to evacuate their citizens)

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಹಂಗಾಮಿ ಸರ್ಕಾರ ರಚಿಸಿದ ತಾಲಿಬಾನ್: ಆಹಾರ ಧಾನ್ಯದ ಬೆಲೆ ಏರಿಕೆ

ಇದನ್ನೂ ಓದಿ: ತಾಲಿಬಾನ್​ ವಿರುದ್ಧ ಸೆಟೆದು ನಿಲ್ಲಲು ಹೆಲಿಕಾಪ್ಟರ್​ ಸಮೇತ ಮರಳಿ ಬಂದ ಯೋಧರು; ಪಂಜ್​ಶೀರ್​ ಪ್ರಾಂತ್ಯಕ್ಕೆ ಆಗಮನ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್