ಅನೇಕವಾಗಿರುವುದನ್ನು ಒಂದು ಮಾಡಬೇಕು, ಅದಕ್ಕಿರುವ ದಾರಿಯೂ ಒಂದೇ: ಮೋಹನ್ ಭಾಗವತ್

Mohan Bhagwat: ಹೃದಯದ ಪ್ರಾಮಾಣಿಕತೆಯಿಂದ ನಾವು ಹೇಳುತ್ತೇವೆ, ನಾವು ಯಾಕೆ ಒಂದಾಗಿಸುವ ಪ್ರಯತ್ನ ಮಾಡುತ್ತೇವೆ ಎಂದರೆ ನಾವೆಲ್ಲರೂ ಒಂದೇ. ನಮ್ಮ ವಿಚಾರ ಪರಂಪರೆಯೇ ವೈವಿಧ್ಯತೆ ಇದೆ ಎಂದು ಹೇಳುತ್ತದೆ. ನಾವು ಎಲ್ಲರನ್ನೂ ಒಂದೇ ಎಂದು ನೋಡಬೇಕಿದೆ. ನಾವು ಒಂದೇ.ಅದೇ ಸತ್ಯ. ಹಾಗಾಗಿ ನಾವು ಒಂದಾಗಿಯೇ ಇರಬೇಕು.

ಅನೇಕವಾಗಿರುವುದನ್ನು ಒಂದು ಮಾಡಬೇಕು, ಅದಕ್ಕಿರುವ ದಾರಿಯೂ ಒಂದೇ: ಮೋಹನ್ ಭಾಗವತ್
ಮೋಹನ್ ಭಾಗವತ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 15, 2021 | 6:21 PM

ದೆಹಲಿ: ಭಾರತದ 75 ನೇ ಸ್ವಾತಂತ್ರ್ಯೋತ್ಸವ ಮತ್ತು ಯುವ ಸಂಘಟನೆಯಾದ ಐಐಎಂಯುಎನ್ ( I.I.M.U.N -India’s International Movement to Unite Nations) 10 ನೇ ವರ್ಷದ ಆಚರಣೆಯ ಅಂಗವಾಗಿ  ಆರ್​ಎಸ್ಎಸ್  ಮುಖ್ಯಸ್ಥ​​  ಡಾ. ಮೋಹನ್ ಭಾಗವತ್  (Mohan Bhagwat)’ನವ ಭಾರತದ ಕನಸು ಮತ್ತು ಜಗತ್ತಿನ ಐಕ್ಯತೆ- ಭಾರತೀಯ ರೀತಿ’ ಎಂಬ ವಿಷಯದ ಬಗ್ಗೆ  ಮಾತನಾಡಿದ್ದಾರೆ. 

ಭಾಗವತ್ ಭಾಷಣದ ಮುಖ್ಯಾಂ ಶಗಳು ಭಾರತೀಯ ರೀತಿ ಅಂದರೆ ಯಾವುದು? ಈಗ ನೋಡಿ ಶಶ ತರೂರ್ ಅವರ ರೀತಿ ಮತ್ತು ನಮ್ಮ ರೀತಿಯಲ್ಲಿ ವ್ಯತ್ಯಾಸ ಇದೆ. ಅದು ಭಾರತದ ಐಡಿಯಾ ಎಂದು ಹೇಳಿಲ್ಲ. ಇದೇ ದೇಶದ ವೈಶಿಷ್ಟ್ಯ. ನಮ್ಮ ನಿಮ್ಮ ಐಡಿಯಾಗಳು ಬೇರೆ ಆಗಿದ್ದರೂ ಅದರಲ್ಲಿ ಯಾವುದೇ ಪರಿಣಾಮ ಆಗುವುದಿಲ್ಲ. ನಾವು ಎಲ್ಲರೂ ಪರಸ್ಪರ ಒಂದೇ. ನಾವು ಈದೇಶದವರು. ಅಭಿಪ್ರಾಯಗಳು ಬೇರೆ ಬೇರೆ ಇರುತ್ತವೆ. ಇರಲೂ ಬೇಕು. ಈ ಭಿನ್ನತೆ, ವೈವಿಧ್ಯತೆಗಳು ಇಲ್ಲದೇ ಇದ್ದರೆ ಜಗತ್ತು ಬೋರ್ ಆಗುತ್ತಿತ್ತು. ವೈವಿಧ್ಯತೆ ಇರುವ ಕಾರಣವೇ ಬದುಕಿನಲ್ಲಿ ಬಣ್ಣ ಇದೆ. ನಾವು ಈ ವೈವಿಧ್ಯತೆಯನ್ನು ಸ್ವೀಕರಿಸಿದ್ದೇವೆ. ನಾವು ಅದೇ ರೀತಿ ಜಗತ್ತನ್ನು ಅರ್ಥೈಸಿಕೊಂಡಿದ್ದೇವೆ. ವಿವಿಧತೆಯಲ್ಲಿ ಏಕತೆ ಎಲ್ಲರಿಗೂ ಗೊತ್ತಿದೆ.ಅದರಲ್ಲಿಯೂ ಕೆಲವು ಬದಲಾವಣೆ ಬೇಕು ಎಂದು ಅನಿಸುತ್ತದೆ.

Unite For the World ಇದರ ಬಗ್ಗೆ ಮಾತನಾಡುವುದಾದರೆ ಯಾಕೆ ಆಗಬೇಕು? ಇದರ ಉದ್ದೇಶವೇನು? ನಾವು ಕಷ್ಟದಲ್ಲಿದ್ದೇವೆ ಅದಕ್ಕಾಗಿ ಒಂದಾಗಬೇಕು,ನಮ್ಮ ಬೇರೇನಾದರೂ ಉದ್ದೇಶ ಇದೆಯಾ ಅದಕ್ಕಾಗಿ ಜನರನ್ನು ಒಗ್ಗೂಡಿಸಬೇಕು? ಯಾಕೆ ಬೇಕು ಇದೆಲ್ಲಾ? ನಮ್ಮ ನಮ್ಮ ಮನೆಯಲ್ಲಿ ಆರಾಮವಾಗಿದ್ದೇವೆ ಮತ್ತೆ ಯಾಕೆ ಈ ಸಮಸ್ಯೆಯಲ್ಲಿ ಸಿಲುಕಬೇಕು? ಎಂಬ ಪ್ರಶ್ನೆೆಯೇಳುತ್ತದೆ.  ದೇಶವನ್ನು ಒಗ್ಗೂಡಿಸಲು ಇಷ್ಟೆಲ್ಲ ಪ್ರಯತ್ನ ಆಯ್ತು ಅದೆಲ್ಲವೂ ವಿಫಲವಾಯ್ತು. ಯಾಕೆ? ಒಗ್ಗೂಡಿಸಲು ಹೊರಟಿದ್ದರು, ಹೊಸ ಹೊಸ ಕವಲುಗಳು  ಹುಟ್ಟಿಕೊಂಡಿತು. ಹೀಗಿರುವಾಗ ನೀವೇಕೆ ಮಾಡುತ್ತಿದ್ದೀರಿ. ಇದಕ್ಕೆ ಉತ್ತರ ತುಂಬಾ ಸರಳ. ಅದೇ  ದೃಢವಾಗಿ ನಿಲ್ಲುತ್ತದೆ ಕೂಡ. ಈ ಉದ್ದೇಶ Come What may ಈ ಉದ್ದೇಶದಿಂದ ನಾವು ಜಗತ್ತನ್ನು ಒಗ್ಗೂಡಿಸುತ್ತೇವೆ .

ಹೃದಯದ ಪ್ರಾಮಾಣಿಕತೆಯಿಂದ ನಾವು ಹೇಳುತ್ತೇವೆ, ನಾವು ಯಾಕೆ ಒಂದಾಗಿಸುವ ಪ್ರಯತ್ನ ಮಾಡುತ್ತೇವೆ ಎಂದರೆ ನಾವೆಲ್ಲರೂ ಒಂದೇ. ನಮ್ಮ ವಿಚಾರ ಪರಂಪರೆಯೇ ವೈವಿಧ್ಯತೆ ಇದೆ ಎಂದು ಹೇಳುತ್ತದೆ. ನಾವು ಎಲ್ಲರನ್ನೂ ಒಂದೇ ಎಂದು ನೋಡಬೇಕಿದೆ. ನಾವು ಒಂದೇ. ಅದೇ ಸತ್ಯ. ಹಾಗಾಗಿ ನಾವು ಒಂದಾಗಿಯೇ ಇರಬೇಕು. ನಾವು ಒಂದಾಗದಿಂದರೆ ಕೊರತೆ ಏನೂ ಇರಲ್ಲ, ಸುರಕ್ಷಿತವಾಗಿಯೇ ಇರುತ್ತವೆ. ಆದರೂ ನಾವು ಒಂದಾಗಿಯೇ ಇರಬೇಕು. ಅದರಲ್ಲಿ ಸ್ವಾರ್ಥತೆ ಇರಲ್ಲ. honesty of purpose ಇದೆ . ಭಾರತದ ರೀತಿ ಏನು? ಅದು ಇಲ್ಲಿಂದ ಪ್ರಾರಂಭವಾಗುತ್ತದೆ. Bharat Wants to Unite the World Because World Is one. ಅನೇಕವಾಗಿರುವುದನ್ನು ಒಂದು ಮಾಡಬೇಕು, ಅದಕ್ಕಿರುವ ದಾರಿಯೂ ಒಂದೇ ಆಗಿದೆ. ಇನ್ನೊಂದು ಮಾರ್ಗವಿದೆ ಅದೇನೆಂದರೆ ಏಕತೆಯ ಕಲ್ಪನೆಗೆ ಬದ್ಧರಾಗಿರುವವರನ್ನು ಮಾತ್ರ ನಿಲ್ಲಿಸಿ, ಬಾಕಿದ್ದವರನ್ನು ಹೊರ ಹಾಕುವುದು. ಆದರೆ ಇದು ನಮ್ಮ ರೀತಿ ಅಲ್ಲ. ಯಾರು ಒಪ್ಪುತ್ತಾರೋ ಅವರು ಮಾತ್ರ ಇರುವುದು, ಒಪ್ಪದೇ ಇರುವವರನ್ನು ದೂರವಿರಿಸುವುದು ಒಗ್ಗೂಡಿಸುವ ರೀತಿ ಅಲ್ಲ. ಇದು ಎಲಿಮಿನೇಟ್ ಮಾಡುವ ರೀತಿಯಾಗಿದೆ. ಇದು ಯಾವತ್ತೂ ಭಾರತೀಯ ರೀತಿ ಆಗಿರಲಿಲ್ಲ. ವೈವಿಧ್ಯತೆಯನ್ನು ಸ್ವೀಕರಿಸಿಕೊಳ್ಳಬೇಕು, ಅದನ್ನು ಗೌರವಿಸಬೇಕು ಮತ್ತು ಅವುಗಳನ್ನು ದೂರವಿರಿಸದೆಯೇ ಜತೆಯಾಗಿ ಕೊಂಡೊಯ್ಯಬೇಕು ಇದು ನಮ್ಮ ರೀತಿ. ವರ್ಷಗಳ ಹಿಂದೆ ಭಿನ್ನತೆ ಇಲ್ಲಿ ಇದ್ದಿರಬಹುದೇನೋ. ಆದರೆ ಇತಿಹಾಸದ ಪುಟಗಳಲ್ಲಿ ಕಣ್ಣಾಡಿಸಿದರೆ ಇಲ್ಲಿ ವೈವಿಧ್ಯತೆ ಇದ್ದರೂ ನಾವು ಒಂದೇ ಎಂಬುದು ಕಾಣಸಿಗುತ್ತದೆ.

ಕಾರ್ಯಕ್ರಮ ವೀಕ್ಷಿಸಲು ಲಿಂಕ್: www.YouTube.com/iimunofficial.

 ಇದನ್ನೂ ಓದಿ: ಅಫ್ಗಾನಿಸ್ತಾನದ ಅಭಿವೃದ್ಧಿಗೆ ಭಾರತ ಖರ್ಚು ಮಾಡಿತ್ತು 2 ಲಕ್ಷ ಕೋಟಿ ರೂಪಾಯಿ: ಏನಾಗಲಿದೆ ಅದರ ಭವಿಷ್ಯ?

ಇದನ್ನೂ ಓದಿ:  Fortified Rice: ಸಾರವರ್ಧಿತ ಅಕ್ಕಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆ ಮಹತ್ವದ್ದು; ಕಾರಣವೇನು?

(A Decade Of IIMUN Mohan Bhagwat speaks about Vision for new India and uniting the world the Indian way )

Published On - 6:20 pm, Sun, 15 August 21

ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ
ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ