AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amarnath Yatra: ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ

Amarnath Yatra: ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ

ಸುಷ್ಮಾ ಚಕ್ರೆ
|

Updated on: Jul 03, 2025 | 7:58 PM

Share

ಅಮರನಾಥ ಯಾತ್ರಿಕರ ಮೊದಲ ತಂಡವು ಬಾಲ್ಟಾಲ್ ಮತ್ತು ನುನ್ವಾನ್‌ನಲ್ಲಿರುವ ಅವಳಿ ಮೂಲ ಶಿಬಿರಗಳಿಂದ ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ 3880 ಮೀಟರ್ ಎತ್ತರದ ಗುಹಾ ದೇವಾಲಯದ ಕಡೆಗೆ ಹೊರಟಿತು. ಇದು ನೈಸರ್ಗಿಕವಾಗಿ ರೂಪುಗೊಂಡ ಹಿಮಲಿಂಗವನ್ನು ಹೊಂದಿರುವ ಗುಹೆಯಾಗಿದೆ. ದಕ್ಷಿಣ ಕಾಶ್ಮೀರದ ಅನಂತನಾಗ್‌ನ ಪಹಲ್ಗಾಮ್‌ನಲ್ಲಿರುವ ನುನ್ವಾನ್ ಬೇಸ್ ಕ್ಯಾಂಪ್ ಮತ್ತು ಮಧ್ಯ ಕಾಶ್ಮೀರದ ಗಂಡರ್‌ಬಾಲ್‌ನ ಸೋನಾಮಾರ್ಗ್ ಪ್ರದೇಶದ ಬಾಲ್ಟಾಲ್ ಬೇಸ್ ಕ್ಯಾಂಪ್‌ನಿಂದ ಪುರುಷರು, ಮಹಿಳೆಯರು ಮತ್ತು ಸಾಧುಗಳು ಸೇರಿದಂತೆ ಯಾತ್ರಿಕರ ಗುಂಪುಗಳು ಬೆಳಗಿನ ಜಾವವೇ ಹೊರಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾತ್ರಿಕರು ಇಂದು ಮಧ್ಯಾಹ್ನ ಕಾಶ್ಮೀರ ಕಣಿವೆಯನ್ನು ತಲುಪಿದರು. ಅವರಿಗೆ ಆಡಳಿತ ಮತ್ತು ಸ್ಥಳೀಯರಿಂದ ಅಭೂತಪೂರ್ವ ಸ್ವಾಗತ ಸಿಕ್ಕಿತು.

ಶ್ರೀನಗರ, ಜುಲೈ 3: ಜಮ್ಮು ಮತ್ತು ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಬಿಗಿ ಭದ್ರತಾ ಕ್ರಮಗಳ ನಡುವೆ ಜುಲೈ 2ರಂದು ಅಮರನಾಥ ಯಾತ್ರೆಗೆ (Amarnath Yatra) ಭಕ್ತರ ಮೊದಲ ಬ್ಯಾಚ್ ಮೂಲ ಶಿಬಿರವನ್ನು ತಲುಪಿತು. ಇಂದು ಮುಂಜಾನೆ ಭಕ್ತರ ಮೊದಲ ತಂಡ ಅಮರನಾಥ ಗುಹೆಯತ್ತ ಹೊರಟಿತು. ನುನ್ವಾನ್ ಮತ್ತು ಬಾಲ್ಟಾಲ್ ಮೂಲ ಶಿಬಿರಗಳಿಂದ ಯಾತ್ರಾರ್ಥಿಗಳ ಮೊದಲ ಬ್ಯಾಚ್ ಹೊರಡುವ ಮೂಲಕ ಇಂದು ವಾರ್ಷಿಕ ಅಮರನಾಥ ಯಾತ್ರೆ ಪ್ರಾರಂಭವಾಯಿತು. ಈ ಅಮರನಾಥ ಗುಹೆಯ (Amarnath Cave) ದಾರಿ ಅತ್ಯಂತ ದುರ್ಗಮವಾದ ಮಾರ್ಗವಾಗಿದೆ. ಭಕ್ತರ ತಂಡ ಇಂದು ಮಧ್ಯಾಹ್ನದ ವೇಳೆಗೆ ಅಮರನಾಥ ಗುಹೆಯ ಹಿಮಲಿಂಗವನ್ನು (ಬಾಬಾ ಬರ್ಫಾನಿ) ಕಣ್ತುಂಬಿಕೊಂಡಿದ್ದು, ಗುಹೆಯ ಬಾಬಾ ಬರ್ಫಾನಿಗೆ ಇಂದು ಮೊದಲ ಆರತಿ ಮಾಡಲಾಯಿತು. ಶಿವನ ಈ ಗುಹೆಯಲ್ಲಿ ಭಕ್ತರು ಮಂತ್ರ, ಘೋಷಣೆಗಳೊಂದಿಗೆ ದೇವರ ಪೂಜೆಗೆ ಸಾಕ್ಷಿಯಾದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ