ಸೈಫ್​ ಅಲಿ ಖಾನ್​ಗೆ 51ನೇ ಬರ್ತ್​ಡೇ; 6 ತಿಂಗಳ ಮಗನ ಫೋಟೋ ವೈರಲ್​

ಜಹಾಂಗೀರ್​ ಅಲಿ ಖಾನ್​ ತುಂಬಾ ಮುದ್ದಾಗಿದ್ದಾನೆ ಎಂದು ಜನರೆಲ್ಲ ಕಮೆಂಟ್​ ಮಾಡುತ್ತಿದ್ದಾರೆ. ಸೈಫ್​ ಅಲಿ ಖಾನ್​ ಅವರ ಇನ್ನೋರ್ವ ಪುತ್ರ ತೈಮೂರ್​ ಅಲಿ ಖಾನ್​ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್​ ಆಗಿದ್ದಾನೆ.

ಸೈಫ್​ ಅಲಿ ಖಾನ್​ಗೆ 51ನೇ ಬರ್ತ್​ಡೇ; 6 ತಿಂಗಳ ಮಗನ ಫೋಟೋ ವೈರಲ್​
ಸೈಫ್​ ಅಲಿ ಖಾನ್​ಗೆ 51ನೇ ಬರ್ತ್​ಡೇ; 6 ತಿಂಗಳ ಮಗನ ಫೋಟೋ ವೈರಲ್​
Follow us
TV9 Web
| Updated By: ಮದನ್​ ಕುಮಾರ್​

Updated on: Aug 16, 2021 | 5:11 PM

ಬಾಲಿವುಡ್​ನ ಸ್ಟಾರ್​ ನಟ ಸೈಫ್​ ಅಲಿ ಖಾನ್​ (Saif Ali Khan) ಅವರಿಗೆ ಇಂದು (ಆ.16) ಜನ್ಮದಿನದ ಸಂಭ್ರಮ. ಕುಟುಂಬದ ಸದಸ್ಯರ ಜೊತೆಗೆ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು ಸ್ನೇಹಿತರು ಮತ್ತು ಸೆಲೆಬ್ರಿಟಿಗಳಿಂದ ಸೋಶಿಯಲ್​ ಮೀಡಿಯಾ ಮೂಲಕ ಸೈಫ್​ಗೆ ಶುಭಾಶಯಗಳ ಮಳೆ ಸುರಿಸಲಾಗುತ್ತಿದೆ. ಅವರಿಗೆ ಈಗ 51ರ ಪ್ರಾಯ. ಈಗಲೂ ಅವರು ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟನಾಗಿ ತಮ್ಮ ಚಾರ್ಮ್​ ಉಳಿಸಿಕೊಂಡಿದ್ದಾರೆ. ಸಿನಿಮಾ ಮಾತ್ರವಲ್ಲದೆ ವೈಯಕ್ತಿಕ ಜೀವನದ ಕಾರಣದಿಂದಲೂ ಸೈಫ್​ ಆಗಾಗ ಸುದ್ದಿ ಆಗುತ್ತಾರೆ. ಹುಟ್ಟುಹಬ್ಬದ ದಿನ ಅವರ ಕಿರಿಯ ಪುತ್ರ ಜಹಾಂಗೀರ್​ ಅಲಿ ಖಾನ್​ (Jahangir Ali Khan) ಫೋಟೋ ಕೂಡ ವೈರಲ್​ ಆಗುತ್ತಿದೆ. 

ಸೈಫ್​ ಅಲಿ ಖಾನ್​ ಅವರ ಮೊದಲ ಪತ್ನಿಯ ಮಗಳು ಸಾರಾ ಆಲಿ ಖಾನ್​ ಈಗ ಬಾಲಿವುಡ್​ನಲ್ಲಿ ಸ್ಟಾರ್​ ನಟಿ ಆಗಿದ್ದಾರೆ. ತಂದೆಯ ಜನ್ಮದಿನಕ್ಕೆ ಶುಭಕೋರಿರುವ ಅವರು ಒಂದು ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಜಹಾಂಗೀರ್​ ಅಲಿ ಖಾನ್​ ಪೋಸ್​ ಗಮನ ಸೆಳೆಯುತ್ತಿದೆ.

ಸೈಫ್​ ಪತ್ನಿ ಕರೀನಾ ಕಪೂರ್​ ಅವರು ಈ ವರ್ಷ ಫೆಬ್ರವರಿಯಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದರು. ಮಗುವಿಗೆ ಜಹಾಂಗೀರ್​ ಅಲಿ ಖಾನ್​ ಎಂದು ಹೆಸರು ಇಡಲಾಗಿದೆ ಎಂಬುದು ಇತ್ತೀಚೆಗಷ್ಟೇ ಗೊತ್ತಾಯಿತು. 6 ತಿಂಗಳ ಜಹಾಂಗೀರ್​ನನ್ನು ಸಹೋದರಿ ಸಾರಾ ಅಲಿ ಖಾನ್​ ಅವರು ಖುಷಿಯಿಂದ ನೋಡುತ್ತಿರುವ ಈ ಫೋಟೋಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಇದು ವೈರಲ್​ ಆಗುತ್ತಿದೆ.

‘ಹುಟ್ಟುಹಬ್ಬದ ಶುಭಾಶಯಗಳು ಅಪ್ಪ. ನನ್ನ ಪಾಲಿನ ಸೂಪರ್​ ಹೀರೋ ಆಗಿರುವುದಕ್ಕೆ ನಿಮಗೆ ಧನ್ಯವಾದಗಳು. ಬುದ್ಧಿವಂತ ಸ್ನೇಹಿತ, ಒಳ್ಳೆಯ ಮಾತುಗಾರ ಮತ್ತು ನನಗೆ ದೊಡ್ಡ ಸಪೋರ್ಟ್​ ಸಿಸ್ಟಮ್​ ಆಗಿದ್ದೀರಿ. ಲವ್​ ಯೂ’ ಎಂಬ ಕ್ಯಾಪ್ಷನ್​ನೊಂದಿಗೆ ಸಾರಾ ಆಲಿ ಖಾನ್​ ಈ ಫೋಟೋ ಶೇರ್​ ಮಾಡಿದ್ದಾರೆ. ಜಹಾಂಗೀರ್​ ತುಂಬಾ ಮುದ್ದಾಗಿದ್ದಾನೆ ಎಂದು ಜನರೆಲ್ಲರೂ ಕಮೆಂಟ್​ ಮಾಡುತ್ತಿದ್ದಾರೆ. ಸೈಫ್​ ಅವರ ಇನ್ನೋರ್ವ ಪುತ್ರ ತೈಮೂರ್​ ಅಲಿ ಖಾನ್​ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್​ ಆಗಿದ್ದಾನೆ. ಹೋದಲ್ಲಿ ಬಂದಲ್ಲಿ ಅವನನ್ನು ಪಾಪರಾಜಿ ಕ್ಯಾಮೆರಾಗಳು ಮುತ್ತಿಕೊಳ್ಳುತ್ತವೆ.

ಸದ್ಯ ಸೈಫ್​ ಅವರು ‘ಆದಿಪುರುಷ್​’, ‘ಭೂತ್​​ ಪೊಲೀಸ್’​, ‘ಬಂಟಿ ಔರ್​ ಬಬ್ಲಿ 2’ ಮುಂತಾದ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಆದಿಪುರುಷ್​’ ಚಿತ್ರದಲ್ಲಿ ಅವರು ರಾವಣನ ಪಾತ್ರ ನಿಭಾಯಿಸುತ್ತಿದ್ದಾರೆ. ಸಾರಾ ಅಲಿ ಖಾನ್​ ಅವರು ಅಕ್ಷಯ್​ ಕುಮಾರ್​ ಜೊತೆ ‘ಅತರಂಗಿ ರೇ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:

‘ಕೂದಲು ಮುಟ್ಟಿದ್ರೆ ಕರೀನಾ ನನ್ನ ಕೊಂದುಬಿಡ್ತಾಳೆ’; ಸಂಸಾರದ ಗುಟ್ಟು ತೆರೆದಿಟ್ಟ ಸೈಫ್​ ಅಲಿ ಖಾನ್​

ಮತ್ತೆ ಹಿಂದೂಗಳ ಭಾವನೆಗೆ ಧಕ್ಕೆ ತಂದ ಸೈಫ್​ ಅಲಿ ಖಾನ್​; ಈ ಪೋಸ್ಟರ್​ನಲ್ಲಿ ಇರುವ ವಿವಾದ ಏನು?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ