ಅಮೆರಿಕ ಎಚ್ಚರಿಕೆಗೆ ಸೊಪ್ಪು ಹಾಕದೆ ಇಸ್ರೇಲ್ ಮೇಲೆ ದಾಳಿಯನ್ನು ತೀವ್ರಗೊಳಿಸಿದ ಇರಾನ್
ಇರಾನ್, ಅದರ ಬ್ರಹ್ಮಾಸ್ತ್ರವೆಂದು ಹೇಳಲಾಗುತ್ತಿರುವ ಸೆಜ್ಜಿಲ್ ಮಿಸೈಲನ್ನು ಮೊದಲ ಬಾರಿಗೆ ಪ್ರಯೋಗಿಸಿ ಇಸ್ರೇಲ್ ಮೇಲೆ ದಾಳಿ ನಡೆಸಿದೆ. ಇದನ್ನು ಖಂಡಾಂತರ ಕ್ಷಿಪಣಿ ಎನ್ನಲೂ ಅಡ್ಡಿಯಿಲ್ಲ, ಯಾಕೆಂದರೆ 2,500 ಕೀಮೀ ದೂರದವರೆಗೆ ಕ್ರಮಿಸುವ ಸಾಮರ್ಥ್ಯವುಳ್ಳ 700 ಕಿಗ್ರಾಂ ತೂಕದ ಕ್ಷಿಪಣಿ ಇದು. ಇರಾನ್ನಿಂದ 2,000 ಕಿಮೀ ದೂರವಿರುವ ಟೆಲ್ ಅವೀವ್ ಅನ್ನು ಈ ಕ್ಷಿಪಣಿ ಕೇವಲ 7 ನಿಮಿಷಗಳಲ್ಲಿ ತಲುಪಬಲ್ಲದಂತೆ.
ಬೆಂಗಳೂರು, ಜೂನ್ 19: ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ತೀವ್ರತೆ ದಿನೇದಿನೆ ಹೆಚ್ಚುತ್ತಿದ್ದೆ. ಈ ಯುದ್ಧದಲ್ಲಿ ಅಮೆರಿಕ (US) ಇಸ್ರೇಲ್ ಪರ ವಹಿಸಿಕೊಂಡು ಮೂಗು ತೂರಿಸುತ್ತಿರುವುದು ಬೇರೆ ರಾಷ್ಟ್ರಗಳನ್ನು ಅಚ್ಚರಿಗೆ ದೂಡಿದೆ. ಟಿವಿ9 ನೆಟ್ವರ್ಕ್ ತಂಡ ಟೆಲ್ ಅವೀವ್ ನಿಂದ ಗ್ರೌಂಡ್ ರೀಪೋರ್ಟಿಗ್ ಮಾಡುತ್ತಿರುವುದರಿಂದ ಯುದ್ಧದ ನೈಜ್ಯ ಚಿತ್ರಣವನ್ನು ನೀಡಲು ನಮಗೆ ಸಾಧ್ಯವಾಗುತ್ತಿದೆ. ಅಮೆರಿಕದ ಎಚ್ಚರಿಕೆಗೆ ಕ್ಯಾರೆ ಅನ್ನದ ಇರಾನ್ ಭಾರೀ ಪ್ರಮಾಣದ ಕ್ಷಿಪಣಿಗಳನ್ನು ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಮೇಲೆ ಸುರಿಯುತ್ತಿದೆ. ಇಸ್ರೇಲ್ ಇರಾನಿನ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡುತ್ತಿದ್ದರೆ ಇರಾನ್ ಆಸ್ಪತ್ರೆ ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡಿದೆ.
ಇದನ್ನೂ ಓದಿ: B
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos