ರಸ್ತೆಯಲ್ಲಿ ಸನ್ಮಾನಿಸಲು ಬಂದವನ ಮೇಲೆ ರೇಗಿ ಫೋಟೋಗೆ ಸ್ಮೈಲ್ ನೀಡಿದ ಸಚಿವ ಜಮೀರ್ ಅಹ್ಮದ್!
ಆಲ್ಬರ್ಟ್ ಪಿಂಟೋ ಕೋ ಗುಸ್ಸಾ ಕ್ಯೋಂ ಆತಾ ಹೈ ಸಿನಿಮಾ 1980 ರಲ್ಲಿ ಮೊದಲ ಬಾರಿಗೆ ರಿಲೀಸ್ ಆಗಿತ್ತು, ಅದರಲ್ಲಿ ನಾಸಿರುದ್ದೀನ್ ಶಾ ಮತ್ತು ಶಬಾನಾ ಅಜ್ಮಿ ಪ್ರಧಾನ ಭೂಮಿಕೆಯಲ್ಲಿದ್ದರು. ನಂತರ 2019 ರಲ್ಲಿ ಇದೇ ಶೀರ್ಷಿಕೆಯೊಂದಿಗೆ ಮಾನವ್ ಕೌಲ್ ಮತ್ತು ನಂದಿತಾ ದಾಸ್ ಮುಖ್ಯ ತಾರಾಗಣದಲ್ಲಿದ್ದ ಇನ್ನೊಂದು ಸಿನಿಮಾ ರಿಲೀಸ್ ಆಗಿತ್ತು.
ಬೆಂಗಳೂರು, ಜೂನ್ 18: ಆಲ್ಬರ್ಟ್ ಪಿಂಟೋ ಕೋ ಗುಸ್ಸಾ ಕ್ಯೋಂ ಆತಾ ಹೈ ಶೀರ್ಷಿಕೆಯ ಸಿನಿಮಾ ಎರಡೆರಡು ಸಲ ಬಂದಿದೆ. ಇವತ್ತು ವಸತಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಅವರು ತಮ್ಮನ್ನು ಸನ್ಮಾನಿಸಲು (felicitate) ಬಂದ ವ್ಯಕ್ತಿಯ ಮೇಲೆ ಕೋಪಗೊಂಡಿದ್ದು ನೋಡಿ ಆ ಸಿನಿಮಾ ನೆನಪಾಯ್ತು ಮಾರಾಯ್ರೇ. ಕಚೇರಿಯಿಂದ ಹೊರಬಂದ ಬಳಿಕ ಅವರು ಅಧಿಕಾರಿಗಳು ಮತ್ತು ಜನರೊಂದಿಗೆ ಮಾತಾಡುವಾಗ ಶಾಲು ಮತ್ತು ಹಾರದೊಂದಿಗೆ ವ್ಯಕ್ತಿಯ ಆಗಮನವಾಗುತ್ತದೆ. ಮಿನಿಸ್ಟ್ರು ಸಾಹೇಬರಿಗೆ ಅದು ಇಷ್ಟವಾಗೋದಿಲ್ಲ. ಕೆಂಡಾಮಂಡಲಗೊಂಡು ಆ ವ್ಯಕ್ತಿಯನ್ನು ಜರಿಯುತ್ತಾರೆ, ನಂತರ ಫೋಟೋಗಾಗಿ ಒಂದು ಸ್ಮೈಲ್ ಕೊಡುತ್ತಾರೆ!
ಇದನ್ನೂ ಓದಿ: ವಿಶ್ವವಿಖ್ಯಾತ ಹಂಪಿ ಉತ್ಸವ: ವೇದಿಕೆ ಮೇಲೆ ಪೂಜಾಗಾಂಧಿಯನ್ನು ಹಾಡಿ ಹೊಗಳಿದ ಸಚಿವ ಜಮೀರ್ ಅಹ್ಮದ್ ಖಾನ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ