AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನವೇ ಅಫ್ಘಾನ್​ನ ಎಲ್ಲ ಸಮಸ್ಯೆಗಳಿಗೂ ಕಾರಣ, ಭಾರತವೇ ನಮ್ಮ ನಿಜವಾದ ಗೆಳೆಯ: ಅಫ್ಘಾನ್ ಪಾಪ್ ತಾರೆ ಅರ್ಯಾನಾ ಸಯೀದಾ

ಪಾಕಿಸ್ತಾನವೇ ಅಫ್ಘಾನಿಸ್ತಾನದ ಈಗಿನ ಸ್ಥಿತಿಗೆ ಕಾರಣ. ಸಂಕಷ್ಟ ಪರಿಸ್ಥಿತಿಯಲ್ಲಿ ಅಫ್ಘಾನಿಸ್ತಾನದ ಜನರಿಗೆ ಸಹಾಯ ಮಾಡಿದ ಭಾರತಕ್ಕೆ ನಾವು ಕೃತಜ್ಞರು ಎಂದು ಹೇಳಿದ್ದಾರೆ.

ಪಾಕಿಸ್ತಾನವೇ ಅಫ್ಘಾನ್​ನ ಎಲ್ಲ ಸಮಸ್ಯೆಗಳಿಗೂ ಕಾರಣ, ಭಾರತವೇ ನಮ್ಮ ನಿಜವಾದ ಗೆಳೆಯ: ಅಫ್ಘಾನ್ ಪಾಪ್ ತಾರೆ ಅರ್ಯಾನಾ ಸಯೀದಾ
ಅರ್ಯಾನಾ ಸಯೀದಾ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Aug 24, 2021 | 5:52 PM

Share

ದೆಹಲಿ: ತಾಲಿಬಾನ್ ಹಿಡಿತಕ್ಕೆ ಅಫ್ಘಾನಿಸ್ತಾನ ಸಿಲುಕುತ್ತಿದ್ದಂತೆಯೇ ಅಲ್ಲಿಂದ ಪರಾರಿಯಾಗಿರುವ ಖ್ಯಾತ ಪಾಪ್ ತಾರೆ ಅರ್ಯಾನಾ ಸಯೀದಾ ಉಗ್ರ ಸಂಘಟನೆಗಳಿಗೆ ನೆರವಾಗುತ್ತಿರುವ ಪಾಕಿಸ್ತಾನವನ್ನು ಕಟುವಾಗಿ ಟೀಕಿಸಿದ್ದಾರೆ. ತಾಲಿಬಾನ್​ಗೆ ಎಲ್ಲ ರೀತಿಯ ನೆರವು ನೀಡುತ್ತಿರುವ ಪಾಕಿಸ್ತಾನವೇ ಅಫ್ಘಾನಿಸ್ತಾನದ ಈಗಿನ ಸ್ಥಿತಿಗೆ ಕಾರಣ ಎಂದು ಆರೋಪಿಸಿದ್ದಾರೆ. ಸಂಕಷ್ಟ ಪರಿಸ್ಥಿತಿಯಲ್ಲಿ ಅಫ್ಘಾನಿಸ್ತಾನದ ಜನರಿಗೆ ಸಹಾಯ ಮಾಡಿದ ಭಾರತಕ್ಕೆ ನಾವು ಕೃತಜ್ಞರು ಎಂದು ಹೇಳಿದ್ದಾರೆ.

ಕಳೆದ ಹಲವು ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನವು ಏನು ಮಾಡುತ್ತಿದೆ ಎಂಬ ಬಗ್ಗೆ ನನಗೆ ಗೊತ್ತಿದೆ. ತಾಲಿಬಾನ್​ಗೆ ಶಕ್ತಿ ತುಂಬಿದ್ದು ಪಾಕಿಸ್ತಾನ. ನಮ್ಮ ಸರ್ಕಾರವು ತಾಲಿಬಾನಿಗಳನ್ನು ಮಟ್ಟಹಾಕಲು ಮುಂದಾದಾಗ ಅಲ್ಲಿ ನಮಗೆ ಪಾಕಿಸ್ತಾನಿಯರು ಕಾಣಿಸುತ್ತಿದ್ದರು. ಇನ್ನಾದರೂ ಅವರು ತಮ್ಮಪಾಡಿಗೆ ತಾವಿದ್ದು, ಅಫ್ಘಾನಿಸ್ತಾನದ ತಂಟೆಗೆ ಬರುವುದಿಲ್ಲ ಎಂದುಕೊಂಡಿದ್ದೇನೆ ಎಂದು ಎಎನ್​ಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದರು.

ತಾಲಿಬಾನ್ ಉಗ್ರಗಾಮಿಗಳಿಗೆ ಪಾಕಿಸ್ತಾನವು ತರಬೇತಿ ನೀಡುತ್ತಿದೆ ಎಂದು ಆರೋಪಿಸಿದ ಅವರು, ತಾಲಿಬಾನ್​ನ ಮುಖ್ಯ ನೆಲೆ ಪಾಕಿಸ್ತಾನದಲ್ಲಿಯೇ ಇದೆ. ವಿಶ್ವ ಸಮುದಾಯ ಇನ್ನು ಮುಂದಾದರೂ ಪಾಕಿಸ್ತಾನಕ್ಕೆ ಹಣಕಾಸಿನ ನೆರವು ನಿಲ್ಲಿಸಬೇಕು. ಪಾಕಿಸ್ತಾನಕ್ಕೆ ಸಿಗುವ ಹಣ ತಾಲಿಬಾನ್​ಗೆ ಹರಿದುಬರುತ್ತಿದೆ ಎಂದು ದೂರಿದರು.

ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ಸಾಧ್ಯತೆಯ ಕುರಿತು ವಿಶ್ವ ಸಮುದಾಯವು ಸಮಾಲೋಚನೆ ನಡೆಸಬೇಕು. ಅಫ್ಘಾನಿಸ್ತಾನದ ವಿದ್ಯಮಾನಗಳಲ್ಲಿ ಮೂಗು ತೂರಿಸದಂತೆ ಪಾಕಿಸ್ತಾನವನ್ನು ತಡೆಯಬೇಕು ಎಂದು ಒತ್ತಾಯಿಸಿದರು. ಅಫ್ಘಾನಿಸ್ತಾನದ ಜನರ ಬದುಕು ಸುಧಾರಿಸಲು ಭಾರತ ಸರ್ಕಾರ ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಭಾರತವನ್ನು ನಿಜವಾದ ಗೆಳೆಯ ಎಂದು ಬಣ್ಣಿಸಿದರು.

‘ಭಾರತವು ಬಹುಕಾಲದಿಂದ ನಮಗೆ ಹಿತಬಯಸುತ್ತಿದೆ. ನಮ್ಮ ಜೊತೆಗೆ ನಿಜವಾದ ಮಿತ್ರನಂತೆ ಭಾರತ ವರ್ತಿಸಿದೆ. ಅಫ್ಘಾನಿಸ್ತಾನದ ನಿರಾಶ್ರಿತರು ಸೇರಿದಂತೆ ಎಲ್ಲ ಪೌರರ ವಿಚಾರದಲ್ಲೂ ಭಾರತ ಸದ್ಭಾವನೆಯಿಂದ ವರ್ತಿಸಿದೆ. ವಿಶ್ವ ವೇದಿಕೆಗಳಲ್ಲಿ ನಮ್ಮ ದೇಶದ ಪರವಾಗಿ ಭಾರತ ಧ್ವನಿಯೆತ್ತಿದೆ. ನಾವು ಭಾರತಕ್ಕೆ ಕೃತಜ್ಞರಾಗಿದ್ದೇವೆ. ನಮ್ಮ ನೆರೆಹೊರೆಯಲ್ಲಿರುವ ಬೇರೆ ಯಾವುದೇ ದೇಶವು ಭಾರತದಷ್ಟು ಪ್ರೀತಿಯಿಂದ ವರ್ತಿಸಲಿಲ್ಲ’ ಎಂದು ಅವರು ಹೇಳಿದರು.

ಅರ್ಯಾನಾ ಸಯೀದಾ 2015ರಲ್ಲಿ ಕ್ರೀಡಾಂಗಣವೊಂದರಲ್ಲಿ ಹಾಡು ಹೇಳಿದ್ದರು. ಈ ಮೂಲಕ ತಾಲಿಬಾನ್ ಹೇರಿದ್ದ ಮೂರು ನಿರ್ಬಂಧಗಳನ್ನು ಒಂದೇ ಸಲಕ್ಕೆ ತೊಡೆದುಹಾಕಿದ್ದರು. ಹಿಜಾಬ್ ಧರಿಸದಿರುವುದು, ಮಹಿಳೆಯೊಬ್ಬರು ಹಾಡುವುದು ಮತ್ತು ಕ್ರೀಡಾಂಗಣದಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳುವುದಕ್ಕೆ ತಾಲಿಬಾನ್ ಆಡಳಿತದಲ್ಲಿ ನಿರ್ಬಂಧವಿತ್ತು.

(Afghanistan pop star Aryana Sayeed blames Pakistan for Taliban says India is our true friend)

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಹಂಗಾಮಿ ಸರ್ಕಾರ ರಚಿಸಿದ ತಾಲಿಬಾನ್: ಆಹಾರ ಧಾನ್ಯದ ಬೆಲೆ ಏರಿಕೆ

ಇದನ್ನೂ ಓದಿ: Panjshir: ತಾಲಿಬಾನ್ ಪಾಲಿಗೆ ಈವರೆಗೆ ಸವಾಲಾಗಿಯೇ ಉಳಿದಿರುವ ಅಫ್ಘಾನಿಸ್ತಾನದ ಪ್ರತಿರೋಧದ ಕಣಿವೆ ಪಂಜ್​ಶೀರ್​

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ