ನೇಣುಬಿಗಿದ ಸ್ಥಿತಿಯಲ್ಲಿ ತಾಯಿ-ಮಗಳ ಮೃತದೇಹ ಪತ್ತೆ, ಸಾವಿನ ಸುತ್ತ ಅನುಮಾನದ ಹುತ್ತ
ನೇಣುಬಿಗಿದ ಸ್ಥಿತಿಯಲ್ಲಿ ತಾಯಿ-ಮಗಳ ಮೃತದೇಹಗಳು ಪತ್ತೆಯಾಗಿವೆ. 22 ವರ್ಷದ ಹಿಂದೆ ಜಯರಾಮು-ಮಹದೇವಮ್ಮ ವಿವಾಹವಾಗಿದ್ದು, ಪದೇ ಪದೇ ಪತ್ನಿಗೆ ಕಿರುಕುಳ ನೀಡುತ್ತಿದ್ದ ಪತಿ ಜಯರಾಮು ವಿರುದ್ಧ ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ದಳು. ಇದರ ಬೆನ್ನಲ್ಲೇ ಮಹದೇವಮ್ಮ ಹಾಗೂ 20 ವರ್ಷದ ಪುತ್ರಿ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಮೈಸೂರು, (ಜೂನ್ 10): ತಾಯಿ-ಮಗಳ (Mother And daughter )ಮೃತದೇಹಗಳು ಪತ್ತೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮೈಸೂರು (Mysuru) ಜಿಲ್ಲೆ ನಂಜನಗೂಡು ತಾಲೂಕಿನ ಕೊತ್ತನಹಳ್ಳಿ ಗ್ರಾಮದ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ತಾಯಿ ಮಹದೇವಮ್ಮ(40), ಮಗಳು ಸುಪ್ರಿಯಾ(20) ಶವಪತ್ತೆಯಾಗಿದ್ದು, ಪತಿ ಜಯರಾಮು ಕೊಲೆ ಮಾಡಿದ್ದಾನೆ ಎಂದು ಆರೋಪ ಕೇಳಿಬಂದಿದೆ. ಇಂದು (ಜೂನ್ 10) ಮನೆಯ ತಂಬಾಕು ಬ್ಯಾರೆನ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಮ್ಮ ಮಗಳ ಮೃತದೇಹಗಳು ಪತ್ತೆಯಾಗಿದ್ದು, ವಿಷಯ ತಿಳಿದು ಸ್ಥಳಕ್ಕೆ ಹುಲ್ಲಹಳ್ಳಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
22 ವರ್ಷದ ಹಿಂದೆ ಜಯರಾಮು-ಮಹದೇವಮ್ಮ ವಿವಾಹವಾಗಿದ್ದು, ದಂಪತಿಗೆ 20 ವರ್ಷದ ಸುಪ್ರಿಯಾ ಎನ್ನುವ ಮಗಳು ಸಹ ಇದ್ದಾಳೆ. ಆದ್ರೆ, ಪದೇಪದೆ ಜಯರಾಮು ಪತ್ನಿಗೆ ಕಿರುಕುಳ ನೀಡುತ್ತಿದ್ದ. ಈ ಸಂಬಂಧ ಪತಿ ಜಯರಾಮು ವಿರುದ್ಧ ಪತ್ನಿ ಮಹದೇವಮ್ಮ ಹಲವು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಇದರ ಮಧ್ಯೆ ಇದೀಗ ಅಮ್ಮ ಮಗಳು ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಪೊಲೀಸರಿಗೆ ದೂರು ಕೊಟ್ಟಿರುವ ಸಿಟ್ಟಿನಿಂದ ಪತಿ ಜಯರಾಮು ಕೊಲೆ ಮಾಡಿದ್ದಾನೆಂದು ಆರೋಪ ಕೇಳಿಬಂದಿದ್ದು, ಸದ್ಯ ಪೊಲೀಸರು ತನಿಖೆ ನಡೆಸಿದ್ದಾರೆ.
ವಿದ್ಯುತ್ ತಗುಲಿ 11 ವರ್ಷದ ಬಾಲಕಿ ಸಾವು
ಆನೇಕಲ್: ಆಟವಾಡ್ತಿದ್ದಾಗ ವಿದ್ಯುತ್ ಶಾಕ್ (Electric Shock) ತಗುಲಿ 11 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ (Anekal) ತಾಲೂಕಿನ ನಾರಾಯಣಘಟ್ಟದಲ್ಲಿ ನಡೆದಿದೆ. ನಾರಾಯಣಘಟ್ಟ ಗ್ರಾಮದ ತನಿಷ್ಕಾ(11) ಮೃತ ಬಾಲಕಿ. ಶಾಲೆಗೆ ರಜೆ ಇದ್ದ ಕಾರಣ ತನಿಷ್ಕಾ ಮನೆ ಬಳಿಯೇ ಆಟವಾಡುತ್ತಿದ್ದಳು. ವಿದ್ಯುತ್ ಕಂಬದ ಬಳಿ ಆಟವಾಡುತ್ತಿದ್ದಾಗ ಕರೆಂಟ್ ಶಾಕ್ ತಗುಲಿದೆ. ವಿದ್ಯುತ್ ಶಾಕ್‌ನಿಂದ ಗಾಯಗೊಂಡಿದ್ದ ತನಿಷ್ಕಾಳನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದ್ರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದು, ಪೋಷಕರ ಆಕ್ರಂಧನ ಮುಗಿಲುಟ್ಟಿದೆ. ಇನ್ನು ಬೆಸ್ಕಾಂ ಅಧಿಕಾರಿಗಳ ಆಕ್ರೋಶ ಹೊರಹಾಕಿದ್ದಾರೆ.