Burkina Faso: ಆಫ್ರಿಕಾ ಖಂಡದ ಪುಟ್ಟ ದೇಶ ಬುರ್ಕಿನಾ ಫಾಸೋದಲ್ಲಿ ಉಗ್ರರ ಉಪಟಳ; 80 ಜನರು ಬಲಿ: ಭಾರತಕ್ಕೂ ಈ ದೇಶಕ್ಕೂ ಏನು ಸಂಬಂಧ?

Burkina Faso ಬುರ್ಕಿನಾ ಫಾಸೋದ ಹೆಸರು ನಮ್ಮಲ್ಲಿ ಅಪರಿಚಿತ. ಈವರೆಗೂ ಭಾರತದ ಪ್ರಧಾನಿಗಳಲ್ಲಿ ಪಿ.ವಿ.ನರಸಿಂಹರಾವ್ ಮಾತ್ರ ಬುರ್ಕಿನಾ ಫಾಸೋಗೆ ಭೇಟಿ ನೀಡಿದ್ದರು. ಅಂದಹಾಗೆ ಈ ಭೇಟಿಗೂ ಕಾಶ್ಮೀರಕ್ಕೂ ಒಂದು ಕುತೂಹಲಕರವಾದ ಸಂಬಂಧದ ಎಳೆಯಿದೆ.

Burkina Faso: ಆಫ್ರಿಕಾ ಖಂಡದ ಪುಟ್ಟ ದೇಶ ಬುರ್ಕಿನಾ ಫಾಸೋದಲ್ಲಿ ಉಗ್ರರ ಉಪಟಳ; 80 ಜನರು ಬಲಿ: ಭಾರತಕ್ಕೂ ಈ ದೇಶಕ್ಕೂ ಏನು ಸಂಬಂಧ?
ಆಫ್ರಿಕನ್ ದೇಶಗಳಲ್ಲಿ ಭಯೋತ್ಪಾದನೆ (ಸಾಂಕೇತಿಕ ಚಿತ್ರ)
Follow us
Guruganesh Bhat
| Updated By: guruganesh bhat

Updated on: Aug 22, 2021 | 6:08 PM

ಇಡೀ ಜಗತ್ತಿನ ಕತ್ತು ಅಫ್ಘಾನಿಸ್ತಾನದತ್ತ ಹೊರಳಿಕೊಂಡಿರುವ ಹೊತ್ತಲ್ಲೇ ದೂರದ ಆಫ್ರಿಕೆಯ ಬುರ್ಕಿನಾ ಫಾಸೋ ಎಂಬ ಪುಟ್ಟ ದೇಶದಲ್ಲೂ ಉಗ್ರರ ಉಪಟಳ ಆರಂಭವಾಗಿದೆ. ಧಾರ್ಮಿಕ ಮೂಲಭೂತವಾದಿ ಜಿಹಾದಿಗಳು ಬುರ್ಕಿನಾ ಫಾಸೋದ ಗೊರ್ಗಾಡ್ಜಿ ನಗರದಲ್ಲಿ ಆಗಸ್ಟ್ 18ರಂದು ನಡೆಸಿದ ದುಷ್ಕೃತ್ಯಕ್ಕೆ ದಾಳಿಗೆ 59 ನಾಗರಿಕರೂ ಸೇರಿ ಒಟ್ಟು 80 ಜನರು ಮೃತಪಟ್ಟಿದ್ದಾರೆ. ಇಸ್ಲಾಮಿಸ್ಟ್ ಭಯೋತ್ಪಾದನೆ ಹೆಚ್ಚಿರುವ ಬುರ್ಕಿನಾ ಫಾಸೋ ದೇಶದ ಉತ್ತರ ಭಾಗದಲ್ಲಿ ನಡೆದ ಈ ದಾಳಿಯಲ್ಲಿ 58 ಉಗ್ರರನ್ನೂ ಸಹ ಭದ್ರತಾ ಪಡೆಗಳು ಹೊಡೆದುರುಳಿಸಿದ್ದು, 19 ಜನರು ಗಾಯಗೊಂಡಿದ್ದಾರೆ. ಉಗ್ರ ದಾಳಿಯ ತರುವಾಯ ಬುರ್ಕಿನಾ ಫಾಸೋ ಅಧ್ಯಕ್ಷ ಕ್ರಿಶ್ಚಿಯನ್ ಕಾಬೋರ್ ದೇಶದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಿದ್ದಾರೆ.

ಕ್ರಿಕೆಟ್, ಗಣಿಗಾರಿಕೆ ಸೇರಿದಂತೆ ಕೆಲವು ಕಾರಣಗಳಿಂದಾಗಿ ದಕ್ಷಿಣ ಆಫ್ರಿಕಾ, ಕೀನ್ಯಾ, ಜಿಂಬಾಬ್ವೆ, ಉರುಗ್ವೆಯಂತಹ ವಿವಿಧ ದೇಶಗಳ ಹೆಸರನ್ನು ಭಾರತೀಯರು ಕೇಳಿರುತ್ತೇವೆ. ಆದರೆ ಬುರ್ಕಿನಾ ಫಾಸೋದ ಹೆಸರು ನಮ್ಮಲ್ಲಿ ಅಪರಿಚಿತ. ಈವರೆಗೂ ಭಾರತದ ಪ್ರಧಾನಿಗಳಲ್ಲಿ ಪಿ.ವಿ.ನರಸಿಂಹರಾವ್ ಮಾತ್ರ ಬುರ್ಕಿನಾ ಫಾಸೋಗೆ ಭೇಟಿ ನೀಡಿದ್ದರು. ಅಂದಹಾಗೆ ಈ ಭೇಟಿಗೂ ಕಾಶ್ಮೀರಕ್ಕೂ ಒಂದು ಕುತೂಹಲಕರವಾದ ಸಂಬಂಧದ ಎಳೆಯಿದೆ.

ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್​ ಅವರಿಗೆ ಚಂದ್ರಸ್ವಾಮಿ ಎಂಬಾತ ಕೆಲವು ನಂಬಿಕೆಗಳ ವಿಷಯಗಳಲ್ಲಿ ಸಲಹೆ ನೀಡುತ್ತಿದ್ದರು. ಕಾಶ್ಮೀರ ಕಣಿವೆಯಲ್ಲಿ ಶಾಂತಿ ಒಪ್ಪಂದ ಪಠಿಸುವ ಯೋಚನೆ ಹೊಂದಿದ್ದ ಪಿ.ವಿ.ನರಸಿಂಹರಾವ್​ಗೆ ಚಂದ್ರಸ್ವಾಮಿ ಇತ್ತ ಒಂದು ಸಲಹೆಯೇ ಭಾರತದ ಪ್ರಧಾನಿಯನ್ನು ಬುರ್ಕಿನಾ ಫಾಸೋಗೆ ಕರೆದೊಯ್ದಿತು. ವಿಶ್ವದ ಭೂಪಟವನ್ನು ದಿಟ್ಟಿಸಿದ ಚಂದ್ರಸ್ವಾಮಿ ಬುರ್ಕಿನಾ ಫಾಸೋದಿಂದ ಕಾಶ್ಮೀರಿ ನಾಯಕರಿಗೆ ಶಾಂತಿ ಒಪ್ಪಂದದ ಆಹ್ವಾನ ನೀಡಿದಲ್ಲಿ ಫಲಿಸುವುದು ಎಂಬ ಸಲಹೆ ನೀಡಿದರಂತೆ. ಚಾಚೂತಪ್ಪದೇ ಪಿ.ವಿ.ನರಸಿಂಹರಾವ್ ಬುರ್ಕಿನಾ ಫಾಸೋ ಎಂಬ ಭಾರತೀಯರು ಅರಿಯದ ದೇಶಕ್ಕೆ ಪ್ರಯಾಣ ಬೆಳೆಸಿದರು. ಮತ್ತು ಅವರ ಆ ಭೇಟಿಯ ದಾಖಲೆಯನ್ನು ಈವರೆಗೂ ಭಾರತದ ಯಾವುದೇ ಪ್ರಧಾನಿ ಮುರಿದಿಲ್ಲ.

ಆಫ್ರಿಕಾ ಖಂಡದ ಪಶ್ಚಿಮ ಭಾಗದಲ್ಲಿರುವ ಬುರ್ಕಿನಾ ಫಾಸೋ ಮಾಲಿ ಮತ್ತು ನೈಜರ್, ಟೋಗೋ ಮತ್ತು ಘಾನಾ ದೇಶಗಳೊಂದಿಗೆ ಗಡಿ ಹೊಂದಿದೆ. ವಾಗಡೂಗು ಎಂಬ ನಗರ ಈ ದೇಶದ ರಾಜಧಾನಿ. ದೇಶದ ಜನಸಂಖ್ಯೆಯಲ್ಲಿ ಶೇಕಡಾ 60 ಭಾಗ ಇಸ್ಲಾಂ ಧರ್ಮೀಯರಿದ್ದು, ಇನ್ನುಳಿದವರಲ್ಲಿ ಶೇಕಡಾ 20ರಷ್ಟು ಕ್ರಿಶ್ಚಿಯನ್ ಮತ್ತು ಸ್ಥಳೀಯ ಬುಡಕಟ್ಟು ಜನಾಂಗದವರಿದ್ದಾರೆ.  ಇಸ್ಲಾಮಿಸ್ಟ್ ಭಯೊತ್ಪಾದಕ ಚಟುವಟಿಕೆಗಳ ಅತ್ಯಂತ ಚುರುಕಾಗಿ ನಡೆಯುವ ಅತ್ಯಂತ ಅಪಾಯಕಾರಿ ಸರಹದ್ದು ಹೊಂದಿದೆ ಬುರ್ಕಿನಾ ಫಾಸೋ. ಕಳೆದ ಆಗಸ್ಟ್ 4ರಂದು ಸಹ ನೈಜರ್ ಗಡಿಗೆ ತಾಗಿಕೊಂಡಿರುವ ಪ್ರದೇಶದಲ್ಲಿ ಉಗ್ರ ದಾಳಿ ನಡೆದಿತ್ತು ಮತ್ತು ಅಂದು 11 ನಾಗರಿಕರೂ ಸೇರಿದಂತೆ 30 ಜನರು ಅಸುನೀಗಿದ್ದರು.

ಬುರ್ಕಿನಾ ಫಾಸೋ ವಿಶ್ವದ ಅತ್ಯಂತ ಬಡ ರಾಷ್ಟ್ರಗಳಲ್ಲಿ ಒಂದು. 2012ರಲ್ಲಿ ಮಾಲಿಯ ಉತ್ತರ ಭಾಗದಲ್ಲಿ ತನ್ನ ಚಟುವಟಿಕೆಗಳನ್ನು ಆರಂಭಿಸಿದ ಅಲ್​ಖೈದಾಕ್ಕೆ ಪ್ರೆಂಚ್ ಭದ್ರತಾ ಪಡೆಗಳು ತಿರುಗೇಟು ನೀಡಿದವು. ಹೀಗಾಗಿ ಅಲ್ಖೈದಾ ಉಗ್ರ ಸಂಘಟನೆಯ ಭಯೋತ್ಪಾದಕರು ಪಕ್ಕದ ಬುರ್ಕಿನಾ ಫಾಸೋಗೆ ನುಸುಳಿದರು. ಹೀಗಾಗಿ 2015ರಿಂದ ಅಲ್​ಖೈದಾ ಮತ್ತು ಇಸ್ಲಾಮಿಕ್ ಮೂಲಭೂತವಾದಿಗಳ ಭಯೋತ್ಪಾದಕರ ಗುಂಪುಗಳ ದಾಳಿಗೆ ಈ ದೇಶ ನಲುಗುತ್ತಿದೆ.

ಇದನ್ನೂ ಓದಿ: 

Tv9 Kannada Digital Exclusive: ತಾಲಿಬಾನ್, ಭಯೋತ್ಪಾದನೆ, ಬುರ್ಖಾ, ಗಡ್ಡಧಾರಿ ಮುಲ್ಲಾಗಳ ಹೊರತಾಗಿಯೂ ನೀವರಿಯದ 30 ಆಫ್ಘನ್ ಸಂಗತಿಗಳು

Haqqani Network: ಮನುಷ್ಯತ್ವದ ಮುಖ ನೋಡದ ಹಕ್ಕಾನಿಗಳು ಅಫ್ಘಾನಿಸ್ತಾನದಲ್ಲಿ ಓಡಾಡುತ್ತಿದ್ದಾರೆ; ಯಾರಿವರು?

(Burkina Faso west african country terrorist attack killed 80 people news in Kannada)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ