TV9 Kannada Exclusive: ಅಫ್ಘಾನಿಸ್ತಾನದಲ್ಲಿಯೂ ಕೊವಿಡ್ ಇದೆ, ನಿಮಗೆ ನೆನಪಿದೆಯೇ?

Covid Pandemic in Afghanistan: ತಾಲಿಬಾನ್ ಅಫ್ಘಾನಿಸ್ತಾನದ ಪಾಕ್ತಿಯಾ ಪ್ರಾಂತ್ಯದಲ್ಲಿ ಒಂದು ವಾರದ ಹಿಂದೆಯೇ ಕೊವಿಡ್ ಲಸಿಕೆ ವಿತರಣೆಯನ್ನು ನಿಷೇಧಿಸಿದೆ.

TV9 Kannada Exclusive: ಅಫ್ಘಾನಿಸ್ತಾನದಲ್ಲಿಯೂ ಕೊವಿಡ್ ಇದೆ, ನಿಮಗೆ ನೆನಪಿದೆಯೇ?
ಸಾಂದರ್ಭಿಕ ಚಿತ್ರ
Follow us
guruganesh bhat
|

Updated on:Aug 25, 2021 | 11:08 PM

Covid Pandemic in Afghanistan: ಅಫ್ಘಾನಿಸ್ತಾನ ಎಂಬ ದೇಶದ ಬಗ್ಗೆ ನಮಗೀಗ ಎಲ್ಲಿಲ್ಲದ ಕುತೂಹಲ, ಆತಂಕ ಮತ್ತು ಇಲ್ಲೆಲ್ಲೋ ಕುಳಿತು ಸಹ ಆಫ್ಘನ್ ಬಗ್ಗೆಯೇ ತಿಳಿಯುವ ಹಂಬಲ. ತಾಲಿಬಾನಿಗಳೆಂದ ವಿಚ್ಛಿದ್ರಕಾರಿ ಗುಂಪು ಹುಲ್ಲುಕಡ್ಡಿ ಅಲ್ಲಾಡಿಸಿದರೂ ಬೀಸಿದ ಗಾಳಿಯ ಬೆಂಬತ್ತಿ ಹೋಗುವ ತಣಿಯದ ಕೌತುಕ. ಒಂದಲ್ಲಿಂದೊಂದು ನಮೂನೆಯಲ್ಲಿ ಆಫ್ಘನ್​ನ ಆಂತರಿಕ ಕಲಹ ನಮ್ಮನ್ನೂ ಕುದಿಸದೇ ಬಿಡದು. ಎರಡು ವರ್ಷದ ಹಿಂದೆ ಇದಕ್ಕಿಂತ ದೊಡ್ಡ ಸಂಕಟವೊಂದು ಧುತ್ತೆಂದು ಮಾನವ ಕುಲದ ಬೇರುಗಳನ್ನು ಹರಿದುಹಾಕಿತ್ತು. ಅದು ಕೊವಿಡ್ 19 ಅಥವಾ ಕೊರೊನಾ ವೈರಾಣು. ಇದೀಗ ಆಫ್ಘಾನಿಸ್ತಾನದಿಂದ ಹರಿದುಬರುತ್ತಿರುವ ಎಲ್ಲ ದೃಶ್ಯಗಳನ್ನೂ ನೋಡಿದಾಗ ಗಾಂಧಾರ ದೇಶದಲ್ಲಿ ಕೊವಿಡ್ ಪರಿಸ್ಥಿತಿ ಹೇಗಿತ್ತು? ಮತ್ತು ತಾಲಿಬಾನಿಗಳ ಆಕ್ರಮಣದ ತರುವಾಯ ಹೇಗಿದೆ ಎಂಬ ಪ್ರಶ್ನೆ ಎಚ್ಚರವಾಯಿತು. ಈಕುರಿತು ಟಿವಿ9 ಕನ್ನಡ ಡಿಜಿಟಲ್ ವಿಶೇಷ ವರದಿ ಇಲ್ಲಿದೆ.

ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶಗಳ ಪ್ರಕಾರ 2020ರ ಜನವರಿ 3ರಿಂದ 2021ರ ಆಗಸ್ಟ್ 16ರ ಅವಧಿಯಲ್ಲಿ ಅಫ್ಘಾನಿಸ್ತಾನದಲ್ಲಿ 1,52,142 ಜನರಿಗೆ ಕೊವಿಡ್ ಸೋಂಕು ಖಚಿತಪಟ್ಟಿದೆ. ಮತ್ತು 7,025 ಜನರು ಮೃತಪಟ್ಟಿದ್ದಾರೆ. 19 ಆಗಸ್ಟ್​ 48 ಜನರಿಗೆ, 20ರಂದು 38 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಆದರೆ ತದನಂತರ ಅಫ್ಘಾನಿಸ್ತಾನದಲ್ಲಿ ಪತ್ತೆಯಾದ ಕೊವಿಡ್ ಸೋಂಕು ಪ್ರಕರಣಗಳು ಕುರಿತು ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ. ಅಫ್ಘಾನಿಸ್ತಾನದಲ್ಲಿ ಪ್ರಸ್ತುತವಂತೂ ಮಾಸ್ಕ್, ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರ ಎಂಬ ಕಾನ್ಸೆಪ್ಟುಗಳು ಕನಸಲ್ಲೂ ಕಾಣಸಿಗದ ವಿಚಾರಗಳಷ್ಟೇ. ಆಗಿನ್ನೂ ಸಂಪೂರ್ಣ ಅಫ್ಘಾನಿಸ್ತಾನದ ನಿಯಂತ್ರಣ ತಾಲಿಬಾನ್ ವಶಕ್ಕೆ ಬಂದಿರಲಿಲ್ಲ. ಒಂದೊಂದೇ ಪ್ರಾಂತ್ಯಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದ ತಾಲಿಬಾನ್ ಒಂದು ವಾರದ ಹಿಂದೆಯೇ ಪಾಕ್ತಿಯಾ ಪ್ರಾಂತ್ಯದಲ್ಲಿ ಕೊವಿಡ್ ಲಸಿಕೆ ವಿತರಣೆಯನ್ನೇ ನಿಷೇಧಿಸಿತ್ತು. ಕೊರೊನಾ ಸೋಂಕಿನ ಅಸ್ತಿತ್ವ ಮತ್ತು ಸಂಬಂಧಿಸಿದ ಎಲ್ಲ ಆಗುಹೋಗುಗಳ ಬಗ್ಗೆ ನಂಬಿಕೆಯೇ ಇಲ್ಲದ ತಾಲಿಬಾನ್​ನಿಂದ ಹೇಗೆ ತಾನೇ ಸೋಂಕು ನಿಯಂತ್ರಣ ಸಾಧ್ಯ?  ಎಂಬುದು ಸ ಟೆಸ್ಲಾ ಸಿಇಒ ಎಲಾನ್ ಮಸ್ಕ್ ತಾಲಿಬಾನಿ ನಾಯಕರು ಮಾಸ್ಕ್ ಧರಿಸದೇ ಇರುವುದನ್ನು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದನ್ನ ಸಹ ಇಲ್ಲಿ ನೆನಪಿಸಿಕೊಳ್ಳಬಹುದು.

ಕೊವಿಡ್ ಲಸಿಕೆ ವಿತರಣೆಯ ಜಾಗತಿಕ ಅಭಿಯಾನದ ಭಾಗವಾಗಿ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯ 1.4  ಕೋಟಿಡೋಸ್ ಲಸಿಕೆಯನ್ನು ಅಫ್ಘಾನಿಸ್ತಾನಕ್ಕೆ ವಿತರಿಸಲಾಗಿತ್ತು.  ಅಫ್ಘಾನಿಸ್ತಾನದ ಅಭಿವೃದ್ಧಿಗೆ ತನ್ನದೇ ಕಾರಣಗಳಿಗೆ ಟೊಂಕ ಕಟ್ಟಿ ನಿಂತಿದ್ದ ಭಾರತವೂ ಸಹ ಕೊವಿಡ್ ಲಸಿಕೆಯನ್ನು ಉಡುಗೊರೆಯಾಗಿ ನೀಡಿತ್ತು. ಆಗಸ್ಟ್ 14ರ ಒಳಗೆ ಅಫ್ಘಾನಿಸ್ತಾನದಲ್ಲಿ 18,72,268 ಡೋಸ್ ಕೊವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಒಂದೇ ದಿನ ಅತಿ ಹೆಚ್ಚು ಕೊವಿಡ್ ಸೋಂಕು ಖಚಿತಪಟ್ಟದ್ದು ಜೂನ್ 17ರಂದು, ಅದೊಂದೇ ದಿನ 2313 ಜನರಿಗೆ ಸೋಂಕು ದೃಢಪಟ್ಟಿತ್ತು. ಆ ಅವಧಿ ಅಫ್ಘಾನಿಸ್ತಾನದಲ್ಲಿ ಕೊವಿಡ್​ 3ನೇ ಅಲೆಯ ಸೂಚನೆ ಎಂದು ಹೇಳಲಾಗಿತ್ತು.

Burkina Faso: ಆಫ್ರಿಕಾ ಖಂಡದ ಪುಟ್ಟ ದೇಶ ಬುರ್ಕಿನಾ ಫಾಸೋದಲ್ಲಿ ಉಗ್ರರ ಉಪಟಳ; 80 ಜನರು ಬಲಿ: ಭಾರತಕ್ಕೂ ಈ ದೇಶಕ್ಕೂ ಏನು ಸಂಬಂಧ?

ದೇಶ ತಾಲಿಬಾನಿಗಳ ವಶ ಆಗುವ ಮುನ್ನವೂ ಆಫ್ಘನ್ ಪ್ರಜೆಗಳಲ್ಲಿ ಅಷ್ಟಾಗಿ ಸಾರ್ವಜನಿಕ ಕೊವಿಡ್ ತಡೆ ನಿಯಮಗಳ ಅನುಸರಣೆ ಇರಲಿಲ್ಲ.  ಸಮುದಾಯವನ್ನೇ ನುಂಗಿನೊಸೆಯುವ ಕೊವಿಡ್​ನಂತಹ ಸೋಂಕಿನ ವಿರುದ್ಧ ಪ್ರತಿಯೊಬ್ಬರೂ ಗೆಲ್ಲದೇ ಯಾರೊಬ್ಬರೂ ಗೆಲ್ಲಲು ಸಾಧ್ಯವಿಲ್ಲ ಎಂಬ ಥಿಯರಿ ಇಲ್ಲಿ ಅಷ್ಟಾಗಿ ಜಾಗೃತವಾಗಿರಲಿಲ್ಲ. ಅದರಲ್ಲೂ ಕಳೆದ ಎರಡು ದಶಕಗಳಿಂದ ನಿರಂತರವಾಗಿ ಯುದ್ಧ, ಉಗ್ರರ ದಾಳಿಯಿಂದ ನಲುಗಿದ್ದ ಆಫ್ಘನ್ ಮುಂದಿನ ದಿನಗಳಲ್ಲಿಯೂ ಅಪೌಷ್ಠಿಕತೆಯಂತಹ ಸಮಸ್ಯೆಗಳ ಜತೆ ಹೋರಾಡಬೇಕಾಗುತ್ತದೆ. ಸಹಜವಾಗಿ ಕೊವಿಡ್ ವೈರಾಣುವಿನ ವಿರುದ್ಧ ಹೋರಾಡುವುದು ಸಹ ಈ ಎದುರಾಳಿಯಾಗಲಿದೆ.

ಪರಿಹಾರ, ಇದೆಯೇ? ಪ್ರಜಾಪ್ರಭುತ್ವ ಪದ್ಧತಿಯನ್ನು ನೆಚ್ಚಿಕೊಳ್ಳದ, ಮೂಸಿ ನೋಡಲೂ ಇಚ್ಛಿಸದ ತಾಲಿಬಾನಿಗಳು ಕೊವಿಡ್ ಸೋಂಕಿನ ಅಸ್ಮಿತೆಯನ್ನೇ ನಿರಾಕರಿಸಬಹುದು. ತಾಲಿಬಾನಿಗಳ ವರ್ತನೆಯ ಹಳೆಯ ಉದಾಹರಣೆಗಳನ್ನು ಮುಂದಿಟ್ಟು ಈ ಸಾಧ್ಯತೆಯೇ ಹೆಚ್ಚಾಗಿದೆ ಎಂದು ಹೇಳುತ್ತಾರೆ ಬಹುಕಾಲ ಅಫ್ಘಾನಿಸ್ತಾನದಲ್ಲೇ ಸೇವೆ ಸಲ್ಲಿಸಿದ ಅಮೆರಿಕದ ಸಲಹೆಗಾರ ಶಾಹೀದ್ ಮೀಜಾನ್. ಅದರಲ್ಲೂ ಕೊವಿಡ್ ಲಸಿಕೆ ಪಡೆದುಕೊಳ್ಳಬೇಕೋ ಬೇಡವೋ ಎಂಬುದು ಸಹ ಕೊವಿಡ್ ಬಗ್ಗೆ ಹಿಂದೆ ಮುಂದೆ ಅರಿಯದ ಸ್ಥಳೀಯ ನಾಯಕರ ಮೂಗಿನ ಅನುಸಾರ ನಡೆಯಬಹುದಾದ ಅಪಾಯವೂ ಇದೆ ಎನ್ನುತ್ತಾರವರು. ತಮ್ಮ ಮಾತಿಗೆ ಪೂರಕವಾಗಿ ಅವರು ಪಾಕ್ತಿಯಾ ಪ್ರಾಂತ್ಯದಲ್ಲಿ ತಾಲಿಬಾನ್ ನಾಯಕರು ಅಂಟಿಸಿರುವ ಲಸಿಕೆ ವಿರೋಧಿ ಭಿತ್ತಿಪಟಗಳನ್ನು ಉದಾಹರಣೆ ನೀಡುತ್ತಾರೆ. ಜತೆಗೆ ತಾಲಿಬಾನ್ ಕೈವಶವಾಗುವ ಮುನ್ನವೂ ಅಫ್ಘನ್ನರಲ್ಲಿ ಕೊರೊನಾ ಲಸಿಕೆಯ ಬಗ್ಗೆ ನಂಬಿಕೆ ಇದ್ದಿರಲಿಲ್ಲ. ಈಗಂತೂ ಲಸಿಕೆ ಎಂಬುದು ಗಗನ ಕುಸುಮವೇ ಆಗಿದೆ. ಸ್ವಾತಂತ್ರ್ಯ ಹರಣದ ಒತ್ತಡ ಮತ್ತು ಭೀತಿಯಲ್ಲಿರುವ ಆಫ್ಘನ್ ಪ್ರಜೆಗಳಲ್ಲಿ ಕೊವಿಡ್ ಸೋಂಕು ಹರಡುವಿಕೆ ಇನ್ನಷ್ಟು ವೇಗ ಪಡೆಯಬಹುದು ಎಂಬುದು ಅವರ ಖಚಿತ ಅಭಿಪ್ರಾಯ. ಆದರೆ ತಾಲಿಬಾನಿಗಳಿಗೆ ಹೆದರಿ ಮನೆಯ ಒಳಗೇ ಇರುವುದು ಕೊಂಚ ಮಟ್ಟಿಗೆ ಕೊವಿಡ್ ನಿಯಂತ್ರಿಸಲು ಪೂರಕವಾಗಿಯೂ ಕೆಲಸ ಮಾಡಬಹುದು ಎಂಬುದನ್ನು ಸೇರಿಸಲೂ ಅವರು ಮರೆಯುವುದಿಲ್ಲ.

ವಿಶ್ವದ ಬಹುತೇಕ ದೇಶಗಳು ಪೊಲಿಯೋ ವಿರುದ್ಧ ತಕ್ಕಮಟ್ಟಿಗೆ ಜಯ ಸಾಧಿಸಿದ್ದರೂ ಅಫ್ಘಾನಿಸ್ತಾನದ ಬಳಿ ಅದಿನ್ನೂ ಸಾಧ್ಯವಾಗಿಲ್ಲ. 1996ರಿಂದ 2001ರವರೆಗೆ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸಿದ್ದ ತಾಲಿಬಾನಿಗಳು ಪೊಲಿಯೋ ಲಸಿಕೆಗೆ ನಿಷೇಧ ಹೇರಿದ್ದವು.  2020ರಲ್ಲಿ ಅಫ್ಘಾನಿಸ್ತಾನದಲ್ಲಿ ಒಟ್ಟು 56 ಜನರಲ್ಲಿ ಹೊಸದಾಗಿ ಪೊಲಿಯೋ ಪ್ರಕರಣಗಳು ಪತ್ತೆಯಾಗಿದ್ದವು. ಹೀಗಿರುವಾಗ ಈಗ ಮತ್ತೊಮ್ಮೆ ತಾಲಿಬಾನ್ ಆಡಳಿತ ಅಧಿಕೃತವಾಗಿ ಜಾರಿಗೆ ಬಂದರೆ ಕೊವಿಡ್ ಲಸಿಕೆ ವಿತರಣೆ ಹೇಗೆ? ಎಂಬ ಪ್ರಶ್ನೆಗೂ ಅತ್ಯಂತ ಕಷ್ಟಸಾಧ್ಯವಾದ ಒಂದು ಉತ್ತರವಿದೆ. ಲಸಿಕೆ ವಿತರಣೆಯಲ್ಲಿ ತಾಲಿಬಾನಿಗಳನ್ನೇ ಮುಂಚೂಣಿಯ ಕಾರ್ಯಕರ್ತರನ್ನಾಗಿಸುವುದು. ಸದ್ಯ ಜಗತ್ತು ತಮ್ಮನ್ನು ಅಧಿಕೃತವಾಗಿ ಗುರುತಿಸಬೇಕು ಎಂಬ ಮಹದೋದ್ದೇಶವನ್ನು ತಾಲಿಬಾನಿಗಳು ಹೊಂದಿದ್ದಾರೆ. ಕೊವಿಡ್ ಲಸಿಕೆ ವಿತರಿಸಿದರೆ ಈ ಉದ್ದೇಶ ಈಡೇರಬಹುದು ಎಂಬ ಆಮಿಷ ಒಡ್ಡಿಯಾದರೂ ನಾವು ಸೋಂಕು ನಿಯಂತ್ರಣ ಮಾಡಬಹುದು ಎಂಬುದು ಒಂದು ಅತ್ಯಂತ ದೂರಾಲೋಚನೆ.

ಇದನ್ನೂ ಓದಿ: 

ಅಮೆರಿಕ ಕೆಂಡಾಮಂಡಲ: 2ನೇ ಮಹಾಯುದ್ಧದ ಐತಿಹಾಸಿಕ ಚಿತ್ರಕ್ಕೆ ತಾಲಿಬಾನ್ ಅಣಕ, ಬೈಡೆನ್ ರಾಜೀನಾಮೆಗೆ ಹೆಚ್ಚಾಯ್ತು ಒತ್ತಡ

ಪಂಜ್​ಶಿರ್​ ಹೋರಾಟಕ್ಕೆ ತಜಕಿಸ್ತಾನ್ ಬೆಂಬಲ: ಮತ್ತೊಂದು ಮಜಲಿಗೆ ಅಫ್ಘಾನಿಸ್ತಾನ ಯುದ್ಧ

(Afghanistan Covid Pandemic Situation Amid Taliban Attack News in Kannada)

Published On - 3:16 pm, Tue, 24 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ