ಗೋವಾದಲ್ಲಿ ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ಇಬ್ಬರು ಸಾವು
ಗೋವಾದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವಾಗ 27 ವರ್ಷದ ಮಹಿಳೆ ಮತ್ತು ಆಕೆಯ ಇನ್ಸ್ಟ್ರಕ್ಟರ್ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಉತ್ತರ ಗೋವಾದ ಕೇರಿ ಗ್ರಾಮದಲ್ಲಿ ಅಪಘಾತ ಸಂಭವಿಸಿದ್ದು, ಬಲಿಯಾದವರನ್ನು ಪುಣೆಯ ಶಿವಾನಿ ಡೇಬಲ್ ಹಾಗೂ ನೇಪಾಳದ ಸುಮಲ್ ನೇಪಾಲಿ (26) ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಕೇರಿ ಪ್ರಸ್ಥಭೂಮಿಯ ಬಂಡೆಯಿಂದ ಟೇಕಾಫ್ ಆದ ಕೆಲವೇ ಸಮಯದಲ್ಲಿ ಇಬ್ಬರೂ ಕಂದಕಕ್ಕೆ ಅಪ್ಪಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ಯಾರಾಗ್ಲೈಡಿಂಗ್ ಪ್ರತಿಯೊಬ್ಬರ ಕನಸು, ಪ್ಯಾರಾಗ್ಲೈಡಿಂಗ್ ಸಮಯದಲ್ಲಿ ಅನೇಕ ಬಾರಿ ಅಪಘಾತಗಳು ಸಂಭವಿಸಿವೆ.ಇಂತಹ ಘಟನೆಯೊಂದು ಉತ್ತರ ಗೋವಾದಲ್ಲಿ ನಡೆದಿದೆ. ಇಲ್ಲಿ ಪ್ಯಾರಾಗ್ಲೈಡಿಂಗ್ ವೇಳೆ ನಿರ್ಲಕ್ಷ್ಯದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ, ಪ್ಯಾರಾಗ್ಲೈಡಿಂಗ್ ಮಹಿಳಾ ಪ್ರವಾಸಿ ಹಾಗೂ ಇನ್ಸ್ಟ್ರಕ್ಟರ್ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಭಾನುವಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಡೆದ ಅಪಘಾತದಲ್ಲಿ ಪುಣೆ ನಿವಾಸಿ ಶಿವಾನಿ ಡೇಬಲ್ ಮತ್ತು ಆಕೆಯ ಇನ್ಸ್ಟ್ರಕ್ಟರ್ ಸುಮಲ್ ನೇಪಾಲಿ (26) ಸಾವನ್ನಪ್ಪಿದ್ದಾರೆ . ಮಹಿಳೆಯ ತರಬೇತುದಾರ ನೇಪಾಳಿ ಪ್ರಜೆಯಾಗಿದ್ದರು. ದಬಾಲೆ ಅವರು ಪ್ಯಾರಾಗ್ಲೈಡಿಂಗ್‌ಗಾಗಿ ಬುಕ್ ಮಾಡಿದ್ದ ಸಾಹಸ ಕ್ರೀಡಾ ಕಂಪನಿಯನ್ನು ಅಕ್ರಮವಾಗಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನ ಪ್ರಕಾರ, ‘ಪ್ಯಾರಾಗ್ಲೈಡರ್’ ಟೇಕಾಫ್ ಆದ ತಕ್ಷಣ ಕಂದಕಕ್ಕೆ ಬಿದ್ದು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕಂಪನಿ ಮಾಲೀಕ ಶೇಖರ್ ರೈಜಾಡ ವಿರುದ್ಧ ಮಾಂಡ್ರೆಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ಓದಿ: Travel Tips: ಭಾರತದಲ್ಲಿ ಪ್ಯಾರಾಗ್ಲೈಡಿಂಗ್ ಅನುಭವ ಪಡೆಯಲು ಸೂಕ್ತ ತಾಣಗಳ ವಿವರ ಇಲ್ಲಿವೆ
ಗೋವಾ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರು ಈ ವಿಚಾರದಲ್ಲಿ ಕಂಪನಿ ಮತ್ತು ಅದರ ಮಾಲೀಕರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿ ಶೇಖರ್ ರೈಜಾಡಾ ತನ್ನ ಕಂಪನಿಯ ಪೈಲಟ್‌ಗೆ ಪರವಾನಗಿ ಇಲ್ಲದೆ ಪ್ಯಾರಾಗ್ಲೈಡಿಂಗ್ ನಡೆಸಲು ಉದ್ದೇಶಪೂರ್ವಕವಾಗಿ ಅವಕಾಶ ಮಾಡಿಕೊಟ್ಟಿದ್ದಾನೆ, ಇದರಿಂದಾಗಿ ಪ್ರವಾಸಿಗರ ಪ್ರಾಣಕ್ಕೆ ಅಪಾಯವಿದೆ.
ಪೊಲೀಸ್ ತಂಡವು ಅಪಘಾತದ ತನಿಖೆಯಲ್ಲಿ ನಿರತವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪ್ಯಾರಾಗ್ಲೈಡಿಂಗ್ ಕಂಪನಿಯು ಸೂಕ್ತ ಅಧಿಕಾರಿಗಳಿಂದ ಸೂಕ್ತ ಅನುಮತಿಯನ್ನು ಪಡೆದಿಲ್ಲ ಮತ್ತು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಂಪನಿಯು ಪ್ರವಾಸಿಗರಿಗೆ ಯಾವುದೇ ಭದ್ರತಾ ಸಾಧನಗಳನ್ನು ಒದಗಿಸಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ