ಮಹಿಳೆಯರಿಗೆ ಸ್ವಾತಂತ್ರ್ಯ ಇರುತ್ತೆ ಎನ್ನುತ್ತಿದೆ ತಾಲಿಬಾನ್; ನಂಬುತ್ತಿಲ್ಲ ಅಫ್ಗಾನಿಸ್ತಾನದ ಸ್ತ್ರೀಯರು, ಅಮೆರಿಕ ಬಗ್ಗೆ ಮಡುಗಟ್ಟಿದೆ ಅಕ್ರೋಶ

Afghanistan Women: ಈ ಕರಾಳ ನೆನಪುಗಳ ಕಾರಣಕ್ಕೇ ಅಫ್ಗನ್ ಮಹಿಳೆಯರು ತಾಲಿಬಾನ್ ಎಂದರೆ ಬೆಚ್ಚಿಬೀಳುತ್ತಿದ್ದಾರೆ.

ಮಹಿಳೆಯರಿಗೆ ಸ್ವಾತಂತ್ರ್ಯ ಇರುತ್ತೆ ಎನ್ನುತ್ತಿದೆ ತಾಲಿಬಾನ್; ನಂಬುತ್ತಿಲ್ಲ ಅಫ್ಗಾನಿಸ್ತಾನದ ಸ್ತ್ರೀಯರು, ಅಮೆರಿಕ ಬಗ್ಗೆ ಮಡುಗಟ್ಟಿದೆ ಅಕ್ರೋಶ
ಕರಾಳ ಭವಿಷ್ಯದ ಭೀತಿಯಲ್ಲಿ ಅಫ್ಗಾನಿಸ್ತಾನದ ಮಹಿಳೆಯರು.
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 15, 2021 | 10:21 PM

ಕಾಬೂಲ್: ಅಫ್ಗಾನಿಸ್ತಾನದ ಪ್ರಜಾಸತ್ತಾತ್ಮ ಸರ್ಕಾರ ಅಧಿಕೃತವಾಗಿ ಪತನಗೊಂಡಿದ್ದು ತಾಲಿಬಾನ್ ಉಗ್ರರು ರಾಷ್ಟ್ರ ರಾಜಧಾನಿಯ ಅಧ್ಯಕ್ಷರ ಅರಮನೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ತಾಲಿಬಾನ್ ಉಗ್ರರ ಆಡಳಿತವನ್ನು ಈ ಹಿಂದೆ ಐದು ವರ್ಷ (1996ರಿಂದ 2001) ಅನುಭವಿಸಿರುವ ಅಫ್ಗನ್ ಪ್ರಜೆಗಳು ಅಕ್ಷರಶಃ ದಿಗ್ಭ್ರಾಂತರಾಗಿದ್ದಾರೆ. ತಮ್ಮನ್ನು ಈ ಸ್ಥಿತಿಗೆ ದೂಡಿದ ಅಮೆರಿಕದ ಬಗ್ಗೆ ಅವರಲ್ಲಿ ಆಕ್ರೋಶ ಮಡುಗಟ್ಟಿದೆ.

ಈ ನಡುವೆ ಕಾಲಕ್ಕೆ ತಕ್ಕಂತೆ ನಾವೂ ಬದಲಾಗಿದ್ದೇವೆ ಎಂದು ಪರೋಕ್ಷವಾಗಿ ಹೇಳಿರುವ ತಾಲಿಬಾನ್ ಉನ್ನತ ಕಮಾಂಡರ್​ಗಳು, ಜನರು ಹೆದರುವ ಅಥವಾ ದೇಶ ತೊರೆಯುವ ಅಗತ್ಯವಿಲ್ಲ. ಮಹಿಳೆಯರಿಗೆ ವಿದ್ಯಾಭ್ಯಾಸ ಮತ್ತು ಉದ್ಯೋಗ ಹಕ್ಕು ಮುಂದುವರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಈ ವಾಕ್ಯದ ಬೆನ್ನಿಗೇ ಮಹಿಳೆಯರು ಹಿಜಾಬ್ ತೊಡುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ಅವಧಿಯ ತಾಲಿಬಾನ್ ಅಡಳಿತದಲ್ಲಿ ಅಕ್ರಮ ಸಂಬಂಧ ಆರೋಪದ ಮೇಲೆ ಮಹಿಳೆಯರನ್ನು ಕಲ್ಲುಗಳಿಂದ ಹೊಡೆದು ಸಾಯಿಸುವುದು, ಛಡಿಯೇಟಿನ ಶಿಕ್ಷೆ ವಿಧಿಸುವುದು ಸಾಮಾನ್ಯ ಎನಿಸಿತ್ತು. ಐದು ವರ್ಷಗಳ ಅವಧಿಯಲ್ಲಿ ಮಹಿಳೆಯರು ನರಕಯಾತನೆ ಅನುಭವಿಸಿದ್ದರು. ಈ ಕರಾಳ ನೆನಪುಗಳ ಕಾರಣಕ್ಕೇ ಅಫ್ಗನ್ ಮಹಿಳೆಯರು ತಾಲಿಬಾನ್ ಎಂದರೆ ಬೆಚ್ಚಿಬೀಳುತ್ತಿದ್ದಾರೆ.

ಕಾಬೂಲ್ ವಶಕ್ಕೆ ಪಡೆದುಕೊಂಡ ನಂತರ ಶಿಕ್ಷೆಗಳ ಬಗ್ಗೆ ಮಾತನಾಡಿರುವ ತಾಲಿಬಾನ್ ವಕ್ತಾರರು, ‘ವಿಚಾರಣೆ ನಡೆಸಿ ಶಿಕ್ಷೆ ನೀಡುವ ಅಧಿಕಾರವನ್ನು ನ್ಯಾಯಾಲಯಗಳಿಗೆ ಬಿಟ್ಟುಕೊಡುತ್ತೇವೆ. ಮಾಧ್ಯಮಗಳ ಮುಕ್ತ ಕಾರ್ಯನಿರ್ವಹಣೆಗೂ ಅವಕಾಶ ಕೊಡುತ್ತೇವೆ. ಪತ್ರಕರ್ತರು ಯಾರನ್ನು ಬೇಕಾದರೂ ಟೀಕಿಸಬಹುದು. ಆದರೆ ಅವರೆಂದೂ ಕಾರ್ಯನಿರ್ವಹಣೆಗೆ ನಾವು ಅಡ್ಡಿಪಡಿಸುವುದಿಲ್ಲ. ಆದರೆ ಯಾವೊಬ್ಬ ವ್ಯಕ್ತಿಯ ಚಾರಿತ್ರ್ಯಕ್ಕೆ ಕಳಂಕು ಬಳಿಯುವಂಥ ಸುದ್ದಿ ಪ್ರಕಟಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ತಾಲಿಬಾನ್ ವಕ್ತಾರರ ಈ ಹೇಳಿಕೆಯೂ ಅಲ್ಲಿನ ಮಹಿಳೆಯರಲ್ಲಿ ಭರವಸೆ ತುಂಬಿಲ್ಲ. ಕಂದಹಾರ್​ ನಗರವನ್ನು ತಾಲಿಬಾನ್ ತನ್ನ ಸುಪರ್ದಿಗೆ ತೆಗೆದುಕೊಂಡ ತಕ್ಷಣ ಅಲ್ಲಿನ ಅಝೀಜಿ ಬ್ಯಾಂಕ್​ನಲ್ಲಿದ್ದ ಒಂಬತ್ತು ಮಹಿಳಾ ಉದ್ಯೋಗಿಗಳಿಗೆ ಕೆಲಸ ಬಿಡುವಂತೆ ಸೂಚಿಸಿತ್ತು. ಅದೇ ಮಹಿಳೆಯರ ಪುರುಷ ಸಂಬಂಧಿಗಳಿಗೆ ಈ ಕೆಲಸ ಕೊಡುವುದಾಗಿ ತಾಲಿಬಾನ್ ಆಡಳಿತಗಾರರು ಹೇಳಿದ್ದರು.

ಅಫ್ಗಾನಿಸ್ತಾನದಲ್ಲಿರುವ ವಿದೇಶಿಯರು ದೇಶ ತೊರೆಯಲು ಅವಕಾಶ ನೀಡುತ್ತೇವೆ. ಒಂದು ವೇಳೆ ಇಲ್ಲಿಯೇ ಅವರು ಉಳಿಯಲು ಬಯಸಿದರೆ ತಾಲಿಬಾನ್ ಆಡಳಿತದೊಂದಿಗೆ ನೋಂದಾಯಿಸಿಕೊಳ್ಳಬೇಕು. ಅಫ್ಗಾನಿಸ್ತಾನದ ಜನರು ಎಲ್ಲಿಗೂ ಹೋಗುವ ಅಗತ್ಯವಿಲ್ಲ. ಇಲ್ಲಿಯೇ ಉಳಿದು ದೇಶದ ಭವಿಷ್ಯ ನೋಡಬೇಕು ಎಂದು ತಾಲಿಬಾನ್ ವಕ್ತಾರ ಹೇಳಿದ್ದಾರೆ.

ಅಫ್ಗನ್ ಸೇನೆಯು ಆಘಾತಕಾರಿ ಸೋಲಿನ ಸರಮಾಲೆಗಳ ಬೆನ್ನಲ್ಲೇ ತಾಲಿಬಾನ್ ಉಗ್ರರು ಕಾಬೂಲ್ ವಶಪಡಿಸಿಕೊಂಡಿದ್ದಾರೆ. ಸರ್ಕಾರಿ ಸೇನೆಯನ್ನು ಯುದ್ಧಕೋರ ನಾಯಕರ ಕೈಗೆ ಒಪ್ಪಿಸಿದ್ದ ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಸರ್ಕಾರ ತನ್ನ ತಪ್ಪುಗಳಿಗೆ ತಕ್ಕ ಬೆಲೆಯನ್ನೇ ತೆತ್ತಿದೆ. ಕಾಬೂಲ್​ನಲ್ಲಿ ಸೇನಾ ಜಮಾವಣೆ ಮಾಡುವ ಯತ್ನ ವಿಫಲವಾದ ಹಿನ್ನೆಲೆಯಲ್ಲಿ ಕೊನೆಯ ಹಂತದಲ್ಲಿ ಶಾಂತಿ ಮಾತುಕತೆಗೆ ಅನಿವಾರ್ಯವಾಗಿ ಮುಂದಾಗಬೇಕಾಯಿತು. ಇದೀಗ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದಿದ್ದು, ತಾಲಿಬಾನ್ ಮತ್ತೆ ಅಫ್ಗಾನಿಸ್ತಾನವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ.

(Women will have freedom foreigners can leave says Taliban spokesperson in Kabul)

ಇದನ್ನೂ ಓದಿ: ತಾಲಿಬಾನ್ ಕಬ್ಜಕ್ಕೆ ಕಾಬೂಲ್: ಉಗ್ರಗಾಮಿಗಳಿಂದ ಅಧಿಕೃತ ಹೇಳಿಕೆ, ಅಫ್ಗಾನಿಸ್ತಾನ ತೊರೆದ ಅಧ್ಯಕ್ಷ ಅಶ್ರಫ್ ಘನಿ

ಇದನ್ನೂ ಓದಿ: ಅಫ್ಗಾನಿಸ್ತಾನದ ಅಭಿವೃದ್ಧಿಗೆ ಭಾರತ ಖರ್ಚು ಮಾಡಿತ್ತು 2 ಲಕ್ಷ ಕೋಟಿ ರೂಪಾಯಿ: ಏನಾಗಲಿದೆ ಅದರ ಭವಿಷ್ಯ?

Published On - 10:17 pm, Sun, 15 August 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ