ಮರದ ಕೊಂಬೆ ಮುರಿದುಬಿದ್ದು ಯುವಕನ ಸಾವು, ಡಿಸಿಎಫ್ ಟ್ರಾನ್ಸ್ಫರ್ ಮಾಡಿ ಕೈ ತೊಳೆದುಕೊಂಡ ಸರ್ಕಾರ
ಸರ್ಕಾರದ ವಿವೇಚನೆಹೀನ ನಡೆ ಬೆಂಗಳೂರು ನಿವಾಸಿಗಳಲ್ಲಿ ವಿಸ್ಮಯ ಮೂಡಿಸಿದೆ. ಅಧಿಕಾರಿಯನ್ನು ವರ್ಗಾವಣೆ ಮಾಡಿದರೆ ಮರ ಉರುಳೋದು ನಿಲ್ಲುತ್ತದೆಯೇ? ಮಳೆಗಾಲ ಶುರುವಾಗುವ ಮೊದಲು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಮರಗಳ ಗಣತಿ ಮಾಡಿಸಿ ಅಂತ ನಾವು ಹೇಳುತ್ತಲೇ ಇದ್ದೇವೆ, ಮರಗಣತಿ ಮಾಡುವಾಗ ಗಿಡಮರಗಳ ಸ್ಥಿತಿಗತಿ ಗೊತ್ತಾಗುತ್ತದೆ, ದುರ್ಬಲಗೊಂಡಿವೆ ಎನಿಸುವ ಮರಗಳನ್ನು ಕಡಿದರೆ ಅಪಾಯಗಳು ತಪ್ಪುತ್ತವೆ.
ಬೆಂಗಳೂರು, ಜೂನ್ 20: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ, ಮಾತನ್ನು ನೀವು ಕೇಳಿರುತ್ತೀರಿ, ನಮ್ಮ ಸರ್ಕಾರದ ಕಾರ್ಯವೈಖರಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ರವಿವಾರದಂದು ಅಕ್ಷಯ್ ಕುಮಾರ್ ಹೆಸರಿನ ಟೆಕ್ಕಿಯೊಬ್ಬರ ಮೇಲೆ ನಗರದ ಬನಶಂಕರಿ ಪ್ರದೇಶದಲ್ಲಿ (Banashankari Area) ಮರದ ರೆಂಬೆಯೊಂದು ಕಟ್ ಆಗಿ ಬಿದ್ದ ಕಾರಣ 5-ದಿನ ಕಾಲ ಜಯನಗರದ ಆಸ್ಪತ್ರೆಯೊಂದರಲ್ಲಿ ಅವರು ಸಾವಿನೊಂದಿಗೆ ಹೋರಾಟ ನಡೆಸಿ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಡಯಾಲಿಸಿಸ್ ಮೇಲಿರುವ ತಂದೆ ಮತ್ತು ವೃದ್ಧ ಅಜ್ಜಿಗೆ ಅಕ್ಷಯ್ ಏಕೈಕ ಆಸರೆಯಾಗಿದ್ದರು. ಅಕ್ಷಯ್ ಸಾವಿನಿಂದ ಹೌಹಾರಿದ ಸಿದ್ದರಾಮಯ್ಯ ಸರ್ಕಾರ ಏನೂ ಮಾಡಲು ತೋಚದೆ ಪಾಲಿಕೆಯ ಉಪ ಸಂರಕ್ಷಣಾಧಿಕಾರಿ ಬಿಎಲ್ಜಿ ಸ್ವಾಮಿ ಅವರನ್ನು ಜಾಗ ತೋರಿಸದೆ ಟ್ರಾನ್ಸ್ಫರ್ ಮಾಡಿ ಅವರ ಸ್ಥಳದಲ್ಲಿ ಬೇರೆಯವರನ್ನು ತಂದಿದೆ.
ಇದನ್ನೂ ಓದಿ: ಮರದ ಕೊಂಬೆ ಬಿದ್ದು ಅಕ್ಷಯ್ ಬ್ರೈನ್ ಡೆಡ್: ಮೊಮ್ಮಗನಿಗಾಗಿ ದೇವರ ಮೊರೆ ಹೋದ ಅಜ್ಜ-ಅಜ್ಜಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ