‘ನಮ್ಮ ಸ್ವಾತಂತ್ರ್ಯ ಹತ್ತಿಕ್ಕುವವರ ವಿರುದ್ಧ ಒಗ್ಗಟ್ಟಾಗಿ ಧ್ವನಿ ಎತ್ತೋಣ’ -ಮಮತಾ ಬ್ಯಾನರ್ಜಿ ಸಲಹೆ
75th Independence Day: ಸಿಎಂ ಮಮತಾ ಬ್ಯಾನರ್ಜಿ ಇಂದು 75ನೇ ಸ್ವಾತಂತ್ರ್ಯೋತ್ಸವ (75th Independence Day)ದ ನಿಮಿತ್ತ ಕೋಲ್ಕತ್ತದ ರೆಡ್ರೋಡ್ನಲ್ಲಿ ಧ್ವಜಾರೋಹಣ (Flag Hoisting) ನೆರವೇರಿಸಿ,
ಕೋಲ್ಕತ್ತ: ನಮ್ಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಎಲ್ಲ ಶಕ್ತಿಗಳ ವಿರುದ್ಧ ಒಗ್ಗಟ್ಟಾಗಬೇಕು, ನಮ್ಮ ಬಲವಾದ ಧ್ವನಿಯನ್ನು ಎತ್ತಬೇಕು ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಹೇಳಿದ್ದಾರೆ. ಇಂದು 75ನೇ ಸ್ವಾತಂತ್ರ್ಯೋತ್ಸವ (75th Independence Day)ದ ನಿಮಿತ್ತ ಕೋಲ್ಕತ್ತದ ರೆಡ್ರೋಡ್ನಲ್ಲಿ ಧ್ವಜಾರೋಹಣ (Flag Hoisting) ನೆರವೇರಿಸಿ, ಹಲವು ಪೊಲೀಸ್ ದಳಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. ಹಲವು ಪೊಲೀಸ್ ಸಿಬ್ಬಂದಿಯನ್ನು ಪುರಸ್ಕರಿಸಿದರು ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗೆ ಗೌರವ ಸಮರ್ಪಿಸಿದರು.
ಧ್ವಜಾರೋಹಣದ ಬಳಿಕ ಮಾತುಗಳನ್ನಾಡದ ಮಮತಾ ಬ್ಯಾನರ್ಜಿ ನಂತರ ಟ್ವೀಟ್ ಮಾಡಿದ್ದಾರೆ. ಈ 75ನೇ ಸ್ವಾತಂತ್ರ್ಯೋತ್ಸವದಂದು ನಾವೆಲ್ಲರೂ ಒಗ್ಗಟ್ಟಾಗೋಣ. ನಮ್ಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಶಕ್ತಿಗಳ ವಿರುದ್ಧ ಸಾಮೂಹಿಕವಾಗಿ ಧ್ವನಿ ಎತ್ತೋಣ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿ ಜೀವವನ್ನೇ ತ್ಯಾಗಮಾಡಿದವರನ್ನೆಂದು ಮರೆಯಬಾರದು. ಎಲ್ಲ ಸಹೋದರ-ಸಹೋದರಿಯರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು..ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ, ಪಶ್ಚಿಮಬಂಗಾಳ ಸರ್ಕಾರದ ವಿವಿಧ ಯೋಜನೆಗಳ, ಅಭಿಯಾನಗಳ ಬಗ್ಗೆ ಅರಿವು ಮೂಡಿಸುವ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯದರ್ಶಿ ಎಚ್.ಕೆ.ದ್ವಿವೇದಿ, ಗೃಹ ಕಾರ್ಯದರ್ಶಿ ಬಿ.ಪಿ.ಗೋಪಾಲಿಕಾ, ಕೋಲ್ಕತ್ತ ಪೊಲೀಸ್ ಆಯುಕ್ತ ಸೌಮನ್ ಮಿತ್ರಾ ಇತರರು ಇದ್ದರು.
ಇದನ್ನೂ ಓದಿ: ಕಸದ ಚೀಲದಿಂದ ಮಾನ ಮುಚ್ಚಿಕೊಂಡ ನಟಿ; ಬಿಗ್ ಬಾಸ್ ಮನೆಯಲ್ಲಿ ಯಾಕಿಂಥ ಪರಿಸ್ಥಿತಿ?
‘ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್’; ‘ಜೇಮ್ಸ್’ ಚಿತ್ರದ ಪುನೀತ್ ಪವರ್ಫುಲ್ ಲುಕ್ ಅನಾವರಣ
Published On - 3:46 pm, Sun, 15 August 21