AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘಾನಿಸ್ತಾನದಲ್ಲಿ ಹಂಗಾಮಿ ಸರ್ಕಾರ ರಚಿಸಿದ ತಾಲಿಬಾನ್: ಆಹಾರ ಧಾನ್ಯದ ಬೆಲೆ ಏರಿಕೆ

ಸಂಪನ್ಮೂಲ ಸಂಗ್ರಹಕ್ಕಾಗಿ ತಾಲಿಬಾನಿಗಳು ಅಡುಗೆ ತೈಲ ಮತ್ತು ಆಹಾರ ಧಾನ್ಯಗಳ ಬೆಲೆಯನ್ನು ಶೇ 35ರಷ್ಟು ಹೆಚ್ಚಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಹಂಗಾಮಿ ಸರ್ಕಾರ ರಚಿಸಿದ ತಾಲಿಬಾನ್: ಆಹಾರ ಧಾನ್ಯದ ಬೆಲೆ ಏರಿಕೆ
ಅಫ್ಘಾನಿಸ್ತಾನದ ಬ್ಯಾಂಕ್​ಗಳ ಎದುರು ಜನರು ಸಾಲುಗಟ್ಟಿದ್ದಾರೆ.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 24, 2021 | 2:48 PM

ಕಾಬೂಲ್: ಅಫ್ಘಾನಿಸ್ತಾನದ ಆಡಳಿತಕ್ಕಾಗಿ ತಾಲಿಬಾನಿಗಳು ಹಂಗಾಮಿ ಸರ್ಕಾರ ರಚಿಸಿದ್ದಾರೆ. ವಿವಿಧ ಇಲಾಖೆಗಳಿಗೆ ಸಚಿವರನ್ನು ನೇಮಿಸಲಾಗಿದೆ. ಶಿಕ್ಷಣ ಖಾತೆಗೆ ಸಖಾವುಲ್ಲಾ, ಉನ್ನತ ಶಿಕ್ಷಣ ಇಲಾಖೆಗೆ ಅಬ್ದುಲ್ ಬಾಕಿ, ಒಳಾಡಳಿತಕ್ಕೆ (ಗೃಹ) ಸದರ್ ಇಬ್ರಾಹಿಂ, ಹಣಕಾಸು ಇಲಾಖೆಗೆ ಗುಲ್ ಆಗಾ, ಕಾಬೂಲ್ ಗವರ್ನರ್ ಆಗಿ ಮುಲ್ಲಾ ಶಿರಿನ್, ಕಾಬೂಲ್ ಮೇಯರ್ ಆಗಿ ಅಹಮದುಲ್ಲಾ ನೋಮನಿ, ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿ ನಜೀಬುಲ್ಲಾ ಅವರನ್ನು ನೇಮಿಸಲಾಗಿದೆ.

ನಗದು ಕೊರತೆಯಿಂದ ಅಫ್ಘಾನ್ ಆರ್ಥಿಕತೆ ಕುಸಿಯುತ್ತಿದ್ದು, ಇದನ್ನು ಸರಿಪಡಿಸುವ ಹೊಣೆಗಾರಿಕೆಯನ್ನು ಹಾಜಿ ಮೊಹಮದ್ ಇದರೀಸ್ ಅವರಿಗೆ ನೀಡಲಾಗಿದೆ. ಕಾಬೂಲ್ ಸೇರಿದಂತೆ ಅಫ್ಘಾನಿಸ್ತಾನದ ವಿವಿಧ ಪ್ರಾಂತ್ಯಗಳಲ್ಲಿ ಬ್ಯಾಂಕ್ ಶಾಖೆಗಳು ಮತ್ತು ಎಟಿಎಂಗಳಲ್ಲಿ ಹಣ ಪಡೆಯಲು ಜನರು ಸಾಲುಗಟ್ಟಿದ್ದಾರೆ. ಸಂಪನ್ಮೂಲ ಸಂಗ್ರಹಕ್ಕಾಗಿ ತಾಲಿಬಾನಿಗಳು ಅಡುಗೆ ತೈಲ ಮತ್ತು ಆಹಾರ ಧಾನ್ಯಗಳ ಬೆಲೆಯನ್ನು ಶೇ 35ರಷ್ಟು ಹೆಚ್ಚಿಸಿದ್ದಾರೆ.

ಪಂಜ್​ಶಿರ್ ಪ್ರಾಂತ್ಯದಲ್ಲಿ ತೀವ್ರ ಹೋರಾಟ ಅಫ್ಘಾನಿಸ್ತಾನದ ಈಶಾನ್ಯಕ್ಕಿರುವ ಪಂಜ್​ಶಿರ್ ಪ್ರಾಂತ್ಯದಲ್ಲಿ ತಾಲಿಬಾನ್​ಗೆ ಮಸೂದ್ ನೇತೃತ್ವದ ನಾರ್ದರ್ನ್ ಅಲಯನ್ಸ್​ ಪಡೆಗಳಿಂದ ಪ್ರಬಲ ಪ್ರತಿರೋಧ ವ್ಯಕ್ತವಾಗಿದೆ. ಅಫ್ಘಾನಿಸ್ತಾನದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸರ್ಕಾರಿ ಪಡೆಗಳು ಇದೀಗ ಪಂಜ್​ಶಿರ್​ನಲ್ಲಿ ಒಗ್ಗೂಡಿದ್ದು, ತಾಲಿಬಾನ್​ನೊಂದಿಗೆ ಪ್ರಬಲ ಹೋರಾಟ ನಡೆಸಲು ಸಜ್ಜಾಗಿವೆ. ಅಫ್ಘಾನಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ತಜಕಿಸ್ತಾನದಿಂದಲೂ ಪಂಜ್​ಶಿರ್ ಪ್ರಾಂತ್ಯಕ್ಕೆ ಯುದ್ಧೋಪಕರಣಗಳು ಸೇರಿದಂತೆ ಅಗತ್ಯ ಸಾಮಗ್ರಿಗಳು ಪೂರೈಕೆಯಾಗುತ್ತಿವೆ.

ತಾಲಿಬಾನ್ ದಾಳಿಯ ವೇಳೆ ಅಫ್ಘಾನಿಸ್ತಾನದಿಂದ ತಜಕಿಸ್ತಾನಕ್ಕೆ ಪರಾರಿಯಾಗಿದ್ದ ಅಫ್ಘಾನಿಸ್ತಾನದ ಯೋಧರು 3 ಹೆಲಿಕಾಪ್ಟರ್‌ಗಳಲ್ಲಿ ಪಂಜ್​ಶಿರ್​ ಪ್ರದೇಶಕ್ಕೆ ಬಂದಿದ್ದಾರೆ. ತಾಲಿಬಾನಿಗಳಿಗೆ ಸೆಡ್ಡು ಹೊಡೆದು ನಿಂತಿರುವ ಪಂಜ್​ಶಿರ್ ಪ್ರಾಂತ್ಯದ ಶಕ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ತಾಲಿಬಾನ್ ಹೋರಾಟಗಾರರೊಂದಿಗೆ ಪಾಕಿಸ್ತಾನದ ಸೇನೆ ಮತ್ತು ನಾಗರಿಕರು ಇದ್ದಾರೆ ಎಂಬ ಆರೋಪಕ್ಕೆ ಪುಷ್ಟಿ ನೀಡುವ ಪುರಾವೆಗಳನ್ನೂ ನಾರ್ದರ್ನ್ ಅಲಯನ್ಸ್​ ಟ್ವೀಟ್ ಮಾಡಿದೆ. ‘ಪ್ರಿಯ ಪಾಕಿಸ್ತಾನೀಯರೇ ನಮ್ಮ ದೇಶಕ್ಕೆ ಬಂದರೆ ನಿಮ್ಮನ್ನು ನರಕಕ್ಕೆ ಕಳಿಸುತ್ತೇವೆ’ ಎಂದು ಅಫ್ಘಾನಿಸ್ತಾನದ ವಿದ್ಯಮಾನಗಳಲ್ಲಿ ಪದೇಪದೆ ಮೂಗು ತೂರಿಸುವ ಪಾಕಿಸ್ತಾನವನ್ನು ಎಚ್ಚರಿಸಿದೆ.

(Taliban in Afghanistan Announces Interim Government Edible Oil Price Hike)

ಇದನ್ನೂ ಓದಿ: Protect Afghan Women : ಅಫ್ಘಾನಿಸ್ತಾನದ ಪುರುಷರನ್ನು ಆ ನೆಲದ ಮಹಿಳೆಯರು ಏನೆಂದು ನೆನಪಿಟ್ಟುಕೊಳ್ಳುವರು?

ಇದನ್ನೂ ಓದಿ: ಪಂಜ್​ಶಿರ್​ ಹೋರಾಟಕ್ಕೆ ತಜಕಿಸ್ತಾನ್ ಬೆಂಬಲ: ಮತ್ತೊಂದು ಮಜಲಿಗೆ ಅಫ್ಘಾನಿಸ್ತಾನ ಯುದ್ಧ

Published On - 2:45 pm, Tue, 24 August 21

ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್