Afghanistan: 4 ಕಾರ್ ಮತ್ತು ಹೆಲಿಕಾಪ್ಟರ್ನಲ್ಲಿ ಭರ್ತಿ ಹಣ ತುಂಬಿಕೊಂಡು ಅಶ್ರಫ್ ಘನಿ ದೇಶ ತೊರೆದಿದ್ದಾರೆ!
Ashraf Ghani: ಅಫ್ಘಾನಿಸ್ತಾನ್ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಸದ್ಯ ಎಲ್ಲಿದ್ದಾರೆ ಎಂದು ನಿಖರ ಮಾಹಿತಿ ಲಭ್ಯವಾಗಿಲ್ಲ. ವರದಿಗಳ ಪ್ರಕಾರ ಘನಿ ಸದ್ಯ ಓಮನ್ ದೇಶದಲ್ಲಿ ಇದ್ದಾರೆ. ಅವರನ್ನು ತಮ್ಮ ದೇಶದಲ್ಲಿ ಇಳಿಸಿಕೊಳ್ಳಲು ತಜಕಿಸ್ತಾನ ಒಪ್ಪಿಗೆ ಸೂಚಿಸಿಲ್ಲ ಎಂದು ತಿಳಿದುಬಂದಿದೆ.
ಕಾಬೂಲ್: ಅಫ್ಘಾನಿಸ್ತಾನ್ ಮಾಜಿ ಅಧ್ಯಕ್ಷ ಅಶ್ರಫ್ ಘನಿ (Ashraf Ghani), ನಾಲ್ಕು ಕಾರ್ ಹಾಗೂ ಹೆಲಿಕಾಪ್ಟರ್ ತುಂಬಾ ಹಣದೊಂದಿಗೆ ಭಾನುವಾರ ರಾಜಧಾನಿ ಕಾಬೂಲ್ನ್ನು ತೊರೆದಿದ್ದಾರೆ ಎಂದು ಸುದ್ದಿಸಂಸ್ಥೆ ರಾಯ್ಟರ್ಸ್ ವರದಿ ಮಾಡಿದೆ. ರಷ್ಯಾದ ಸುದ್ದಿಸಂಸ್ಥೆ ಆರ್ಐಎ ವರದಿಯನ್ನು ಉಲ್ಲೇಖಿಸಿ ರಾಯ್ಟರ್ಸ್ ಸುದ್ದಿ ಬಿತ್ತರಿಸಿದೆ. ಅಶ್ರಫ್ ಘನಿ, ನಾಲ್ಕು ಕಾರ್ ಮತ್ತು ಹೆಲಿಕಾಪ್ಟರ್ ತುಂಬಾ ಹಣ ಕೊಂಡೊಯ್ದ ನಂತರವೂ ಒಂದಷ್ಟು ಹಣ ಮಿಕ್ಕಿ ಅಲ್ಲೇ ಉಳಿಸಿ ಹೋಗಿದ್ದಾರೆ ಎಂದು ಹೇಳಲಾಗಿದೆ.
ನಾಲ್ಕು ಕಾರ್ಗಳಲ್ಲಿ ಕೂಡ ಹಣ ತುಂಬಲಾಗಿತ್ತು. ಮತ್ತೊಂದಷ್ಟು ಹಣವನ್ನು ಅವರು ಹೆಲಿಕಾಪ್ಟರ್ನಲ್ಲಿ ಕೂಡ ತುಂಬಿದ್ದರು. ಆದರೂ ಸಂಪೂರ್ಣ ತುಂಬಿಸಿಕೊಳ್ಳಲು ಆಗಲಿಲ್ಲ ಎಂದು ಕಾಬೂಲ್ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ವಕ್ತಾರ ನಿಕಿತ ಇಚೆಂಕೊ ಹೇಳಿರುವ ಬಗ್ಗೆ ಆರ್ಐಎ ವರದಿ ಮಾಡಿದೆ.
ಅಫ್ಘಾನಿಸ್ತಾನ್ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಸದ್ಯ ಎಲ್ಲಿದ್ದಾರೆ ಎಂದು ನಿಖರ ಮಾಹಿತಿ ಲಭ್ಯವಾಗಿಲ್ಲ. ವರದಿಗಳ ಪ್ರಕಾರ ಘನಿ ಸದ್ಯ ಓಮನ್ ದೇಶದಲ್ಲಿ ಇದ್ದಾರೆ. ಅವರನ್ನು ತಮ್ಮ ದೇಶದಲ್ಲಿ ಇಳಿಸಿಕೊಳ್ಳಲು ತಜಕಿಸ್ತಾನ ಒಪ್ಪಿಗೆ ಸೂಚಿಸಿಲ್ಲ ಎಂದು ತಿಳಿದುಬಂದಿದೆ. ಅಶ್ರಫ್ ಘನಿ ಅಮೆರಿಕಾ ಕಡೆಗೆ ಹೋಗಿದ್ದಾರೆ ಎಂದು ಕೂಡ ಕೆಲ ವರದಿಗಳು ಹೇಳಿವೆ.
ಅಫ್ಘಾನಿಸ್ತಾನ ಬಿಟ್ಟು ತೆರಳುವ ಮುನ್ನ ಸುದೀರ್ಘ ಫೇಸ್ಬುಕ್ ಪೋಸ್ಟ್ ಮಾಡಿದ್ದ ಅಶ್ರಫ್ ಘನಿ, ತಾನು ಆಗಬಹುದಾದ ರಕ್ತಪಾತವನ್ನು ತಡೆಯುವುದಕ್ಕಾಗಿ ದೇಶ ತೊರೆಯುತ್ತಿರುವುದಾಗಿ ಹೇಳಿಕೊಂಡಿದ್ದರು.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ತಾಲೀಬಾನ್ ಉಗ್ರರ ವಶಕ್ಕೆ ಬರುತ್ತಿದ್ದಂತೆ ಅಲ್ಲಿನ ಜನರಲ್ಲಿ ಆತಂಕ ಶುರುವಾಗಿದೆ. ಸಾವಿರಾರು ಜನರು ದೇಶಬಿಟ್ಟು ಹೊರಗೆ ಹೋಗುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗಿದ್ದು, ನೂಕಾಟ-ತಳ್ಳಾಟ ಸಾಮಾನ್ಯ ಎನಿಸಿದೆ. ಜನರನ್ನು ನಿಯಂತ್ರಿಸಲು ಅಮೆರಿಕ ಸೇನಾಪಡೆಗಳು ಗಾಳಿಯಲ್ಲಿ ಗುಂಡು ಹಾರಿಸಿವೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಗುಂಡು ಹಾರಾಟದ ವೇಳೆ ಈವರೆಗೆ ಐವರು ಮೃತಪಟ್ಟಿದ್ದಾರೆ. ವಿಮಾನ ಹತ್ತಲು ಏಕಾಏಕಿ ನೂರಾರು ಜನರು ಮುನ್ನುಗ್ಗಿ ಬಂದಾಗ ಪರಿಸ್ಥಿತಿ ಹದಗೆಟ್ಟು, ಗುಂಡು ಹಾರಾಟ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಗುಲಾಮಗಿರಿಯ ಸಂಕೊಲೆಯನ್ನು ತಾಲಿಬಾನ್ ತುಂಡರಿಸಿದೆ: ಪಾಕ್ ಪ್ರಧಾನಿ ಇಮ್ರಾನ್ ಖಾನ್
Afghanistan: ಕಾಬೂಲ್ನಿಂದ ಅಮೆರಿಕಕ್ಕೆ ಹೋಗುತ್ತಿದ್ದ ವಿಮಾನದಿಂದ ಕೆಳಗೆ ಬಿದ್ದು ಇಬ್ಬರ ದುರ್ಮರಣ
(Afghanistan Ex President Ashraf Ghani fled Nation with 4 Cars and Helicopter full of Cash says reports)
Published On - 5:42 pm, Mon, 16 August 21