ತಾಲಿಬಾನ್ ವಶಕ್ಕೆ ಕಾಬೂಲ್: 129 ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಮಾನ ಸ್ವದೇಶಕ್ಕೆ ಆಗಮನ
ಅಫ್ಗಾನಿಸ್ತಾನದ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳನ್ನು ಸ್ಥಳಾಂತರ ಮಾಡಲು ಕೂಡ ಭಾರತ ನಿರ್ಧಾರ ಮಾಡಿದೆ. ಅಧಿಕಾರಿಗಳು, ಸಿಬ್ಬಂದಿ ಸ್ಥಳಾಂತರಕ್ಕೆ ಭಾರತ ತೀರ್ಮಾನ ಕೈಗೊಂಡಿದೆ.
ದೆಹಲಿ: ಅಫ್ಘನ್ ರಾಜಧಾನಿ ಕಾಬೂಲ್ನ್ನು ತಾಲಿಬಾನ್ ವಶಕ್ಕೆ ಪಡೆದ ಬೆನ್ನಲ್ಲೇ, ಅಫ್ಗಾನ್ನಲ್ಲಿ ನೆಲೆಸಿರುವ ವಿಶ್ವದ ವಿವಿಧ ದೇಶದ ಪ್ರಜೆಗಳು, ರಾಯಭಾರಿ ಕಚೇರಿ ಖಾಲಿ ಆಗುತ್ತಿದೆ. ಜನರು ಸ್ವದೇಶಗಳಿಗೆ ಮರಳುತ್ತಿದ್ದಾರೆ. ಅಫ್ಘಾನಿಸ್ತಾನದಿಂದ ಭಾರತೀಯರು ವಾಪಸಾಗಿದ್ದಾರೆ. ಕಾಬೂಲ್‌ನಿಂದ ಭಾರತಕ್ಕೆ ಆಗಮಿಸಿರುವ ವಿಮಾನ ಸಂಪೂರ್ಣ ಭರ್ತಿಯಾಗಿ ಬಂದಿರುವ ಮಾಹಿತಿ ಲಭ್ಯವಾಗಿದೆ. ರಾತ್ರಿ 8 ಗಂಟೆಗೆ ಏರ್ ಇಂಡಿಯಾ ವಿಮಾನ ದೆಹಲಿ ತಲುಪಲಿದೆ ಎಂದು ಹೇಳಲಾಗಿತ್ತು. ಇದೀಗ, 129 ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಮಾನ ಸ್ವದೇಶಕ್ಕೆ ಬಂದಿಳಿದಿದೆ. ಅಫ್ಗಾನಿಸ್ತಾನದ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳನ್ನು ಸ್ಥಳಾಂತರ ಮಾಡಲು ಕೂಡ ಭಾರತ ನಿರ್ಧಾರ ಮಾಡಿದೆ. ಅಧಿಕಾರಿಗಳು, ಸಿಬ್ಬಂದಿ ಸ್ಥಳಾಂತರಕ್ಕೆ ಭಾರತ ತೀರ್ಮಾನ ಕೈಗೊಂಡಿದೆ.
ಅಫ್ಘನ್ ರಾಜಧಾನಿ ಕಾಬೂಲ್ನ್ನು ತಾಲಿಬಾನ್ ಸಂಘಟನೆ ವಶಕ್ಕೆ ಪಡೆದಿದೆ. ಇದೀಗ, ಅಫ್ಘನ್ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ಹಾಗೂ ಉಪಾಧ್ಯಕ್ಷ ಅಮರುಲ್ಲಾ ಸಾಹೇಬ್ ಅಧಿಕಾರ ಹಸ್ತಾಂತರಿಸಿ ರಾಜಧಾನಿ ಕಾಬೂಲ್ ತೊರೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಧಿಕಾರ ಹಸ್ತಾಂತರಿಸಿ ಅಫ್ಘನ್ ತೊರೆದಿರುವ ಅಶ್ರಫ್ ಘನಿ, ತಜಿಕಿಸ್ತಾನ್‌ಕ್ಕೆ ತೆರಳಿರುವ ಬಗ್ಗೆ ಕೂಡ ಮಾಹಿತಿ ಲಭ್ಯವಾಗಿದೆ.
ಅಷ್ಟೇ ಅಲ್ಲದೆ, ಕಾಬೂಲ್ನಲ್ಲಿದ್ದ ರಾಯಭಾರ ಕಚೇರಿಯನ್ನು ಜರ್ಮನಿ ಮುಚ್ಚಿದೆ. ಅಫ್ಘನ್‌ನಿಂದ ವಾಪಸಾಗಲು ಜರ್ಮನಿ ತನ್ನ ನಿವಾಸಿಗಳಿಗೆ ಸೂಚನೆ ನೀಡಿದೆ. ಅಮೆರಿಕ ರಾಯಭಾರ ಕಚೇರಿಯ ಅಧಿಕಾರಿಗಳು ಸ್ಥಳಾಂತರ ಆಗಿದ್ದಾರೆ. ಅಧಿಕಾರಿಗಳು, ಎಲ್ಲಾ ಸಿಬ್ಬಂದಿಗಳನ್ನು ವಿಮಾನಗಳ ಮೂಲಕ ಅಮೆರಿಕ ಸೇನೆ ಸ್ಥಳಾಂತರಿಸಿದೆ.
#UPDATE | Air India flight AI244 carrying 129 passengers from Kabul, Afghanistan lands in Delhi https://t.co/p6ZfZ7k81d
— ANI (@ANI) August 15, 2021
ಅಫ್ಗಾನಿಸ್ತಾನದಲ್ಲಿ ಅಸ್ಥಿರತೆ ಬೇರೂರಿರುವ ಹಿನ್ನೆಲೆಯಲ್ಲಿ ಸ್ವತಃ ಅಫ್ಘನ್ ನಿವಾಸಿಗಳು ಕೂಡ ದೇಶ ಬಿಟ್ಟು ತೆರಳುತ್ತಿದ್ದಾರೆ. ಈ ವೇಳೆ, ನಿರಾಶ್ರಿತರನ್ನು ತಡೆಯಲು ಟರ್ಕಿ ದೇಶ ಕಠಿಣ ಕ್ರಮ ಕೈಗೊಂಡಿದೆ. ಟರ್ಕಿ ಸರ್ಕಾರ ತನ್ನ ಗಡಿ ಪ್ರದೇಶದಲ್ಲಿ ಸೇನಾ ಭದ್ರತೆ ಹೆಚ್ಚಿಸಿಕೊಂಡಿದೆ. ಇತ್ತ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆ ನಡೆಸಿದೆ.
ಅಫ್ಘನ್ ರಾಜಧಾನಿ ಕಾಬೂಲ್ ವಶಕ್ಕೆ ಪಡೆದ ತಾಲಿಬಾನ್, ಕಾಬೂಲ್ ನಗರದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ವಶಕ್ಕೆ ಪಡೆದಿದೆ. ತಾಲಿಬಾನ್ ಭಯೋತ್ಪಾದಕರು ಶಸ್ತ್ರಾಸ್ತ ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ತಾಲಿಬಾನ್ ಕಬ್ಜಕ್ಕೆ ಕಾಬೂಲ್: ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ ಉಗ್ರಗಾಮಿ ಸಂಘಟನೆ
126 ಪ್ರಯಾಣಿಕರೊಂದಿಗೆ ಕಾಬೂಲ್‌ನಿಂದ ಹೊರಟಿದೆ ಏರ್ ಇಂಡಿಯಾ ವಿಮಾನ
(Air India flight AI244 carrying 129 passengers from Kabul Afghanistan lands in Delhi)