ಮರದ ಕೊಂಬೆ ಬಿದ್ದು ಅಕ್ಷಯ್ ಬ್ರೈನ್ ಡೆಡ್: ಮೊಮ್ಮಗನಿಗಾಗಿ ದೇವರ ಮೊರೆ ಹೋದ ಅಜ್ಜ-ಅಜ್ಜಿ
ಬೆಂಗಳೂರಿನ ಬನಶಂಕರಿ 2ನೇ ಹಂತದ ಶ್ರೀನಿವಾಸ ನಗರದಲ್ಲಿ ಮರದ ಕೊಂಬೆ ಬೈಕ್ ಸವಾರನ ಮೇಲೆ ಮುರಿದು ಬಿದ್ದ ಪರಿಣಾಮ ಅಕ್ಷಯ್ ಆರೋಗ್ಯ ಗಂಭೀರವಾಗಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಬೈಕ್ ಸವಾರ ಅಕ್ಷಯ್ ಸದ್ಯ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿದ್ದು, ಇತ್ತ ಮೊಮ್ಮಗನ ಜೀವಕ್ಕಾಗಿ ಅಜ್ಜ ಅಜ್ಜಿ ದೇವರ ಮೊರೆ ಹೋಗಿದ್ದಾರೆ.
ಬೆಂಗಳೂರು, (ಜೂನ್ 18): ಗಾಳಿ ಮಳೆಯಿಂದ ಬೆಂಗಳೂರಿನ ಬನಶಂಕರಿ 2ನೇ ಹಂತದ ಶ್ರೀನಿವಾಸ ನಗರದಲ್ಲಿ ಮರದ ಕೊಂಬೆ ಬೈಕ್ ಸವಾರನ ಮೇಲೆ ಮುರಿದು ಬಿದ್ದ ಪರಿಣಾಮ ಅಕ್ಷಯ್ ಆರೋಗ್ಯ ಗಂಭೀರವಾಗಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಬೈಕ್ ಸವಾರ ಅಕ್ಷಯ್ ಸದ್ಯ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ದಾಖಲಲಾಗಿದ್ದು, ತಲೆಗೆ ಶಸ್ತ್ರ ಸಹ ಮಾಡಲಾಗಿದೆ. ಆದ್ರೆ, ಅಕ್ಷಯ್ ಬ್ರೈನ್ ಡೆಡ್ ಆಗಿದೆ ಎನ್ನುವ ಮಾಹಿತಿ ತಿಳಿದುಬಂದಿದ್ದು, ದೇವರ ಮೇಲೆ ಭಾರ ಹಾಕಿ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಮೊಮ್ಮಗನ ಮೊಮ್ಮಗ ಉಳಿಯಲಿ, ಆಯಸ್ಸು ಗಟ್ಟಿಯಾಗಲಿ ಕಣ್ಣು ಬಿಟ್ಟು ನಮ್ಮನ್ನ ನೋಡಲಿ ಎಂದು ಸೀತಾ ಸರ್ಕಲ್ ನಲ್ಲಿರೋ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಜಯ ಮೃತ್ಯುಂಜಯ ಹೋಮ ಮಾಡಿಸಿದ್ದಾರೆ.