Indian Railways: ರೈಲ್ವೇ ಇಲಾಖೆಯ ಉದ್ಯೋಗ ಹುಡುಕುವುದು ಹೇಗೆ? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ವಿವರ

How To: ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡಬೇಕು ಎಂದು ಬಹಳಷ್ಟು ಮಂದಿ ಅಂದುಕೊಂಡಿರುವುದು ಕೂಡ ನಿಜ. ಅಂಥವರಿಗೆ ರೈಲ್ವೇ ಇಲಾಖೆಯಲ್ಲಿ ಕೆಲಸ ಹುಡುಕುವುದು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂದು ಇಲ್ಲಿ ವಿವರಿಸಲಾಗಿದೆ.

Indian Railways: ರೈಲ್ವೇ ಇಲಾಖೆಯ ಉದ್ಯೋಗ ಹುಡುಕುವುದು ಹೇಗೆ? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on:Aug 24, 2021 | 5:55 PM

Indian Railways Recruitment: ಭಾರತೀಯ ರೈಲ್ವೇ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಬೇಕು ಎಂಬುದು ಹಲವರ ಕನಸಾಗಿರಬಹುದು. ಸರ್ಕಾರಿ ಇಲಾಖೆಯಲ್ಲಿ ಕೆಲಸ (Government Jobs) ಮಾಡಬೇಕು ಎಂದು ಬಹಳಷ್ಟು ಮಂದಿ ಅಂದುಕೊಂಡಿರುವುದು ಕೂಡ ನಿಜ. ಅಂಥವರಿಗೆ ರೈಲ್ವೇ ಇಲಾಖೆಯಲ್ಲಿ ಕೆಲಸ ಹುಡುಕುವುದು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂದು ಇಲ್ಲಿ ವಿವರಿಸಲಾಗಿದೆ. ಉದ್ಯೋಗ ನೇಮಕಾತಿಯ ಹೆಸರಿನಲ್ಲಿ ಹಲವು ನಕಲಿ ಮತ್ತು ಮೋಸದ ಲಿಂಕ್​ಗಳು ನಿಮಗೆ ಕಂಡಿರಬಹುದು. ಅದರಿಂದ ಸಮಸ್ಯೆ ಅಥವಾ ಕಿರಿಕಿರಿಯೂ ಉಂಟಾಗಿರಬಹುದು. ಅವುಗಳಿಂದ ತಪ್ಪಿಸಿಕೊಳ್ಳಲು ಕೂಡ ಈ ಅಂಶಗಳು ಸಹಕಾರಿ.

ರೈಲ್ವೇ ಇಲಾಖೆಯ ಕೆಲಸಗಳು, ನೇಮಕಾತಿಗಳು, ಅರ್ಜಿ ಆಹ್ವಾನ ಅಥವಾ ಸಂದರ್ಶನ ಇತ್ಯಾದಿಗಳ ಬಗ್ಗೆ ಭಾರತೀಯ ರೈಲ್ವೇ ಇಲಾಖೆಯ ಅಧಿಕೃತ ವೆಬ್​ಸೈಟ್ ಮೂಲಕವೇ ನೋಟಿಫಿಕೇಶನ್ ನೀಡಲಾಗುತ್ತದೆ. ಕೆಲಸದ ವಿವರಗಳನ್ನು ಉದ್ಯೋಗ ವಾರ ಪತ್ರಿಕೆಗಳಲ್ಲಿ ಕೂಡ ತಿಳಿಸಲಾಗುತ್ತದೆ. ಈಗ ಆಯಾ ರೈಲ್ವೇ ಝೋನ್​ನ ಉದ್ಯೋಗ ಅವಕಾಶಗಳನ್ನು ಆಯಾ ರೈಲ್ವೇ ಝೋನ್​ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಥವಾ ಪ್ರಮುಖವಾಗಿ ಟ್ವಿಟರ್​ನಲ್ಲಿ ಹೇಳಲಾಗುತ್ತದೆ.

ಕೆಲಸಕ್ಕೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವವರು ಸುಖಾಸುಮ್ಮನೆ ಯಾವುದೋ ಲಿಂಕ್ ಹಿಂಬಾಲಿಸಿ ಮೋಸ ಹೋಗಬಾರದು. ವಾಟ್ಸಾಪ್ ಅಥವಾ ಯಾವುದೇ ಮೆಸೇಜಿಂಗ್ ಅಪ್ಲಿಕೇಷನ್​ಗಳಲ್ಲಿ ಬರುವ ಲಿಂಕ್​ಗಳನ್ನೇ ಪ್ರಮಾಣ ಎಂದು ನಂಬಬಾರದು. ಅಧಿಕೃತ ವೆಬ್​ಸೈಟ್, ಅಧಿಕೃತ ಸಾಮಾಜಿಕ ಜಾಲತಾಣ ವೇದಿಕೆ, ಅಥವಾ ಯಾವುದೇ ನಂಬಲು ಅರ್ಹವಾದ ಪತ್ರಿಕೆ, ಸುದ್ದಿ ವಾಹಿನಿಗಳನ್ನು ಹಿಂಬಾಲಿಸಬಹುದು. ಏನೇ ಆದರೂ, ಒಮ್ಮೆ ಕ್ರಾಸ್ ಚೆಕ್ ಮಾಡಿಕೊಂಡು ಮುಂದುವರಿಯುವುದು ಒಳಿತು.

ಕೆಲಸದ ಅಪ್ಲಿಕೇಷನ್ ಫಾರ್ಮ್​ಗಳನ್ನು ಹುಡುಕುವುದು ಈಗ ಸುಲಭವಾಗಿದೆ. ಬಹಳಷ್ಟು ಅರ್ಜಿ ಸಲ್ಲಿಕೆಯ ಪ್ರಕ್ರಿಯೆಗಳು ಆನ್​ಲೈನ್ ವಿಧಾನದಲ್ಲೇ ನಡೆಯುತ್ತದೆ. ಅದಕ್ಕಾಗಿ ಅಧಿಕೃತ ವೆಬ್​ಸೈಟ್​ನಲ್ಲಿ ಒಂದು ಲಿಂಕ್ ಕೊಟ್ಟಿರುತ್ತಾರೆ.

ಅಪ್ಲಿಕೇಷನ್​ನ ವಿಧಾನ, ವಿಷನ್ ಟೆಸ್ಟ್ ಸರ್ಟಿಫಿಕೇಟ್, ಜಾತಿ ಪ್ರಮಾಣಪತ್ರ, ಅಂಗವಿಕಲತೆಯ ಪ್ರಮಾಣಪತ್ರ ಇತ್ಯಾದಿಗಳ ಮಾದರಿಯನ್ನು ಉದ್ಯೋಗ ಪತ್ರಿಕೆಗಳಲ್ಲಿ ನೀವು ನೋಡಬಹುದು. ಅಥವಾ ಆನ್​ಲೈನ್​ನಲ್ಲಿ ಕೂಡ ಹುಡುಕಬಹುದು. ಪೋಸ್ಟ್ ಮೂಲಕ ಅರ್ಜಿ ಸಲ್ಲಿಕೆ ಈಗ ವಿರಳಾತಿ ವಿರಳ. ಹಾಗಾಗಿ ಬಹುತೇಕ ಆನ್​ಲೈನ್ ವಿಧಾನವನ್ನೇ ನಡೆಸಲಾಗುತ್ತದೆ.

ಕೆಲಸದ ವಿವರಗಳು, ಅರ್ಹತೆಯ ಮಾನದಂಡ, ಆಯ್ಕೆ ಪ್ರಕ್ರಿಯೆ ಇವುಗಳನ್ನು ಕೂಡ ನೇಮಕಾತಿ ನೋಟಿಫಿಕೇಷನ್​ನಲ್ಲೇ ನೀಡಲಾಗಿರುತ್ತದೆ. ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಮೊದಲು ನೇಮಕಾತಿ ನೋಟಿಫಿಕೇಷನ್​ ಅನ್ನು ವೆಬ್​ಸೈಟ್​ನಿಂದ ಡೌನ್​ಲೋಡ್ ಮಾಡಿಕೊಂಡು ಸರಿಯಾಗಿ ಓದುವುದು ಮುಖ್ಯ.

ಎಲ್ಲಾ ರೈಲ್ವೇ ನೇಮಕಾತಿ ಬೋರ್ಡ್​ಗಳಲ್ಲಿ ನಡೆಯುವ ಆಯ್ಕೆ ಪ್ರಕ್ರಿಯೆ ಇದ್ದರೆ ಅದನ್ನು ಸೆಂಟ್ರಲೈಸ್ಡ್ ಎಂಪ್ಲಾಯ್​ಮೆಂಟ್ ನೋಟಿಸ್ ಅಥವಾ CEN ಮೂಲಕ ನೀಡಲಾಗುತ್ತದೆ. ಆಯ್ಕೆ ಪರೀಕ್ಷೆಯ ದಿನಾಂಕ, ವೇಳಾಪಟ್ಟಿ ಇವುಗಳ ಬಗ್ಗೆಯೂ ಅಧಿಕೃತ ವೆಬ್​ಸೈಟ್​ನಲ್ಲಿ ಮಾಹಿತಿ ನೀಡಲಾಗುತ್ತದೆ. ಈಗ ಅಭ್ಯರ್ಥಿಗಳಿಗೆ ಅವರು ನೀಡಿರುವ ಮೊಬೈಲ್ ಸಂಖ್ಯೆ ಹಾಗೂ ಇಮೈಲ್ ಐಡಿ ಮೂಲಕವೂ ಪರೀಕ್ಷೆ ದಿನಾಂಕ ಇತ್ಯಾದಿಗಳ ಬಗ್ಗೆ ಸೂಚನೆ ನೀಡಲಾಗುತ್ತದೆ.

ಹೀಗಾಗಿ, ರೈಲ್ವೇ ನೇಮಕಾತಿ ಅಥವಾ ಯಾವುದೇ ಇತರ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ಸಂಸ್ಥೆಯ ಅಧಿಕೃತ ವೆಬ್​ಸೈಟ್, ಉದ್ಯೋಗ ಪತ್ರಿಕೆಗಳನ್ನು ನೋಡುತ್ತಿರಬೇಕು. ಕೆಲಸಕ್ಕೆ ಆನ್​ಲೈನ್ ವಿಧಾನದಲ್ಲಿ ಅರ್ಜಿ ಸಲ್ಲಿಸಬೇಕು. ಹಾಗೂ ಅಗತ್ಯವಾಗಿ ನೀವು ಬಳಸುವ ಮೊಬೈಲ್ ಸಂಖ್ಯೆ ಮತ್ತು ಇಮೈಲ್ ವಿಳಾಸ ನೀಡಿರಬೇಕು.

ಇದನ್ನೂ ಓದಿ: IDBI Recruitment 2021: ಐಡಿಬಿಐ ಬ್ಯಾಂಕ್​​ನ ವಿವಿಧ ಶಾಖೆಗಳಲ್ಲಿದೆ ಉದ್ಯೋಗಾವಕಾಶ; ಆಸಕ್ತರು ಅರ್ಜಿ ಸಲ್ಲಿಸಲು ತಡ ಮಾಡ್ಬೇಡಿ

PF: ಸಂಘಟಿತ ವಲಯದ ಉದ್ಯೋಗದಾತರು, ಉದ್ಯೋಗಿಗಳ ಪಿಎಫ್​ ಪಾಲು 2022ರ ತನಕ ಕೇಂದ್ರದಿಂದಲೇ ಪಾವತಿ

(How To find and Apply for Jobs in Indian Railways Railway Employment details in Kannada)

Published On - 5:53 pm, Tue, 24 August 21

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್