IDBI Recruitment 2021: ಐಡಿಬಿಐ ಬ್ಯಾಂಕ್​​ನ ವಿವಿಧ ಶಾಖೆಗಳಲ್ಲಿದೆ ಉದ್ಯೋಗಾವಕಾಶ; ಆಸಕ್ತರು ಅರ್ಜಿ ಸಲ್ಲಿಸಲು ತಡ ಮಾಡ್ಬೇಡಿ

IDBI Bank: ಐಡಿಬಿಐ ಬ್ಯಾಂಕ್​ನ ವಿವಿಧ ಶಾಖೆಗಳಿಂದ ಒಟ್ಟು 920 ಖಾಲಿ ಪೋಸ್ಟ್​​ಗಳು ಇವೆ. 20-25ವರ್ಷದವರೆಗಿನವರು ಅರ್ಜಿ ಸಲ್ಲಿಸಬಹುದು.

IDBI Recruitment 2021: ಐಡಿಬಿಐ ಬ್ಯಾಂಕ್​​ನ ವಿವಿಧ ಶಾಖೆಗಳಲ್ಲಿದೆ ಉದ್ಯೋಗಾವಕಾಶ; ಆಸಕ್ತರು ಅರ್ಜಿ ಸಲ್ಲಿಸಲು ತಡ ಮಾಡ್ಬೇಡಿ
ಐಡಿಬಿಐ ಬ್ಯಾಂಕ್​
Follow us
| Updated By: Lakshmi Hegde

Updated on: Aug 16, 2021 | 6:07 PM

ದೆಹಲಿ: ಇಂಡಸ್ಟ್ರಿಯಲ್​ ಡೆವಲಪ್​ಮೆಂಟ್ ಬ್ಯಾಂಕ್​ ಆಫ್​ ಇಂಡಿಯಾ (Industrial Development Bank of India -IDBI)ದಲ್ಲಿ ಖಾಲಿ ಹುದ್ದೆ ಭರ್ತಿ ಪ್ರಕ್ರಿಯೆ ( Recruitment Drive) ನಡೆಯುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಐಡಿಬಿಐ ಬ್ಯಾಂಕ್​ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ವಿವಿಧ ಗುತ್ತಿಗೆ ಆಧಾರಿತ ಕಾರ್ಯನಿರ್ವಾಹಕ ಹುದ್ದೆ (Executive Posts)ಗಳಿಗೆ ನೇಮಕಾತಿ ನಡೆಸಲು ಅರ್ಜಿ ಆಹ್ವಾನಿಸಲಾಗಿದೆ. ಇನ್ನು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆಗಸ್ಟ್​ 4ರಿಂದಲೇ ಪ್ರಾರಂಭವಾಗಿದ್ದು, ಆಗಸ್ಟ್​ 18 ಕೊನೇದಿನ. ಅರ್ಜಿ ಸಲ್ಲಿಸಲು ಇನ್ನೆರಡೇ ದಿನಗಳ ಅವಕಾಶವಿದ್ದು, ಆಸಕ್ತಿ ಇರುವವರು ಕೂಡಲೇ ಸಲ್ಲಿಸಿ.

ಅರ್ಹತೆ ಇರುವ ಆಸಕ್ತರು ಐಡಿಬಿಐ ಬ್ಯಾಂಕ್​​ನ ಅಧಿಕೃತ ವೆಬ್​ಸೈಟ್​ idbibank.in ಮೂಲಕ ತಮ್ಮ ಅರ್ಜಿ ಸಲ್ಲಿಸಬಹುದು. ಇದು ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ನಡೆಯುವ ನೇಮಕಾತಿಯಾಗಿದ್ದು, ಕೆಲಸಕ್ಕೆ ಸೇರಿದ ಮೇಲೆ ಅಭ್ಯರ್ಥಿಗಳ ಕಾರ್ಯಕ್ಷಮತೆಯನ್ನು ನೋಡಿ, ಅದು ತುಂಬ ಚೆನ್ನಾಗಿದ್ದರೆ ಮತ್ತೊಂದು ವರ್ಷಕ್ಕೆ ಗುತ್ತಿಗೆ ಅವಧಿಯನ್ನು ಮುಂದುವರಿಸಲಾಗುತ್ತದೆ ಎಂದು ಐಡಿಬಿಐ ಬ್ಯಾಂಕ್​ ತಿಳಿಸಿದೆ.

ಖಾಲಿಹುದ್ದೆಗಳ ಮಾಹಿತಿ ಹೀಗಿದೆ.. ಐಡಿಬಿಐ ಬ್ಯಾಂಕ್​ನ ವಿವಿಧ ಶಾಖೆಗಳಿಂದ ಒಟ್ಟು 920 ಖಾಲಿ ಪೋಸ್ಟ್​​ಗಳು ಇವೆ. 20-25ವರ್ಷದವರೆಗಿನವರು ಅರ್ಜಿ ಸಲ್ಲಿಸಬಹುದು. ಸಾಮಾನ್ಯ ವರ್ಗಕ್ಕೆ ಸೇರಿದವರು ಪದವಿಯಲ್ಲಿ ಕನಿಷ್ಠ ಶೇ.55ರಷ್ಟಾದರೂ ಅಂಕ ಗಳಿಸಿರಬೇಕು. ಹಾಗೇ, ಎಸ್​ಸಿ/ಎಸ್​ಟಿ/ಪಿಡಬ್ಲ್ಯೂಡಿ/ ವರ್ಗಕ್ಕೆ ಸೇರಿದವರು ಪದವಿಯಲ್ಲಿ ಕನಿಷ್ಠ ಶೇ.50ರಷ್ಟಾದರೂ ಅಂಕ ಗಳಿಸಿರಬೇಕು. ಒಟ್ಟಿನಲ್ಲಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಪದವೀಧರರಾಗಿರುವುದು ತುಂಬ ಮುಖ್ಯ.

ಶುಲ್ಕವೆಷ್ಟು? ಆಸಕ್ತರು ಅರ್ಜಿ ಸಲ್ಲಿಸಲು ಶುಲ್ಕ ನೀಡಬೇಕು. ಅದರಲ್ಲೂ ಸಾಮಾನ್ಯ ವರ್ಗದವರು 1000 ರೂಪಾಯಿ ತುಂಬಬೇಕು ಮತ್ತು ಎಸ್​ಸಿ/ಎಸ್​ಟಿ/ಪಿಡಬ್ಲ್ಯೂಡಿ ವರ್ಗದವರು 200 ರೂ. ಶುಲ್ಕ ನೀಡಬೇಕು.

ಇದನ್ನೂ ಓದಿ: Afghanistan: 4 ಕಾರ್ ಮತ್ತು ಹೆಲಿಕಾಪ್ಟರ್​ನಲ್ಲಿ ಭರ್ತಿ ಹಣ ತುಂಬಿಕೊಂಡು ಅಶ್ರಫ್ ಘನಿ ದೇಶ ತೊರೆದಿದ್ದಾರೆ!

ಮಸೀದಿ ಮೇಲೆ ರಾಷ್ಟ್ರಧ್ವಜ ಹಾರಿಸಿದ ಬಿಜೆಪಿ ಮುಖಂಡನಿಗೆ ಬೆದರಿಕೆ; ವಿರೋಧಿಸುವವರು ದೇಶ ಬಿಡಲಿ ಎಂದ ಶಿಯಾ ವಕ್ಫ್​ ಮಾಜಿ ಮುಖ್ಯಸ್ಥ

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ