ವಿವಿಧ ಇಲಾಖೆಗಳಿಗೆ ಹಂಗಾಮಿ ಸಚಿವರನ್ನು ನೇಮಿಸಿದ ತಾಲಿಬಾನ್; ನೂತನ ಸಚಿವರ ಪಟ್ಟಿ ಹೀಗಿದೆ ನೋಡಿ

ವಿವಿಧ ಇಲಾಖೆಗಳಿಗೆ ತಾಲಿಬಾನ್​ ತಾನೇ ಖುದ್ದಾಗಿ ಹಂಗಾಮಿ ಮುಖ್ಯಸ್ಥರನ್ನು ನೇಮಿಸಿದೆ. ಜನರ ಹಣಕಾಸು ಸಮಸ್ಯೆ ಪರಿಹರಿಸಲು, ಬ್ಯಾಂಕ್, ಎಟಿಎಂಗಳ ಬಳಿ ಹಣ ಪಡೆಯಲು ಜನರ ಉದ್ದನೆಯ ಸರತಿ ಸಾಲು ತಪ್ಪಿಸಲು ಸೂಚನೆ ನೀಡಿರುವ ತಾಲಿಬಾನಿಗಳು ಆದಷ್ಟು ಬೇಗ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಹರಸಾಹಸಪಡುತ್ತಿದ್ದಾರೆ.

ವಿವಿಧ ಇಲಾಖೆಗಳಿಗೆ ಹಂಗಾಮಿ ಸಚಿವರನ್ನು ನೇಮಿಸಿದ ತಾಲಿಬಾನ್; ನೂತನ ಸಚಿವರ ಪಟ್ಟಿ ಹೀಗಿದೆ ನೋಡಿ
ವಿವಿಧ ಇಲಾಖೆಗಳಿಗೆ ಸಚಿವರನ್ನು ನೇಮಿಸಿದ ತಾಲಿಬಾನ್
Follow us
TV9 Web
| Updated By: Skanda

Updated on: Aug 25, 2021 | 7:32 AM

ತಾಲಿಬಾನ್​ ಉಗ್ರರ ಬಂದೂಕಿನ ಭಯದಲ್ಲಿ ನಲುಗುತ್ತಿರುವ ಅಫ್ಘಾನಿಸ್ತಾನದಲ್ಲಿ ಜನಜೀವನ ದುರ್ಬರವಾಗಿದೆ. ಎಟಿಎಂಗಳಲ್ಲಿ ಹಣ ಇಲ್ಲದೇ, ಅಗತ್ಯ ಸಾಮಾಗ್ರಿಗಳು ದೊರೆಯದೇ ಜನರ ಪರದಾಟಡುತ್ತಿದ್ದಾರೆ. ತಾನೇ ತಂದೊಡ್ಡಿದ ಈ ಸಮಸ್ಯೆಗಳ ಪರಿಹಾರಕ್ಕಾಗಿ ಮುಂದಾಗಿರುವ ತಾಲಿಬಾನ್​ ಇದೀಗ ವಿವಿಧ ಇಲಾಖೆಗಳಿಗೆ ಹಂಗಾಮಿ ಸಚಿವರನ್ನು ನೇಮಿಸಿದೆ. ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಒಳಾಡಳಿತ, ಹಣಕಾಸು, ಇಂಟಲಿಜೆನ್ಸ್ ಇಲಾಖೆ ಹೀಗೆ ವಿವಿಧ ಇಲಾಖೆಗಳಿಗೆ ಸಚಿವರನ್ನು ನೇಮಿಸಲಾಗಿದ್ದು, ಕೈ ಮೀರುತ್ತಿರುವ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದೆ.

ಅಫ್ಘಾನಿಸ್ತಾನದಲ್ಲಿ ಈಗಾಗಲೇ ಅಡುಗೆ ಎಣ್ಣೆ, ಆಹಾರ ಧಾನ್ಯಗಳ ಬೆಲೆ ಶೇ.35 ರಷ್ಟು ಏರಿಕೆಯಾಗಿದ್ದು ಜನ ಕಂಗಾಲಾಗಿದ್ದಾರೆ. ಬ್ಯಾಂಕಿಂಗ್ ಸಮಸ್ಯೆ, ಹಣದ ಸಮಸ್ಯೆ ತಲೆದೋರಿದ್ದು ಎಟಿಎಂಗಳ ಮುಂದೆ ಉದ್ದನೆಯ ಸರತಿ ಸಾಮಾನ್ಯವಾಗಿದೆ. ಒಂದೆಡೆ ತಾಲಿಬಾನಿಗಳ ಭಯ, ಇನ್ನೊಂದೆಡೆ ಅಗತ್ಯ ಸಾಮಾಗ್ರಿಗಳು ಸಿಗದೇ ಪರದಾಟವಾಗಿ ಜನರು ಅಕ್ಷರಶಃ ಯಾತನೆ ಅನುಭವಿಸುತ್ತಿದ್ದಾರೆ.

ಈ ಸಮಸ್ಯೆಗಳನ್ನು ಪರಿಹರಿಸದಿದ್ದರೆ ತನಗೇ ಮುಳುವಾಗಬಹುದೆಂದು ಯೋಚಿಸಿರುವ ತಾಲಿಬಾನ್​ ಹಂಗಾಮಿ ಮುಖ್ಯಸ್ಥರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ತಾಲಿಬಾನ್​ ವಿವಿಧ ಇಲಾಖೆಗಳಿಗೆ ನೇಮಿಸಿರುವ ಹಂಗಾಮಿ ಸಚಿವರ ಪಟ್ಟಿ ಈ ಕೆಳಗಿನಂತಿದೆ:

ಸಖಾವುಲ್ಲಾ  – ಶಿಕ್ಷಣ ಇಲಾಖೆ ಮುಖ್ಯಸ್ಥ ಅಬ್ದುಲ್ ಬಾಕಿ – ಉನ್ನತ ಶಿಕ್ಷಣ ಇಲಾಖೆ ಸಚಿವ ಸದರ್ ಇಬ್ರಾಹಿಂ – ಒಳಾಡಳಿತ ಸಚಿವ ಗುಲ್ ಆಗಾ – ಹಣಕಾಸು ಮಂತ್ರಿ ಮುಲ್ಲಾ ಶಿರಿನ್ – ಕಾಬೂಲ್ ಗರ್ವನರ್ ಅಹಮದುಲ್ಲಾ ನೋಮನಿ – ಕಾಬೂಲ್ ಮೇಯರ್ ನಜೀಬುಲ್ಲಾ – ಗುಪ್ತಚರ ಇಲಾಖೆ ಮುಖ್ಯಸ್ಥ ಹಾಜಿ ಮೊಹಮ್ಮದ್ ಇದರೀಸ್ – ದ ಅಫ್ಘಾನಿಸ್ತಾನ ಬ್ಯಾಂಕ್ ಮುಖ್ಯಸ್ಥ

ಹೀಗೆ ವಿವಿಧ ಇಲಾಖೆಗಳಿಗೆ ತಾಲಿಬಾನ್​ ತಾನೇ ಖುದ್ದಾಗಿ ಹಂಗಾಮಿ ಮುಖ್ಯಸ್ಥರನ್ನು ನೇಮಿಸಿದೆ. ಜನರ ಹಣಕಾಸು ಸಮಸ್ಯೆ ಪರಿಹರಿಸಲು, ಬ್ಯಾಂಕ್, ಎಟಿಎಂಗಳ ಬಳಿ ಹಣ ಪಡೆಯಲು ಜನರ ಉದ್ದನೆಯ ಸರತಿ ಸಾಲು ತಪ್ಪಿಸಲು ಸೂಚನೆ ನೀಡಿರುವ ತಾಲಿಬಾನಿಗಳು ಆದಷ್ಟು ಬೇಗ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಹರಸಾಹಸಪಡುತ್ತಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ನೇಲ್ ಪಾಲಿಶ್ ಹಚ್ಚಿದರೆ ಅಫ್ಘಾನಿಸ್ತಾನದ ಮಹಿಳೆಯರ ಬೆರಳೇ ಕಟ್!; ತಾಲಿಬಾನ್ ಹೊಸ ನಿಯಮ 

ಅಫ್ಘಾನಿಸ್ತಾನದಲ್ಲಿ ಹಂಗಾಮಿ ಸರ್ಕಾರ ರಚಿಸಿದ ತಾಲಿಬಾನ್: ಆಹಾರ ಧಾನ್ಯದ ಬೆಲೆ ಏರಿಕೆ

(Taliban appoints temporary ministers for various departments to control the situation in Afghanistan)

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್