ಅಫ್ಘಾನಿಸ್ತಾನದಲ್ಲಿ ಯುದ್ಧ ಸನ್ನಿವೇಶ ಸೃಷ್ಟಿಸಿ, ಭಾರತವನ್ನು ಹೊಗಳಿದ ತಾಲಿಬಾನ್..
Taliban Attack in Afghanistan: ಸದ್ಯ ಅಫ್ಘಾನಿಸ್ತಾನದಲ್ಲಿ ಯುದ್ಧಸನ್ನಿವೇಶ ಇದೆ. ತಾಲಿಬಾನ್ ವ್ಯಾಪ್ತಿ ಹೆಚ್ಚುತ್ತಿದೆ. ಇದೇ ಹೊತ್ತಲ್ಲಿ ಹಲವು ದೇಶಗಳು, ಅಫ್ಘಾನ್ನಲ್ಲಿರುವ ತಮ್ಮ ರಾಯಭಾರಿ ಕಚೇರಿಗಳನ್ನು ಬಂದ್ ಮಾಡಿವೆ.
ದೆಹಲಿ: ಅಫ್ಘಾನಿಸ್ತಾನದಲ್ಲಿ ಈಗಾಗಲೇ 18 ಪ್ರಾಂತ್ಯಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವ ತಾಲಿಬಾನ್, ಇದೀಗ ಭಾರತವನ್ನು ಹೊಗಳಿಗೆ. ಯುದ್ಧ ಪೀಡಿತ ಅಫ್ಘಾನ್ನ ಜನರಿಗೆ ಸಹಾಯ ಮಾಡುತ್ತಿರುವ ಮತ್ತು ಅಲ್ಲಿ ಆಗಿರುವ ಅವ್ಯವಸ್ಥೆಗಳನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿರುವ ಭಾರತದ ಕ್ರಮ ಶ್ಲಾಘನೀಯ ಎಂದು ತಾಲಿಬಾನ್ ಹೇಳಿದೆ. ಎಎನ್ಐ ಸುದ್ದಿಸಂಸ್ಥೆಯ ಜತೆ ಮಾತನಾಡಿದ ತಾಲಿಬಾನ್ ವಕ್ತಾರ ಮಹಮ್ಮದ್ ಸುಹೇಲ್ ಶಹೀನ್, ಭಾರತ ಅಫ್ಘಾನಿಸ್ತಾನ ಜನರಿಗೆ ಸಹಾಯ ಮಾಡುತ್ತಿದೆ. ಅಲ್ಲದೆ, ಈ ದೇಶದ ಅಭಿವೃದ್ಧಿ ಯೋಜನೆಗಳಿಗೆ ತುಂಬ ಸಹಕಾರ ನೀಡುತ್ತಿದೆ ಎಂದು ಹೇಳಿದ್ದಾರೆ.
ಭಾರತ ಅಫ್ಘಾನಿಸ್ತಾನಕ್ಕಾಗಿ ಅಣೆಕಟ್ಟು ನಿರ್ಮಾಣದಲ್ಲಿ ಸಹಕಾರ ನೀಡಿದೆ. ರಾಷ್ಟ್ರೀಯ ಮತ್ತು ಮೂಲಸೌಕರ್ಯಗಳಿಗೆ ಸಂಬಂಧಪಟ್ಟ ಯೋಜನೆಗಳ ಅನುಷ್ಠಾನಕ್ಕೆ ಬೆಂಬಲ ನೀಡಿದೆ. ಒಟ್ಟಾರೆ ಅಫ್ಘಾನಿಸ್ತಾನದ ಅಭಿವೃದ್ಧಿ, ಮರುನಿರ್ಮಾಣ ಮತ್ತು ಆರ್ಥಿಕ ಅಭಿವೃದ್ಧಿಗೆ ಭಾರತದ ಕೊಡುಗೆ ಅಪಾರ. ಅದೆಲ್ಲವನ್ನೂ ನಾವು ಶ್ಲಾಘಿಸಲೇಬೇಕಾಗಿದೆ ಎಂದು ಮಹಮ್ಮದ್ ಸುಹೇಲ್ ಶಹೀನ್ ತಿಳಿಸಿದ್ದಾರೆ.
ಪಾಕ್ ಉಗ್ರರೊಂದಿಗೆ ನಂಟಿಲ್ಲ ತಾಲಿಬಾನ್ ಹೋರಾಟಗಾರರು ಪಾಕಿಸ್ತಾನ ಮೂಲದ ಯಾವುದೇ ಉಗ್ರರೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ಸುಹೇಲ್ ತಿಳಿಸಿದ್ದಾರೆ. ತಾಲಿಬಾನ್ ಉಗ್ರರು ಪಾಕ್ನ ಭಯೋತ್ಪಾದಕರೊಂದಿಗೆ ನಂಟು ಹೊಂದಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಆದರೆ ಇದು ಹುರುಳಿಲ್ಲದ ಆರೋಪ. ನಾವು ಪಾಕ್ ಭಯೋತ್ಪಾದಕರ ಸಂಪರ್ಕ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಸದ್ಯ ಅಫ್ಘಾನಿಸ್ತಾನದಲ್ಲಿ ಯುದ್ಧಸನ್ನಿವೇಶ ಇದೆ. ತಾಲಿಬಾನ್ ವ್ಯಾಪ್ತಿ ಹೆಚ್ಚುತ್ತಿದೆ. ಇದೇ ಹೊತ್ತಲ್ಲಿ ಹಲವು ದೇಶಗಳು, ಅಫ್ಘಾನ್ನಲ್ಲಿರುವ ತಮ್ಮ ರಾಯಭಾರಿ ಕಚೇರಿಗಳನ್ನು ಬಂದ್ ಮಾಡಿವೆ. ಯುಎಸ್, ಡೆನ್ಮಾರ್ಕ್ ಸೇರಿ ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ಅಫ್ಘಾನ್ನಲ್ಲಿರುವ ತಮ್ಮ ಜನರನ್ನು, ಧೂತಾವಾಸ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುತ್ತಿವೆ. ಭಾರತದ ರಾಯಭಾರಿ ಕಚೇರಿ ಕೂಡ, ಇಲ್ಲಿರುವ ಭಾರತೀಯರು ಆದಷ್ಟು ಬೇಗ ಭಾರತಕ್ಕೆ ಮರಳಿ ಎಂದು ಸೂಚನೆ ನೀಡಿದೆ.
ಇದನ್ನೂ ಓದಿ: ಪೊಲೀಸರ ಕೈ ಬಲಪಡಿಸುವ ಬದ್ಧತೆ ಸರ್ಕಾರಕ್ಕಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ
ನರಕವಾಗಿದೆ ಅಫ್ಘಾನಿಸ್ತಾನ; ಆಟವಾಡುವ ಮಕ್ಕಳೂ ಇಲ್ಲಿ ತಾಲಿಬಾನ್ ಉಗ್ರರ ಲೈಂಗಿಕ ಕ್ರಿಯೆಗೆ ಮೀಸಲು!
Published On - 9:24 am, Sat, 14 August 21