AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಇದು ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಶವಗಳೇ?, ಸತ್ಯ ಇಲ್ಲಿ ತಿಳಿಯಿರಿ

Ahmadabad plane crash Fact Check: ನಿಜಾಂಶವನ್ನು ತಿಳಿಯಲು ನಾವು ಮೊದಲು ವೈರಲ್ ವಿಡಿಯೋದಿಂದ ಹಲವಾರು ಪ್ರಮುಖ ಚೌಕಟ್ಟುಗಳನ್ನು ಹೊರತೆಗೆಯುವ ಮೂಲಕ ತನ್ನ ತನಿಖೆಯನ್ನು ಪ್ರಾರಂಭಿಸಿದೆವು. ಹಲವಾರು ಸುತ್ತಿನ ಹುಡುಕಾಟದ ನಂತರ, ಅಹಮದಾಬಾದ್ ವಿಮಾನ ಅಪಘಾತದ ಹಿಂದಿನ ದಿನಾಂಕಗಳಲ್ಲಿ ವೈರಲ್ ವಿಡಿಯೋ ಇರುವುದು ನಮಗೆ ಕಂಡುಬಂದಿದೆ.

Fact Check: ಇದು ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಶವಗಳೇ?, ಸತ್ಯ ಇಲ್ಲಿ ತಿಳಿಯಿರಿ
Ahmedabad Plane Crash Fact Check (3)
Vinay Bhat
|

Updated on: Jun 16, 2025 | 11:55 AM

Share

ಬೆಂಗಳೂರು (ಜೂ. 16): ಜೂನ್ 12, 2025 ರಂದು, ಗುಜರಾತ್ ರಾಜಧಾನಿ ಅಹಮದಾಬಾದ್‌ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಏರ್ ಇಂಡಿಯಾ ವಿಮಾನ (Air India Flight) ಅಪಘಾತಕ್ಕೀಡಾಯಿತು. ದುರಂತದಲ್ಲಿ ವಿಮಾನದಲ್ಲಿದ್ದ 242 ಪ್ರಯಾಣಿಕರಲ್ಲಿ ಓರ್ವ ಪವಾಡ ಸದೃಶ್ಯವಾಗಿ ಬದುಕುಳಿದ್ದು, ಮತ್ತೆಲ್ಲರೂ ಮೃತಪಟ್ಟಿದ್ದಾರೆ. ಅಪಘಾತದ ದೃಶ್ಯಗಳನ್ನು ಸ್ಥಳದಲ್ಲಿದ್ದ ಅನೇಕ ಜನರು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಈ ಅಪಘಾತದಲ್ಲಿ ಮೃತಪಟ್ಟವರ ಶವಗಳ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಅನೇಕ ಶವಪೆಟ್ಟಿಗೆಯನ್ನು ಕಾಣಬಹುದು.

ಏನು ವೈರಲ್ ಆಗುತ್ತಿರುದೇನು?

ಇದನ್ನೂ ಓದಿ
Image
ಅಹಮದಾಬಾದ್ ವಿಮಾನ ಅಪಘಾತಕ್ಕೆ ಸ್ವಲ್ಪ ಮುಂಚಿನ ವಿಡಿಯೋ?
Image
ಮೊಬೈಲ್ ಟವರ್ ಅಳವಡಿಸುವಂತೆ TRAI ನಿಂದ ನಿಮಗೆ ಸಂದೇಶ ಬರುತ್ತಿದೆಯೇ?
Image
ಬಿರುಗಾಳಿ ಎಬ್ಬಿಸಿದ ಜಿಯೋ: 1000 ರೂ.ಗಿಂತ ಕಡಿಮೆ ಬೆಲೆಗೆ 336 ದಿನಗಳ ಯೋಜನೆ
Image
ವಾಟ್ಸ್ಆ್ಯಪ್ ಬ್ಯಾನ್ ಆಗಿರುವ ಆ 6 ದೇಶಗಳು ಯಾವುವು ಗೊತ್ತೇ?

ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಪೋಸ್ಟ್ ಮಾಡಿ, “ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುವ ವಿಮಾನ ಅಪಘಾತ. ಕರಾಳ ದಿನ, 242 ಜನರ ಮೃತದೇಹಗಳು” ಎಂದು ಬರೆದಿದ್ದಾರೆ.

ಇದು ನಿಜಕ್ಕೂ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಶವಗಳೇ?

ಕೆಲವು ಬಳಕೆದಾರರು ಇದನ್ನು ಅಹಮದಾಬಾದ್‌ಗೆ ಲಿಂಕ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಟಿವಿ9 ಕನ್ನಡ ವೈರಲ್ ಪೋಸ್ಟ್ ಅನ್ನು ತನಿಖೆ ಮಾಡಿದೆ. ಈ ಸಂದರ್ಭ ಇದು ನಕಲಿ ಎಂದು ಸಾಬೀತಾಯಿತು. ಅಪಘಾತದ ದಿನಕ್ಕೆ ಬಹಳ ಹಿಂದೆಯೇ ವೈರಲ್ ವಿಡಿಯೋ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿದೆ. ಈ ವೈರಲ್ ವಿಡಿಯೋಕ್ಕೂ ಅಹಮದಾಬಾದ್ ಘಟನೆಗೂ ಯಾವುದೇ ಸಂಬಂಧವಿಲ್ಲ.

ನಿಜಾಂಶವನ್ನು ತಿಳಿಯಲು ನಾವು ಮೊದಲು ವೈರಲ್ ವಿಡಿಯೋದಿಂದ ಹಲವಾರು ಪ್ರಮುಖ ಚೌಕಟ್ಟುಗಳನ್ನು ಹೊರತೆಗೆಯುವ ಮೂಲಕ ತನ್ನ ತನಿಖೆಯನ್ನು ಪ್ರಾರಂಭಿಸಿದೆವು. ನಂತರ ಅವುಗಳನ್ನು ಗೂಗಲ್ ಲೆನ್ಸ್ ಉಪಕರಣವನ್ನು ಬಳಸಿಕೊಂಡು ಒಂದೊಂದಾಗಿ ಹುಡುಕಲಾಯಿತು. ಹಲವಾರು ಸುತ್ತಿನ ಹುಡುಕಾಟದ ನಂತರ, ಅಹಮದಾಬಾದ್ ವಿಮಾನ ಅಪಘಾತದ ಹಿಂದಿನ ದಿನಾಂಕಗಳಲ್ಲಿ ವೈರಲ್ ವಿಡಿಯೋ ಇರುವುದು ನಮಗೆ ಕಂಡುಬಂದಿದೆ.

Fact Check: ಇದು ಅಹಮದಾಬಾದ್ ವಿಮಾನ ಅಪಘಾತಕ್ಕೆ ಸ್ವಲ್ಪ ಮುಂಚಿನ ವಿಡಿಯೋವೇ?, ಸತ್ಯ ಇಲ್ಲಿ ತಿಳಿಯಿರಿ

ಮೇ 9 ರಂದು, ಇನ್‌ಸ್ಟಾಗ್ರಾಮ್ ಬಳಕೆದಾರರು ಈ ವಿಡಿಯೋವನ್ನು ಪಾಕಿಸ್ತಾನದ್ದು ಎಂದು ಹೇಳಿಕೊಂಡು ಅಪ್‌ಲೋಡ್ ಮಾಡಿದ್ದಾರೆ.

ಜೂನ್ 11 ರಂದು ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವೈರಲ್ ವಿಡಿಯೋವನ್ನು ಕೂಡ ನಾವು ಕಂಡುಕೊಂಡಿದ್ದೇವೆ. ಇಲ್ಲಿಯೂ ಸಹ ವಿಡಿಯೋ ಪಾಕಿಸ್ತಾನದಿಂದ ಬಂದಿದೆ ಎಂದು ಹೇಳಲಾಗಿದೆ. ವೈರಲ್ ವಿಡಿಯೋ ಎಲ್ಲಿಂದ ಬಂದಿದೆ ಎಂದು ಖಚಿತವಾಗಿ ಟಿವಿ9 ಕನ್ನಡ ದೃಢಪಡಿಸುವುದಿಲ್ಲ. ಆದರೆ ಈ ವಿಡಿಯೋಗೆ ಅಹಮದಾಬಾದ್ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.

ಜೂನ್ 12 ರಂದು, ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವು ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಹಮದಾಬಾದ್‌ನಲ್ಲಿ ಪತನಗೊಂಡಿತು. ಏರ್ ಇಂಡಿಯಾ ನೀಡಿದ ಮಾಹಿತಿಯ ಪ್ರಕಾರ, ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುವ ವಿಮಾನ ಸಂಖ್ಯೆ AI171 ಟೇಕ್ ಆಫ್ ಆದ ನಂತರ ಪತನಗೊಂಡಿತು. ಈ ಪೋಸ್ಟ್‌ನಲ್ಲಿ, ಈ ವಿಮಾನದಲ್ಲಿ ಸಿಬ್ಬಂದಿ ಜೊತೆಗೆ ಒಟ್ಟು 242 ಪ್ರಯಾಣಿಕರು ಇದ್ದರು ಎಂದು ತಿಳಿಸಲಾಗಿದೆ. ಇವರಲ್ಲಿ 169 ಭಾರತೀಯ ನಾಗರಿಕರು, 53 ಬ್ರಿಟಿಷ್, ಒಬ್ಬ ಕೆನಡಿಯನ್ ಮತ್ತು ಏಳು ಪೋರ್ಚುಗೀಸ್ ನಾಗರಿಕರು ಸೇರಿದ್ದಾರೆ.

ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ. ಈ ಪೈಕಿ 241 ಮಂದಿ ವಿಮಾನದಲ್ಲಿ ಇದ್ದವರಾಗಿದ್ದರೆ, ಇನ್ನುಳಿದವರು ವೈದ್ಯಕೀಯ ಕಾಲೇಜು ಹಾಸ್ಟೆಲ್​​ನಲ್ಲಿ ಇದ್ದವರು ಹಾಗೂ ಸ್ಥಳೀಯ ನಿವಾಸಿಗಳು ಎಂಬುದು ತಿಳಿದು ಬಂದಿದೆ. ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಯಾಣಿಕರಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಸೇರಿದ್ದಾರೆ. ವಿಮಾನ ಪತನದ ಕಾರಣಗಳನ್ನು ಪತ್ತೆಹಚ್ಚಲು ತನಿಖೆ ತ್ವರಿತಗತಿಯಲ್ಲಿ ಸಾಗುತ್ತಿದೆ. ತನಿಖೆಯಲ್ಲಿ ಮಹತ್ವದ ಪಾತ್ರವಹಿಸಲಿರುವ ನಿರ್ಣಾಯಕ ಸಾಧನವಾಗಿದ್ದ ಒಂದು ಬ್ಲ್ಯಾಕ್ ಬಾಕ್ಸ್​​ ಅನ್ನು ಗುರುವಾರ ರಾತ್ರಿ ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಎರಡನೇ ಬ್ಲ್ಯಾಕ್ ಬಾಕ್ಸ್​​ ಮತ್ತು ಡಿಜಿಟಲ್ ವಿಡಿಯೋ ರೆಕಾರ್ಡರ್​​ಗಾಗಿ (ಡಿವಿಆರ್) ಶೋಧ ಕಾರ್ಯ ಮುಂದುವರೆದಿದ್ದು, ಇವುಗಳು ಪ್ರಮುಖ ಸುಳಿವುಗಳನ್ನು ನೀಡಲಿವೆ.

ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ