ಅಫ್ಘಾನಿಸ್ತಾನದಿಂದ ಭಾರತೀಯರನ್ನು ಕರೆತರಲು ಕಾಬೂಲ್​ನಲ್ಲಿ ಲ್ಯಾಂಡ್ ಆಯ್ತು ಭಾರತೀಯ ವಾಯುಪಡೆಯ ದೈತ್ಯ ಸಿ-17 ವಿಮಾನ

Indian Air Force: ತಾಲಿಬಾನ್ ವಶಕ್ಕೆ ಸಿಲುಕಿರುವ ಅಫ್ಘಾನಿಸ್ತಾನದಲ್ಲಿರುವ ಭಾರತೀಯರನ್ನು ಕರೆತರಲು ಭಾರತ ಸರ್ಕಾರವು ವಾಯುಪಡೆಯ ದೈತ್ಯ ಸಿ-17 ಗ್ಲೋಬ್​ ಮಾಸ್ಟರ್​ ವಿಮಾನವನ್ನು ಕಳುಹಿಸಿಕೊಟ್ಟಿದೆ.

ಅಫ್ಘಾನಿಸ್ತಾನದಿಂದ ಭಾರತೀಯರನ್ನು ಕರೆತರಲು ಕಾಬೂಲ್​ನಲ್ಲಿ ಲ್ಯಾಂಡ್ ಆಯ್ತು ಭಾರತೀಯ ವಾಯುಪಡೆಯ ದೈತ್ಯ ಸಿ-17 ವಿಮಾನ
ಭಾರತೀಯ ವಾಯುಪಡೆಯ ಸಿ-17 ಗ್ಲೋಬ್ ಮಾಸ್ಟರ್ ವಿಮಾನ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 16, 2021 | 7:09 PM

ಕಾಬೂಲ್: ತಾಲಿಬಾನ್ ವಶಕ್ಕೆ ಸಿಲುಕಿರುವ ಅಫ್ಘಾನಿಸ್ತಾನದಲ್ಲಿರುವ ಭಾರತೀಯರನ್ನು ಕರೆತರಲು ಭಾರತ ಸರ್ಕಾರವು ವಾಯುಪಡೆಯ ದೈತ್ಯ ಸಿ-17 ಗ್ಲೋಬ್​ ಮಾಸ್ಟರ್​ ವಿಮಾನವನ್ನು ಕಳುಹಿಸಿಕೊಟ್ಟಿದೆ. ವಿಮಾನವು ಸೋಮವಾರ ಸಂಜೆ ಕಾಬೂಲ್​ನಲ್ಲಿ ಲ್ಯಾಂಡ್​ ಆಗಿದ್ದು, 500ಕ್ಕೂ ಹೆಚ್ಚು ಭಾರತೀಯರನ್ನು ಶೀಘ್ರದಲ್ಲಿಯೇ ಸ್ವದೇಶಕ್ಕೆ ಕರೆತರುವ ಸಾಧ್ಯತೆಯಿದೆ.

ಅಮೆರಿಕ ವಾಯುಪಡೆಯು ಭಾನುವಾರ 800ಕ್ಕೂ ಹೆಚ್ಚು ನಾಗರಿಕರನ್ನು ಇಂಥದ್ದೇ ಸಿ-17 ವಿಮಾನದ ಮೂಲಕ ಸ್ಥಳಾಂತರಿಸಿತ್ತು. ಭಾರತವು ತನ್ನ ಪ್ರಜೆಗಳನ್ನು ಸ್ವದೇಶಕ್ಕೆ ಕರೆತರಲು ಸಿ-17 ವಿಮಾನವನ್ನೇ ಕಳುಹಿಸಿಕೊಟ್ಟಿದೆ. ವಿಮಾನ ನಿಲ್ದಾಣದ ಸಮೀಪಕ್ಕೆ ಬಂದಿರುವ 500ಕ್ಕೂ ಹೆಚ್ಚು ಭಾರತೀಯ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ಸ್ವದೇಶಕ್ಕೆ ಏರ್​ಲಿಫ್ಟ್​ ಮಾಡಲಿದೆ.

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗೊಂದಲದ ವಾತಾವರಣ ಮುಂದುವರಿದಿದ್ದ ಕಾರಣ ಸೋಮವಾರ ಕಜಕಿಸ್ತಾನದಲ್ಲಿ ವಾಯುಸೇನೆಯ ವಿಮಾನ ಲ್ಯಾಂಡ್ ಆಗಿತ್ತು. ಅಮೆರಿಕದ ಭದ್ರತಾ ಸಿಬ್ಬಂದಿ ವಿಮಾನ ನಿಲ್ದಾಣವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡ ನಂತರ ಭಾರತದ ವಿಮಾನಕ್ಕೆ ಲ್ಯಾಂಡ್ ಆಗಲು ಅವಕಾಶ ಕಲ್ಪಿಸಲಾಯಿತು.

ಅಫ್ಘಾನಿಸ್ತಾನದ ಇತ್ತೀಚಿನ ವಿದ್ಯಮಾನಗಳು ಮತ್ತು ಅದಕ್ಕೆ ಭಾರತದ ಪ್ರತಿಕ್ರಿಯೆ ಹೇಗಿರಬೇಕು ಎಂಬ ಬಗ್ಗೆ ಚರ್ಚಿಸಲು ದೆಹಲಿಯಲ್ಲಿ ವಿದೇಶಾಂಗ ವ್ಯವಹಾರ ಮತ್ತು ರಕ್ಷಣಾ ಇಲಾಖೆಯ ಸಚಿವರು ಮತ್ತು ಉನ್ನತ ಅಧಿಕಾರಿಗಳು ಸಭೆ ನಡೆಯುವ ನಿರೀಕ್ಷೆಯಿದೆ. ಅಫ್ಘಾನಿಸ್ತಾನದಲ್ಲಿರುವ ಎಲ್ಲ ಸಿಬ್ಬಂದಿಯನ್ನು ಸ್ಥಳಾಂತರಿಸಬೇಕೆ ಅಥವಾ ಒಂದಿಷ್ಟು ಮಂದಿಯನ್ನು ಉಳಿಸಿ ತಾಲಿಬಾನ್ ಆಡಳಿತದೊಂದಿಗೆ ಸಂಬಂಧ ಸ್ಥಾಪನೆಗೆ ಯತ್ನಿಸಬೇಕೆ ಎಂಬ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಕಾಬೂಲ್​ ನಗರದ ವಿವಿಧೆಡೆ ಸಿಲುಕಿರುವ ಭಾರತೀಯ ಪ್ರಜೆಗಳನ್ನು ವಿಮಾನ ನಿಲ್ದಾಣಕ್ಕೆ ತಲುಪಿಸಲೆಂದು ಅಫ್ಘಾನಿಸ್ತಾನದಲ್ಲಿರುವ ಭಾರತೀಯ ಅಧಿಕಾರಿಗಳು ಸ್ಥಳೀಯ ಆಡಳಿತದೊಂದಿಗೆ ಚರ್ಚಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣದ ಭದ್ರತೆಗಾಗಿ ಅಮೆರಿಕ ಕನಿಷ್ಠ 6 ಸಾವಿರ ಯೋಧರನ್ನು ನಿಯೋಜಿಸುವ ಸಾಧ್ಯತೆಯಿದೆ.

ಅಮೆರಿಕರನ್ನು ನಿನ್ನೆ ಸ್ವದೇಶಕ್ಕೆ ಕರೆದೊಯ್ದ ಸಿ-17 ಗ್ಲೋಬ್​ಮಾಸ್ಟರ್​ ಸರಕು ಸಾಗಣೆ ವಿಮಾನಕ್ಕೆ 70 ಟನ್ ಭಾರ ಹೊರುವ ಸಾಮರ್ಥ್ಯವಿದೆ. ಈ ಲೆಕ್ಕಾಚಾರದಲ್ಲಿ ಸರಾಸರಿ 90 ಕೆಜಿ ತೂಕ ಇರುವ 800 ಮಂದಿಯನ್ನು ಈ ವಿಮಾನದ ಮೂಲಕ ಕರೆತರಲು ಸಾಧ್ಯವಿದೆ. ಆದರೆ ಮನುಷ್ಯರು ಸರಕುಗಳಲ್ಲವಲ್ಲ. ಒಬ್ಬರಿಂದ ಮತ್ತೊಬ್ಬರಿಗೆ ಸ್ಥಳಾವಕಾಶ ಬೇಕಾಗುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ 134 ಯೋಧರನ್ನು ಒಂದು ಬಾರಿಗೆ ಅವರ ಉಪಕರಣಗಳ ಸಹಿತ ಸಿ-17 ಸ್ಥಳಾಂತರಿಸುತ್ತದೆ. ಆದರೆ ಭಾನುವಾರ ಅಮೆರಿಕ ಒಂದೇ ಬಾರಿಗೆ 800 ಮಂದಿಯನ್ನು ಈ ವಿಮಾನದ ಮೂಲಕ ಸ್ಥಳಾಂತರಿಸಿದ್ದು ಈವರೆಗಿನ ಗರಿಷ್ಠ ಏರ್​ಲಿಫ್ಟ್​ ದಾಖಲೆಯಾಗಿದೆ.

(Indian Air Force C-17 Plane Landed in Kabul Airport to Air lift Indians)

ಇದನ್ನೂ ಓದಿ: ಮಹಿಳೆಯರಿಗೆ ಸ್ವಾತಂತ್ರ್ಯ ಇರುತ್ತೆ ಎನ್ನುತ್ತಿದೆ ತಾಲಿಬಾನ್; ನಂಬುತ್ತಿಲ್ಲ ಅಫ್ಘಾನಿಸ್ತಾನದ ಸ್ತ್ರೀಯರು, ಅಮೆರಿಕ ಬಗ್ಗೆ ಮಡುಗಟ್ಟಿದೆ ಅಕ್ರೋಶ

ಇದನ್ನೂ ಓದಿ: Impact on India: ತಾಲಿಬಾನ್ ವಶಕ್ಕೆ ಅಫ್ಘಾನಿಸ್ತಾನ, ಭಾರತದ ಭದ್ರತೆಗೆ ಹಲವು ಆತಂಕ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ