AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಸತಿ ಯೋಜನೆ ಅವ್ಯವಹಾರದ ಬಗ್ಗೆ ಮಾತಾಡಿದ್ದು ಸತ್ಯ, ಸಿಎಂ ಕರೆದರೆ ಹೋಗಿ ಹೇಳುತ್ತೇನೆ: ಬಿಆರ್ ಪಾಟೀಲ್

ವಸತಿ ಯೋಜನೆ ಅವ್ಯವಹಾರದ ಬಗ್ಗೆ ಮಾತಾಡಿದ್ದು ಸತ್ಯ, ಸಿಎಂ ಕರೆದರೆ ಹೋಗಿ ಹೇಳುತ್ತೇನೆ: ಬಿಆರ್ ಪಾಟೀಲ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 21, 2025 | 12:29 PM

Share

ತಮ್ಮ ಕ್ಷೇತ್ರದಲ್ಲಿ ತಾನು ಪತ್ರ ಕೊಟ್ಟವರಿಗೆ ಮನೆ ಸಿಕ್ಕಿಲ್ಲ ಅದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ಪತ್ರ ಪಡೆದವರಿಗೆ ಮನೆಗಳು ಸಿಕ್ಕಿವೆ ಎಂದು ಪಾಟೀಲ್ ಹೇಳುತ್ತಾರೆ. ಆಳಂದ್ ಪಕ್ಕದ ಅಫ್ಜಲಪುರ ಕ್ಷೇತ್ರದಲ್ಲಿ ಅವ್ಯವಹಾರ ನಡೆದಿದೆ, ಸುಮಾರು 1,000 ದಷ್ಟು ಮನೆಗಳನ್ನು ಹಣ ಪಡೆದು ಹಂಚಲಾಗಿದೆ, ಇದೊಂದು ಧಂದೆಯಾಗಿಬಿಟ್ಟಿದೆ, ತಾನು ಬಾಯಿ ತೆರೆದರೆ ಸರ್ಕಾರವೇ ಅಲ್ಲಾಡಿ ಹೋಗುತ್ತದೆ ಎಂದು ಪಾಟೀಲ್ ಫೋನಲ್ಲಿ ಸರ್ಫ್ರಾಜ್​ಗೆ ಹೇಳಿದ್ದಾರೆ.

ಬೆಂಗಳೂರು, ಜೂನ್ 21: ಆಳಂದ್ ಕಾಂಗ್ರೆಸ್ ಶಾಸಕ ಬಿಅರ್ ಪಾಟೀಲ್ ನೇರಮಾತುಗಾರಿಕೆಗೆ ಹೆಸರಾದವರು ಮತ್ತು ಜೇಡವನ್ನು ಜೇಡವೆಂದೇ ಕರೆಯುವ ಛಾತಿಯುಳ್ಳವರು. ಪಾಟೀಲ್ ಹೇಳಿಕೆಗಳು ವಿವಾದ ಸೃಷ್ಟಿಸಿದರೆ ಅದು ಅವರ ತಪ್ಪಲ್ಲ. ರಾಜೀವ್ ಗಾಂಧಿ ವಸತಿ ಯೋಜನೆ ಅಡಿ (Rajiv Gandhi Housing Scheme) ಮನೆಗಳ ಹಂಚಿಕೆ ವಿಷಯದಲ್ಲಿ ಅಕ್ರಮ ನಡೆಯುತ್ತಿದೆ, ಹಣ ನೀಡಿ ಮನೆ ಪಡೆದುಕೊಳ್ಳಲಾಗುತ್ತಿದೆ ಎಂದು ಅವರು ವಸತಿ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ಫ್ರಾಜ್ ಖಾನ್ ಜೊತೆ ನಡೆಸಿದ ಫೋನ್ ಸಂಭಾಷಣೆಯಲ್ಲಿ ಬಹಿರಂಗಗೊಂಡಿದ್ದು ಆಡಿಯೋ ಕ್ಲಿಪ್ಪಿಂಗ್ ವೈರಲ್ ಆಗಿದೆ. ಇವತ್ತು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಗಳೊಂದಿಗೆ ಮಾತಾಡಿದ ಪಾಟೀಲ್, ತಾನು ಸರ್ಫ್ರಾಜ್ ಜೊತೆ ಮಾತಾಡಿದ್ದು ನಿಜ, ಮತ್ತು ಸಿಎಂ ಕರೆದರೆ ಹೋಗಿ ಮಾತಾಡಲು ಸಿದ್ಧನಿದ್ದೇನೆ ಎಂದರು. ಹೇಳಬೇಕಾಗಿದ್ದೆಲ್ಲವನ್ನು ಹೇಳಿದ್ದೇನೆ, ಭ್ರಷ್ಟಾಚಾರ ಎಲ್ಲ ಸರ್ಕಾರಗಳ ಅವಧಿಯಲ್ಲಿ ನಡೆಯುತ್ತದೆ, ಅದರೆ ಕಾಂಗ್ರೆಸ್ ಜನಪರ ಆಡಳಿತ ನೀಡುವ ಭರವೆಯೊಂದಿಗೆ ಅಧಿಕಾರಕ್ಕೆ ಬಂದಿರೋದ್ರಿಂದ ಹೀಗೆಲ್ಲ ಆಗಬಾರದಿತ್ತು ಎಂದು ಬಿಆರ್ ಪಾಟೀಲ್ ಹೇಳುತ್ತಾರೆ.

ಇದನ್ನೂ ಓದಿ: ಮನೆಗಳ ಹಂಚಿಕೆಗೆ ಲಂಚ ಪಡೆದ ಆರೋಪ: ಕೋಲಾಹಲ ಸೃಷ್ಟಿಸಿದ ಕಾಂಗ್ರೆಸ್ ಶಾಸಕ ಬಿಆರ್​ ಪಾಟೀಲ್ ವೈರಲ್ ಆಡಿಯೋ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ