AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಇರಾನಿಯನ್ನರು ಆಶ್ರಯ ಪಡೆಯಲು ಪಾಕಿಸ್ತಾನಕ್ಕೆ ಪ್ರವೇಶಿಸಿದ್ದಾರಾ?: ವೈರಲ್ ವಿಡಿಯೋದ ಸತ್ಯ ಏನು?

Iran Israel War Fact Check: ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ವೈರಲ್ ಆಗಿರುವ ವಿಡಿಯೋ 2023 ರಲ್ಲಿ ಇರಾನ್ ಮೂಲಕ ಕರ್ಬಾಲಾಕ್ಕೆ ಹೋಗುವ ಪಾಕಿಸ್ತಾನಿ ಯಾತ್ರಿಕರಿಗೆ ಸಂಬಂಧಿಸಿದೆ ಎಂದು ಕಂಡುಹಿಡಿದಿದೆ. ಹಳೆಯ ಮತ್ತು ಸಂಬಂಧವಿಲ್ಲದ ವಿಡಿಯೋ ಈಗ ದಾರಿತಪ್ಪಿಸುವ ಹೇಳಿಕೆಗಳೊಂದಿಗೆ ವೈರಲ್ ಮಾಡಲಾಗುತ್ತಿದೆ.

Fact Check: ಇರಾನಿಯನ್ನರು ಆಶ್ರಯ ಪಡೆಯಲು ಪಾಕಿಸ್ತಾನಕ್ಕೆ ಪ್ರವೇಶಿಸಿದ್ದಾರಾ?: ವೈರಲ್ ವಿಡಿಯೋದ ಸತ್ಯ ಏನು?
Iran Israel Fact Check (1)
Vinay Bhat
|

Updated on: Jun 20, 2025 | 5:06 PM

Share

ಬೆಂಗಳೂರು (ಜೂ. 20): ಇರಾನ್ ಮತ್ತು ಇಸ್ರೇಲ್ (Iran Israel) ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ, ಎರಡೂ ದೇಶಗಳು ಪರಸ್ಪರ ವಾಯುದಾಳಿ ನಡೆಸುತ್ತಿವೆ. ಅದೇ ಸಮಯದಲ್ಲಿ, ಇತ್ತೀಚಿನ ವರದಿಯ ಪ್ರಕಾರ, ಇರಾನ್ ರಾಜಧಾನಿ ಟೆಹ್ರಾನ್‌ನಿಂದ ಹೆಚ್ಚಿನ ಸಂಖ್ಯೆಯ ಜನರು ವಲಸೆ ಹೋಗಲು ಪ್ರಾರಂಭಿಸಿದ್ದಾರೆ. ಈಗ ಈ ಸುದ್ದಿ ಬೆನ್ನಲ್ಲೇ, ಪಾಕಿಸ್ತಾನ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಕಾಣುವ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋವನ್ನು ಹಂಚಿಕೊಳ್ಳುವಾಗ, ಇರಾನಿಯನ್ನರು ಆಶ್ರಯ ಪಡೆಯಲು ಪಾಕಿಸ್ತಾನಕ್ಕೆ ಪ್ರವೇಶಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಇರಾನಿಯನ್ನರು ಈಗ ಆಶ್ರಯ ಪಡೆಯಲು ಪಾಕಿಸ್ತಾನಕ್ಕೆ ಪ್ರವೇಶಿಸಿದ್ದಾರೆ.. ಇಸ್ರೇಲ್ ಸೃಷ್ಟಿಸಿರುವ ವಿನಾಶವು ಎಷ್ಟರ ಮಟ್ಟಿಗೆ ಎಂದರೆ ಹೆಚ್ಚಿನ ಜನರು ಇರಾನ್ ತೊರೆದಿದ್ದಾರೆ, ಅದು ಇಸ್ರೇಲ್‌ಗೆ ಬಲವನ್ನು ನೀಡುತ್ತದೆ’’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Image
ಅಹಮದಾಬಾದ್ ವಿಮಾನ ಅಪಘಾತ ಎಂದು ಮತ್ತೊಂದು ಸುಳ್ಳು ವಿಡಿಯೋ ವೈರಲ್
Image
ಇದು ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಶವಗಳೇ?
Image
ಅಹಮದಾಬಾದ್ ವಿಮಾನ ಅಪಘಾತಕ್ಕೆ ಸ್ವಲ್ಪ ಮುಂಚಿನ ವಿಡಿಯೋ?
Image
ಮೊಬೈಲ್ ಟವರ್ ಅಳವಡಿಸುವಂತೆ TRAI ನಿಂದ ನಿಮಗೆ ಸಂದೇಶ ಬರುತ್ತಿದೆಯೇ?

ಇರಾನಿಯನ್ನರು ಪಾಕ್​ಗೆ ತೆರಳಿರುವುದು ನಿಜವೇ?:

ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ವೈರಲ್ ಆಗಿರುವ ವಿಡಿಯೋ 2023 ರಲ್ಲಿ ಇರಾನ್ ಮೂಲಕ ಕರ್ಬಾಲಾಕ್ಕೆ ಹೋಗುವ ಪಾಕಿಸ್ತಾನಿ ಯಾತ್ರಿಕರಿಗೆ ಸಂಬಂಧಿಸಿದೆ ಎಂದು ಕಂಡುಹಿಡಿದಿದೆ. ಹಳೆಯ ಮತ್ತು ಸಂಬಂಧವಿಲ್ಲದ ವಿಡಿಯೋ ಈಗ ದಾರಿತಪ್ಪಿಸುವ ಹೇಳಿಕೆಗಳೊಂದಿಗೆ ವೈರಲ್ ಮಾಡಲಾಗುತ್ತಿದೆ.

Fact Check: ಅಹಮದಾಬಾದ್ ವಿಮಾನ ಅಪಘಾತ ಎಂದು ಮತ್ತೊಂದು ಸುಳ್ಳು ವಿಡಿಯೋ ವೈರಲ್

ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ ಲೆನ್ಸ್ ಮೂಲಕ ಹುಡುಕಿದೆವು. ಈ ಸಂದರ್ಭ, ರಿಜ್ವಿ ಎಂಬ ಎಕ್ಸ್ ಹ್ಯಾಂಡಲ್‌ನಲ್ಲಿ ಈ ವಿಡಿಯೋ ಅಪ್‌ಲೋಡ್ ಆಗಿರುವುದು ಕಂಡುಬಂದಿದೆ. ಆಗಸ್ಟ್ 30, 2023 ರಂದು ಪೋಸ್ಟ್ ಮಾಡಲಾದ ವಿಡಿಯೋದ ಪ್ರಕಾರ, “ಇದು ತಫ್ತಾನ್ ಗಡಿಯಲ್ಲಿನ ಪರಿಸ್ಥಿತಿ. ಯಾತ್ರಿಕರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಮತ್ತು ಅವರಿಂದ ಲಂಚ ಪಡೆಯಲಾಗುತ್ತಿದೆ. ಆದರೆ ಈ ಎಲ್ಲಾ ತೊಂದರೆಗಳ ಹೊರತಾಗಿಯೂ, ಯಾತ್ರಿಕರ ಹೃದಯದಲ್ಲಿ ಇಮಾಮ್ ಹುಸೇನ್ ಮೇಲಿನ ಪ್ರೀತಿ ಕಡಿಮೆಯಾಗುತ್ತಿಲ್ಲ” ಎಂದು ಬರೆಯಲಾಗಿದೆ.

ಇದೇವೇಳೆ ಆಗಸ್ಟ್ 9, 2024 ರಂದು ಇದೇ ವೈರಲ್ ವೀಡಿಯೊವನ್ನು ಫೇಸ್​ಬುಕ್ ಬಳಕೆದಾರರೊಬ್ಬರು ಹಂಚಿಕೊಂಡಿರುವುದು ಸಿಕ್ಕಿತು. ಪೋಸ್ಟ್‌ನಲ್ಲಿರುವ ಮಾಹಿತಿಯ ಪ್ರಕಾರ, ಕರ್ಬಾಲಾಗೆ ಹೋಗುವ ಯಾತ್ರಾರ್ಥಿಗಳನ್ನು ಪಾಕಿಸ್ತಾನ-ಇರಾನ್ ಗಡಿಯಲ್ಲಿ ಸ್ವಾಗತಿಸಲಾಗುತ್ತಿದೆ ಎಂದು ಹೇಳಲಾಗಿದೆ.

https://www.facebook.com/reel/913463647484181

ಈ ವಿಷಯದ ಕುರಿತು ಗೂಗಲ್​ನಲ್ಲಿ ಕೀವರ್ಡ್ ಸರ್ಚ್ ನಡೆಸಿದಾಗ, ಇರಾನ್ ಪ್ರೆಸ್.ಕಾಮ್‌ನಲ್ಲಿ ಇದಕ್ಕೆ ಸಂಬಂಧಿಸಿದ ಸುದ್ದಿ ನಮಗೆ ಸಿಕ್ಕಿತು. ಆಗಸ್ಟ್ 29, 2023 ರ ಸುದ್ದಿಯ ಪ್ರಕಾರ, “10,000 ಕ್ಕೂ ಹೆಚ್ಚು ಪಾಕಿಸ್ತಾನಿ ನಾಗರಿಕರು ತಫ್ತಾನ್/ಮಿರ್ಜಾವೆ ಗಡಿಯಿಂದ ಅರ್ಬೈನ್-ಎ-ಹುಸೇನಿ ಸೇರಲು ಇರಾನ್‌ಗೆ ಪ್ರವೇಶಿಸಲಿದ್ದಾರೆ. ಪಾಕಿಸ್ತಾನದಾದ್ಯಂತ 100 ಬಸ್‌ಗಳು ತಫ್ತಾನ್ ಗಡಿಯಲ್ಲಿರುವ ಮೌಕಿಬ್ ತಲುಪಿವೆ. ಪ್ರಯಾಣದ ತೊಂದರೆಗಳ ಹೊರತಾಗಿಯೂ, ಯಾತ್ರಿಕರು ತಾಳ್ಮೆ ಮತ್ತು ಉತ್ಸಾಹದಿಂದ ಈ ಸಂಪ್ರದಾಯವನ್ನು ನಿರ್ವಹಿಸುತ್ತಿದ್ದಾರೆ” ಎಂದು ವರದಿಯಲ್ಲಿದೆ.

ಮಾಹಿತಿಯ ಪ್ರಕಾರ, ಪಾಕಿಸ್ತಾನದ ಹೆಚ್ಚಿನ ಯಾತ್ರಿಕರು ಬಲೂಚಿಸ್ತಾನದ ತಫ್ತಾನ್ ಗಡಿಯ ಮೂಲಕ ಬಳಿಕ ಇರಾನ್ ಮೂಲಕ ಕರ್ಬಾಲಾಕ್ಕೆ ಭೂ ಮಾರ್ಗದ ಮೂಲಕ ಪ್ರಯಾಣಿಸುತ್ತಾರೆ, ಅಲ್ಲಿ ಪ್ರಮುಖ ಶಿಯಾ ಧಾರ್ಮಿಕ ಸ್ಥಳಗಳಾದ ಮಶಾದ್ ಮತ್ತು ಕೋಮ್ ಕೂಡ ಇದೆ.

ಹೀಗಾಗಿ ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ವೈರಲ್ ವಿಡಿಯೋ 2023 ರಲ್ಲಿ ಇರಾನ್ ಮೂಲಕ ಕರ್ಬಲಾಕ್ಕೆ ಭೇಟಿ ನೀಡಿದ ಪಾಕಿಸ್ತಾನಿ ಯಾತ್ರಿಕರಿಗೆ ಸಂಬಂಧಿಸಿದೆ ಎಂದು ಕಂಡುಹಿಡಿದಿದೆ. ಹಳೆಯ ಮತ್ತು ಸಂಬಂಧವಿಲ್ಲದ ವಿಡಿಯೋಗಳನ್ನು ಈಗ ದಾರಿತಪ್ಪಿಸುವ ಹೇಳಿಕೆಗಳೊಂದಿಗೆ ವೈರಲ್ ಮಾಡಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

ಇಸ್ರೇಲ್ ತೊರೆಯಲು ಬಯಸುವ ಭಾರತೀಯರನ್ನು ಸ್ಥಳಾಂತರಿಸಲು ಸರ್ಕಾರ ಸಿದ್ಧತೆ:

ಆಪರೇಷನ್ ಸಿಂಧು ಅಡಿಯಲ್ಲಿ ಇರಾನ್ ನಿಂದ ಭಾರತೀಯ ಪ್ರಜೆಗಳನ್ನು ಯಶಸ್ವಿಯಾಗಿ ಸ್ಥಳಾಂತರಿಸಿದ ನಂತರ ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಇಸ್ರೇಲ್ ನಿಂದ ಭಾರತಕ್ಕೆ ಮರಳಲು ಬಯಸುವ ಭಾರತೀಯರಿಗಾಗಿ ಸರ್ಕಾರವು ಈಗ ಸ್ಥಳಾಂತರಿಸುವಿಕೆಯನ್ನು ಪ್ರಾರಂಭಿಸಿದೆ. ಅಧಿಕೃತ ಹೇಳಿಕೆಯ ಪ್ರಕಾರ, ಭಾರತೀಯ ಪ್ರಜೆಗಳನ್ನು ಇಸ್ರೇಲ್ ನಿಂದ ಭೂ ಗಡಿಗಳ ಮೂಲಕ ಸ್ಥಳಾಂತರಿಸಲಾಗುವುದು. ನಂತರ ಅವರು ವಿಮಾನದ ಮೂಲಕ ಭಾರತಕ್ಕೆ ಮರಳಲು ವ್ಯವಸ್ಥೆ ಮಾಡಲಾಗುವುದು. ಟೆಲ್ ಅವೀವ್ ನಲ್ಲಿರುವ ಭಾರತದ ರಾಯಭಾರ ಕಚೇರಿಯು ಈ ಕಾರ್ಯಾಚರಣೆಯ ಜಾರಿಯನ್ನು ನೋಡಿಕೊಳ್ಳುತ್ತದೆ.

ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ