ಅನೋನ್ಯವಾಗಿದ್ದ ತಿಮ್ಮಪ್ಪ ಮತ್ತು ಜಯಂತಿ ಶುಭ ಸಂದರ್ಭದಲ್ಲಿ ಸತ್ತಿದ್ದು ಯಾಕೆ? ಅದೇ ಯಕ್ಷ ಪ್ರಶ್ನೆ
ಮಾಧ್ಯಮಗಳೊಂದಿಗೆ ಮಾತಾಡಿರುವ ತಿಮ್ಮಪ್ಪ ಮತ್ತು ಜಯಂತಿ ಅವರ ನೆರೆಹೊರೆಯ ಲಿಲ್ಲಿವಾಸ್ ಹೇಳುವ ಪ್ರಕಾರ, ಮಡುವೆಯಾದ 16 ವರ್ಷಗಳ ಜಯಂತಿ ಬಸುರಿಯಾಗಿದ್ದರು ಮತ್ತು ಸೀಮಂತ ಕಾರ್ಯಕ್ರಮಕ್ಕಾಗಿ ದಿನ ಕೂಡ ನಿಗದಿಯಾಗಿತ್ತು. ವೃತ್ತಿಯಿಂದ ತಿಮ್ಮಪ್ಪ ಟೇಲರ್ ಆಗಿದ್ದರೆ ಜಯಂತಿ ಬೀಡಿ ಕಟ್ಟುತ್ತಿದ್ದರಂತೆ. ಅಸಲಿಗೆ ಶವಗಳನ್ನು ಮೊದಲು ನೋಡಿದ್ದು ಇದೇ ಮಹಿಳೆ.
ಮಂಗಳೂರು, ಜೂನ್ 19: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ನಾವೂರು ಬಡಗುಂಡಿಯಲ್ಲಿ ದಂಪತಿಯ ಸಾವು (death of couple) ಹಲವು ಅನುಮಾನಗಳನ್ನು ಸೃಷ್ಟಿಸಿದೆ. ಸಜೀಪಮೂಡ ಗ್ರಾಮದ ಮಿತ್ತಮಜಲು ನಿವಾಸಿ ತಿಮ್ಮಪ್ಪ ಮೂಲ್ಯ ಹಾಗೂ ಅವರ ಪತ್ನಿ ಜಯಂತಿಯವರ ಮೃತದೇಹಗಳು ಅವರು ವಾಸವಾಗಿದ್ದ ಮನೆಯಲ್ಲಿ ಪತ್ತೆಯಾಗಿವೆ. ತಿಮ್ಮಪ್ಪ ದೇಹ ಫ್ಯಾನಿಗೆ ನೇತಾಡುವ ಸ್ಥಿತಿಯಲ್ಲಿ ಪತ್ತೆಯಾದರೆ ಜಯಂತಿಯ ಶವ ಬೆಡ್ ಮೇಲೆ ಸಿಕ್ಕಿದ್ದು, ತಿಪ್ಪಪ್ಪ ತನ್ನ ಪತ್ನಿಯನ್ನು ಕೊಂದು ನಂತರ ನೇಣಿಗೆ ಶರಣಾಗಿರುಬಹುದೆಂದು ಶಂಕಿಸಲಾಗುತ್ತಿದೆ. ಆದರೆ ಅನೋನ್ಯವಾಗಿದ್ದ ಅವರಿಬ್ಬರು ಹೀಗೆ ಸಾವನ್ನಪ್ಪಲು ಕಾರಣವೇನು ಅನ್ನೋದು ಸುತ್ತಮುತ್ತಲಿನ ಜನಕ್ಕೆ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.
ಇದನ್ನೂ ಓದಿ: ಅಮ್ಮನ ಜತೆ ಜಗಳವಾಡಿ ಮಗ ನೇಣಿಗೆ ಶರಣು, ಮಗನ ಶವ ನೋಡಿ ತಾಯಿ ಆತ್ಮಹತ್ಯೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ