ಅಫ್ಘನ್​ಗಳು ಪ್ರಾಣಭಯದಿಂದ ದೇಶಬಿಟ್ಟು ಪಲಾಯನ ಮಾಡುತ್ತಿದ್ದಾರೆ, ಅಲ್ಲಿನ ಮಹಿಳೆಯರು ನರಕಯಾತನೆ ಅನುಭವಿಸುತ್ತಿದ್ದಾರೆ

ಅಫ್ಘಾನಿಸ್ತಾನದ ಜನ ಪ್ರಾಣಬಯದಿಂದ ಬೇರೆ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ. ದೇಶದ ಅಧ್ಯಕ್ಷ ಅಶ್ರಫ್ ಘನಿಯೇ ಜೀವ ಉಳಿಸಿಕೊಳ್ಳಲು ಬೇರೆ ದೇಶಕ್ಕೆ ಓಡಿಹೋಗಿದ್ದರೆ, ಯಾವುದೇ ರೀತಿಯ ರಕ್ಷಣೆಯಿಲ್ಲದ ಈ ಅಮಾಯಕ ಜನ ಏನು ತಾನೆ ಮಾಡಿಯಾರು

ಅಫ್ಘನ್​ಗಳು ಪ್ರಾಣಭಯದಿಂದ ದೇಶಬಿಟ್ಟು ಪಲಾಯನ ಮಾಡುತ್ತಿದ್ದಾರೆ, ಅಲ್ಲಿನ ಮಹಿಳೆಯರು ನರಕಯಾತನೆ ಅನುಭವಿಸುತ್ತಿದ್ದಾರೆ
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 16, 2021 | 7:24 PM

ಅಫ್ಘಾನಿಸ್ತಾನದಲ್ಲಿ ಏನಾಗುತ್ತಿದೆ ಅಂತ ಒಮ್ಮೆ ನೋಡಿ. ಇದು ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣ. ಜನ ಜಾತ್ರೆಯಂತೆ ನೆರೆದಿದ್ದಾರೆ. ಕೇವಲ ನೆರೆದಿರುವುದು ಮಾತ್ರವಲ್ಲ, ಅನೇಕರು ವಿಮಾನ ಹತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಹತ್ತುತ್ತಿರುವುದು ವಿಮಾನವೋ ಅಥವಾ ಬಸ್ಸೋ ಅಂತ ಸಂಶಯ ಮೂಡುತ್ತದೆ. ನಮ್ಮ ಗ್ರಾಮೀಣ ಭಾಗಗಳಲ್ಲಿ ಜಾತ್ರೆ ನಡೆಯುತ್ತಿದ್ದರೆ ಹತ್ತಿರದ ಬಸ್ ಡಿಪೋ ಜಾತ್ರಾ ಸ್ಪೆಷಲ್ ಅಂತ ವಿಶೇಷ ಬಸ್ ಸೇವೆ ಅರಂಭಿಸುವುದು ಸಾಮಾನ್ಯ. ಆಗ ಬಸ್ನಿಲ್ದಾಣದಲ್ಲಿ ಇಂಥ ಸನ್ನಿವೇಷ ನೋಡಸಿಗುತ್ತದೆ. ಸೀಟು ಆಕ್ರಮಿಸಿಕೊಳ್ಳಲು ಜನ ಹೀಗೆ ಮಾಡುವುದು ಸಾಮಾನ್ಯ ದೃಶ್ಯ. ಆದರೆ, ಇದು ಬಸ್ಸಲ್ಲ, ವಿಮಾನ ಮಾರಾಯ್ರೇ. ಇಷ್ಟು ಜನರಲ್ಲಿ ಯಾರ ಬಳಿ ಟಿಕೆಟ್ ಇದೆಯೋ ಅಂತ ಯಾರಿಗೂ ಗೊತ್ತಿಲ್ಲ.

ಅಫ್ಘಾನಿಸ್ತಾನದ ಜನ ಪ್ರಾಣಬಯದಿಂದ ಬೇರೆ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ. ದೇಶದ ಅಧ್ಯಕ್ಷ ಅಶ್ರಫ್ ಘನಿಯೇ ಜೀವ ಉಳಿಸಿಕೊಳ್ಳಲು ಬೇರೆ ದೇಶಕ್ಕೆ ಓಡಿಹೋಗಿದ್ದರೆ, ಯಾವುದೇ ರೀತಿಯ ರಕ್ಷಣೆಯಿಲ್ಲದ ಈ ಅಮಾಯಕ ಜನ ಏನು ತಾನೆ ಮಾಡಿಯಾರು? ಪುರುಷರಾದರೆ ಬಿಡಿ, ಹೇಗಾದರೂ ಮಾಡಿ, ತಪ್ಪಿಸಿಕೊಂಡಾರು. ಆದರೆ ಮಕ್ಕಳು ಮತ್ತು ಮಹಿಳೆಯರ ಗತಿಯೇನು? ಮಹಿಳೆ ಗರ್ಭಿಣಿಯಾಗಿದ್ದರೆ ಆಕೆ ಹೀಗೆ ವಿಮಾನ ಹತ್ತವುದು ಸಾಧ್ಯವೇ?

ಹಾಗೆ ನೋಡಿದರೆ, ಆಫ್ಘನ್ ಮಹಿಳೆಯರು ಇಬ್ಬಾಯಿ ಕತ್ತಿಗೆ ಸಿಕ್ಕಂಥ ಸ್ಥಿತಿಯಲ್ಲಿದ್ದಾರೆ. ಅಫ್ಘಾನಿಸ್ತಾನದಲ್ಲೇ ಉಳಿದರೆ ತಾಲಿಬಾನಿಗಳ ಆತ್ಯಾಚಾರ ಮತ್ತು ಕಾಮ ತೃಷೆಗೆ ಬಲಿಯಾಗಬೇಕು. ಈ ಪಾಪಿಗಳು ಅಪ್ರಾಪ್ತ ಬಾಲಕಿಯರನ್ನೂ ತಮ್ಮ ಲೈಂಗಿಕ ದಾಹ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ.

ಅಮೇರಿಕದ ಸೇನೆ ಅಫ್ಘಾನಿಸ್ತಾನದಿಂದ ತೆರವು ಮಾಡಿದ ಕೂಡಲೇ ಪುಂಡಾಟ ಶುರುಮಾಡಿದ ತಾಲಿಬಾನಿಗಳು 2-3 ತಿಂಗಳ ಅವಧಿಯಲ್ಲಿ ಇಡೀ ದೇಶವನ್ನೇ ವಶಪಡಿಸಿಕೊಂಡಿದ್ದಾರೆ. ನೆರೆರಾಷ್ಟ್ರ ಪಾಕಿಸ್ತಾನ ಈ ಬೆಳವಣಿಗೆಯಿಂದ ಸಂಭ್ರಮಿಸುತ್ತಿದೆ.

ಇದನ್ನೂ ಓದಿ: ಪ್ರಾಣ ಉಳಿಸಿಕೊಳ್ಳಲು ಅಫ್ಘಾನಿಸ್ತಾನದ ರಸ್ತೆಗಳಲ್ಲಿ ಭಯದಿಂದ ಓಡಿದ ನಿರ್ದೇಶಕಿ; ವಿಡಿಯೋ ವೈರಲ್​  

Follow us