VIDEO: ಜೋ ರೂಟ್ ಅತ್ಯುತ್ತಮ ಫೀಲ್ಡಿಂಗ್: ಭಾರತಕ್ಕೆ ಬಿಟ್ಟಿಯಾಗಿ ಸಿಕ್ತು 5 ರನ್!
India vs England 1st Test: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ (101) ಹಾಗೂ ಶುಭ್ಮನ್ ಗಿಲ್ (127) ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕಗಳ ನೆರವಿನೊಂದಿಗೆ ಭಾರತ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 359 ರನ್ ಕಲೆಹಾಕಿದೆ.
ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಲೀಡ್ಸ್ ನ ಹೆಡಿಂಗ್ಲೆಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಇಂಗ್ಲೆಂಡ್ ಭಾರತವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ಒದಗಿಸಿದರು.
ಈ ಭರ್ಜರಿ ಆರಂಭದೊಂದಿಗೆ ಟೀಮ್ ಇಂಡಿಯಾ 50 ಓವರ್‌ಗಳಲ್ಲಿ 210 ರನ್ ಕಲೆಹಾಕಿದ್ದರು. ಈ ಹಂತದಲ್ಲಿ ದಾಳಿಗಿಳಿದ ಬೆನ್ ಸ್ಟೋಕ್ಸ್ ಎಸೆತವನ್ನು ಯಶಸ್ವಿ ಜೈಸ್ವಾಲ್ ಸ್ಲಿಪ್ ನತ್ತ ಚಿಕ್ ಮಾಡಲು ಪ್ರಯತ್ನಿಸಿದರು. ಅತ್ತ ಸ್ಲಿಪ್ ನಲ್ಲಿದ್ದ ಫೀಲ್ಡರ್ ಗಳು ಕ್ಯಾಚ್ ಹಿಡಿಯುವ ಪ್ರಯತ್ನ ಮಾಡಿದ್ದರು.
ಆದರೆ ಚೆಂಡು ಸೆಕೆಂಡ್ ಸ್ಲಿಪ್ ನಲ್ಲಿದ್ದ ಫೀಲ್ಡರ್ ಕೈ ತಾಗಿ ಫಸ್ಟ್ ಸ್ಲಿಪ್ ನತ್ತ ಸಾಗಿತು. ತಕ್ಷಣವೇ ಜೋ ರೂಟ್ ಡೈವ್ ಹೊಡೆದು ಚೆಂಡನ್ನು ತಡೆದರು. ಆದರೆ ತಡೆದ ಚೆಂಡು ನೇರವಾಗಿ ಹೋಗಿದ್ದು ವಿಕೆಟ್ ಕೀಪರ್ ಹಿಂದೆ ಇಟ್ಟಿದ್ದ ಹೆಲ್ಮೆಟ್ ಕಡೆಗೆ. ಅತ್ತ ಚೆಂಡು ಹೆಲ್ಮೆಟ್ಗೆ ಬಡಿಯುತ್ತಿದ್ದಂತೆ ಅಂಪೈರ್ ಪೆನಾಲ್ಟಿಯಾಗಿ ಟೀಮ್ ಇಂಡಿಯಾಗೆ 5 ರನ್ ಗಳನ್ನು ನೀಡಿದ್ದಾರೆ.
ಐಸಿಸಿ ನಿಯಮದ ಪ್ರಕಾರ, ಫೀಲ್ಡರ್ಗಳು ಯಾವುದೇ ವಸ್ತುವಿನಿಂದ ಅಥವಾ ಫೀಲ್ಡಿಂಗ್ ತಂಡ ಮೈದಾನದಲ್ಲಿರಿಸಿದ ವಸ್ತುಗಳಿಂದ ಚೆಂಡನ್ನು ತಡೆದರೆ, ಅಥವಾ ಅನ್ಯಾಯವಾಗಿ ರನ್ಗೆ ಅಡ್ಡಿಯಾದರೆ ಅದನ್ನು ಕಾನೂನುಬಾಹಿರ ಎಂದು ಪರಿಗಣಿಸಲಾಗುತ್ತದೆ. ಅದರಂತೆ ಇಂಗ್ಲೆಂಡ್ ತಂಡದ ಫೀಲ್ಡರ್ಗಳು ವಿಕೆಟ್ ಹಿಂದೆ ಇಟ್ಟಿದ್ದ ಹೆಲ್ಮೆಟ್ಗೆ ಚೆಂಡು ಬಡಿದಿದೆ. ಹೀಗಾಗಿ ಆ ಬಾಲ್ ಅನ್ನು ಡೆಡ್ ಬಾಲ್ ಎಂದು ಪರಿಗಣಿಸಿ, ಇಂಗ್ಲೆಂಡ್ಗೆ ದಂಡವಾಗಿ, ಟೀಮ್ ಇಂಡಿಯಾಗೆ 5 ರನ್ಗಳನ್ನು ನೀಡಲಾಗಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ (101) ಹಾಗೂ ಶುಭ್ಮನ್ ಗಿಲ್ (127) ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕಗಳ ನೆರವಿನೊಂದಿಗೆ ಭಾರತ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 359 ರನ್ ಕಲೆಹಾಕಿದೆ.

ಇದ್ದಕ್ಕಿದ್ದಂತೆ ಚಲಿಸಿ ಒಬ್ಬ ವ್ಯಕ್ತಿಯ ಜೀವ ಬಲಿ ಪಡೆದ ಟಾಟಾ ಹ್ಯಾರಿಯರ್!

ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್

‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು

ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
