ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಗೆ ಸಿದ್ಧತೆ; ಅಧಿಕಾರದ ಗದ್ದುಗೆಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಅನ್ಯ ಪಕ್ಷಗಳ ಸವಾಲು

ಈ ಬಾರಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲು ಕಸರತ್ತು ನಡೆಸಿದರೆ ಬಿಜೆಪಿ ಅಧಿಕಾರದ ಗದ್ದುಗೆರಲು ಕಸರತ್ತು ಮಾಡುತ್ತಿದೆ. ನಗರಸಭೆಯಾಗಿದ್ದ ಕಲಬುರಗಿಯನ್ನು 1989 ರಲ್ಲಿ ಮಹಾನಗರ ಪಾಲಿಕೆಯನ್ನಾಗಿ ಮಾಡಲಾಗಿತ್ತು

ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಗೆ ಸಿದ್ಧತೆ; ಅಧಿಕಾರದ ಗದ್ದುಗೆಗಾಗಿ  ಕಾಂಗ್ರೆಸ್ ಮತ್ತು ಬಿಜೆಪಿಗೆ ಅನ್ಯ ಪಕ್ಷಗಳ ಸವಾಲು
ಕಲಬುರಗಿ ಮಹಾನಗರ ಪಾಲಿಕೆ
Follow us
TV9 Web
| Updated By: preethi shettigar

Updated on:Aug 25, 2021 | 9:03 AM

ಕಲಬುರಗಿ: ಇತ್ತೀಚೆಗೆ ರಾಜ್ಯದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಕಲಬುರಗಿ ಕೂಡ ಒಂದು. ಕಲಬುರಗಿಯಲ್ಲಿ ನಾಲ್ಕು ಮೆಡಿಕಲ್ ಕಾಲೇಜು, ವಿಶ್ವವಿದ್ಯಾಲಯ ಸೇರಿದಂತೆ ಕಲ್ಯಾಣ ಕರ್ನಾಟಕದ ಕೇಂದ್ರ ಕಚೇರಿಗಳು ಇವೆ. ಇಂತಹ ಕಲಬುರಗಿ ನಗರದಲ್ಲಿಗ ಮಹಾನಗರ ಪಾಲಿಕೆಯ ಚುನಾವಣೆ ನಡೆಯುತ್ತಿದ್ದು, ಪಾಲಿಕೆಯ ಗದ್ದುಗೆ ಹಿಡಿಯಲು ವಿವಿಧ ರಾಜಕೀಯ ಪಕ್ಷಗಳು ಹತ್ತಾರು ರೀತಿಯ ಕಸರತ್ತು ಪ್ರಾರಂಭಿಸಿವೆ.

ಕಳೆದ 28 ತಿಂಗಳಿಂದ ಜನಪ್ರತಿನಿಧಿಗಳು ಇಲ್ಲದೇ ಕಲಬುರಗಿ ಮಹಾನಗರ ಪಾಲಿಕೆ, ಅಧಿಕಾರಿಗಳ ಮೇಲೆಯೆ ನಡೆಯುತ್ತಿತ್ತು. ಪಾಲಿಕೆಗೆ ಚುನಾವಣೆ ನಡೆಸಬೇಕು, ಜನಪ್ರತಿನಿಧಿಗಳ ಆಯ್ಕೆಯಾಗಬೇಕು ಎಂದು ಆಗ್ರಹಗಳು ಮೇಲಿಂದ ಮೇಲೆ ಕೇಳಿ ಬರುತ್ತಲೇ ಇತ್ತು. ಆದರೆ ವಾರ್ಡ್​ಗಳ ವರ್ಗಿಕರಣ, ಮೀಸಲಾತಿ ನಿಗದಿ ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗಾಗಿ ಪಾಲಿಕೆಗೆ ಚುನಾವಣೆ ನಿಗದಿಯಾಗಿರಲಿಲ್ಲ. ಆದರೆ ಇದೀಗ ಎಲ್ಲಾ ಗೊಂದಲಗಳಿಗೆ ತರೆ ಬಿದ್ದಿದ್ದು ಚುನಾವಣೆ ಘೋಷಣೆಯಾಗಿದೆ.

ಕಲಬುರಗಿ ಮಹಾನಗರ ಪಾಲಿಕೆಗೆ ಸೆಪ್ಟಂಬರ್ 2013 ರಲ್ಲಿ ಚುನಾವಣೆ ನಡೆದಿತ್ತು. ಕೆಲ ಕಾರಣಗಳಿಂದ ಆಗಿನ ಪಾಲಿಕೆ ಸದಸ್ಯರು, ಎಪ್ರಿಲ್ 2014 ರಂದು ಅಧಿಕಾರ ಸ್ವೀಕಾರ ಮಾಡಿದ್ದರು. 2019 ರ ಎಪ್ರಿಲ್ ಅವಧಿಗೆ ಅವರ ಅಧಿಕಾರ ಅವಧಿ ಮುಗಿದಿತ್ತು. ನಂತರ ಚುನಾವಣೆ ಅನೇಕ ಕಾರಣಗಳಿಂದ ನೆಡದಿರಲಿಲ್ಲ. ಅನೇಕರು ಪಾಲಿಕೆ ಚುನಾವಣೆಯ ಕನಸನ್ನೇ ಬಿಟ್ಟು ಬಿಟ್ಟಿದ್ದರು. ರಾಜ್ಯ ಸರ್ಕಾರ ಕೂಡ ಕೊರೊನಾ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಆಸಕ್ತಿ ತೋರಿರಲಿಲ್ಲಾ. ಆದರೆ ಹೈಕೋರ್ಟ್ ಸೂಚನೆ ಮೇರೆಗೆ, ಚುನಾವಣಾ ಆಯೋಗ, ರಾಜ್ಯದ ಬೆಳಗಾವಿ ಮತ್ತು ಹುಬ್ಬಳಿ-ಧಾರವಾಡ ಪಾಲಿಕೆಯ ಜತಗೆ ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ್ದರಿಂದ ಆಗಸ್ಟ್ 16 ರಂದು ಚುನಾವಣೆಯ ಅಧಿಸೂಚನೆ ಹೊರಡಿಸಲಾಗಿತ್ತು.

ಪುರುಷರಿಗಿಂತ ಮಹಿಳಾ ಮತಾದರರೇ ಹೆಚ್ಚು ಕಲಬುರಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ 55 ವಾರ್ಡ್​ಗಳಿಗೆ ಚುನಾವಣೆ ನಡೆಯಲಿದೆ. 2011 ರ ಜನಗಣತಿಯಂತೆ ವಾರ್ಡ್​ಗಳ ಮೀಸಲಾತಿ ಅಂತಿಮಗೊಳಿಸಲಾಗಿದ್ದು, ಅದರ ಆಧಾರದ ಮೇಲೆಯೇ ಚುನಾವಣೆ ನಡೆಯಲಿದೆ. ಸದ್ಯದ ಮತದಾರರ ಪಟ್ಟಿ ಪ್ರಕಾರ, ಕಲಬುರಗಿ ಪಾಲಿಕೆಯ ಚುನಾವಣೆಯಲ್ಲಿ ಒಟ್ಟು 5,19,464 ಜನ ಮತದಾನದ ಹಕ್ಕು ಹೊಂದಿದ್ದಾರೆ. ಅದರಲ್ಲಿ 2,60,541 ಮಹಿಳಾ ಮತದಾರರು ಇದ್ದರೆ, 2,58,725 ಪುರುಷ ಮತದಾರರು ಇದ್ದಾರೆ. 140 ಇತರೇ ಮತದಾರರು ಇದ್ದಾರೆ. ಪುರುಷರಿಗಿಂತ ಮಹಿಳಾ ಮತಾದರರೇ ನಗರದಲ್ಲಿ ಹೆಚ್ಚು ಇರುವುದು ವಿಶೇಷವಾಗಿದೆ.

ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆ ತಂದ ಚುನಾವಣೆ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅನೇಕ ದಶಕಗಳಿಂದ ಪಾರಮ್ಯವನ್ನು ತೋರಿಸುತ್ತಾ ಬಂದಿದೆ. ಬಹುಮತದ ಮ್ಯಾಜಿಕ್ ನಂಬರ್ ಗಳಿಸಿ ಅಧಿಕಾರದ ರುಚಿ ಅನುಭವಿಸಿದೆ. ಹೀಗಾಗಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವುದು ಕಾಂಗ್ರೆಸ್​ಗೆ ಪ್ರತಿಷ್ಠೆಯಾದರೆ, ಇತ್ತ ಪಾಲಿಕೆಯ ಚುನಾವಣೆಯಲ್ಲಿ ಕಮಲ ಅರಳಿಸುವುದು ಕೂಡ ಬಿಜೆಪಿ ನಾಯಕರಿಗೆ ಅಷ್ಟೇ ಮುಖ್ಯವಾಗಿದೆ. ಕಲಬುರಗಿ ದಕ್ಷಿಣದಲ್ಲಿ ಬಿಜೆಪಿ ಶಾಸಕರಿದ್ದರೆ, ಉತ್ತರದಲ್ಲಿ ಕಾಂಗ್ರೆಸ್ ಶಾಸಕಿಯರಿದ್ದಾರೆ. ಮತ್ತೊಂದಡೆ ಜೆಡಿಎಸ್ ಮತ್ತು ಆಮ್ ಆದ್ಮಿ ಪಕ್ಷಗಳು ಕೂಡಾ ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳುವ ತವಕದಲ್ಲಿದ್ದಾರೆ. ಹೀಗಾಗಿ ಪಾಲಿಕೆ ಚುನಾವಣೆ ರಾಜಕೀಯ ಪಕ್ಷಗಳ ಮುಖಂಡರಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ.

ಕಳೆದ ಬಾರಿ ಪಾಲಿಕೆಯಲ್ಲಿ ಬಲಾಬಲ 2013 ರಲ್ಲಿ ನಡೆದ ಚುನಾವಣೆಯಲ್ಲಿ 55 ವಾರ್ಡ್​ಗಳ ಪೈಕಿ, 23 ವಾರ್ಡ್​ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರು. ಕೇವಲ ಏಳು ವಾರ್ಡ್​ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರೆ, ಏಳರಲ್ಲಿ ಕೆಜೆಪಿ ಅಭ್ಯರ್ಥಿಗಳು ಗೆದ್ದಿದ್ದರು. ಎಂಟು ಜನ ಪಕ್ಷೇತರರು, ಓರ್ವ ಎಸ್​ಡಿಪಿಐ, ಓರ್ವ ಆರ್​ಪಿಐ ಪಕ್ಷದಿಂದ ಗೆಲವು ಸಾದಿಸಿದ್ದರು. ಕಳೆದ ಬಾರಿ ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಸಿಗದೇ ಇದ್ದರು ಕೂಡಾ ಪಕ್ಷೇತರರ ಬೆಂಬಲದಿಂದ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.

ಈ ಬಾರಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲು ಕಸರತ್ತು ನಡೆಸಿದರೆ ಬಿಜೆಪಿ ಅಧಿಕಾರದ ಗದ್ದುಗೆರಲು ಕಸರತ್ತು ಮಾಡುತ್ತಿದೆ. ನಗರಸಭೆಯಾಗಿದ್ದ ಕಲಬುರಗಿಯನ್ನು 1989 ರಲ್ಲಿ ಮಹಾನಗರ ಪಾಲಿಕೆಯನ್ನಾಗಿ ಮಾಡಲಾಗಿತ್ತು. ಅಲ್ಲಿಂದ ಇಲ್ಲಿವರಗೆ ಬಿಜೆಪಿ ಯಾವತ್ತು ಅಧಿಕಾರಕ್ಕೆ ಬಂದಿಲ್ಲ. 2010-11 ರಲ್ಲಿ ಬಿಜೆಪಿ ಮೀಸಲಾತಿಯ ಬಲದಿಂದ ಮೇಯರ್ ಸ್ಥಾನವನ್ನು ಪಡೆದಿತ್ತು. ಕಾಂಗ್ರೆಸ್​ಗೆ ಬಹುಮತ ಇದ್ದರೂ ಕೂಡಾ, ಆಗ ಮೇಯರ್ ಸ್ಥಾನ ಎಸ್​ಸಿ ಮಹಿಳೆಗೆ ಮೀಸಲಾಗಿತ್ತು. ಆಗ ಕಾಂಗ್ರೆಸ್​ನಲ್ಲಿ ಎಸ್​ಸಿ ಮಹಿಳೆ ಇಲ್ಲದೇ ಇದ್ದಾಗ, ಅನಾಯಸವಾಗಿ ಬಿಜೆಪಿಯ ಸುನಂದಾ ಎನ್ನುವವರು ಮೇಯರ್ ಆಗಿದ್ದರು. ಅದನ್ನು ಬಿಟ್ಟರೆ ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ ಹೇಳಿಕೊಳ್ಳುವಂತ ಸಾಧನೆ ಮಾಡಿರಲಿಲ್ಲ. 55 ವಾರ್ಡ್​ಗಳಲ್ಲಿ ಅಭ್ಯರ್ಥಿಗಳನ್ನು ಕೂಡಾ ಹಾಕಿರಲಿಲ್ಲ. ಆದರೆ ಈ ಬಾರಿ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿ ನಾಯಕರು, ಪಾಲಿಕೆಯ 55 ವಾರ್ಡ್​ಗಳಿಗೆ ತಮ್ಮ ಅಭ್ಯರ್ಥಿಗಳನ್ನು ಹಾಕಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿಗೆ ಅನ್ಯ ಪಕ್ಷಗಳ ಸವಾಲು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ತಮಗೆ ಸ್ಪಷ್ಟ ಬಹುಮತ ಈ ಬಾರಿ ಸಿಗುತ್ತದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಎರಡು ಪಕ್ಷಗಳಿಗೆ ಅನ್ಯ ಪಕ್ಷಗಳು ಕೂಡಾ ಟಕ್ಕರ್ ನೀಡುತ್ತಿವೆ. ಕಲಬುರಗಿ ಪಾಲಿಕೆಯ ಚುನಾವಣೆಯಲ್ಲಿ ಈ ಬಾರಿ ಜೆಡಿಎಸ್, ಎಐಎಂಐಎಂ, ಆಮ್ ಆದ್ಮಿ ಪಕ್ಷಗಳು ಕೂಡಾ ತಮ್ಮ ಅಭ್ಯರ್ಥಿಗಳನ್ನು ಹಾಕಿದ್ದಾರೆ. ಜೆಡಿಎಸ್ 47 ವಾರ್ಡ್​ಗಳಲ್ಲಿ ತನ್ನ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ, ಇತ್ತ ಆಮ್ ಆದ್ಮಿ ಮತ್ತು ಎಐಎಂಐಎಂ ಪಕ್ಷಗಳು ಕೂಡಾ ತಮ ಅಭ್ಯರ್ಥಿಗಳನ್ನು ನಿಲ್ಲಿಸಿವೆ. ಇದು ಕಾಂಗ್ರೆಸ್ ಮತ್ತು ಬಿಜೆಪಿಯ ಓಟಕ್ಕೆ ಬ್ರೇಕ್ ಹಾಕುವ ಸಾಧ್ಯತೆ ಇದೆ. ಏಕೆಂದರೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ಸಿಗದೇ ಇರುವ ಅನೇಕರು ಜೆಡಿಎಸ್ ಸೇರಿದಂತೆ ಬೇರೆ ಬೇರೆ ಪಕ್ಷಗಳಿಗೆ ಜಿಗಿದು, ಸ್ಪರ್ಧಿಸುತ್ತಿದ್ದಾರೆ. ಕೆಲವರು ಬಂಡಾಯ ಅಭ್ಯರ್ಥಿಗಳಾಗಿದ್ದು, ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಯ ಅನೇಕ ಅಭ್ಯರ್ಥಿಗಳಿಗೆ ಜೆಡಿಎಸ್ ಸೇರಿದಂತೆ ಅನ್ಯ ಪಕ್ಷದವರು ತೀವ್ರ ಸ್ಪರ್ಧೆಯನ್ನು ನೀಡುತ್ತಿದ್ದಾರೆ.

ಉತ್ತರದಲ್ಲಿ ಕಾಂಗ್ರೆಸ್, ದಕ್ಷಿಣದಲ್ಲಿ ಬಿಜೆಪಿ ಇನ್ನು ಕಲಬುರಗಿ ನಗರದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿವೆ. ಕಲಬುರಗಿ ಉತ್ತರ ವಿಧಾನಸಭಾ ವ್ಯಾಪ್ತಿಯಲ್ಲಿ 28 ವಾರ್ಡ್​ಗಳು ಬರುತ್ತವೆ. ಇನ್ನು ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 27 ವಾರ್ಡ್​ಗಳಿವೆ. ಉತ್ತರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಿ ಖನೀಜ್ ಪಾತೀಮಾ ಇದ್ದರೆ, ದಕ್ಷಿಣದಲ್ಲಿ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ಇದ್ದಾರೆ. ಇಬ್ಬರಿಗೂ ಕೂಡ ಇದು ಸವಾಲಿನ ಚುನಾವಣೆಯಾಗಿದೆ. ತಮ್ಮ ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾದ ಅನಿವಾರ್ಯತೆ ಕೂಡ ಇಬ್ಬರ ಮೇಲಿದೆ.

ಇನ್ನು ಕಾಂಗ್ರೆಸ್ ಇಲ್ಲಿವರಗೆ ಪಾಲಿಕೆಯ ಚುನಾವಣೆ ಮಾಡುತ್ತಿದ್ದದ್ದು, ದಿವಂಗತ ಖಮರುಲ್ ಇಸ್ಲಾಂ ಅವರ ಮೇಲೆ. ಹೌದು ಮಾಜಿ ಸಚಿವ ದಿ. ಖಮರುಲ್ ಇಸ್ಲಾಂ, ಪಾಲಿಕೆಯಲ್ಲಿ ತಮ್ಮದೇ ಆದ ಹಿಡಿತ ಹೊಂದಿದ್ದರು. ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಿ, ಅವರನ್ನು ಗೆಲ್ಲಿಸಿಕೊಂಡು ಬರುವ ತಾಕತ್ತು ಖಮರುಲ್ ಅವರಿಗಿತ್ತು. ಆದರೆ ಅವರು ವರ್ಷಗಳ ಹಿಂದೆ ನಿಧನರಾಗಿದ್ದರು, ಅವರು ಇಲ್ಲದೇ ನಡೆಯುತ್ತಿರುವ ಮೊದಲ ಪಾಲಿಕೆ ಚುನಾವಣೆ ಇದಾಗಿದೆ. ಹೀಗಾಗಿ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಈ ಬಾರಿ ಸವಾಲು ಎದುರಾಗಿದ್ದು, ಅವರ ಪತ್ನಿ ಇದೀಗ ಶಾಸಕಿಯಾಗಿದ್ದಾರೆ. ಆದರೆ ಖಮರುಲ್ ಇಸ್ಲಾಂ ಅವರಿಗೆ ಇದ್ದಷ್ಟು ಹಿಡಿತ ಖನೀಜ್ ಪಾತೀಮಾಗೆ ಇಲ್ಲದೇ ಇರುವುದರಿಂದ, ಕಾಂಗ್ರೆಸ್​ಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ. ಇನ್ನು ಖಮರುಲ್ ಬೆಂಬಲಿಗರನ್ನು ಕಡೆಗಣಿಸಿರುವ ಆರೋಪಗಳಿದ್ದು, ಅನೇಕ ಕಾಂಗ್ರೆಸ್ ಮುಖಂಡರು, ಬೇರೆ ಪಕ್ಷಗಳಿಗೆ ಜಿಗದಿದ್ದಾರೆ. ಹೀಗಾಗಿ ಇದು ಕಾಂಗ್ರೆಸ್​ಗೆ ಮೈನಸ್ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಮುಸ್ಲಿಂರಿಗೆ ಮಣೆ ಹಾಕಿದ ಬಿಜೆಪಿ ಕಲಬುರಗಿ ಪಾಲಿಕೆಯ ಚುನಾವಣೆಯಲ್ಲಿ ಮೊದಲ ಬಾರಿಗೆ ಎಲ್ಲಾ 55 ವಾರ್ಡ್​ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಬಿಜೆಪಿ ಹಾಕಿದೆ. ಈ ಬಾರಿ ವಿಶೇಷವೆಂದರೆ, ಬಿಜೆಪಿ ಪಕ್ಷ ಮುಸ್ಲಿಂ ಅಭ್ಯರ್ಥಿಗಳಿಗ ಮಣೆ ಹಾಕಿರುವುದು. ಹೌದು ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಹೆಚ್ಚಿನ ಮುಸ್ಲಿಂ ಸಮುದಾಯದ ಮತದಾರರು ಇದ್ದಾರೆ. ಅಲ್ಲಿ ಬಿಜೆಪಿ ಗೆಲ್ಲಲೇಬೇಕು ಎನ್ನುವ ಉದ್ದೇಶದಿಂದ ಮುಸ್ಲಿಂ ಸಮಾಜದವರಿಗೆ ಮಣೆ ಹಾಕಿದೆ. ಹೀಗಾಗಿ ಪಾಲಿಕೆಯ 55 ವಾರ್ಡ್​ಗಳ ಪೈಕಿ ಬರೋಬ್ಬರಿ 11 ಮುಸ್ಲಿಂ ಅಭ್ಯರ್ಥಿಗಳಿಗೆ ತನ್ನ ಟಿಕೆಟ್ ನೀಡಿದೆ. ಇನ್ನು ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳು ಜಾತಿ ಆಧಾರದ ಮೇಲೆಯೇ ಟಿಕೆಟ್ ನೀಡಿವೆ. ಯಾವ ವಾರ್ಡ್​ನಲ್ಲಿ ಯಾವ ಸಮುದಾಯವರು ಹೆಚ್ಚಾಗಿದ್ದಾರೆ ಎನ್ನುವುದನ್ನು ತಿಳಿದುಕೊಂಡು, ಅದೇ ಸಮುದಾಯದವರಿಗೆ ಟಿಕೆಟ್ ನೀಡಿವೆ.

ಈ ಬಾರಿ ಬಿಜೆಪಿ ಎಲ್ಲಾ ವಾರ್ಡ್​ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು, ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಮೊದಲ ಬಾರಿಗೆ ಪಾಲಿಕೆಯಲ್ಲಿ ಬಿಜೆಪಿ ತನ್ನ ಸ್ವಂತ ಬಲದಿಂದ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಕಲಬುರಗಿ ನಗರ ಬಿಜೆಪಿ ಅಧ್ಯಕ್ಷ ಸಿದ್ದಾಜಿ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಕಲಬುರಗಿ ಪಾಲಿಕೆಯಲ್ಲಿ ಮೊದಲಿನಿಂದಲು ಕಾಂಗ್ರೆಸ್ ಹಿಡಿತದಲ್ಲಿದೆ. ಈ ಬಾರಿ ಕೂಡ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೆಚ್ಚಿನ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ. ಮತ್ತೆ ಪಾಲಿಕೆಯ ಗದ್ದುಗೆಯನ್ನು ಕಾಂಗ್ರೆಸ್ ಹಿಡಿಯುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ್ ಗುತ್ತೇದಾರ್ ತಿಳಿಸಿದ್ದಾರೆ.

ವರದಿ: ಸಂಜಯ್ ಚಿಕ್ಕಮಠ

ಇದನ್ನೂ ಓದಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ ಬೆನ್ನಲ್ಲೇ ಆಂತರಿಕ ಅಸಮಾಧಾನ ಸ್ಫೋಟ

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ; ಎಲ್ಲಾ ವಾರ್ಡ್​ಗಳಲ್ಲೂ ಕಾಂಗ್ರೆಸ್ ಪಕ್ಷದ ಚಿಹ್ನೆಯಡಿ ಸ್ಪರ್ಧೆ: ಸತೀಶ್ ಜಾರಕಿಹೊಳಿ

Published On - 9:00 am, Wed, 25 August 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್