ಒನ್ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಒನ್ ವೇನಲ್ಲಿ ಬಂದಂತ ಬೈಕ್ ಸವಾರನನ್ನು ಪ್ರಶ್ನಿಸಿದ್ದಕ್ಕೆ ಜಿಲ್ಲಾಧಿಕಾರಿಗೆ ಯುವಕ ಅವಾಜ್ ಹಾಕಿದ್ದಾನೆ. ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅವರು ಇಂದು (ಗುರುವಾರ) ಬೆಳಿಗ್ಗೆ ಸೈಕಲ್ಲಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್ ಸವಾರನೊಬ್ಬ ಒನ್ ವೇನಲ್ಲಿ ವೇಗವಾಗಿ ಬಂದಿದ್ದಾನೆ. ಇದನ್ನು ಡಿಸಿ ಗಂಗಾಧರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಯುವಕ ಅವರಿಗೆ ಉಲ್ಟಾ ಅವಾಜ್ ಹಾಕಿ ಹೋಗಿದ್ದಾನೆ.
ದಾವಣಗೆರೆ, (ಜೂನ್ 19): ಒನ್ ವೇನಲ್ಲಿ ಬಂದ ಬೈಕ್ ಸವಾರ ಜಿಲ್ಲಾಧಿಕಾರಿಗೆ ಅವಾಜ್ ಹಾಕಿದ್ದಾನೆ. ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅವರು ಇಂದು (ಗುರುವಾರ) ಬೆಳಿಗ್ಗೆ ಸೈಕಲ್ಲಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್ ಸವಾರನೊಬ್ಬ ಒನ್ ವೇನಲ್ಲಿ ವೇಗವಾಗಿ ಬಂದಿದ್ದಾನೆ. ಇದನ್ನು ಡಿಸಿ ಗಂಗಾಧರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಬೈಕ್ ಸವಾರ ಉಲ್ಟಾ ಜಿಲ್ಲಾಧಕಾರಿಗೆ ಜೋರು ಧ್ವನಿಯಲ್ಲಿ ಮಾತನಾಡಿ ಅವಾಜ್ ಹಾಕಿ ಹೋಗಿದ್ದಾನೆ. ಕೂಲಡೇ ಡಿಸಿ, ಪೊಲೀಸರಿಗೆ ಪೋನ್ ಮಾಡಿ ಬೈಕ್ ಸವಾರನ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.
Published on: Jun 19, 2025 05:32 PM
Latest Videos