AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಲಾಮಗಿರಿಯ ಸಂಕೊಲೆಯನ್ನು ತಾಲಿಬಾನ್ ತುಂಡರಿಸಿದೆ: ಪಾಕ್ ಪ್ರಧಾನಿ ಇಮ್ರಾನ್ ಖಾನ್

Imran Khan on Taliban: ಅಫ್ಘಾನಿಸ್ತಾನದಲ್ಲಿ ಮಹಿಳೆಯರ, ಮಾನವ ಹಕ್ಕುಗಳ, ಶಿಕ್ಷಣ, ಉದ್ಯೋಗ ಹಾಗೂ ವಿವಾಹದ ಬಗ್ಗೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪಾಕಿಸ್ತಾನದ ಬೆಂಬಲವನ್ನು ಹೊಂದಿರುವ ತಾಲಿಬಾನ್ ಸಂಘಟನೆ ಕಾಬೂಲ್ ನಗರವ​ನ್ನು ಸಂಪೂರ್ಣ ತನ್ನ ಕೈವಶ ಮಾಡಿಕೊಂಡಿದೆ.

ಗುಲಾಮಗಿರಿಯ ಸಂಕೊಲೆಯನ್ನು ತಾಲಿಬಾನ್ ತುಂಡರಿಸಿದೆ: ಪಾಕ್ ಪ್ರಧಾನಿ ಇಮ್ರಾನ್ ಖಾನ್
ಪಾಕ್ ಪ್ರಧಾನಿ ಇಮ್ರಾನ್ ಖಾನ್
TV9 Web
| Edited By: |

Updated on:Aug 16, 2021 | 4:39 PM

Share

ಇಸ್ಲಾಮಾಬಾದ್: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಿದೆ. ಈ ಘಟನೆಯ ಬಗ್ಗೆ ಭಾರತೀಯರು, ಸ್ವತಃ ಅಫ್ಘಾನಿಸ್ತಾನದ ಜನರು ಹಾಗೂ ವಿವಿಧ ದೇಶೀಯರು ವಿಷಾದ ಮತ್ತು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಇದರಿಂದ, ಅಫ್ಘಾನಿಸ್ತಾನದಲ್ಲಿ ಮಹಿಳೆಯರ, ಮಾನವ ಹಕ್ಕುಗಳ, ಶಿಕ್ಷಣ, ಉದ್ಯೋಗ ಹಾಗೂ ವಿವಾಹದ ಬಗ್ಗೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪಾಕಿಸ್ತಾನದ ಬೆಂಬಲವನ್ನು ಹೊಂದಿರುವ ತಾಲಿಬಾನ್ ಸಂಘಟನೆ ಕಾಬೂಲ್ ನಗರವ​ನ್ನು ಸಂಪೂರ್ಣ ತನ್ನ ಕೈವಶ ಮಾಡಿಕೊಂಡಿದೆ. ಆದರೆ, ಇತ್ತ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಈ ಬೆಳವಣಿಗೆಯನ್ನು, ‘ತಾಲಿಬಾನ್ ಗುಲಾಮಗಿರಿಯ ಸಂಕೋಲೆಯನ್ನು ತುಂಡರಿಸಿದೆ’ ಎಂದು ಬಣ್ಣಿಸಿದ್ದಾರೆ.

ಇಂಗ್ಲಿಷ್ ಭಾಷೆಯನ್ನು ಶಿಕ್ಷಣದ ಮಾಧ್ಯಮವಾಗಿ ಮತ್ತು ಅದರಿಂದ ಸಂಸ್ಕೃತಿಯ ನಾಶವನ್ನು ಉಲ್ಲೇಖಿಸಿ ಮಾತನಾಡಿದ ಇಮ್ರಾನ್ ಖಾನ್, ನೀವು ಮತ್ತೊಂದು ಸಂಸ್ಕೃತಿಯನ್ನು ನಿಮ್ಮದಾಗಿಸಿಕೊಂಡು ಮಾನಸಿಕವಾಗಿ ಅಡಿಯಾಳಾಗಿ ಇರುತ್ತೀರಿ. ಹಾಗಾದರೆ ಅದು ನಿಜವಾದ ಗುಲಾಮಗಿರಿಗಿಂತಲೂ ಕೆಟ್ಟದ್ದು ಎಂದು ನೆನಪಿಡಿ. ಸಾಂಸ್ಕೃತಿಕ ಗುಲಾಮತ್ವವನ್ನು ತೊಡೆದು ಹಾಕುವುದು ಕಷ್ಟ. ಈಗ ಅಫ್ಘಾನಿಸ್ತಾನದಲ್ಲಿ ಆಗುತ್ತಿರುವುದು ಏನೆಂದರೆ, ತಾಲಿಬಾನ್​ರು ಗುಲಾಮಗಿರಿಯ ಸಂಕೋಲೆಯನ್ನು ತುಂಡರಿಸಿದ್ದಾರೆ ಎಂದು ಹೇಳಿದ್ದಾರೆ. ಆ ಮೂಲಕ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಾಲಿಬಾನ್​ರಿಗೆ ಸಹಮತ ಸೂಚಿಸಿದಂತಾಗಿದೆ.

ಅಫ್ಘಾನ್​ನಲ್ಲಿ ದೇಶ ತೊರೆಯಲು ಜನರ ಪರದಾಟ ಅಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್ ಉಗ್ರರ ವಶವಾಗುತ್ತಿದ್ದಂತೆ ಸಾಕಷ್ಟು ಜನರು ದೇಶ ತೊರೆಯಲು ಪ್ರಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲು ಕಾಬೂಲ್ ವಿಮಾನ ನಿಲ್ದಾಣಕ್ಕೆ ಜನಸಾಗರವೇ ಹರಿದುಬರುತ್ತಿದೆ. ಈಗಾಗಲೇ ಅಫ್ಘಾನಿಸ್ಥಾನದಲ್ಲಿದ್ದ ಭಾರತದ ಅಧಿಕಾರಿಗಳನ್ನು ಏರ್​ಲಿಫ್ಟ್​ ಮೂಲಕ ಭಾರತಕ್ಕೆ ಕರೆತರಲಾಗಿದೆ. ಹಾಗೇ, ಬೇರೆ ದೇಶಗಳಿಂದಲೂ ಅಫ್ಘಾನಿಸ್ತಾನದಲ್ಲಿ ವಾಸವಾಗಿರುವ ತಮ್ಮ ದೇಶದ ಜನರನ್ನು ಕರೆಸಿಕೊಳ್ಳಲಾಗುತ್ತಿದೆ. ಒಂದೇ ದಿನಕ್ಕೆ ಅಫ್ಘಾನ್​ನಿಂದ 1,500ಕ್ಕೂ ಹೆಚ್ಚು ಜನರು ಬೇರೆ ದೇಶಗಳಿಗೆ ತೆರಳುತ್ತಿದ್ದಾರೆ. ಈ ನಡುವೆ ಕಾಬೂಲ್ ವಿಮಾನದಲ್ಲಿ ಉಂಟಾದ ಗಲಾಟೆ, ಗುಂಡಿನ ದಾಳಿಯಲ್ಲಿ 5ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.

ಅಫ್ಘಾನ್​ನಿಂದ ತಮ್ಮ ದೇಶಕ್ಕೆ ತೆರಳಲು ನೂರಾರು ಜನರು ಒಂದೇ ಬಾರಿಗೆ ವಿಮಾನ ಹತ್ತಲು ನುಗ್ಗತೊಡಗಿದ್ದಾರೆ. ಇದರಿಂದ ನೂಕುನುಗ್ಗಲಾಗಿ, ಕಾಲ್ತುಳಿತ, ಎಳೆದಾಟ ನಡೆದಿದ್ದು, ಗುಂಡಿನ ದಾಳಿಯೂ ನಡೆದಿದೆ. ಈ ಗಲಾಟೆಯಲ್ಲಿ 5ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಕೆಲವು ದೇಶಗಳು ತಮ್ಮ ಪ್ರಜೆಗಳನ್ನು ಏರ್​ಲಿಫ್ಟ್​ ಮಾಡಿ ಕರೆಸಿಕೊಳ್ಳುತ್ತಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಉಂಟಾಗಿರುವ ಗಲಾಟೆಯ ವಿಡಿಯೋಗಳು ವೈರಲ್ ಆಗಿವೆ. ಜರ್ಮನಿ, ರಷ್ಯಾ ಸೇರಿದಂತೆ ಅನೇಕ ರಾಷ್ಟ್ರಗಳು ತಮ್ಮ ದೇಶದ ಪ್ರಜೆಗಳನ್ನು ಕರೆಸಿಕೊಳ್ಳಲು ವಿಶೇಷ ವಿಮಾನದ ವ್ಯವಸ್ಥೆ ಮಾಡುತ್ತಿವೆ.

ಇದನ್ನೂ ಓದಿ: ತಾಲಿಬಾನ್ ಒಂದು ಸಂಘಟನೆಯಾದರೂ ಅದರ ಬಜೆಟ್ ಅಫ್ಘಾನಿಸ್ತಾನದ ಬಜೆಟ್​ಗಿಂತ ಬಹಳ ದೊಡ್ಡದು!

ಪ್ರಾಣ ಉಳಿಸಿಕೊಳ್ಳಲು ಅಫ್ಘಾನಿಸ್ತಾನದ ರಸ್ತೆಗಳಲ್ಲಿ ಭಯದಿಂದ ಓಡಿದ ನಿರ್ದೇಶಕಿ; ವಿಡಿಯೋ ವೈರಲ್​  

(Taliban broken shackles of Slavery says Pakistan PM Imran Khan on Taliban Afghanistan issue)

Published On - 4:32 pm, Mon, 16 August 21