ನರಕವಾಗಿದೆ ಅಫ್ಘಾನಿಸ್ತಾನ; ಆಟವಾಡುವ ಮಕ್ಕಳೂ ಇಲ್ಲಿ ತಾಲಿಬಾನ್ ಉಗ್ರರ ಲೈಂಗಿಕ ಕ್ರಿಯೆಗೆ ಮೀಸಲು!

Taliban Attack in Afghanistan | ಅಫ್ಘಾನಿಸ್ತಾನದ ಮನೆಗಳಿಗೆ ನುಗ್ಗುತ್ತಿರುವ ಉಗ್ರರು 12 ವರ್ಷದ ಬಾಲಕಿಯರನ್ನೂ ಬಿಡದೆ ಬಲವಂತವಾಗಿ ಮದುವೆಯಾಗುತ್ತಿದ್ದಾರೆ. ನಂತರ ಅವರನ್ನು ತಮ್ಮ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಲಾಗದೆ ತಾಯಂದಿರು ಕಣ್ಣೀರು ಹಾಕುತ್ತಿದ್ದಾರೆ.

ನರಕವಾಗಿದೆ ಅಫ್ಘಾನಿಸ್ತಾನ; ಆಟವಾಡುವ ಮಕ್ಕಳೂ ಇಲ್ಲಿ ತಾಲಿಬಾನ್ ಉಗ್ರರ ಲೈಂಗಿಕ ಕ್ರಿಯೆಗೆ ಮೀಸಲು!
ಅಫ್ಘಾನಿಸ್ತಾನದ ಮಹಿಳೆಯರು
Follow us
ಸುಷ್ಮಾ ಚಕ್ರೆ
|

Updated on:Aug 13, 2021 | 3:41 PM

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮಿತಿಮೀರಿದ್ದು ಈಗಾಗಲೇ ಅಫ್ಘಾನ್​ನ (Afghanistan) ಎರಡನೇ ಅತಿದೊಡ್ಡ ನಗರವಾದ ಕಂದಹಾರ್​​ (Kandahar) ಕೂಡ ತಾಲಿಬಾನ್ ಉಗ್ರರ (Taliban Terrorists) ವಶವಾಗಿದೆ. ಅಫ್ಘಾನಿಸ್ತಾನದ ಮುಕ್ಕಾಲು ಭಾಗದಲ್ಲಿ ತಾಲಿಬಾನ್ ಅಧಿಪತ್ಯ ಸಾಧಿಸಿದ್ದು, ಕೇವಲ ಒಂದು ವಾರದಲ್ಲೇ ಅಫ್ಘಾನಿಸ್ತಾನದ 34 ರಾಜಧಾನಿಗಳ ಪೈಕಿ ಸುಮಾರು 12 ಪ್ರಾಂತೀಯ ರಾಜಧಾನಿಗಳನ್ನು ತಾಲಿಬಾನ್ ತನ್ನ ವಶಕ್ಕೆ ಪಡೆದಿದೆ. ತಾಲಿಬಾನ್ ಉಗ್ರರು ವಶಕ್ಕೆ ಪಡೆದಿರುವ ಪ್ರದೇಶಗಳಲ್ಲಿರುವ ಋತುಮತಿಯರಾದ ಹಾಗೂ 45 ವರ್ಷದೊಳಗಿನ ಮಹಿಳೆ, ಯುವತಿಯರನ್ನು ಮನೆಗಳಿಗೆ ನುಗ್ಗಿ ಎಳೆದುಕೊಂಡು ಬರುತ್ತಿರುವ ಉಗ್ರರು ಅವರನ್ನು ಬಲವಂತವಾಗಿ ಮದುವೆಯಾಗಿ, ಸೆಕ್ಸ್​ ಸೇವಕರನ್ನಾಗಿ ಮಾಡಿಕೊಂಡಿದ್ದಾರೆ. ಉಗ್ರರ ವಶದಲ್ಲಿರುವ ಪ್ರದೇಶಗಳ ಮಹಿಳೆಯರು ಪ್ರಾಣ ಉಳಿಸಿಕೊಳ್ಳುವುದು ಹೇಗೆಂಬ ಆತಂಕದಲ್ಲಿಯೇ ದಿನ ಕಳೆಯುತ್ತಿದ್ದಾರೆ. 

ಅಫ್ಘಾನಿಸ್ತಾನದ ಹಲವು ಭಾಗಗಳಲ್ಲಿ ಸೈನಿಕರು ಮತ್ತು ಸರ್ಕಾರಿ ಸಿಬ್ಬಂದಿಯನ್ನು ತಾಲಿಬಾನಿಗಳು ಅಕ್ರಮವಾಗಿ ಬಂಧಿಸಿ ಜೈಲಿಗೆ ದೂಡುತ್ತಿದ್ದಾರೆ. ಈಗಾಗಲೇ ಉಗ್ರರು ಮಹಿಳೆಯರ ಮೇಲೆ ಕಠಿಣ ಇಸ್ಲಾಮಿಕ್‌ ನಿಯಮಗಳ ನಿರ್ಬಂಧ ಹೇರಲು ಆರಂಭಿಸಿದ್ದಾರೆ. ಹಿಂಸಾಚಾರ ನಡೆಸಿ, ಅನೇಕ ಮಹಿಳೆಯರನ್ನು ಕೊಂದಿದ್ದಾರೆ. ಅಫ್ಘಾನ್​ನಲ್ಲಿರುವ ಹಳ್ಳಿಗಳನ್ನೂ ಬಿಡದೆ ಪ್ರತಿಯೊಂದು ಮನೆಗಳಿಗೂ ನುಗ್ಗಿ ಅಲ್ಲಿರುವ ಮಹಿಳೆಯರನ್ನು ಹಾಗೂ ಅಪ್ರಾಪ್ತ ಯುವತಿಯರನ್ನು ತಮ್ಮ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಬಿಗಿಯಾದ ಉಡುಗೆ ತೊಟ್ಟಿದ್ದ ಮಹಿಳೆಯನ್ನು ತಾಲಿಬಾನ್ ಉಗ್ರರು ನಡುರಸ್ತೆಯಲ್ಲೇ ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿದ್ದರು. ಇಸ್ಲಾಂ ಧರ್ಮದ ಅನುಸಾರ ತಲೆಗೆ ದುಪಟ್ಟಾವನ್ನು ಸುತ್ತಿಕೊಂಡಿಲ್ಲ ಎಂದು ಇನ್ನೋರ್ವ ಮಹಿಳೆಯನ್ನು ಕೊಂದಿದ್ದ ಸುದ್ದಿ ಬಹಳ ವೈರಲ್ ಆಗಿತ್ತು. ಇದೀಗ ಮನೆಗಳಿಗೆ ನುಗ್ಗುತ್ತಿರುವ ಉಗ್ರರು ಅಲ್ಲಿರುವ 12 ವರ್ಷದ ಬಾಲಕಿಯರನ್ನೂ ಬಿಡದೆ ಎಲ್ಲ ಯುವತಿಯರನ್ನೂ ಬಲವಂತವಾಗಿ ಮದುವೆಯಾಗುತ್ತಿದ್ದಾರೆ. ನಂತರ ಅವರನ್ನು ತಮ್ಮ ಲೈಂಗಿಕ ಕ್ರಿಯೆಗೆ ಬಲವಂತವಾಗಿ ಬಳಸಿಕೊಳ್ಳುತ್ತಿದ್ದಾರೆ. ಈಗಾಗಲೇ ಮೂರನೇ ಎರಡರಷ್ಟು ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ವಶವಾಗಿದೆ. ಇದರಿಂದ ಅಲ್ಲಿನ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು, ಅವರ ಮೇಲೆ ಹಿಂಸಾಚಾರವೆಸಗಿ, ಕೊಲೆ ಮಾಡುತ್ತಿರುವ ಘಟನೆಗಳು ಪ್ರತಿದಿನ ನಡೆಯುತ್ತಿವೆ. ಇದ್ಯಾವುದನ್ನೂ ನಿಯಂತ್ರಿಸಲು ಸಾಧ್ಯವಾಗದೆ ಅಫ್ಘಾನ್ ಸರ್ಕಾರ ಕೈಕಟ್ಟಿ ಕುಳಿತಿದೆ.

Taliban Afghan attack

ಅಫ್ಘಾನಿಸ್ತಾನದ ಮಹಿಳೆಯರು

ಡೈಲಿ ಮೇಲ್ ಮಾಡಿರುವ ವಿಶೇಷ ವರದಿಯ ಪ್ರಕಾರ, ತಾಲಿಬಾನ್ ಕಮಾಂಡರ್​ಗಳೇ ಅಫ್ಘಾನ್​ನಲ್ಲಿ ರಾಜ್ಯಗಳನ್ನು ತಮ್ಮ ವಶಕ್ಕೆ ಪಡೆದ ಬಳಿಕ ಅಲ್ಲಿರುವ ಅವಿವಾಹಿತ ಮಹಿಳೆಯರು ಹಾಗೂ 12 ವರ್ಷ ಮೇಲ್ಪಟ್ಟ ಋತುಮತಿಯರಾದ ಯುವತಿಯರ ಪಟ್ಟಿಯನ್ನು ತರುವಂತೆ ಆದೇಶಿಸುತ್ತಿದ್ದಾರೆ. ತಾಲಿಬಾನ್ ಉಗ್ರರು 12ರಿಂದ 45 ವರ್ಷದೊಳಗಿನ ಮಹಿಳೆಯರ ಪಟ್ಟಿ ಮಾಡಿ, ಆ ಮನೆಗಳಿಗೆ ನುಗ್ಗಿ ಯುವತಿಯರು ಹಾಗೂ ಮಹಿಳೆಯರನ್ನು ಎಳೆದುಕೊಂಡು ಬಂದು ಮದುವೆಯಾಗಿ ಸೆಕ್ಸ್​ ಸೇವಕರನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

ಮನೆಗಳಿಗೆ ನುಗ್ಗುತ್ತಿರುವ ಉಗ್ರರು ಅಲ್ಲಿನ ಯುವತಿಯರ ವಯಸ್ಸಿನ ಬಗ್ಗೆ ಖಾತರಿ ಮಾಡಿಕೊಂಡು ಎಳೆದುಕೊಂಡು ಬಂದು ಮದುವೆಯಾಗುತ್ತಿರುವ ವಿಚಿತ್ರ ಸಂಪ್ರದಾಯ ಶುರುವಾಗಿದೆ. ತಮ್ಮ ಮನೆಯಲ್ಲಿರುವ ಹೆಣ್ಣುಮಕ್ಕಳನ್ನು ರಕ್ಷಿಸಿಕೊಳ್ಳಲಾಗದೆ ತಾಯಂದಿರು ಕಣ್ಣೀರು ಹಾಕುತ್ತಿದ್ದಾರೆ. ಮನೆಗಳಿಗೆ ನುಗ್ಗುವ ಉಗ್ರರು ವಾರ್ಡ್​ರೋಬ್ ಕೂಡ ಬಿಡದೆ ಇಡೀ ಮನೆಯಲ್ಲಿ ಹುಡುಕಾಡಿ ಆ ಮನೆಯಲ್ಲಿರುವ 12 ವರ್ಷದ ಮೇಲ್ಪಟ್ಟ ಯುವತಿಯರನ್ನು ಎಳೆದುಕೊಂಡು ಹೋಗಿ ನಿರ್ದಾಕ್ಷಿಣ್ಯವಾಗಿ ಲೈಂಗಿಕತೆಗೆ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ವಿಜಯವನ್ನು ಸಂಭ್ರಮಿಸಲು ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ತಿಳಿಸಿವೆ.

ಈ ಕುರಿತು ಮಹಿಳಾ ಪತ್ರಕರ್ತೆಯೊಬ್ಬರು ಪ್ರತ್ಯಕ್ಷ ವರದಿ ಮಾಡಿದ್ದು, ನನ್ನನ್ನು ಹಿಂಬಾಲಿಸುತ್ತಿರುವ ತಾಲಿಬಾನ್ ಉಗ್ರರಿಂದ ನಾನು ಯಾವ ಕ್ಷಣದಲ್ಲಿ ಬೇಕಾದರೂ ಸಾಯಬಹುದು ಎಂದು ಹೇಳಿಕೊಂಡಿದ್ದಾರೆ. ಆ ಪತ್ರಕರ್ತೆ ಅಫ್ಘಾನ್ ಗಡಿಯಲ್ಲಿರುವ ಊರಿಗೆ ಹೋಗಿ ಅಲ್ಲಿನ ಹೆಣ್ಣುಮಕ್ಕಳಿಗೆ ಉಗ್ರರಿಂದ ಆಗುತ್ತಿರುವ ಹಿಂಸಾಚಾರದ ಬಗ್ಗೆ ಮಾಹಿತಿ ಪಡೆದುಕೊಂಡು ತಕ್ಷಣ ಆ ಊರಿನಿಂದ ಹೊರಟಿದ್ದರು. ಆದರೆ, ಆಕೆ ಬಂದುಹೋದ ವಿಷಯವನ್ನು ಆ ಊರಿನವರೇ ತಾಲಿಬಾನ್ ಉಗ್ರರಿಗೆ ತಿಳಿಸಿದ್ದಾರೆ. ಹೀಗಾಗಿ ಅವರು ಆಕೆಯನ್ನು ಹುಡುಕುತ್ತಿದ್ದಾರೆ. ನಾನು ಒಂದು ಕುಗ್ರಾಮದ ಮನೆಯೊಂದರಲ್ಲಿ ಅಡಗಿ ಕುಳಿತಿದ್ದೇನೆ. ಆ ಊರನ್ನು ಬಿಟ್ಟ ನಂತರ ನಾನು ನನ್ನ ಮನೆಯವರನ್ನು ಕೂಡ ಸಂಪರ್ಕ ಮಾಡಿಲ್ಲ. ಉಗ್ರರು ಯಾವ ರೂಪದಲ್ಲಿ ಬೇಕಾದರೂ ಬಂದು ನನ್ನನ್ನು ಕೊಲ್ಲಬಹುದು, ಅತ್ಯಾಚಾರವೆಸಗಿ ಹಿಂಸೆ ನೀಡಬಹುದು. ನಾನು ವಾಪಾಸ್ ಮನೆ ಸೇರುತ್ತೇನೆ ಎಂಬ ಯಾವ ಭರವಸೆಯೂ ನನಗಿಲ್ಲ. ದಯವಿಟ್ಟು ಎಲ್ಲರೂ ನನಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿ ಎಂದು 22 ವರ್ಷದ ಪರ್ತಕರ್ತೆ ಫಾತಿಮಾ ಹೇಳಿದ್ದಾರೆ.

ಕಂದಹಾರ್ ರಾಜ್ಯವನ್ನು ಗುರುವಾರ ವಶಕ್ಕೆ ಪಡೆದಿರುವ ತಾಲಿಬಾನ್ ಈ ಬಗ್ಗೆ ತಾನೇ ಖುದ್ದಾಗಿ ಘೋಷಿಸಿಕೊಂಡಿತ್ತು. ತಾಲಿಬಾನ್ ಉಗ್ರರಿಗೆ ಅಫ್ಘಾನ್​ ಬಹುತೇಕ ಶರಣಾಗಿದ್ದು, ತಾಲಿಬಾನ್ ಉಗ್ರರಿಗೆ ಅಧಿಕಾರದಲ್ಲಿ ಪಾಲು ನೀಡುವುದಾಗಿ ಅಫ್ಘಾನಿಸ್ತಾನ ಸರ್ಕಾರ ಆಫರ್ ನೀಡಿದೆ. ಹಾಗೇ, ಅಧಿಕಾರದಲ್ಲಿ ಪಾಲು ನೀಡಬೇಕಾದರೆ ಉಗ್ರರು ದೇಶದಲ್ಲಿ ನಡೆಸುತ್ತಿರುವ ಹಿಂಸಾತ್ಮಕ ಕೃತ್ಯಗಳನ್ನು ನಿಲ್ಲಿಸಬೇಕೆಂದು ಷರತ್ತನ್ನೂ ವಿಧಿಸಿದೆ ಎಂಬ ಮಾತುಗಳೂ ಕೇಳಿಬಂದಿವೆ. ಆದರೆ, ಈ ಕುರಿತು ನಂತರದ ಬೆಳವಣಿಗೆಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: ಸಂಧಾನಕ್ಕಿಳಿದ ಆಫ್ಘಾನಿಸ್ತಾನ ಸರ್ಕಾರ; ಯುದ್ಧ ನಿಲ್ಲಿಸಿದರೆ ತಾಲಿಬಾನ್​ನೊಂದಿಗೆ ಅಧಿಕಾರ ಹಂಚಿಕೊಳ್ಳುವ ಪ್ರಸ್ತಾಪ

ಅಫ್ಘಾನಿಸ್ತಾನದ ಪ್ರಮುಖ ನಗರಗಳಾದ ಲಷ್ಕರ್ ಗಹ್, ಕಂದಹಾರ್ ವಶಪಡಿಸಿಕೊಂಡ ತಾಲೀಬಾನ್

(Taliban Terrorists Forcibly Marrying Afghanistan Minor Girls to Make them Sex Slaves Afghan Women Tragedy)

Published On - 3:34 pm, Fri, 13 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ