Afghanistan Plane Crash: ಉಜಬೆಕಿಸ್ತಾನದಲ್ಲಿ ಅಫ್ಘಾನಿಸ್ತಾನದ ಮಿಲಿಟರಿ ವಿಮಾನ ಪತನ

ಉಜಬೆಕಿಸ್ತಾನದಲ್ಲಿ ಅಫ್ಘಾನ್ ಮಿಲಿಟರಿ ವಿಮಾನ ಪತನವಾಗಿದೆ. ಈ ದುರಂತದಲ್ಲಿ ಪೈಲಟ್ ಅನ್ನು ರಕ್ಷಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Afghanistan Plane Crash: ಉಜಬೆಕಿಸ್ತಾನದಲ್ಲಿ ಅಫ್ಘಾನಿಸ್ತಾನದ ಮಿಲಿಟರಿ ವಿಮಾನ ಪತನ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 16, 2021 | 6:41 PM

ತಷ್ಕೆಂಟ್: ಅಫ್ಘಾನಿಸ್ತಾನದಿಂದ (Afghanistan) ಜನರನ್ನು ಹೊತ್ತು ಸಾಗುತ್ತಿದ್ದ ಮಿಲಿಟರಿ ವಿಮಾನ ಉಜಬೆಕಿಸ್ತಾನದಲ್ಲಿ(Uzbekistan) ಪತನವಾಗಿದೆ. ಈ ಬಗ್ಗೆ ಸೆಂಟ್ರಲ್ ಏಷ್ಯನ್ ದೇಶದ ರಕ್ಷಣಾ ಸಚಿವರೇ ಖಚಿತ ಮಾಹಿತಿ ನೀಡಿದ್ದಾರೆ. ಉಜಬೆಕಿಸ್ತಾನದ ಗಡಿಯನ್ನು ಅಕ್ರಮವಾಗಿ ದಾಟಿದ ಮಿಲಿಟರಿ ವಿಮಾನ ಪತನವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ತಾಲಿಬಾನ್​ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವುದರಿಂದ ಸಾವಿರಾರು ಜನರು ಅಫ್ಘಾನ್​ ಬಿಟ್ಟು ತಮ್ಮ ದೇಶಗಳಿಗೆ ವಾಪಾಸ್ ಹೋಗುತ್ತಿದ್ದಾರೆ. ರಷ್ಯಾ ಸೇರಿದಂತೆ ಹಲವು ದೇಶಗಳು ತಮ್ಮ ದೇಶದ ಪ್ರಜೆಗಳನ್ನು ಅಫ್ಘಾನ್​ನಿಂದ ಕರೆಸಿಕೊಳ್ಳಲು ವಿಶೇಷ ವಿಮಾನಗಳ ವ್ಯವಸ್ಥೆ ಮಾಡಿವೆ. ಇನ್ನು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಾರೀ ಗಲಾಟೆ ಉಂಟಾಗಿರುವುದರಿಂದ ಕಾಬೂಲ್ ವಿಮಾನ ನಿಲ್ದಾಣದಿಂದ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅಫ್ಘಾನ್​ ಬಿಟ್ಟು ತಮ್ಮ ದೇಶ ಸೇರಿಕೊಳ್ಳುವ ಭರದಲ್ಲಿ ಈಗಾಗಲೇ 7-8 ಜನರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ.

ಈ ನಡುವೆ ಉಜಬೆಕಿಸ್ತಾನದಲ್ಲಿ ಅಫ್ಘಾನ್ ಮಿಲಿಟರಿ ವಿಮಾನ ಪತನವಾಗಿದೆ. ಈ ದುರಂತದಲ್ಲಿ ಪೈಲಟ್ ಅನ್ನು ರಕ್ಷಿಸಲಾಗಿದ್ದು, 2-3 ಜನರು ಪ್ಯಾರಾಚೂಟ್ ಬಳಸಿ ಕೆಳಗೆ ಇಳಿದಿದ್ದಾರೆ. ಅವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರಂತದ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: ನರಕವಾಗಿದೆ ಅಫ್ಘಾನಿಸ್ತಾನ; ಆಟವಾಡುವ ಮಕ್ಕಳೂ ಇಲ್ಲಿ ತಾಲಿಬಾನ್ ಉಗ್ರರ ಲೈಂಗಿಕ ಕ್ರಿಯೆಗೆ ಮೀಸಲು!

Afghanistan Crisis: ತಾಲಿಬಾನ್ ವಶದಲ್ಲಿ ಅಫ್ಘಾನಿಸ್ತಾನ; ಕಾಬೂಲ್ ವಿಮಾನ ನಿಲ್ದಾಣದಲ್ಲಿ 5 ಜನರ ಹತ್ಯೆ

(Afghanistan Military Plane Crashes in Uzbekistan Defence Ministry Confirms)