ಮಸೀದಿ ಮೇಲೆ ರಾಷ್ಟ್ರಧ್ವಜ ಹಾರಿಸಿದ ಬಿಜೆಪಿ ಮುಖಂಡನಿಗೆ ಬೆದರಿಕೆ; ವಿರೋಧಿಸುವವರು ದೇಶ ಬಿಡಲಿ ಎಂದ ಶಿಯಾ ವಕ್ಫ್​ ಮಾಜಿ ಮುಖ್ಯಸ್ಥ

ಅಶ್ಫಕ್​ ಆಗ್ರಾದ ಜಾಮಾ ಮಸೀದಿ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದರು. ಹಾಗೇ ನಂತರ ರಾಷ್ಟ್ರಗೀತೆಯನ್ನೂ ಹಾಡಿದ್ದರು. ಆದರೆ ಇದನ್ನು ಮಸೀದಿ ಮೇಲೆ ಮಾಡಬಾರದಿತ್ತು ಎಂಬುದು ಸ್ಥಳೀಯರ ವಾದ.

ಮಸೀದಿ ಮೇಲೆ ರಾಷ್ಟ್ರಧ್ವಜ ಹಾರಿಸಿದ ಬಿಜೆಪಿ ಮುಖಂಡನಿಗೆ ಬೆದರಿಕೆ; ವಿರೋಧಿಸುವವರು ದೇಶ ಬಿಡಲಿ ಎಂದ ಶಿಯಾ ವಕ್ಫ್​ ಮಾಜಿ ಮುಖ್ಯಸ್ಥ
ಆಗ್ರಾದಲ್ಲಿ ಮಸೀದಿ ಮೇಲೆ ರಾಷ್ಟ್ರಧ್ವಜಾರೋಹಣ
Follow us
TV9 Web
| Updated By: Lakshmi Hegde

Updated on: Aug 16, 2021 | 5:20 PM

ಆಗ್ರಾ: ಇಲ್ಲಿನ ಮಸೀದಿಯೊಂದರ ಮೇಲೆ ರಾಷ್ಟ್ರಧ್ವಜ ಹಾರಿಸಿ, ರಾಷ್ಟ್ರಗೀತೆ ಹಾಡಿದ ಬಿಜೆಪಿ ಮುಖಂಡನೊಬ್ಬರಿಗೆ ಈಗ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಘಟನೆಯಿಂದ ಅಲ್ಲಿ ವಿವಾದ ಸೃಷ್ಟಿಯಾಗಿದ್ದು, ಕಾಂಗ್ರೆಸ್​ನ ಇಬ್ಬರು ನಾಯಕರು ಬೆದರಿಕೆ ಒಡ್ಡಿದ್ದಾರೆ. ಉತ್ತರ ಪ್ರದೇಶ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಶ್ಫಕ್​ ಸೈಫಿ ಸ್ವಾತಂತ್ರ್ಯ ದಿನಾಚರಣೆಯಂದು ಮಸೀದಿಯ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದರು. ಇದರಿಂದ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಹೀಗೆ ಮಸೀದಿ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದರಿಂದ, ದೇವರು ಕೋಪಗೊಳ್ಳುತ್ತಾನೆ ಎಂದು ಹೇಳುತ್ತಿದ್ದಾರೆ. ಅದರಲ್ಲೂ ಕಾಂಗ್ರೆಸ್​ನ ಸ್ಥಳೀಯ ಮುಖಂಡರಾದ ಹಾಜಿ ಜಮಿಲುದ್ದೀನ್​ ಮತ್ತು ಸಹರ್​ ಮುಫ್ತಿ ಎಂಬುವರು ಅಶ್ಫಕ್​​ಗೆ ಬೆದರಿಕೆಯನ್ನೂ ಹಾಕಿದ್ದಾರೆ.

ಅಶ್ಫಕ್​ ಆಗ್ರಾದ ಜಾಮಾ ಮಸೀದಿ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದರು. ಹಾಗೇ ನಂತರ ರಾಷ್ಟ್ರಗೀತೆಯನ್ನೂ ಹಾಡಿದ್ದರು. ಆದರೆ ಇದನ್ನು ಮಸೀದಿ ಮೇಲೆ ಮಾಡಬಾರದಿತ್ತು. ನಿಷೇಧವಿದ್ದರೂ ರಾಷ್ಟ್ರಧ್ವಜ ಹಾರಿಸಿದ್ದು ದೇವರ ಕೋಪಕ್ಕೆ ಕಾರಣವಾಗುತ್ತದೆ ಎಂದು ಸ್ಥಳೀಯರೆಲ್ಲ ಹೇಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಕಾಂಗ್ರೆಸ್​ ಮುಖಂಡ ಜಮಿಲುದ್ದೀನ್​, ಅಶ್ಫಕ್​ ನಡೆ ಖಂಡನೀಯ. ಅದರಲ್ಲೂ ನಮ್ಮ ಧಾರ್ಮಿಕ ಸ್ಥಳವನ್ನೂ ರಾಜಕೀಯಗೊಳಿಸಲು ಅವರು ಪ್ರಯತ್ನಿಸಿದರೆ ಖಂಡಿತ ಉತ್ತರ ಪ್ರದೇಶದ ಇಡೀ ಮುಸ್ಲಿಂ ಸಮುದಾಯ ಅಶ್ಫಕ್​ ಸೈಫಿ ವಿರುದ್ಧ ತಿರುಗಿಬೀಳಲಿದೆ ಎಂದು ಹೇಳಿದರು.

ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಉತ್ತರಪ್ರದೇಶ ಶಿಯಾ ಸೆಂಟ್ರಲ್​ ವಕ್ಫ್​ ಬೋರ್ಡ್​​ನ ಮಾಜಿ ಮುಖ್ಯಸ್ಥ ವಾಸೀಮ್​ ರಿಝ್ವಿ, ನಮ್ಮ ದೇಶದ ತ್ರಿವರ್ಣ ಧ್ವಜಕ್ಕೆ ಅದರ ನೆಲದಲ್ಲೇ ಹಾರಾಡಲು ಅವಕಾಶ ಕೊಡದ ಮೂಲಭೂತವಾದಿಗಳು ಮತ್ತು ಧರ್ಮಗುರುಗಳು ಈ ದೇಶವನ್ನು ಬಿಟ್ಟು ಹೊರಡುವುದು ಒಳಿತು ಎಂದಿದ್ದಾರೆ. ಹೋಗುವಾಗ ಅವರ ಮಸೀದಿಯನ್ನೂ ತೆಗೆದುಕೊಂಡು ಹೋಗಲಿ ಎಂದೂ ತಿರುಗೇಟು ನೀಡಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳಾದ ಹಿನ್ನೆಲೆಯಲ್ಲಿ ಈ ಬಾರಿ ಆಜಾದಿ ಕಾ ಅಮೃತ ಮಹೋತ್ಸವ್​ ಆಚರಣೆ ಮಾಡಲಾಗುತ್ತಿದೆ. ತನ್ನಿಮಿತ್ತ ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತದ 100ನೇ ಸ್ವಾತಂತ್ರ್ಯ ದಿನಾಚರಣೆ ಹೊತ್ತಿಗೆ ಆತ್ಮ ನಿರ್ಭರ ಭಾರತ ನಿರ್ಮಾಣವಾಗಿರಬೇಕು ಎಂದಿದ್ದಾರೆ.

ಇದನ್ನೂ ಓದಿ: ಸೈಫ್​ ಅಲಿ ಖಾನ್​ಗೆ 51ನೇ ಬರ್ತ್​ಡೇ; 6 ತಿಂಗಳ ಮಗನ ಫೋಟೋ ವೈರಲ್​

On This Day: 123 ವರ್ಷಗಳಲ್ಲಿ ಮೊದಲ ಬಾರಿಗೆ ವಿಶಿಷ್ಟ ರೀತಿಯಲ್ಲಿ ಕ್ರಿಕೆಟ್ ಆಡಲಾಯಿತು..!

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್