ಅಫ್ಘಾನಿಸ್ತಾನದ ಬೀಕರ ಸ್ಥಿತಿ ಕಂಡು ಬಾಲಿವುಡ್ ನಟ-ನಟಿಯರು ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದಾರೆ
ವ್ಯಕ್ತಿಯೊಬ್ಬ ವಿಮಾನದಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ವಿಡಿಯೋವನ್ನು ಪೋಸ್ಟ್ ಮಾಡಿರುವ ಅನುಷ್ಕಾ ಅವರು, ‘ಇದು ಹೃದಯ ವಿದ್ರಾವಕವಾಗಿದೆ, ಯಾರಿಗೂ ಇಂಥ ಸ್ಥಿತಿ ಬರಬಾರದು,’ ಎಂದು ಹೇಳಿದ್ದಾರೆ.
ಟೀಮ್ ಇಂಡಿಯ ನಾಯಕ ವಿರಾಟ್ ಕೊಹ್ಲಿ ಪತ್ನಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ಸಹ ಅಫ್ಘಾನಿಸ್ತಾನದಲ್ಲಿ ಈಗ ಜಾರಿಯಲ್ಲಿರುವ ಭಯಾನಕ ಸ್ಥಿತಿ ಮತ್ತು ವಿಮಾನದಿಂದ ಇಬ್ಬರು ಕೆಳಗೆ ಬಿದ್ದು ಸತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮೊದಲು ಬಾಲಿವುಡ್ ನಟ-ನಟಿ ಫರ್ಹಾನ್ ಅಖ್ತರ್ ಮತ್ತು ರಿಯಾ ಚಕ್ರವರ್ತಿ ಸಹ ದಿಗ್ಭ್ರಮೆ ಪ್ರಕಟಿಸಿದ್ದರು. ತಾಲಿಬಾನಿಗಳು ಸರ್ಕಾರವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡ ನಂತರ ಅಫ್ಘಾನಿಸ್ತಾನದ ಜನ ಜೀವಭಯದಿಂದ ದೇಶಬಿಟ್ಟು ಓಡಿಹೋಗುತ್ತಿದ್ದಾರೆ. ಪುರುಷರು ಮತ್ತು ಮಹಿಳೆಯರು ವಿಮಾನ ನಿಲ್ದಾಣಗಳಲ್ಲಿ ಜಾತ್ರೆಯಂತೆ ಸೇರುತ್ತಿರುವ ದೃಶ್ಯಗಳು ಇಂಟರ್ನೆಟ್ನಲ್ಲಿ ತುಂಬಿ ಹರಿದಾಡುತ್ತಿವೆ. ವಿಮಾನಗಳಿಗೆ ಜೋತು ಬಿದ್ದ ಕೆಲವರು ಮನೆಗಳ ಮಾಳಿಗೆಗಳ ಮೇಲೆ ಬಿದ್ದಿದ್ದಾರೆ.
ವ್ಯಕ್ತಿಯೊಬ್ಬ ವಿಮಾನದಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ವಿಡಿಯೋವನ್ನು ಪೋಸ್ಟ್ ಮಾಡಿರುವ ಅನುಷ್ಕಾ ಅವರು, ‘ಇದು ಹೃದಯ ವಿದ್ರಾವಕವಾಗಿದೆ, ಯಾರಿಗೂ ಇಂಥ ಸ್ಥಿತಿ ಬರಬಾರದು,’ ಎಂದು ಹೇಳಿದ್ದಾರೆ.
ಮತ್ತೊಬ್ಬ ನಟಿ ಕಂಗನಾ ರನೌತ್ ಅವರು ಸಹ ವಿಡಿಯೋ ಶೇರ್ ಮಾಡಿ, ‘ಬದುಕು ಸಾವಿಗಿಂತ ನಿಕೃಷ್ಟವಾದಾಗ,’ ಎಂದು ಹೇಳಿದ್ದಾರೆ.
ಜನ ವಿಮಾನದಿಂದ ಬೀಳುತ್ತಿರುವ ದೃಶ್ಯಗಳ ವಿಡಿಯೋಗಳು ವೈರಲ್ ಆಗುತ್ತಿದ್ದಂತೆಯೇ, ಸ್ಥಳೀಯ ಸುದ್ದಿಸಂಸ್ಥೆಯೊಂದು, ‘ಕಾಬೂಲ್ ವಿಮಾನ ನಿಲ್ದಾಣದ ಹತ್ತಿರವಿರುವ ಜನ ಈ ದೃಶ್ಯಗಳ ಪ್ರತ್ಯಕ್ಷಿದರ್ಶಿಗಳಾಗಿದ್ದಾರೆ ಮತ್ತು ಅವರು ನೆಲಕ್ಕೆ ಅಪ್ಪಳಿಸಿದಾಗ ಜೋರಾದ ಮತ್ತು ಭಯ ಹುಟ್ಟಿಸುವಂಥ ಶಬ್ದ ಕೇಳಿಸಿತು,’ ಎಂದು ಟ್ವೀಟ್ ಮಾಡಿದೆ.
ಅಶ್ರಫ್ ಘನಿ ಅವರ ಅಧ್ಯಕ್ಷತೆಯ ಸರ್ಕಾರವನ್ನು ತಾಲಿಬಾನ್ ಕೆಡವಿದ ನಂತರ ಅಫ್ಘಾನಿಸ್ತಾನ ತ್ಯಜಿಸುವ ಹತಾಷೆಯ ಉದ್ದೇಶದಿಂದ ಜನ ವಿಮಾನ ನಿಲ್ದಾಣಗಳಲ್ಲಿ ಜಮಾಯಿಸುತ್ತಿದ್ದಾರೆ. ಟಿವಿ ಚ್ಯಾನೆಲ್ಗಳಲ್ಲಿ ಬಿತ್ತರಿಗೊಳ್ಳುತ್ತಿರುವ ವಿಡಿಯೋಗಳು ಸಾಮಾಜಿನ ಜಾಲತಾಣಗಲ್ಲೂ ಹರಿದಾಡುತ್ತಿವೆ. ರವಿವಾರ ರಾತ್ರಿ ಮತ್ತು ಸೋಮವಾರ ಬೆಳಗ್ಗೆ ಸಾವಿರಾರು ಜನ ಕಾಬೂಲ್ ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ಮತ್ತು ನಿಲ್ದಾಣದ ಒಳಗಡೆ ಜಮಾಯಿಸಿ ವಿಪರೀತ ಸದ್ದುಗದ್ದಲದ ಸನ್ನಿವೇಶಗಳು ಸೃಷ್ಟಿಯಾಗಿದ್ದವು.
ವಿಮಾನದಿಂದ ಕೆಳಗೆ ಬಿದ್ದು ಜನ ಸತ್ತಿರುವುದನ್ನು ಅಧಿಕಾರಿಗಳು ಖಚಿತಪಡಿಸಿಲ್ಲವಾದರೂ ಸೋಮವಾರದಂದು ಸಾವಿರಾರು ಆಫ್ಘನ್ನರು ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಒಳಗಡೆ ಸೇರಿದ್ದನ್ನು ಖಚಿತಪಡಿಸಿದರು. ಅವರು ಅಫ್ಘಾನಿಸ್ತಾನದಿಂದ ಪಲಾಯನಗೈಯಲು ಅದೆಷ್ಟು ಹತಾಷರಾಗಿದ್ದರೆಂದರೆ ಅಮೇರಿಕಾದ ಮಿಲಿಟರಿ ವಿಮಾನವೊಂದಕ್ಕೆ ಜೋತುಬಿದ್ದ ಕೆಲವರು ಬಳಿಕ ಕೆಳಗೆ ಬಿದ್ದು ಮರಣವನ್ನಪ್ಪಿದರು. ಈ ಗಲಾಟೆಗಳಲ್ಲಿ ಕನಿಷ್ಟ 7 ಜನ ಸತ್ತಿದ್ದಾರೆಂದು ವರದಿಯಾಗಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಭಾರತೀಯರನ್ನು ಕರೆತರಲು ಕಾಬೂಲ್ನಲ್ಲಿ ಲ್ಯಾಂಡ್ ಆಯ್ತು ಭಾರತೀಯ ವಾಯುಪಡೆಯ ದೈತ್ಯ ಸಿ-17 ವಿಮಾನ