Video: ಶಸ್ತ್ರಾಸ್ತ್ರ ಸಹಿತವಾಗಿಯೇ ಸಂಸತ್ತು ಪ್ರವೇಶಿಸಿ, ಎಲ್ಲೆಂದರಲ್ಲಿ ಕುಳಿತ ತಾಲಿಬಾನ್​ ಉಗ್ರರು; ಅಧ್ಯಕ್ಷರ ಭವನದಲ್ಲೂ ಕಾರುಬಾರು

Taliban: ಭಾನುವಾರ (ಆಗಸ್ಟ್​ 15) ಇಡೀ ಅಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್​ ಉಗ್ರರ ಕೈವಶವಾಗಿದೆ. ಅಲ್ಲಿನ ಸರ್ಕಾರ ಬಿದ್ದು, ಅಧ್ಯಕ್ಷ ಅಶ್ರಫ್​ ಘನಿ ಈಗಾಗಲೇ ದೇಶ ಬಿಟ್ಟಾಗಿದೆ.

Video: ಶಸ್ತ್ರಾಸ್ತ್ರ ಸಹಿತವಾಗಿಯೇ ಸಂಸತ್ತು ಪ್ರವೇಶಿಸಿ, ಎಲ್ಲೆಂದರಲ್ಲಿ ಕುಳಿತ ತಾಲಿಬಾನ್​ ಉಗ್ರರು; ಅಧ್ಯಕ್ಷರ ಭವನದಲ್ಲೂ ಕಾರುಬಾರು
ಅಫ್ಘಾನಿಸ್ತಾನ ಅಧ್ಯಕ್ಷರ ಭವನದಲ್ಲಿ ಶಸ್ತ್ರಾಸ್ತ್ರ ಸಹಿತರಾಗಿ ಕುಳಿತ ತಾಲಿಬಾನ್​ ಉಗ್ರರು
Follow us
TV9 Web
| Updated By: Lakshmi Hegde

Updated on:Aug 16, 2021 | 8:29 PM

ಅಫ್ಘಾನಿಸ್ತಾನವೀಗ ಸಂಪೂರ್ಣವಾಗಿ ತಾಲಿಬಾನ್​ ಉಗ್ರ (Taliban Terrorists)ರ ಕೈವಶದಲ್ಲಿದೆ. ಅಲ್ಲಿನ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ (Ashraf Ghani) ಈಗಾಗಲೇ ದೇಶ ಬಿಟ್ಟಾಗಿದೆ. ಈಗಂತೂ ಅಫ್ಘಾನಿಸ್ತಾನ ಅಧ್ಯಕ್ಷರ ಭವನ, ಸಂಸತ್ತುಗಳಲ್ಲೆಲ್ಲ ತಾಲಿಬಾನ್​ ಉಗ್ರರದ್ದೇ ಕಾರುಬಾರು. ಕೈಯಲ್ಲಿ ಬಂದೂಕಿನಿಂತಹ ಶಸ್ತ್ರಾಸ್ತ್ರ ಹಿಡಿದ ಉಗ್ರರು ಅಧ್ಯಕ್ಷರ ಭವನ, ಸಂಸತ್ತಿನ ಆಸನಗಳಲ್ಲಿ ಕುಳಿತಿರುವ ಫೋಟೋ-ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿವೆ.

ಕಳೆದ ಎರಡು ವಾರಗಳ ಹಿಂದಷ್ಟೇ ಅಫ್ಘಾನ್​ ರಾಜಕೀಯ ನಾಯಕರಿಗಾಗಿ ಮೀಸಲಿದ್ದ ಸಂಸತ್ತನ್ನು ಇದೀಗ ತಾಲಿಬಾನ್ ಉಗ್ರರು ಶಸ್ತ್ರಾಸ್ತ್ರ ಸಮೇತ ಪ್ರವೇಶಿಸಿದ್ದಾರೆ. ಇಷ್ಟು ದಿನ ಅಶ್ರಫ್​ ಘನಿ ಅಲ್ಲಿ ಜಂಟಿ ಅಧಿವೇಶನಗಳನ್ನು ನಡೆಸುತ್ತಿದ್ದರು. ಈಗ ತಾಲಿಬಾನ್​ ಉಗ್ರರು ಒಟ್ಟೊಟ್ಟಿಗೆ ಕುಳಿತು ಮೊಬೈಲ್​ ನೋಡುತ್ತಿದ್ದಾರೆ. ತುಂಬ ಖುಷಿಯಿಂದ ಮಾತುಕತೆ ನಡೆಸುತ್ತಿದ್ದಾರೆ. ಸಂಸತ್ತಿನ ಕುರ್ಚಿಗಳ ಮೇಲೆ ತಾಲಿಬಾನ್ ಉಗ್ರರು ಶಸ್ತ್ರಾಸ್ತ್ರ ಸಮೇತರಾಗಿ ಕುಳಿತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ಅಫ್ಘಾನ್​ ಅಧ್ಯಕ್ಷರ ಕಾಬೂಲ್​ ಮತ್ತು ಅಫ್ಘಾನಿಸ್ತಾನ ಎರಡೂ ಕಡೆ ಇರುವ ಭವನಗಳೂ ತಾಲಿಬಾನ್​ ಉಗ್ರರ ವಶವಾಗಿದೆ. ಭಾನುವಾರ (ಆಗಸ್ಟ್​ 15) ಇಡೀ ಅಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್​ ಉಗ್ರರ ಕೈವಶವಾಗಿದೆ. ಅಲ್ಲಿನ ಸರ್ಕಾರ ಬಿದ್ದು, ಅಧ್ಯಕ್ಷ ಅಶ್ರಫ್​ ಘನಿ ಈಗಾಗಲೇ ದೇಶ ಬಿಟ್ಟಾಗಿದೆ. ಸದ್ಯಕ್ಕಂತೂ ತಾಲಿಬಾನ್ ಉಗ್ರರು ಪೂರ್ತಿಯಾಗಿ ಶಸ್ತ್ರಾಸ್ತ್ರಗಳೊಂದಿಗೆ ಇಡೀ ಕಾಬೂಲ್​​ನಲ್ಲಿ ತಿರುಗುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಮುಕ್ತ, ಅಂತರ್ಗತ ಇಸ್ಲಾಮಿಕ್ ಸರ್ಕಾರ ರಚನೆ ಮಾಡುವ ಸಂಬಂಧ ಮಾತುಕತೆ, ಚರ್ಚೆಗಳನ್ನು ನಡೆಸುತ್ತೇವೆ ಎಂದು ತಾಲಿಬಾನ್​ ವಕ್ತಾರ ಸುಹೇಲ್​ ಶಹೀನ್​ ತಿಳಿಸಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ಹಿಂದೂ-ಸಿಖ್ಖರು ಭಾರತಕ್ಕೆ ಬರಲು ನೆರವು: ಸರ್ಕಾರದ ಭರವಸೆ

ಅಫ್ಘನ್​ಗಳು ಪ್ರಾಣಭಯದಿಂದ ದೇಶಬಿಟ್ಟು ಪಲಾಯನ ಮಾಡುತ್ತಿದ್ದಾರೆ, ಅಲ್ಲಿನ ಮಹಿಳೆಯರು ನರಕಯಾತನೆ ಅನುಭವಿಸುತ್ತಿದ್ದಾರೆ

(Taliban have entered the Parliament of Afghanistan with Weapons)

Published On - 8:27 pm, Mon, 16 August 21