ಹೆಚ್ಚು ರೀಟೇಕ್​ ಕೇಳಿದ ನಿರ್ದೇಶಕ; ಸಿಟ್ಟಲ್ಲಿ ಸ್ಕ್ರಿಪ್ಟ್​ ಪೇಪರ್​ ಮುದ್ದೆಕಟ್ಟಿ ಎಸೆದ ಖ್ಯಾತ ನಟ

1993ರಲ್ಲಿ ತೆರೆಗೆ ಬಂದ ‘ದಾಮಿನಿ’ ಸಿನಿಮಾದಲ್ಲಿ ಸನ್ನಿ ಡಿಯೋಲ್​ ನಟಿಸಿದ್ದರು. ಈ ಸಿನಿಮಾದಲ್ಲಿ ‘ತಾರಿಖ್​ ಪೇ ತಾರಿಖ್​..’ ಎನ್ನುವ ಡೈಲಾಗ್​ ಬರುತ್ತದೆ. ಈ ಡೈಲಾಗ್​ ಅನ್ನು ಹೇಳುವಂತೆ ಎದುರು ಕೂತಿದ್ದ ವ್ಯಕ್ತಿ ಸನ್ನಿ ಅವರಿಗೆ ಸೂಚಿಸಿದ್ದ.

ಹೆಚ್ಚು ರೀಟೇಕ್​ ಕೇಳಿದ ನಿರ್ದೇಶಕ; ಸಿಟ್ಟಲ್ಲಿ ಸ್ಕ್ರಿಪ್ಟ್​ ಪೇಪರ್​ ಮುದ್ದೆಕಟ್ಟಿ ಎಸೆದ ಖ್ಯಾತ ನಟ
ಹೆಚ್ಚು ರೀಟೇಕ್​ ಕೇಳಿದ ನಿರ್ದೇಶಕ; ಸಿಟ್ಟಲ್ಲಿ ಸ್ಕ್ರಿಪ್ಟ್​ ಪೇಪರ್​ ಮುದ್ದೆಕಟ್ಟಿ ಎಸೆದ ಖ್ಯಾತ ನಟ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 16, 2021 | 6:16 PM

ಹಿರಿಯ ನಟರ ಬಳಿ ನಿರ್ದೇಶಕರು ತುಂಬಾನೇ ನಾಜೂಕಾಗಿ ನಡೆದುಕೊಳ್ಳಬೇಕು. ಶೂಟಿಂಗ್​ ವೇಳೆ ಹೆಚ್ಚು ಟೇಕ್​ ತೆಗೆದುಕೊಂಡರೆ ಹಿರಿಯ ನಟರು ಇದನ್ನು ಸಹಿಸುವುದೇ ಇಲ್ಲ. ಈಗ ನಟ ಸನ್ನಿ ಡಿಯೋಲ್​ ವಿಚಾರದಲ್ಲೂ ಹೀಗೆಯೇ ಆಗಿದೆ. ನಾಲ್ಕು ಬಾರಿ ರಿಟೇಕ್​ ಹೇಳಿದ ವ್ಯಕ್ತಿ ಎದುರೇ ಸ್ಕ್ರಿಪ್ಟ್​ ಪೇಪರ್​​ಅನ್ನು ಮುದ್ದೆಕಟ್ಟಿ ಎಸೆದಿದ್ದಾರೆ ಸನ್ನಿ. ಈ ವೇಳೆ ಸನ್ನಿ ಮುಖದಲ್ಲಿ ತುಂಬಾನೇ ಗಾಂಭೀರ್ಯತೆ ಹಾಗೂ ಕೋಪ ಇತ್ತು. ಆದರೆ, ಇದು ತಮಾಷೆಗೆ ಮಾಡಿದ ವಿಡಿಯೋ ಎನ್ನುವುದು ಸನ್ನಿ ಹೇಳಿದ ಡೈಲಾಗ್​ ಹಾಗೂ ಈ ಪೋಸ್ಟ್​​ಗೆ ನೀಡಿದ ಕ್ಯಾಪ್ಶನ್​​​ನಿಂದ ಅಭಿಮಾನಿಗಳಿಗೆ ಮನದಟ್ಟಾಗಿದೆ.

1993ರಲ್ಲಿ ತೆರೆಗೆ ಬಂದ ‘ದಾಮಿನಿ’ ಸಿನಿಮಾದಲ್ಲಿ ಸನ್ನಿ ಡಿಯೋಲ್​ ನಟಿಸಿದ್ದರು. ಈ ಸಿನಿಮಾದಲ್ಲಿ ‘ತಾರಿಖ್​ ಪೇ ತಾರಿಖ್​..’ ಎನ್ನುವ ಡೈಲಾಗ್​ ಬರುತ್ತದೆ. ಈ ಡೈಲಾಗ್​ ಅನ್ನು ಹೇಳುವಂತೆ ಎದುರು ಕೂತಿದ್ದ ವ್ಯಕ್ತಿ ಸನ್ನಿ ಅವರಿಗೆ ಸೂಚಿಸಿದ್ದ. ಅದರಂತೆ ಸನ್ನಿ ಮೊದಲ ಬಾರಿ ಈ ಡೈಲಾಗ್​ ಹೇಳಿದ್ದಾರೆ. ಆಗ ಎದುರಿದ್ದ ವ್ಯಕ್ತಿ ಧ್ವನಿ ಏರಿಸುವಂತೆ ಕೋರಿದ್ದ. ಇದು ನಾಲ್ಕು ಬಾರಿ ರಿಪೀಟ್​ ಆಗಿದೆ. ಆಗ ಸನ್ನಿಗೆ ಕೋಪ ಬಂದಿದೆ. ಎದುರಿದ್ದ ವ್ಯಕ್ತಿಯ ಸ್ಕ್ರಿಪ್ಟ್​ ಪೇಪರ್​ ಕಸಿದು ಎಸೆದ ಸನ್ನಿ, ‘ನಾನೇನು ಇಂದಿರಾ ನಗರದ ಗೂಂಡಾ ಎಂದುಕೊಂಡಿದ್ದೀಯಾ?’ ಎಂದು ಪ್ರಶ್ನೆ ಮಾಡಿದ್ದಾರೆ.

View this post on Instagram

A post shared by Sunny Deol (@iamsunnydeol)

ಕ್ರೆಡಿಟ್​ ಕಾರ್ಡ್​ ಬಿಲ್​ ಪೇ ಮಾಡುವ ಕ್ರೆಡ್​ ಕಂಪೆನಿ ಕಳೆದ ಐಪಿಎಲ್​ ಸೀಸನ್​ನಲ್ಲಿ ಸಾಕಷ್ಟು ಆಸಕ್ತಿದಾಯಕ ಜಾಹೀರಾತುಗಳನ್ನು ಪರಿಚಯಿಸಿತ್ತು. ಆ್ಯಡ್​ಗಳು ಪ್ರಸಾರವಾದರೆ ಚಾನೆಲ್​ ಬದಲಿಸುವವರು ಕೂಡ ಒಂದು ಕ್ಷಣ ಈ ಜಾಹೀರಾತುಗಳನ್ನು ಕಣ್ತುಂಬಿಕೊಂಡ ಉದಾಹರಣೆ ಇದೆ. ಅದೇ ರೀತಿ, ಈ ಬಾರಿಯ ಐಪಿಎಲ್​ ಸೀಸನ್​ಗೂ ಮೊದಲು ಹೊಸ ವಿಧವಾದ ಆ್ಯಡ್​ನೊಂದಿಗೆ ಕ್ರೆಡ್​ ಬಂದಿತ್ತು. ಈ ಜಾಹೀರಾತಿನಲ್ಲಿ ರಾಹುಲ್​ ದ್ರಾವಿಡ್​ ಬೆಂಗಳೂರು ಟ್ರಾಫಿಕ್​ ಬಗ್ಗೆ ತುಂಬಾನೇ ಸಿಟ್ಟಾಗಿದ್ದರು. ಅಷ್ಟೇ ಅಲ್ಲ, ಟ್ರಾಫಿಕ್​ನಲ್ಲಿ ಸಿಲುಕಿ ಸಿಟ್ಟಿಗೆದ್ದ ಅವರು ಎದುರು ನಿಂತಿದ್ದ ಕಾರಿನ ಕನ್ನಡಿಯನ್ನೇ ಒಡೆದು ಹಾಕಿದ್ದರು.  ಈ ಜಾಹೀರಾತು ಸಾಕಷ್ಟು ವೈರಲ್​ ಆಗಿತ್ತು.

ಇದನ್ನೂ ಓದಿ: ಪ್ರಾಣ ಉಳಿಸಿಕೊಳ್ಳಲು ಅಫ್ಘಾನಿಸ್ತಾನದ ರಸ್ತೆಗಳಲ್ಲಿ ಭಯದಿಂದ ಓಡಿದ ನಿರ್ದೇಶಕಿ; ವಿಡಿಯೋ ವೈರಲ್​  

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ