ಕೋಲಾರ: ಮಧ್ಯಾಹ್ನ ಮದುವೆ ರಾತ್ರಿ ನೇಣಿಗೆ ಕೊರಳೊಡ್ಡಿ ಸಾವು; ಹರೀಶ್ ಸತ್ತಿದ್ದು ಯಾಕೆಂದು ಯಾರಿಗೂ ಗೊತ್ತಿಲ್ಲ!
ಬಂಗಾರಪೇಟೆ ತಾಲೂಕಿನ ನಾಯಕರಹಳ್ಳಿ ನಿವಾಸಿಯಾಗಿದ್ದ ಹರೀಶ್ ನೇಣಿಗೆ ಕೊರಳೊಡ್ಡುವ ಮೊದಲು ಬಹಳಷ್ಟು ಮದ್ಯ ಸೇವಿಸಿದ್ದರು. ಹರೀಶ್ ಕಳೆದ ಮೂರು ದಿನಗಳಿಂದ ಕೆಲಸಕ್ಕೆ ಬಂದಿರಲಿಲ್ಲ, ಅವರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದು ಗೊತ್ತಿಲ್ಲ, ಮದುವೆಯಾಗುತ್ತಿರುವ ವಿಷಯವನ್ನು ಅಸ್ಪತ್ರೆ ಸಿಬ್ಬಂದಿಯ ಪೈಕಿ ಯಾರಿಗೂ ಮಾಹಿತಿ ಇರಲಿಲ್ಲ ಎಂದು ಡಾ ಜಗದೀಶ್ ಹೇಳುತ್ತಾರೆ.
ಕೋಲಾರ, ಜುಲೈ 3: ಜನ ಪ್ರಾಣ ಉಳಿಸಿಕೊಳ್ಳಲು ಆಸ್ಪತ್ರೆಗೆ ಬರುತ್ತಾರೆ, ಆದರೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಡೇಟ್ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್ ಬಾಬು (33) (Harish Babu) ಆಸ್ಪತ್ರೆಯ ಇಎನ್ಟಿ ವಿಭಾಗದ ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಾಬರಿಗೀಡು ಮಾಡುವ ಮತ್ತೊಂದು ಅಂಶವೆಂದರೆ, ನಿನ್ನೆಯಷ್ಟೇ ಮದುವಯಾಗಿದ್ದರು ಮತ್ತು ಅವರನ್ನು ಮದುವೆಯಾದ ಯುವತಿ ಸಹ ಇದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ. ಮಾಧ್ಯಮಗಳೊಂದಿಗೆ ಮಾತಾಡಿರುವ ವೈದ್ಯಾಧಿಕಾರಿ ಡಾ ಜಗದೀಶ್ ಪ್ರಕಾರ ಹರೀಶ್ ಉತ್ತಮ ಕೆಲಸಗಾರರಾಗಿದ್ದರು.
ಇದನ್ನೂ ಓದಿ: ತೆಲಂಗಾಣ: ನ್ಯಾಯಾಲಯದ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ, ಮಹಿಳೆ ಸಾವು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

