AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fortified Rice: ಸಾರವರ್ಧಿತ ಅಕ್ಕಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆ ಮಹತ್ವದ್ದು; ಕಾರಣವೇನು?

Narendra Modi: ದೇಶದ ಪ್ರತಿಯೊಬ್ಬ ಬಡವರಿಗೂ ಪೌಷ್ಟಿಕಾಂಶ ನೀಡುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಪ್ರಧಾನಿ ಹೇಳಿದರು. "ಅಪೌಷ್ಟಿಕತೆಯು ಮಹಿಳೆಯರು ಮತ್ತು ಮಕ್ಕಳ ಬೆಳವಣಿಗೆಯಲ್ಲಿ ದೊಡ್ಡ ಅಡಚಣೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ವಿವಿಧ ಯೋಜನೆಗಳ ಅಡಿಯಲ್ಲಿ ಸಾರವರ್ಧಿತ ಅಕ್ಕಿವಿತರಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ ಅವರು.

Fortified Rice: ಸಾರವರ್ಧಿತ ಅಕ್ಕಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆ ಮಹತ್ವದ್ದು; ಕಾರಣವೇನು?
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 15, 2021 | 5:20 PM

Share

ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಯಲ್ಲಿ ಅಪೌಷ್ಟಿಕತೆಯು ಒಂದು ಅಡಚಣೆಯಾಗಿದೆ ಎಂದು ಒತ್ತಿ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2024 ರ ವೇಳೆಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಮತ್ತು ಮಧ್ಯಾಹ್ನದ ಊಟ ಯೋಜನೆ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಸಾರವರ್ಧಿತ ಅಕ್ಕಿ (fortified rice) ವಿತರಿಸುವುದಾಗಿ ಘೋಷಿಸಿದ್ದಾರೆ. 75 ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮೋದಿ, ಪಡಿತರ ಅಂಗಡಿಗಳ ಮೂಲಕ ವಿತರಿಸಿದ ಅಕ್ಕಿಯಾಗಲಿ ಅಥವಾ ಮಧ್ಯಾಹ್ನದ ಊಟದಲ್ಲಿ ಮಕ್ಕಳಿಗೆ ನೀಡುವ ಅಕ್ಕಿಯಾಗಲಿ, ಪ್ರತಿ ಯೋಜನೆಯಲ್ಲಿ 2024 ರ ವೇಳೆಗೆ ಪೌಷ್ಟಿಕಾಂಶಯುಕ್ತ ಅಕ್ಕಿ ವಿತರಿಸಲಾಗುವುದು ಎಂದು ಹೇಳಿದ್ದಾರೆ. ದೇಶದ ಪ್ರತಿಯೊಬ್ಬ ಬಡವರಿಗೂ ಪೌಷ್ಟಿಕಾಂಶ ನೀಡುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಪ್ರಧಾನಿ ಹೇಳಿದರು. “ಅಪೌಷ್ಟಿಕತೆಯು ಮಹಿಳೆಯರು ಮತ್ತು ಮಕ್ಕಳ ಬೆಳವಣಿಗೆಯಲ್ಲಿ ದೊಡ್ಡ ಅಡಚಣೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ವಿವಿಧ ಯೋಜನೆಗಳ ಅಡಿಯಲ್ಲಿ ಸಾರವರ್ಧಿತ ಅಕ್ಕಿ ವಿತರಿಸಲು ನಿರ್ಧರಿಸಲಾಗಿದೆ ಎಂದು  ಮೋದಿ ಹೇಳಿದ್ದಾರೆ.

ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ), ದೇಶದಲ್ಲಿ ಆಹಾರ ಪದಾರ್ಥಗಳಿಗೆ ಮಾನದಂಡಗಳನ್ನು ನಿಗದಿಪಡಿಸುತ್ತದೆ ಪೌಷ್ಟಿಕತೆಯನ್ನು ವ್ಯಾಖ್ಯಾನಿಸುತ್ತದೆ.ಆಹಾರದ ಪೌಷ್ಠಿಕಾಂಶದ ಗುಣಮಟ್ಟವನ್ನು ಸುಧಾರಿಸಲು ಮತ್ತು ಸಾರ್ವಜನಿಕರಿಗೆ ಒದಗಿಸಲು ಆಹಾರದಲ್ಲಿ ಅಗತ್ಯವಾದ ಸೂಕ್ಷ್ಮ ಪೋಷಕಾಂಶಗಳ ವಿಷಯವನ್ನು ಉದ್ದೇಶಪೂರ್ವಕವಾಗಿ ಹೆಚ್ಚಿಸುತ್ತದೆ.

ಎಫ್‌ಎಸ್‌ಎಸ್‌ಎಐ ಮಾನದಂಡಗಳ ಪ್ರಕಾರ, 1-ಕೆಜಿ ಸಾರವರ್ಧಿಕ ಅಕ್ಕಿಯಲ್ಲಿ ಕಬ್ಬಿಣ (28ಮೈಕ್ರೊಗ್ರಾಂ-42.5ಮೈಕ್ರೊಗ್ರಾಂ), ಫೋಲಿಕ್ ಆಸಿಡ್ (75-125 ಮೈಕ್ರೋಗ್ರಾಂ) ಮತ್ತು ವಿಟಮಿನ್ B-12 (0.75-1.25 ಮೈಕ್ರೋಗ್ರಾಮ್) ಇರಬೇಕು. ಇದರ ಜೊತೆಯಲ್ಲಿ ಅಕ್ಕಿಯನ್ನು ಮೈಕ್ರೊನ್ಯೂಟ್ರಿಯೆಂಟ್‌ಗಳೊಂದಿಗೆ, ಏಕ ಅಥವಾ ಸಂಯೋಗದೊಂದಿಗೆ ಪ್ರತಿ ಕೆಜಿಗೆ ಜಿಂಕ್ (10mg-15mg), ವಿಟಮಿನ್ A (500-750 ಮೈಕ್ರೋಗ್ರಾಮ್ RE), ವಿಟಮಿನ್ B1 (1mg-1.5mg), ವಿಟಮಿನ್ B2 (1.25) mg-1.75mg), ವಿಟಮಿನ್ B3 (12.5mg-20mg) ಮತ್ತು ವಿಟಮಿನ್ B6 (1.5mg-2.5mg) ಇರಬೇಕು.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರ ಅಡಿಯಲ್ಲಿ 300 ಲಕ್ಷ ಟನ್‌ಗಳಷ್ಟು ಅಕ್ಕಿಯನ್ನು ಸರ್ಕಾರ ವಿತರಿಸುವುದರಿಂದ ಈ ಘೋಷಣೆ ಮಹತ್ವದ್ದಾಗಿದೆ. 2021-22ರ ಅವಧಿಯಲ್ಲಿ ಕೇಂದ್ರವು NFSA ಅಡಿಯಲ್ಲಿ TPDS, MDM ಮತ್ತು ICDS ಗೆ 328 ಲಕ್ಷ ಟನ್‌ಗಳಷ್ಟು ಅಕ್ಕಿಯನ್ನು ನೀಡಿದೆ.

ವಿಶ್ವದ ಅಕ್ಕಿಯ ಉತ್ಪಾದನೆಯ ಐದನೇ ಒಂದು ಭಾಗವನ್ನು ಭಾರತ ಹೊಂದಿದೆ. ಇದು ಅಕ್ಕಿಯ ಅತಿದೊಡ್ಡ ಗ್ರಾಹಕರಾಗಿದ್ದು, ತಿಂಗಳಿಗೆ 6.8 ಕಿಲೋಗ್ರಾಂಗಳ ತಲಾ ಅಕ್ಕಿ ಬಳಕೆಯಾಗುತ್ತದೆ.  ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಕೇಂದ್ರ ಪ್ರಾಯೋಜಿತ ಪ್ರಮುಖ ಯೋಜನೆಯಾದ “ಅಕ್ಕಿಯ ಪೌಷ್ಟಿಕಾಂಶ ವರ್ಧಿಸುವುದು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ವಿತರಣೆ” ಅನ್ನು 174.64 ಕೋಟಿ ಬಜೆಟ್ ನಲ್ಲಿ 2019-20 ರಿಂದ ಆರಂಭವಾಗುವ ಮೂರು ವರ್ಷಗಳ ಅವಧಿಗೆ ಆರಂಭಿಸಿದೆ.

ಪ್ರಾಯೋಗಿಕ ಯೋಜನೆ 15 ರಾಜ್ಯಗಳ 15 ಜಿಲ್ಲೆಗಳ ಮೇಲೆ ಕೇಂದ್ರೀಕರಿಸುತ್ತದೆ. ಆಂಧ್ರಪ್ರದೇಶ, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ಗುಜರಾತ್, ಉತ್ತರ ಪ್ರದೇಶ, ಅಸ್ಸಾಂ, ತಮಿಳುನಾಡು, ತೆಲಂಗಾಣ, ಪಂಜಾಬ್, ಛತ್ತೀಸ್‌ಗಡ, ಜಾರ್ಖಂಡ್, ಉತ್ತರಾಖಂಡ ಮತ್ತು ಮಧ್ಯಪ್ರದೇಶದ ಜಿಲ್ಲೆಗಳು ಈ ಪಟ್ಟಿಯಲ್ಲಿದೆ. ಯೋಜನೆಯಡಿಯಲ್ಲಿ ಅಕ್ಕಿ ಮಿಶ್ರಣವನ್ನು ಮಿಲ್ಲಿಂಗ್ ಹಂತದಲ್ಲಿ ಮಾಡಲಾಗುತ್ತದೆ. ಸಚಿವಾಲಯದ ಪ್ರಕಾರ, ಮಹಾರಾಷ್ಟ್ರ ಮತ್ತು ಗುಜರಾತ್ 2020 ರ ಫೆಬ್ರವರಿಯಿಂದ ಮಹತ್ವದ ಯೋಜನೆಯಲ್ಲಿ ಪಿಡಿಎಸ್ ಅಡಿಯಲ್ಲಿ ಸಾರ್ವವರ್ಧಿತ ಅಕ್ಕಿಯನ್ನು ವಿತರಿಸಲು ಆರಂಭಿಸಿವೆ.

ಈ ಯೋಜನೆಯು ಈಶಾನ್ಯ, ಗುಡ್ಡಗಾಡು ಮತ್ತು ದ್ವೀಪ ರಾಜ್ಯಗಳಿಗೆ ಸಂಬಂಧಿಸಿದಂತೆ 90:10 ಅನುಪಾತದಲ್ಲಿ ಮತ್ತು ಉಳಿದವುಗಳಿಗೆ 75:25 ರ ಅನುಪಾತದಲ್ಲಿ ಭಾರತ ಸರ್ಕಾರದಿಂದ ಧನಸಹಾಯವನ್ನು ನೀಡುತ್ತದೆ. ಕೇಂದ್ರ ಬಜೆಟ್ 2021-22 ರಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಿಷನ್ ಪೋಷನ್ 2.0 ಘೋಷಿಸಿದ್ದರು. “ಪೌಷ್ಟಿಕಾಂಶದ ವಿಷಯ, ವಿತರಣೆ, ವ್ಯಾಪ್ತಿ ಮತ್ತು ಫಲಿತಾಂಶವನ್ನು ಬಲಪಡಿಸಲು, ನಾವು ಪೂರಕ ಪೌಷ್ಟಿಕಾಂಶ ಕಾರ್ಯಕ್ರಮ ಮತ್ತು ಪೋಷಣ ಅಭಿಯಾನವನ್ನು ವಿಲೀನಗೊಳಿಸುತ್ತೇವೆ ಮತ್ತು ಮಿಷನ್ ಪೋಷಣ್ 2.0 ಅನ್ನು ಪ್ರಾರಂಭಿಸುತ್ತೇವೆ” ಎಂದು ಅವರು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದರು.

ಇದನ್ನೂ ಓದಿ:75th Indian Independence Day: ಕೆಂಪುಕೋಟೆ ಮೇಲೆ ಪ್ರಧಾನಿ ಮೋದಿ ಧ್ವಜಾರೋಹಣ, ಗಗನದಲ್ಲಿ ಹಾರಿದ ತ್ರಿವರ್ಣ ಧ್ವಜ 

(Explainer PM Narendra Modi announces fortification of rice distributed under various government schemes )

Published On - 4:57 pm, Sun, 15 August 21

ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್