ಅದ್ದೂರಿ ಮೆರವಣಿಗೆ, ಹೂವಿನ ಮಳೆ; ಪಾವಗಡದಲ್ಲಿ ಮಂಜುಗೆ ಸ್ವಾಗತ ಹೇಗಿತ್ತು ನೋಡಿ
ಮಂಜು ಅವರನ್ನು ಕಾರಿನ ಮೇಲೆ ಕರೆದುಕೊಂಡು ಹೋಗಿ ಮೆರವಣಿಗೆ ಮಾಡಲಾಗಿದೆ. ಹೂವಿನ ಮಳೆ ಸುರಿದು ಅಭಿಮಾನಿಗಳು ಮಂಜು ಅವರನ್ನು ಸ್ವಾಗತಿಸಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 8ರ ವಿನ್ನರ್ ಮಂಜು ಅವರು ತಮ್ಮ ಹುಟ್ಟೂರು ಪಾವಗಡದ ಮೇಲೆ ಸಾಕಷ್ಟು ಅಭಿಮಾನ ಹೊಂದಿದ್ದಾರೆ. ಬಿಗ್ ಬಾಸ್ ಗೆದ್ದ ನಂತರದಲ್ಲಿ ಮಾಧ್ಯಮಗಳಿಗೆ ಸಂದರ್ಶನ ನೀಡುವುದು, ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ಅಭಿಮಾನಿಗಳ ಜತೆ ಚರ್ಚೆ ನಡೆಸುವುದರಲ್ಲಿ ಮಂಜು ಬ್ಯುಸಿಯಾಗಿದ್ದರು. ಈಗ ಅವರು ಒಂದು ವಾರದ ಬಳಿಕ ತಮ್ಮ ಹುಟ್ಟೂರಿಗೆ ತೆರಳಿದ್ದಾರೆ. ಅಲ್ಲಿ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ.
ಮಂಜು ಅವರನ್ನು ಕಾರಿನ ಮೇಲೆ ಕರೆದುಕೊಂಡು ಹೋಗಿ ಮೆರವಣಿಗೆ ಮಾಡಲಾಗಿದೆ. ಹೂವಿನ ಮಳೆ ಸುರಿದು ಅಭಿಮಾನಿಗಳು ಮಂಜು ಅವರನ್ನು ಸ್ವಾಗತಿಸಿದ್ದಾರೆ. ಈ ಸ್ವಾಗತ ನೋಡಿ ಮಂಜು ಸಾಕಷ್ಟು ಖುಷಿಪಟ್ಟಿದ್ದಾರೆ. ಅವರ ಸ್ವಾಗತ ಹೇಗಿತ್ತು ಎನ್ನುವುದಕ್ಕೆ ಇಲ್ಲಿದೆ ವಿಡಿಯೋ. ಅಂದಹಾಗೆ, ಆಗಸ್ಟ್ 8ರಂದು ಕನ್ನಡ ಬಿಗ್ ಬಾಸ್ ಸೀಸನ್ 8ರ ಫಿನಾಲೆ ನಡೆದಿತ್ತು.
ಇದನ್ನೂ ಓದಿ: ನಿಮ್ಮದು ಸುದೀಪ್ ಜಾತಿಯೇ ಆಗಿದ್ರಿಂದ ಬಿಗ್ಬಾಸ್ ಟ್ರೋಫಿ ಸಿಕ್ತು ಎಂದವರಿಗೆ ಖಡಕ್ ಉತ್ತರ ಕೊಟ್ಟ ಮಂಜು ಪಾವಗಡ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ

