Afghanistan: ಅಫ್ಘಾನಿಸ್ತಾನದ ಪತನ; ಆತುರಗೆಟ್ಟ ದೊಡ್ಡಣ್ಣ ಜೋ ಬೈಡನ್​ ಯಾಮಾರಿದ್ದು ಎಲ್ಲಿ? ಮುಂದೇನು?

Joe Biden: ಚೀನಾ, ರಷ್ಯಾವನ್ನು ಮರೆತುಬಿಟ್ಟು, ತಾಲೀಬಾನಿಗಳ ತಾಕತ್ತಿನ ಬಗ್ಗೆ ಕಡಿಮೆ ಅಂದಾಜು ಹಾಕಿದ ಅಮೆರಿಕದ ದೊಡ್ಡಣ್ಣ ಬೈಡನ್​ ಅಮೆರಿಕ ಪಡೆಗಳು ಸಾಮಾನ್ಯವೇನಲ್ಲ? 2 ದಶಕಗಳಿಂದ ಹೋರಾಡಿ, ಅಲ್ಲಿನ ಸರ್ಕಾರವನ್ನು ಸಂಪೂರ್ಣವಾಗಿ ಸಜ್ಜುಗೊಳಿಸಿದೆ. ಆಫ್ಘನ್​ ಸರ್ಕಾರ ಸ್ವತಂತ್ರವಾಗಿ ನಿಲ್ಲಬಲ್ಲದು. ತಾಲೀಬಾನಿಗಳು ಚಿಗುತುಕೊಳ್ಳುವುದಕ್ಕೆ ಅವಕಾಶವನ್ನೇ ನೀಡುವುದಿಲ್ಲ. ಸರ್ಕಾರ, ಮಿಲಿಟರಿ ಸುಭದ್ರವಾಗಿ, ಸಶಕ್ತವಾಗಿದೆ. ಡೋಂಟ್​ ವರಿ ಅಂದುಬಿಟ್ಟರು. ಈಗ ಜಗತ್ತಿಗೆ ವರಿ ಜಾಸ್ತಿಯಾಗಿದೆ.

Afghanistan: ಅಫ್ಘಾನಿಸ್ತಾನದ ಪತನ; ಆತುರಗೆಟ್ಟ ದೊಡ್ಡಣ್ಣ ಜೋ ಬೈಡನ್​ ಯಾಮಾರಿದ್ದು ಎಲ್ಲಿ? ಮುಂದೇನು?
ಜೋ ಬೈಡನ್​
Follow us
TV9 Web
| Updated By: ಸಾಧು ಶ್ರೀನಾಥ್​

Updated on:Aug 16, 2021 | 9:25 AM

ಅಂಖಂಡ ಭಾರತದ ಕೂಸಾದ ಗಾಂಧಾರ ದೇಶ ಅಂದರೆ ಇದೀಗತಾನೆ ಮತ್ತೆ ತಾಲೀಬಾನಿಗಳ ಕೈವಶವಾಗಿರುವ ಅಫ್ಘಾನಿಸ್ತಾನ ಎಂಬ ನತದೃಷ್ಟ ರಾಷ್ಟ್ರ ಮತ್ತೆ ದು:ಸ್ಥಿತಿಗೆ ತಳ್ಳಲ್ಪಟ್ಟಿದೆ. ಎರಡು ದಶಕಗಳ ಹಿಂದೆ ಚಾಲ್ತಿಯಲ್ಲಿದ್ದ ಇಸ್ಲಾಮಿಕ್​ ರಿಪಬ್ಲಿಕ್​ ಆಫ್​ ಅಫ್ಘಾನಿಸ್ತಾನ (Islamic Republic of Afghanistan) ಮರುಸ್ಥಾಪನೆಗೊಂಡಿದೆ.

ಅಮೆರಿಕದ 46ನೇ ಅಧ್ಯಕ್ಷರಾಗಿ ಜೋಸೆಫ್ ರೊಬಿನೆಟ್ಟ್ (ಜೊ) ಪ್ರಮಾಣ ವಚನ ಸ್ವೀಕರಿಸಿದ್ದು 2021ರ ಜನವರಿ 20ರಂದು. ದೊಡ್ಡಣ್ಣ ಜೋ ಬೈಡನ್​ ಅಧಿಕಾರಕ್ಕೆ ಬಂದು ತಿಂಗಳುಗಳು ಸಹ ಕಳೆದಿರಲಿಲ್ಲ. ಅಪ್ಪಟ ಶಾಂತಿದೂತನಂತೆ ವರ್ತಿಸಿದ ದೊಡ್ಡಣ್ಣ ಜೋ ಬೈಡನ್ ಇಡೀ ವಿಶ್ವವನ್ನು ಅದರಲ್ಲೂ ಅಫ್ಘಾನಿಸ್ತಾನ ಎಂಬ ಮತಾಂಧ ಅಫೀಮು ರಾಷ್ಟ್ರ ಸ್ವತಂತ್ರವಾಗಿ ಇರಲಿ ಎಂದು ಬಯಸಿ,  2 ದಶಕಗಳಿಂದ ಅಲ್ಲಿ ನೆಲೆಸಿದ್ದ ತನ್ನದೇ ಸೇನೆ ಮತ್ತು ಮಿತ್ರ ಪಡೆಗಳನ್ನು ಎಕ್ದಂ ಅಲ್ಲಿಂದ ವಾಪಸ್ ಕರೆಯಿಸಿಕೊಳ್ಳುವ ಅನಾಹುತಕಾರಿ ನಿರ್ಧಾರವನ್ನು ಪ್ರಕಟಿಸಿದರು.

2 ದಶಕಗಳ ಹಿಂದೆ ಅವಳಿ ಗೋಪುರಗಳನ್ನು ಧ್ವಂಸಗೊಳಿಸಿ, ತನ್ನ ಮಣ್ಣುಮುಕ್ಕಿಸಿದ್ದ ಅಲ್​ ಕೈದಾ ಉಗ್ರರಿಗೆ ಸರಿಯಾಗಿ ಪಾಠ ಕಲಿಸಬೇಕು ಎಂದು ಪ್ರತೀಕಾರದ ಮನಸಿನೊಂದಿಗೆ ಆಫ್ಘನ್​​ನಲ್ಲಿ ಕಾಲೂರಿದ್ದ ಅಮೆರಿಕ ಸೇನಾಪಡೆಗಳು ಒಂದೆರಡು ತಿಂಗಳ ಹಿಂದೆ ಅಲ್ಲಿಂದ ಕಾಲ್ತೆಗೆಯಲು ನಿರ್ಧರಿಸಿತ್ತು. ಅದರಂತೆ ಅಮೆರಿಕದ ಪಡೆಗಳು ಒಂದೊಂದಾಗಿ ಅಲ್ಲಿಂದ ವಾಪಸ್​ ಸಹ ಆಗಿಬಿಟ್ಟವು.

ಅದು ನಿಜಕ್ಕೂ ಯಡವಟ್ಟಿನ, ಆತುರಗೆಟ್ಟ ನಿರ್ಧಾರ ಎಂಬುದು ಇಡೀ ಜಗತ್ತಿಗೆ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಕ್ಷಿಪ್ರವಾಗಿ ಚಿಗುತುನಿಂತ ತಾಲೀಬಾನಿಗಳು ನಾವಿನ್ನೂ ಜಿಂದಾ ಇದ್ದೇವೆ ಎಂದು ಸಾರಿದರು. ವಿಥಿನ್ ನೋ ಟೈಂ ಅನ್ನುವಂತೆ ಸಾರಾಸಗಟಾಗಿ ಆಫ್ಘನ್​​ಅನ್ನು ತನ್ನ ಕಬ್ಜಾಗೆ ತೆಗೆದುಕೊಂಡುಬಿಟ್ಟರು. ಏನಾಗುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಬೈಡನ್ ಕಣ್ಣುಬಿಟ್ಟು ನೋಡುವಷ್ಟರಲ್ಲಿ, ಅತ್ತ ಚೀನಾ ಮತ್ತು ರಷ್ಯಾದ ಕುಮ್ಮಕ್ಕಿನೊಂದಿಗೆ ತಾಲೀಬಾನಿ ಪಡೆ ಅಫ್ಘಾನಿಸ್ತಾನ ಸರ್ಕಾರವನ್ನು ಹೊಡೆದುರುಳಿಸಿ, ತಮ್ಮ ಉಗ್ರ ಬಾವುಟವನ್ನು ನೆಟ್ಟಿಯೇಬಿಟ್ಟಿತು.

ಅಲ್ಲಿಗೂ ಅದೊಮ್ಮೆ ವೈಟ್​​ಹೌಸ್​ ಪತ್ರಕರ್ತರು, ದೊಡ್ಡಣ್ಣ ನೀವು ಆಫ್ಘನ್​​ನಿಂದ ಅಮೆರಿಕದ ಪಡೆಗಳನ್ನು ವಾಪಸ್​​ ಕರೆಯಿಸಿಕೊಳ್ಳುವುದಾಗಿ ಹೇಳಿದಿರಿ. ಆದರೆ ಅದು ಕಾರ್ಯಾಸಾಧುವೇ? ಸ್ವಲ್ಪ ಯೋಚಿಸಿ ಹೇಳಿ. ಅಸಲಿಗೆ ಅಲ್ಲಿನ ಅಫ್ಘನ್​ ಸರ್ಕಾರ ಸ್ವತಂತ್ರವಾಗಿ ನಿಂತು ಆಡಳಿತ ನಡೆಸುವಷ್ಟು ಶಕ್ತವಾಗಿದೆಯೇ? ತಾಲೀಬಾನಿಗಳು ಮತ್ತೆ ತಮ್ಮ ಭಾನಗಡಿ ಶುರುವಚ್ಚಿಕೊಂಡರೆ ಪ್ಲಾನ್​​ ಬಿ ಅಂತೇನಾದರೂ ನಿಮ್ಮ ಬಳಿ ಪ್ಲಾನ್​ ಇದೆಯಾ? ಎಂದು ಪ್ರಶ್ನಾವಳಿ ಹಾಕಿದರು.

ವೈಟ್​​ಹೌಸ್​ ಪತ್ರಕರ್ತರ ಎದುರು ಚಿಕ್ಕಮಕ್ಕಳಂತೆ ಕೂಡಿ-ಕಳೆದು ಹೇಳಿದ ಲೆಕ್ಕಾಚಾರ ಏನಿತ್ತು?

How Did Afghan Military Collapse So Quickly_ where did us president joe biden erred_

ವೈಟ್​​ಹೌಸ್​ ಪತ್ರಕರ್ತರ ಎದುರು ಚಿಕ್ಕಮಕ್ಕಳಂತೆ ಕೂಡಿ-ಕಳೆದು ಹೇಳಿದ ಲೆಕ್ಕಾಚಾರ ಏನಿತ್ತು?

ಆದರೆ ಅದಾಗಲೇ ದೊಡ್ಡಣ್ಣ ಬೈಡನ್​ ಯಾಮಾರಿಯಾಗಿತ್ತು. ಅದ್ಯಾವ ವಿದೇಶ ನೀತಿಗಳನ್ನು ಅರಿತುಕುಡಿದಿದ್ದರೋ ಚೀನಾ ಮತ್ತು ರಷ್ಯಾವನ್ನು ಮರೆತೇಬಿಟ್ಟು, ತಾಲೀಬಾನಿಗಳ ತಾಕತ್ತಿನ ಬಗ್ಗೆ ಕಡಿಮೆ ಅಂದಾಜು ಹಾಕಿದರು. ಎಲ್ಲಾದರೂ ಉಂಟಾ? ನಮ್ಮ ಅಮೆರಿಕ ಪಡೆಗಳು ಸಾಮಾನ್ಯವೇನಲ್ಲ? 2 ದಶಕಗಳಿಂದ ಹೋರಾಡಿ, ಅಲ್ಲಿನ ಸರ್ಕಾರವನ್ನು ಸಂಪೂರ್ಣವಾಗಿ ಸಜ್ಜುಗೊಳಿಸಿದೆ. ಆಫ್ಘನ್​ ಸರ್ಕಾರ ಸ್ವತಂತ್ರವಾಗಿ ನಿಲ್ಲಬಲ್ಲದು. ತಾಲೀಬಾನಿಗಳು ಚಿಗುತುಕೊಳ್ಳುವುದಕ್ಕೆ ಅವಕಾಶವನ್ನೇ ನೀಡುವುದಿಲ್ಲ. ಸರ್ಕಾರ, ಮಿಲಿಟರಿ ಸುಭದ್ರವಾಗಿ, ಸಶಕ್ತವಾಗಿದೆ. ಡೋಂಟ್​ ವರಿ ಅಂದುಬಿಟ್ಟರು. ಸಾಲದು ಅಂತಾ ಕಂಪಾರಿಷನ್​ಗೆ ಇಳಿದುಬಿಟ್ಟರು.

ಚಿಕ್ಕಮಕ್ಕಳಂತೆ ಪೆದ್ದುಪೆದ್ದಾಗಿ ಕೂಡಿಕಳೆದು ಒಂದು ಲೆಕ್ಕಾಚಾರವನ್ನು ಮುಂದಿಟ್ಟರು. ಆದರೆ ಅಲ್ಲಿ ಮುತ್ಸದ್ಧಿತನ ಇರಲೇ ಇಲ್ಲ. ಆಫ್ಘನ್ ಪಡೆಗಳ ಸಂಖ್ಯೆ ಬರೋಬ್ಬರಿ 3 ಲಕ್ಷ ಇದೆ. ಆಫ್ಘನ್ ಸೇನಾ ಪಡೆಗಳನ್ನು ಅತ್ಯಾಧುನಿಕವಾಗಿ ಸಶಸ್ತ್ರಗೊಳಿಸಿದ್ದೇವೆ. ಮುಖ್ಯವಾಗಿ ಅಲ್ಲಿನ  ಜನ ಮುಖ್ಯವಾಹಿನಿಗೆ ಬರಲು ಬಯಸಿದ್ದು, ತಾಲೀಬಾನಿಗಳಿಗೆ ಜನರೂ ಸಹ ಸಹಕಾರ ನೀಡುವುದಿಲ್ಲ ಬಿಡಿ. ಅಸಲಿಗೆ ತಾಲೀಬಾನಿಗಳು ಬಹುತೇಕ ನಿರ್ನಾಮವಾಗಿದ್ದು ಜಸ್ಟ್​ 75 ಸಾವಿರ ಮಂದಿಯಷ್ಟೇ ಅಲ್ಲಿದ್ದಾರೆ. ಅವರು ಯಾವ ಮಹಾ ಬಿಡಿ. ಅಮೆರಿಕನ್​ ಟ್ರೈನ್ಡ್​​ ಆಫ್ಘನ್​ ಪಡೆಗಳ ಮುಂದೆ ತಾಲೀಬಾನಿಗಳ ಹೋಲಿಕೆಯನ್ನೂ ಮಾಡಬೇಡಿ ಎಂದು ಶ್ವೇತ ಭವನದ ಪತ್ರಕರ್ತರನ್ನು ದಂಗುಬಡಿಸಿದ್ದರು ದೊಡ್ಡಣ್ಣ ಬೈಡನ್. ಇದರಿಂದ, ಅಫಘಾನಿಸ್ತಾನವನ್ನು ಶಾಂತಿಯ ತೋಟವನ್ನಾಗಿ ಮಾಡಬೇಕೆಂದು 2 ದಶಕಗಳ ಕಾಲ ಭಾರತ, ಅಮೆರಿಕ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಕಂಡಿದ್ದ ಕನಸು ನುಚ್ಚುನೂರಾಗುವ ಸನಿಹಕ್ಕೆ ಬಂದುನಿಂತಿತ್ತು.

ದೊಡ್ಡಣ್ಣ ಬೈಡನ್​ ಅಫಘಾನಿಸ್ತಾನಕ್ಕೆ ಬೈ ಬೈ ಹೇಳುತ್ತಾ, ತನ್ನ ಪಡೆಗಳನ್ನು ವಾಪಸ್​ ಕರೆಯಿಸಿಕೊಳ್ಳುವ ನಿರ್ಧಾರ ಪ್ರಕಟಿಸಿದ್ದೇ ತಡ, ಪಾಪಿ ತಾಲೀಬಾನಿಗಳು ದಿಢಿಗ್ಗನೆ ಮರುಕ್ಷಣವೇ ಎದ್ದುಕುಳಿತುಬಿಟ್ಟರು. ಓಹ್ಹೋ ಅಮೆರಿಕಾ ಸೈನಿಕರು ಹೋಗಿಬಿಟ್ಟರಂತೆ ಎಂದು ರಣಕೇಕೆ ಹಾಕತೊಡಗಿದರು. ಒಂದಿನಿತೂ ತಡಮಾಡದೆ ಒಂದೊಂದೇ ಭಾಗಗಳನ್ನು, ಆಯಕಟ್ಟಿನ ರಕ್ಷಣಾ ಸ್ಥಳಗಳನ್ನು ಆಪೋಶನ ತೆಗೆದುಕೊಂಡುಬಿಟ್ಟರು. ಕೊನೆಗೆ ಅಧ್ಯಕ್ಷನಾದವನು ಕದ್ದುಮುಚ್ಚಿ ಪಕ್ಕದ ರಾಷ್ಟ್ರಕ್ಕೆ ಪಲಾಯನಗೈದುಬಿಟ್ಟ.

ಇದರೊಂದಿಗೆ ಆಫ್ಘನಿಸ್ತಾನದ ಚರಿತ್ರೆಯೊಂದು ಒಂದು ಹಂತಕ್ಕೆ ಬಂದು ನಿಂತಿದೆ. ಮುಂದಿದೆ ಮಾರಿ ಹಬ್ಬ ಎಂಬಂತೆ ಅದಾಗಲೇ ತಾಲೀಬಾನಿಗಳು ಪಟಾಕಿ ಹೊಡೆದು, ಉಗ್ರ ಹಬ್ಬ ಆಚರಿಸುತ್ತಿದ್ದಾರೆ. ಇದರಿಂದ ಭಾರತದಂತಹ ರಾಷ್ಟ್ರಗಳೂ ಸಹ ತೊಂದರೆಗೊಳಗಾಗುವುದು ಖಚಿತ. ಐದಾರು ವರ್ಷಗಳಿಂದ ಚಿಕ್ಕ ಭಯೋತ್ಪಾದಕ ಕೃತ್ಯವನ್ನೂ ಕಾಣದ ಭಾರತದಲ್ಲಿ ಯಾವ ಘಳಿಗೆಯಲ್ಲಿ ತಾಲೀಬಾನಿಗಳು ತನ್ನ ಪೈಶಾಚಿಕತೆ ಮೆರೆಯುತ್ತಾರೋ ಎಂಬ ಆತಂಕ ಎದುರಾಗಿದೆ. ಅದಕ್ಕೂ ಮುನ್ನ ತಾಲೀಬಾನಿಗಳು ಅಮೆರಿಕದ ವಿರುದ್ಧ ಹೇಗೆ ಸೇಡು ತೀರಿಸಿಕೊಳ್ಳುತ್ತಾರೋ ಕಾದುನೋಡಬೇಕಿದೆ.

ತಾಲಿಬಾನ್ ಕಬ್ಜಕ್ಕೆ ಕಾಬೂಲ್: ಉಗ್ರಗಾಮಿಗಳಿಂದ ಅಧಿಕೃತ ಹೇಳಿಕೆ, ಅಫ್ಗಾನಿಸ್ತಾನ ತೊರೆದ ಅಧ್ಯಕ್ಷ ಅಶ್ರಫ್ ಘನಿ

(How Did Afghan Military Collapse So Quickly? where did us president joe biden erred?)

Published On - 9:02 am, Mon, 16 August 21

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?