ಎ.ಪಿ. ಅರ್ಜುನ್ (AP Arjun) ಜೊತೆ ಧ್ರುವ ಸರ್ಜಾ (Dhruva Sarja) ಮಾಡುತ್ತಿರುವ ಹೊಸ ಸಿನಿಮಾ ‘ಮಾರ್ಟಿನ್’ (Martin) ಮುಹೂರ್ತ ನೆರವೇರಿದೆ. ಶೂಟಿಂಗ್ ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದೊಂದು ಮಾಸ್ ಕಮರ್ಷಿಯಲ್ ಸಿನಿಮಾ ಆಗಲಿದ್ದು, ಧ್ರುವ ಸರ್ಜಾ ಖಡಕ್ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದಿನ ಪೊಗರು ಸಿನಿಮಾದಲ್ಲಿ ಉದ್ದ ಕೂದಲು ಮತ್ತು ಗಡ್ಡ ಬಿಟ್ಟುಕೊಂಡಿದ್ದ ಅವರಿಗೆ ‘ಮಾರ್ಟಿನ್’ ಚಿತ್ರದಲ್ಲಿ ತುಂಬ ಸ್ಟೈಲಿಶ್ ಆದಂತಹ ಲುಕ್ ಇರಲಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ನಲ್ಲಿ ಧ್ರುವ ಮಿಂಚಿದ್ದಾರೆ. ಈಗ ‘ಮಾರ್ಟಿನ್’ಗಾಗಿ ಅವರು ಹೇರ್ ಸ್ಟೈಲ್ ಬದಲಾಯಿಸಿಕೊಂಡಿರುವ ಮೇಕಿಂಗ್ ವಿಡಿಯೋ ಕೂಡ ಗಮನ ಸೆಳೆಯುತ್ತಿದೆ. ಉದಯ್ ಕೆ. ಮೆಹ್ತಾ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಹೀರೋ ಪಾತ್ರದ ಹೆಸರನ್ನೇ ಚಿತ್ರದ ಶೀರ್ಷಿಕೆಯನ್ನಾಗಿ ಇಡಲಾಗುತ್ತದೆ. ಅದೇ ರೀತಿ ‘ಮಾರ್ಟಿನ್’ ಚಿತ್ರದಲ್ಲಿ ಧ್ರುವ ಸರ್ಜಾ ಅವರ ಪಾತ್ರದ ಹೆಸರು ಮಾರ್ಟಿನ್ ಆಗಿರುತ್ತದೆ ಎಂಬುದು ಬಹುತೇಕರ ಊಹೆ. ಆದರೆ ಅದು ನಿಜವಲ್ಲ ಎಂದು ಧ್ರುವ ಸರ್ಜಾ ಆರಂಭದಲ್ಲಿಯೇ ಸ್ಪಷ್ಟಪಡಿಸುತ್ತಿದ್ದಾರೆ. ‘ಮಾರ್ಟಿನ್ ಎಂಬುದು ಒಂದು ಹೆಸರು. ಆದರೆ ಈ ಚಿತ್ರದಲ್ಲಿ ನಾನು ಮಾರ್ಟಿನ್ ಅಲ್ಲ. ಅದು ಯಾರು ಎಂಬುದು ಸಿನಿಮಾ ನೋಡಿದ ಮೇಲೆ ತಿಳಿಯಲಿದೆ. ಅದಕ್ಕಾಗಿಯೇ ಈ ಟೀಸರ್ನಲ್ಲಿ Who is Martin ಎಂಬ ಡೈಲಾಗ್ ಇದೆ’ ಎಂದಿದ್ದಾರೆ ಧ್ರುವ ಸರ್ಜಾ.
ಇದನ್ನೂ ಓದಿ:
‘ದುಬಾರಿ ಸಿನಿಮಾ ಖಂಡಿತಾ ಮಾಡ್ತೀವಿ’; ಜೊತೆಯಾಗಿ ನಿಂತು ಸ್ಪಷ್ಟನೆ ನೀಡಿದ ಧ್ರುವ ಸರ್ಜಾ-ನಂದಕಿಶೋರ್
ಧ್ರುವ ಸರ್ಜಾ-ಪ್ರೇಮ್ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ; ಗಾಂಧಿನಗರದಲ್ಲಿ ಭರ್ಜರಿ ಮಾತುಕತೆ