AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಗಳ ಹಂಚಿಕೆಗೆ ಲಂಚ ಪಡೆದ ಆರೋಪ: ಕೋಲಾಹಲ ಸೃಷ್ಟಿಸಿದ ಕಾಂಗ್ರೆಸ್ ಶಾಸಕ ಬಿಆರ್​ ಪಾಟೀಲ್ ವೈರಲ್ ಆಡಿಯೋ

ಕರ್ನಾಟಕದಲ್ಲಿ ಸರ್ಕಾರಿ ಮನೆಗಳ ಹಂಚಿಕೆಗೆ ಲಂಚ ಪಡೆಯಲಾಗುತ್ತಿದೆ ಎಂದು ಆಳಂದ ಕಾಂಗ್ರೆಸ್​​ ಶಾಸಕ ಬಿಆರ್​ ಪಾಟೀಲ್​​ ಮಾತನಾಡಿದ್ದಾರೆ ಎನ್ನಲಾದ ವೈರಲ್​ ಆಡಿಯೋ ಸದ್ಯ ರಾಜ್ಯ ರಾಜಕೀಯದಲ್ಲಿ ಗದ್ದಲ ಸೃಷ್ಟಿಸಿದೆ. ಈ ಬಗ್ಗೆ ಸರ್ಕಾರದ ವಿರುದ್ಧ ವಿಪಕ್ಷಗಳು ತಿರುಗಿ ಬಿದ್ದಿವೆ. ಈ ಕುರಿತ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಮನೆಗಳ ಹಂಚಿಕೆಗೆ ಲಂಚ ಪಡೆದ ಆರೋಪ: ಕೋಲಾಹಲ ಸೃಷ್ಟಿಸಿದ ಕಾಂಗ್ರೆಸ್ ಶಾಸಕ ಬಿಆರ್​ ಪಾಟೀಲ್ ವೈರಲ್ ಆಡಿಯೋ
ಶಾಸಕ B.R.ಪಾಟೀಲ್
ಕಿರಣ್​ ಹನಿಯಡ್ಕ
| Updated By: ಗಂಗಾಧರ​ ಬ. ಸಾಬೋಜಿ|

Updated on:Jun 20, 2025 | 12:26 PM

Share

ಬೆಂಗಳೂರು, ಜೂನ್​ 20: ‘ಹಣ ನೀಡಿದವರಿಗಷ್ಟೇ ವಸತಿ ನಿಗಮದಲ್ಲಿ ಮನೆಗಳನ್ನು ಮಂಜೂರು ಮಾಡಲಾಗಿದೆ’ ಎಂದು ಆಳಂದ ಶಾಸಕ ಬಿಆರ್​ ಪಾಟೀಲ್​​  (BR Patil)  ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್​ ಆಗಿದ್ದು, ಸದ್ಯ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan)​​ ಆಪ್ತ ಕಾರ್ಯದರ್ಶಿ ಸರ್ಫ ರಾಜ್​ ಖಾನ್​ ಎಂಬುವವರಿಗೆ ಫೋನ್​ ಮಾಡಿ ತಮ್ಮದೇ ಸರ್ಕಾರದ ಕಾರ್ಯವೈಖರಿ ಬಗ್ಗೆ ಬಿಆರ್​ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಿಕ್ಷಪ ನಾಯಕ ಆರ್​​. ಅಶೋಕ್​ ಕಿಡಿಕಾರಿದ್ದಾರೆ.

ಶಾಸಕ ಬಿಆರ್​ ಪಾಟೀಲ್​​ರದ್ದು ಎನ್ನಲಾದ ವೈರಲ್​​ ಆಡಿಯೋದಲ್ಲಿ ಏನಿದೆ?

ಶಾಸಕ ಬಿಆರ್​ ಪಾಟೀಲ್​, ಸಚಿವ ಜಮೀರ್ ಖಾನ್​​ ಆಪ್ತ ಕಾರ್ಯದರ್ಶಿ​ಗೆ ಕರೆ ಮಾಡಿ, ಸರ್ಕಾರಿ ಮನೆಗಳ ಹಂಚಿಕೆಗೆ ಲಂಚ ಪಡೆಯುತ್ತಿರುವ ಬಗ್ಗೆ ಆರೋಪಿಸಿದ್ದಾರೆ. ಹಣ ನೀಡಿದವರಿಗಷ್ಟೇ ವಸತಿ ನಿಗಮದಲ್ಲಿ ಮನೆಗಳನ್ನು ಮಂಜೂರು ಮಾಡಲಾಗುತ್ತಿದೆ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಯಾವ ಕ್ಷೇತ್ರದಲ್ಲಿ ಹೀಗೆ ಆಗಿದೆ ಮಾಹಿತಿ ನೀಡಿ. ಕೊಡಲೇ ಕ್ರಮಕೈಗೊಳ್ಳುವುದಾಗಿ ಜಮೀರ್ ಖಾನ್​​ ಆಪ್ತ ಕಾರ್ಯದರ್ಶಿ ಹೇಳಿದ್ದಾರೆ. ಆಳಂದ ಮತ್ತು ಅಫಜಲಪುರ ಕ್ಷೇತ್ರ ಸೇರಿದಂತೆ ಹಲವೆಡೆ ಒಟ್ಟು 950 ಮನೆಗಳನ್ನು ಲಂಚ ಪಡೆದು ಹಂಚಿಕೆ ಮಾಡಲಾಗಿದೆ ಎಂದು ವೈರಲ್ ಆಡಿಯೋದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರವೆಂದ ಆರ್​. ಅಶೋಕ್

ಈ ಬಗ್ಗೆ ವಿಪಕ್ಷ ನಾಯಕ ಆರ್​. ಅಶೋಕ್​ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ 1 ಆಗಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಅವರು ನೀಡಿದ್ದ ಹೇಳಿಕೆಗೆ ಪುಷ್ಟಿ ನೀಡುವಂತೆ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರು ವಸತಿ ಸಚಿವ ಜಮೀರ್ ಖಾನ್​ ಅವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ ಎಂದಿದ್ದಾರೆ.

ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 950 ಮನೆಗಳನ್ನು ಲಂಚ ಪಡೆದು ಹಂಚಿಕೆ ಮಾಡಲಾಗಿದೆ ಎಂದು ಆರೋಪ ಮಾಡಿರುವ ಶಾಸಕ ಬಿ.ಆರ್.ಪಾಟೀಲ್ ಅವರು ತಮ್ಮಲ್ಲಿರುವ ಭ್ರಷ್ಟಾಚಾರದ ಮಾಹಿತಿಯನ್ನು ಬಹಿರಂಗ ಪಡಿಸಿದರೆ ಸರ್ಕಾರವೇ ಅಲ್ಲಾಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ವಿನಾ ಕಾರಣ ಆರ್​ಎಸ್​ಎಸ್ ಮುಖಂಡ, ಹಿಂದೂಗಳ ಮನೆಗೆ ಮಧ್ಯರಾತ್ರಿ ರೇಡ್: ದಕ್ಷಿಣ ಕನ್ನಡ ಎಸ್ಪಿಗೆ ಬಿಸಿ ತುಪ್ಪವಾದ ಪ್ರಕರಣ

ಶಾಸಕ ಬಿ.ಆರ್. ಪಾಟೀಲ್ ಅವರು ವಸತಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಲಂಚಗುಳಿತನದ ಬಗ್ಗೆ ತಮಗಿರುವ ಮಾಹಿತಿಯನ್ನು ಬಹಿರಂಗ ಪಡಿಸಬೇಕು ಮತ್ತು ಲೋಕಾಯುಕ್ತಕ್ಕೆ ದೂರು ಸಲ್ಲಿಸಬೇಕು. ಈ ವಿಷಯದಲ್ಲಿ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ.

ಸ್ಪಪಕ್ಷದ ಶಾಸಕರೇ ಭ್ರಷ್ಟಾಚಾರದ ಆರೋಪ ಮಾಡುತ್ತಿರುವಾಗ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ತಮ್ಮ ಸ್ಥಾನದಲ್ಲಿ ಮುಂದುವರೆಯುವ ಯಾವ ನೈತಿಕತೆ ಉಳಿದಿದೆ? ಸಿಎಂ ಸಿದ್ದರಾಮಯ್ಯ ನವರೇ, ಈ ಕೂಡಲೇ ಸಚಿವ ಜಮೀರ್ ಅಹ್ಮದ್ ಖಾನ್ ಅವರ ರಾಜೀನಾಮೆ ಪಡೆದು ಶಾಸಕ ಬಿ.ಆರ್.ಪಾಟೀಲ್ ಅವರ ಮೊಬೈಲ್ ಕರೆ ಆಡಿಯೋ ಆಧಾರದ ಮೇಲೆ ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ನೀಡುವಂತೆ ಒತ್ತಾಯಿಸಿದ್ದಾರೆ.

ಯಾರು‌ ಲಂಚ ಕೇಳುತ್ತಿದ್ದಾರೆ ಅವರ ವಿರುದ್ಧ ದೂರು‌ ಕೊಡಲಿ: ಡಾ.ಜಿ.ಪರಮೇಶ್ವರ್

ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದು, ಸಚಿವರಿಗೆ ನೇರವಾಗಿ ಹೇಳಿದರೆ ವಿಚಾರ ಮಾಡಿಕ್ರಮ ಕೈಗೊಳ್ತಾರೆ. ಬಿ.ಆರ್​.ಪಾಟೀಲ್​ ಆರೋಪ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ಯಾವ ಅರ್ಥದಲ್ಲಿ ಹೇಳಿದ್ದಾರೆ ಅಂತಾ ಗೊತ್ತಿಲ್ಲ. ಯಾರು‌ ಲಂಚ ಕೇಳುತ್ತಿದ್ದಾರೆ ಅವರ ವಿರುದ್ಧ ವಸತಿ ಸಚಿವ ಜಮೀರ್​​ಗೆ​​ ಬಿ.ಆರ್​.ಪಾಟೀಲ್ ದೂರು ಕೊಡಲಿ. ಅವರು ಕ್ರಮ ತೆಗೆದುಕೊಳುತ್ತಾರೆ ಎಂದಿದ್ದಾರೆ.

ಸಿಎಂ ಭೇಟಿಗೆ ಬಿ.ಆರ್.ಪಾಟೀಲ್ ಚಿಂತನೆ

ಇನ್ನು ಆಡಿಯೋ ವೈರಲ್​ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಭೇಟಿಯಾಗಲು ಶಾಸಕ ಬಿ.ಆರ್.ಪಾಟೀಲ್ ಚಿಂತನೆ ನಡೆಸಿದ್ದಾರೆ. ಇದಕ್ಕಾಗಿ ಸಿಎಂ ಬಳಿ ಸಮಯ ಕೇಳಿದ್ದು, ಬಳಿಕ ಭೇಟಿ ಮಾಡುವ ಸಾಧ್ಯತೆ ಇದೆ. ಆ ಮೂಲಕ ವೈರಲ್ ಆಡಿಯೋ ಬಗ್ಗೆ ಸ್ಪಷ್ಟನೆ ನೀಡಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:12 pm, Fri, 20 June 25

‘ಎಕ್ಕ’ ಸಿನಿಮಾಗೆ ಭರ್ಜರಿ ಓಪನಿಂಗ್; ಯುವ ರಾಜ್​ಕುಮಾರ್ ಹೇಳಿದ್ದೇನು?
‘ಎಕ್ಕ’ ಸಿನಿಮಾಗೆ ಭರ್ಜರಿ ಓಪನಿಂಗ್; ಯುವ ರಾಜ್​ಕುಮಾರ್ ಹೇಳಿದ್ದೇನು?
ಪ್ರವಾಹದಲ್ಲಿ ಸಿಲುಕಿದ ಶಾಲಾ ವಾಹನ; ಮರ ಹತ್ತಿ ಅಳುತ್ತಿರುವ ಮಕ್ಕಳು
ಪ್ರವಾಹದಲ್ಲಿ ಸಿಲುಕಿದ ಶಾಲಾ ವಾಹನ; ಮರ ಹತ್ತಿ ಅಳುತ್ತಿರುವ ಮಕ್ಕಳು
ಮೊದಲ ಹೆಂಡತಿ ನನ್ನ ವಿರುದ್ಧ ಕೌಟುಂಬಿಕ ಹಿಂಸೆ ಕೇಸ್ ಹಾಕಿದ್ದಳು: ಬಾಬು
ಮೊದಲ ಹೆಂಡತಿ ನನ್ನ ವಿರುದ್ಧ ಕೌಟುಂಬಿಕ ಹಿಂಸೆ ಕೇಸ್ ಹಾಕಿದ್ದಳು: ಬಾಬು
ಮಾಧ್ಯಮಗಳ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ: ವಿ ಸೋಮಣ್ಣ
ಮಾಧ್ಯಮಗಳ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ: ವಿ ಸೋಮಣ್ಣ
‘ಎಕ್ಕ’ ಚಿತ್ರ ನೋಡಿದ ವಿನಯ್ ರಾಜ್​ಕುಮಾರ್​; ತಮ್ಮನ ಸಿನಿಮಾ ಇಷ್ಟ ಆಯ್ತಾ?
‘ಎಕ್ಕ’ ಚಿತ್ರ ನೋಡಿದ ವಿನಯ್ ರಾಜ್​ಕುಮಾರ್​; ತಮ್ಮನ ಸಿನಿಮಾ ಇಷ್ಟ ಆಯ್ತಾ?
‘ಜೂನಿಯರ್’ ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು?
‘ಜೂನಿಯರ್’ ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು?
ಬದುಕು ಇಲ್ಲವಾಗಿಸಿಕೊಳ್ಳುವುದನ್ನು ಬಿಟ್ಟರೆ ದಾರಿಯಿಲ್ಲ: ಹೂವಿನ ವ್ಯಾಪಾರಿ
ಬದುಕು ಇಲ್ಲವಾಗಿಸಿಕೊಳ್ಳುವುದನ್ನು ಬಿಟ್ಟರೆ ದಾರಿಯಿಲ್ಲ: ಹೂವಿನ ವ್ಯಾಪಾರಿ
ಭಾರೀ ಮಳೆಯಲ್ಲೂ ಪ್ರಧಾನಿ ಮೋದಿಗೆ ಬಂಗಾಳದ ದುರ್ಗಾಪುರದಲ್ಲಿ ಭರ್ಜರಿ ಸ್ವಾಗತ
ಭಾರೀ ಮಳೆಯಲ್ಲೂ ಪ್ರಧಾನಿ ಮೋದಿಗೆ ಬಂಗಾಳದ ದುರ್ಗಾಪುರದಲ್ಲಿ ಭರ್ಜರಿ ಸ್ವಾಗತ
ಕಾವಿ-ಖಾದಿ ನಡುವಿನ ಸೂಕ್ಷ್ಮತೆ ಸೂಚ್ಯವಾಗಿ ತೋರಿಸಿದ ಸುತ್ತೂರು ಶ್ರೀಗಳು
ಕಾವಿ-ಖಾದಿ ನಡುವಿನ ಸೂಕ್ಷ್ಮತೆ ಸೂಚ್ಯವಾಗಿ ತೋರಿಸಿದ ಸುತ್ತೂರು ಶ್ರೀಗಳು
ಕನ್ನಡ ಸ್ಟಾರ್ ನಟರ ಮೇಲೆ ಉರಿದು ಬಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್
ಕನ್ನಡ ಸ್ಟಾರ್ ನಟರ ಮೇಲೆ ಉರಿದು ಬಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್