ಅಮೇರಿಕ ನೇತೃತ್ವದ ಸೇನೆಗಳು ವಾಪಸ್ಸು ಹೋಗಲು ನೀಡಿರುವ ಆಗಸ್ಟ್ 31ರ ಗಡುವನ್ನು ವಿಸ್ತರಿಸಲಾಗದು: ತಾಲಿಬಾನ್

ಅಮೆರಿಕ ನೇತೃತ್ವದ ಪಡೆಗಳು ಕಾಬೂಲ್ ನಗರದಿಂದ ಸಾವಿರಾರು ಜನರನ್ನು ಬೇರೆಡೆ ಸಾಗಿಸುತ್ತಿರುವ ಕಾರ್ಯವನ್ನು ತೀವ್ರಗೊಳಿಸುತ್ತಿದ್ದಂತೆಯೇ, ನೇರ ಪ್ರಸಾರವೊಂದರಲ್ಲಿ ಹಲವಾರು ಬೇಡಿಕೆಗಳನ್ನು ತಾಲಿಬಾನಿಗಳು ಮುಂದಿಟ್ಟಿದ್ದಾರೆ.

ಅಮೇರಿಕ ನೇತೃತ್ವದ ಸೇನೆಗಳು ವಾಪಸ್ಸು ಹೋಗಲು ನೀಡಿರುವ ಆಗಸ್ಟ್ 31ರ ಗಡುವನ್ನು ವಿಸ್ತರಿಸಲಾಗದು: ತಾಲಿಬಾನ್
ಅಫಘಾನಿಸ್ತಾನವನ್ನು ತೊರೆಯುತ್ತಿರುವ ಜನ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 24, 2021 | 10:20 PM

ಕಾಬೂಲ್: ವಿವಿಧ ಕೆಲಸಗಳಲ್ಲಿ ಕೌಶಲ್ಯ ಹೊಂದಿರುವ ಆಫ್ಘನ್ನರನ್ನು ದೇಶ ತೊರೆಯದಂತೆ ಮಂಗಳವಾರದಂದು ಆಗ್ರಹಿಸಿರುವ ತಾಲಿಬಾನ್ ವಕ್ತಾರನೊಬ್ಬ, ವಿದೇಶಿ ಸೇನೆಗಳು ಅಫಘಾನಿಸ್ತಾನವನ್ನು ಬಿಟ್ಟು ಹೋಗುವಂತೆ ವಿಧಿಸಲಾಗಿರುವ ಆಗಸ್ಟ್ 31 ರ ಗಡುವನ್ನು ವಿಸ್ತರಿಸಲಾಗದು ಎಂದು ಹೇಳಿದ್ದಾನೆ. ವೈದ್ಯರು ಹಾಗೂ ಇಂಜಿನೀಯರ್​ಗಳಂಥ ಆಫ್ಘನ್ ಪರಿಣಿತರನ್ನು ಅಮೆರಿಕ ಕರೆದೊಯ್ಯುತ್ತಿದೆ ಎಂದು ತಾಲಿಬಾನ್ ಆಪಾದಿಸುತ್ತಿದೆ. ಮಂಗಳವಾರ ಕಾಬೂಲ್ ನಲ್ಲಿ ನಡೆಸಿದ ಸುದ್ದಿಗೋಷ್ಟಿ ಒಂದರಲ್ಲಿ ಮಾತಾಡಿದ ವಕ್ತಾರ ಜಬೀಹುಲ್ಲಾಹ್ ಮುಜಾಹಿದ್, ‘ಈ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಅವರಿಗೆ (ಅಮೆರಿಕ) ತಿಳಿಲಾಗಿದೆ,’ ಎಂದು ಹೇಳಿದ್ದಾನೆ.

‘ಅವರ ಪರಿಣಿತಿಯ ಅವಶ್ಯಕತೆ ದೇಶಕ್ಕಿದೆ, ಅವರು ಬೇರೆ ದೇಶದ ಪಾಲಾಗುವುದನ್ನು ನಾವು ನೋಡುವುದು ಸಾಧ್ಯವಿಲ್ಲ,’ ಎಂದು ಮುಜಾಹಿದ್ ಹೇಳಿದ್ದಾನೆ.

ಅಮೆರಿಕ ನೇತೃತ್ವದ ಪಡೆಗಳು ಕಾಬೂಲ್ ನಗರದಿಂದ ಸಾವಿರಾರು ಜನರನ್ನು ಬೇರೆಡೆ ಸಾಗಿಸುತ್ತಿರುವ ಕಾರ್ಯವನ್ನು ತೀವ್ರಗೊಳಿಸುತ್ತಿದ್ದಂತೆಯೇ, ನೇರ ಪ್ರಸಾರವೊಂದರಲ್ಲಿ ಹಲವಾರು ಬೇಡಿಕೆಗಳನ್ನು ತಾಲಿಬಾನಿಗಳು ಮುಂದಿಟ್ಟಿದ್ದಾರೆ.

ಅಮೇರಿಕ ನೇತೃತ್ವದ ಸೇನಾ ಪಡೆಗಳು ಆಫಘಾನಿಸ್ತಾನದಿಂದ ವಾಪಸ್ಸು ಹೋಗಲು ತಾಲಿಬಾನ್ ಸಂಘಟನೆ ಈ ಮೊದಲು ವಿಧಿಸಿದ್ದ ಆಗಸ್ಟ್ 31 ರ ಗಡುವನ್ನು ವಿಸ್ತರಿಸುವುದು ಸಾಧ್ಯವಿಲ್ಲ ಎಂದು ಮುಜಾಹಿದ್ ಪುನರುಚ್ಛರಿಸಿದ್ದಾನೆ.

‘ಅವರಲ್ಲಿ ವಿಮಾನಗಳಿವೆ ಮತ್ತು ವಿಮಾನ ನಿಲ್ದಾಣವೂ ಇದೆ. ತಮ್ಮ ನಾಗರಿಕರನ್ನು ಮತ್ತು ಗುತ್ತಿಗೆದಾರರನ್ನು ಇಲ್ಲಿಂದ ವಾಪಸ್ಸು ಕರೆದುಕೊಂಡು ಹೋಗಬೇಕು,’ ಎಂದು ಮುಜಾಹಿದ್ ಹೇಳಿದ್ದಾನೆ.

ದೇಶದಲ್ಲಿ ಒಮ್ಮೆ ಭದ್ರತೆ ವ್ಯವಸ್ಥೆ ಸ್ಥಾಪನೆಗೊಂಡ ನಂತರ ಮಹಿಳೆಯರು ತಮ್ಮ ಕೆಲಸಗಳಿಗೆ ಹಿಂತಿರುಗಲು ಅವಾಕಾಶ ಕಲ್ಪಿಸಲಾಗುವುದು ಎಂಬ ಆಶ್ವಾಸನೆಯನ್ನು ನೀಡಲು ಮುಜಾಹಿದ್ ಪ್ರಯತ್ನಿಸಿದ್ದಾನೆ.

‘ಅವರು ಕೆಲಸ ಮುಂದುವರಿಸಲಿ ಎನ್ನುವುದು ನಮ್ಮ ಬಯಕೆಯಾಗಿದೆ. ಆದರೆ ಅದಕ್ಕೆ ಮೊದಲು ಎಲ್ಲ ಕಡೆ ಸೂಕ್ತವಾದ ಭದ್ರತಾ ವ್ಯವಸ್ಥೆ ನೆಲೆಗೊಳ್ಳಲು ನಾವು ಕಾಯುತ್ತಿದ್ದೇವೆ,’ ಎಂದು ಮುಜಾಹಿದ್ ಹೇಳಿದ್ದಾನೆ.

ಅಮೇರಿಕದ ಅಧ್ಯಕ್ಷ ಜೋ ಬೈಡೆನ್ ಅವರು ಅಮೇರಿಕದ ಸೇನೆಯನ್ನು ಅಫಘಾನಿಸ್ತಾನದಿಂದ ವಾಪಸ್ಸು ಕರೆಸಿಕೊಳ್ಳಲು ಆಗಸ್ಟ್ 31 ರ ಗಡುವಿಗೆ ಬದ್ಧರಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಆದರೆ, ಯುರೋಪಿಯನ್ ಮಿತ್ರ ಪಡೆಗಳು ಮತ್ತು ಬ್ರಿಟನ್ ಗಡುವನ್ನು ಉಲ್ಲಂಘಿಸುವಂತೆ ಅವರ ಮೇಲೆ ಒತ್ತಡ ಹೇರುತ್ತಿವೆ.

ಒಂಭತ್ತು ದಿನಗಳ ಹಿಂದೆ ತಾಲಿಬಾನ್ ಅಫಘಾನಿಸ್ತಾನದಲ್ಲಿ ಸರ್ಕಾರವನ್ನು ಕೈಗೆತ್ತಿಕೊಂಡ ನಂತರ ಸುಮಾರು 50,000 ವಿದೇಶಿಯರು ಹಾಗೂ ಆಫ್ಘನ್ನರನ್ನು ಕಾಬೂಲ್ ವಿಮಾನ ನಿಲ್ದಾಣದಿಂದ ಬೇರೆ ದೇಶಗಳಿಗೆ ಹೋಗಿದ್ದಾರೆ ಎಂದು ಅಮೆರಿಕ ಸರ್ಕಾರ ಹೇಳಿದೆ.

1996-2001 ರವರೆಗೆ ಅಧಿಕಾರದಲ್ಲಿದ್ದಾಗ ಇಸ್ಲಾಮಿಕ್ ಕಾನೂನನ್ನು ಭೀಕರ ಸ್ವರೂಪಕ್ಕೆ ತರ್ಜುಮೆ ಮಾಡಿ ಜಾರಿಗೊಳಿಸಿದ್ದನ್ನು ತಾಲಿಬಾನಿಗಳು ಪುನರಾವರ್ತಿಸಲಿದ್ದಾರೆ ಎಂಬ ಭೀತಿ ಅಸಂಖ್ಯಾತ ಆಫ್ಘನ್ನರನ್ನು ಕಾಡುತ್ತಿದೆ. ಕಳೆದ 20 ವರ್ಷಗಳಲ್ಲಿ ಅಫಘಾನಿಸ್ತಾದ ನಾಗರಿಕರು ಅಮೆರಿಕ ಬೆಂಬಲಿತ ಸರ್ಕಾರದೊಂದಿಗೆ ಕೆಲಸ ಮಾಡಿದ್ದಕ್ಕೆ, ಸಹಕರಿಸಿದ್ದಕ್ಕೆ ತಾಲಿಬಾನಿಗಳು ತಮ್ಮ ಮೇಲೆ ಸೇಡು ತೀರಿಸಿಕೊಳ್ಳಬಹುದೆಂಬ ಆತಂಕವೂ ಅವರಲ್ಲಿ ಮನೆ ಮಾಡಿದೆ.

ನಂಬಲಸದಳ ವೇಗದಲ್ಲಿ ಸರ್ಕಾರದ ಪಡೆಗಳನ್ನು ಮಣಿಸಿ ಅಧಿಕಾರವನ್ನು ಕೈಗೆತ್ತಿಕೊಂಡಿರುವ ತಾಲಿಬಾನಿಗಳು ಅಮೆರಿಕ ನೇತೃತ್ವದ ಪಡೆಗಳು ತೆರವುಗೊಳಿಸುತ್ತಿರುವ ಬಗ್ಗೆ ಸಾರ್ವಜನಿಕವಾಗಿ ಸಹಿಷ್ಣುತೆ ಪ್ರದರ್ಶಿಸುತ್ತಿದ್ದಾರೆ.

ಇದನ್ನೂ ಓದಿ: ಅಫಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್​ಗೆ ಈಶಾನ್ಯ ಪ್ರಾಂತ್ಯ ಪಂಜಶೀರ್ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಸುಲಭವಾಗದು!

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ