ವಿಶ್ವವಿಖ್ಯಾತ ಹಂಪಿ ಉತ್ಸವ: ವೇದಿಕೆ ಮೇಲೆ ಪೂಜಾಗಾಂಧಿಯನ್ನು ಹಾಡಿ ಹೊಗಳಿದ ಸಚಿವ ಜಮೀರ್ ಅಹ್ಮದ್ ಖಾನ್
ವಿಶ್ವವಿಖ್ಯಾತ ಹಂಪಿ ಉತ್ಸವ ಹೇಗೆ ಅಯೋಜನೆಗೊಂಡಿದೆ ಅಂತ ಜನ ಹೇಳಬೇಕು, ನಮ್ಮ ಬೆನ್ನ ನಾವು ತಟ್ಟಿಕೊಳ್ಳುವುದರಲ್ಲಿ ಅರ್ಥವಿಲ್ಲ ಕಳೆದ ಬಾರಿಗಿಂತ ಚೆನ್ನಾಗಿ ಮತ್ತು ಅದ್ದೂರಿಯಾಗಿ ಮಾಡಿರುವ ವಿಶ್ವಾಸ ತನಗಿದೆ ಎಂದು ಜಮೀರ್ ಅಹ್ಮದ್ ಹೇಳಿದರು. ಭಗವಂತ ತನಗೆ ಆಯಸ್ಸು ಕರುಣಿಸಿದರೆ ಮುಂದಿನ ವರ್ಷ ಹಂಪಿ ಉತ್ಸವವನ್ನು ಇನ್ನಷ್ಟು ವಿಜೃಂಭಣೆಯಿಂದ ಆಯೋಜಿಸಲಾಗುವುದು ಎಂದು ಅವರು ಹೇಳಿದರು.
ವಿಜಯನಗರ, ಮಾರ್ಚ್ 1 : ಹಂಪಿ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಪೂಜಾ ಗಾಂಧಿಯವರನ್ನು ವಿಶೇಷ ಹೊಗಳಿಕೆಗೆ ಪಾತ್ರರಾಗಿಸಿದರು. ಪೂಜಾ ಗಾಂಧಿ (Puja Gandhi) ಬಹಳ ಚೆನ್ನಾಗಿ ಕನ್ನಡ ಮಾತಾಡುತ್ತಾರೆ, ಅವರು ಇಷ್ಟು ಚೆನ್ನಾಗಿ ಕನ್ನಡ ಕಲಿತಿದ್ದ್ದಾರೆ ಎಂಬ ಕಲ್ಪನೆಯೇ ತನಗಿರಲಿಲ್ಲ, ಬೇರೆ ರಾಜ್ಯದವರಾಗಿರುವ ಅವರು ಕರ್ನಾಟಕಕ್ಕೆ ಬಂದು ಇಲ್ಲಿಯವರಾಗಿ ಕನ್ನಡವನ್ನು ನಿರರ್ಗಳವಾಗಿ ಮಾತಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ, ಅವರಿಗೆ ಅಭಿನಂದನೆಗಳು ಎಂದು ಹೇಳುತ್ತ ಜಮೀರ್ ಅಹ್ಮದ್ ನಟಿಯ ಕಡೆ ನೋಡಿ ಥಂಬ್ ಅಪ್ ಮಾಡಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚುನಾವಣಾ ಸಮಯದಲ್ಲಿ ಮನೆ ನೀಡುವ ಭರವಸೆ ನೀಡಿರಲಿಲ್ಲ, ಅದರೂ ಬಡವರಿಗೆ ಮನೆ ನೀಡಿದ್ದೇವೆ: ಜಮೀರ್ ಅಹ್ಮದ್
Latest Videos

ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ

ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ

ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
