ರೈಲು ನಿಲ್ದಾಣದ ಫಲಕಗಳಲ್ಲಿ ಸಮುದ್ರ ಮಟ್ಟದಿಂದ ಇರುವ ಎತ್ತರವನ್ನು ಬರೆದಿರುತ್ತಾರೆ; ಏಕೆ ಗೊತ್ತೇ?
Indian Railways: ರೈಲು ನಿಲ್ದಾಣದಲ್ಲಿ ಕಾಣಸಿಗುವ ಹಳದಿ ಫಲಕವೇ ಜನರ ಆಕರ್ಷಣೆ ಆಗಿರುತ್ತದೆ. ರೈಲು ನಿಲ್ದಾಣದ ಆರಂಭದಲ್ಲಿ ಹಾಗೂ ಕೊನೆಯಲ್ಲಿ ಎರಡೂ ಕಡೆಯೂ ಈ ದೊಡ್ಡ ಗಾತ್ರದ ಫಲಕ ಇರುತ್ತದೆ.
ರೈಲ್ವೇ ನಿಲ್ದಾಣದಲ್ಲಿ ಹಳದಿ ಬೋರ್ಡ್ಗಳಲ್ಲಿ ನಿಲ್ದಾಣದ ಹೆಸರು ಬರೆದಿರಲಾಗಿರುತ್ತದೆ. ಅದನ್ನು ನೀವೆಲ್ಲರೂ ಗಮನಿಸಿಯೇ ಇರುತ್ತೀರಿ. ಆದರೆ, ಆ ಫಲಕಗಳಲ್ಲಿ ಸಮುದ್ರಮಟ್ಟದಿಂದ ಎಷ್ಟು ಎತ್ತರ ಇದೆ ಎಂದು ಬರೆದಿರುತ್ತಾರೆ. ಅದನ್ನು ಏಕೆ ಅಲ್ಲಿ ಉಲ್ಲೇಖಿಸಿರುತ್ತಾರೆ ಎಂದು ನೀವು ಯೋಚಿಸಿದ್ದೀರಾ? ಒಂದು ಸ್ಥಳದಿಂದ ಮತ್ತೊಂದು ಕಡೆಗೆ ರೈಲಿನಲ್ಲಿ ಹೋಗುವಾಗ ಹಳದಿ ಫಲಕಗಳನ್ನು ನೋಡಿಯೇ ಇರುತ್ತೀರಿ. ಇಂಗ್ಲಿಷ್, ಹಿಂದಿ ಅಥವಾ ಸ್ಥಳೀಯ ಭಾಷೆಯಲ್ಲಿ ಈ ಬೋರ್ಡ್ ಇರುತ್ತದೆ. ಊರಿನ ಅಥವಾ ನಿಲ್ದಾಣದ ಜೊತೆಗೆ ಸಮುದ್ರ ಮಟ್ಟದಿಂದ ಆ ನಿಲ್ದಾಣ ಎಷ್ಟು ಎತ್ತರದಲ್ಲಿ ಇದೆ ಎಂದೂ ಅಲ್ಲಿ ಉಲ್ಲೇಖಿಸಿರುತ್ತಾರೆ.
ಭಾರತೀಯ ರೈಲ್ವೇ ನೆಟ್ವರ್ಕ್ ಜಗತ್ತಿನಲ್ಲೇ ಅತಿದೊಡ್ಡದಾದ ರೈಲ್ವೇ ನೆಟ್ವರ್ಕ್ ಆಗಿದೆ. ಪ್ರತಿಯೊಂದು ರೈಲು ನಿಲ್ದಾಣದಲ್ಲಿ ಕೂಡ ಸ್ಟೇಷನ್ ಮಾಸ್ಟರ್ ಆಫೀಸು ಹಾಗೂ ವಿಚಾರಣಾ ಕೇಂದ್ರ ಇರುತ್ತದೆ. ರೈಲ್ಬೇ ವಿಭಾಗ ಸಹಾಯವಾಣಿಯನ್ನು ಕೂಡ ಜನರಿಗೆ ನೀಡಿದೆ. ಪ್ರಯಾಣದ ವೇಳೆ ಯಾವುದೇ ದೂರು ಅಥವಾ ಸಲಹೆ ನೀಡಲು 139 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ರೈಲು ನಿಲ್ದಾಣದಲ್ಲಿ ಕಾಣಸಿಗುವ ಹಳದಿ ಫಲಕವೇ ಜನರ ಆಕರ್ಷಣೆ ಆಗಿರುತ್ತದೆ. ಆ ಫಲಕವು ಒಂದು ಊರನ್ನು, ನಿಲ್ದಾಣವನ್ನು, ಪ್ರಯಾಣದ ಗುರಿಯನ್ನು ಪ್ರತಿನಿಧಿಸುತ್ತದೆ. ರೈಲು ನಿಲ್ದಾಣದ ಆರಂಭದಲ್ಲಿ ಹಾಗೂ ಕೊನೆಯಲ್ಲಿ ಎರಡೂ ಕಡೆಯೂ ಈ ದೊಡ್ಡ ಗಾತ್ರದ ಫಲಕ ಇರುತ್ತದೆ. ಯಾವ ನಿಲ್ದಾಣಕ್ಕೆ ಈಗ ನಾವು ತಲುಪಿದ್ದೇವೆ ಎಂದು ತಿಳಿಯುವ ಕುತೂಹಲ ಇಟ್ಟುಕೊಂಡಾದರೂ ಪ್ರಯಾಣಿಕರು ಅದನ್ನು ಗಮನಿಸುತ್ತಾರೆ. ಈ ವೇಳೆ ನೀವು ಸಮುದ್ರ ಮಟ್ಟದಿಂದ ಇರುವ ಎತ್ತರವನ್ನು ಕೂಡ ನೋಡಿರಬಹುದು.
ಹೀಗೆ ರೈಲು ನಿಲ್ದಾಣದ ಹಳದಿ ಬೋರ್ಡ್ಗಳಲ್ಲಿ ನಿಲ್ದಾಣದ ಹೆಸರಿನ ಜೊತೆಗೆ ಸಮುದ್ರ ಮಟ್ಟದಿಂದ ನಿಲ್ದಾಣ ಇರುವ ಎತ್ತರವನ್ನು ಬರೆಯಲು ಕಾರಣವಿದೆ. ಇದನ್ನು Mean Sea Level (MSL) ಎಂದು ಕರೆಯುತ್ತಾರೆ. ಈ ಫಲಕವನ್ನು ಪ್ರಯಾಣಿಕರ ಸುರಕ್ಷತೆಗಾಗಿ ಅಳವಡಿಸಿರಲಾಗುತ್ತದೆ. ಎಮ್ಎಸ್ಎಲ್ ಮೂಲಕ ರೈಲು ಚಲಾಯಿಸುವವರಿಗೆ ಮತ್ತು ರೈಲು ಗಾರ್ಡ್ಗಳಿಗೆ ತಾವು ಪ್ರಯಾಣಿಸುತ್ತಿರುವ ಆಲ್ಟಿಟ್ಯೂಡ್ ತಿಳಿಯುತ್ತದೆ.
ಈ ಎಮ್ಎಸ್ಎಲ್ ಸಹಾಯದಿಂದಲೇ, ರೈಲು ಚಾಲಕ (ಲೊಕೊ ಪೈಲೆಟ್) ರೈಲಿನ ವೇಗವನ್ನು ನಿಯಂತ್ರಿಸುತ್ತಾರೆ. ಒಂದುವೇಳೆ, ರೈಲು ಎತ್ತರದ ಆಲ್ಟಿಟ್ಯೂಡ್ ಕಡೆಗೆ ಚಲಿಸುತ್ತಿದ್ದರೆ, ಚಾಲಕ ಅದಕ್ಕೆ ತಕ್ಕಂತೆ ಎಂಜಿನ್ಗೆ ಪವರ್ ನೀಡುತ್ತಾನೆ.
ಭಾರತೀಯ ರೈಲ್ವೇ ಇಲಾಖೆ ಮಾರ್ಚ್ 2020 ರಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಕಂಡುಬಂದ ಕಾರಣ ರೈಲು ಸಂಚಾರವನ್ನು ಸಂಪೂರ್ಣವಾಗಿ ನಿಲ್ಲಿಸಿತ್ತು. ಆಮೇಲೆ, ಅನ್ಲಾಕ್ ಮಾಡಿದ ನಂತರ ರೈಲ್ವೇ ಇಲಾಖೆ ಇದೀಗ ವಿವಿಧ ಹೊಸ ವಿಶೇಷ ರೈಲುಗಳನ್ನು ಪ್ರಯಾಣಿಕರಿಗೆ ಪರಿಚಯಿಸಿದೆ. ಬಹುತೇಕ ರೈಲು ಸಂಚಾರ ಪುನಾರಂಭಿಸಿದೆ.
ಇದನ್ನೂ ಓದಿ: Indian Railways: ರೈಲ್ವೇ ಇಲಾಖೆಯ ಉದ್ಯೋಗ ಹುಡುಕುವುದು ಹೇಗೆ? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ವಿವರ
ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ ನಮ್ಮ ಮೆಟ್ರೋ ಪ್ರಯಾಣ ದರ ಎಷ್ಟು? ಕೆಂಗೇರಿಗೆ ಸದ್ಯ 10 ನಿಮಿಷಕ್ಕೊಂದು ರೈಲು
(Indian Railways Mention Stations Height Above Sea Level in Railway Station Board know why)
Published On - 8:56 pm, Tue, 24 August 21