ಇಂದಿನಿಂದ ಅಮರನಾಥ ಯಾತ್ರೆ ಆರಂಭ; ಬಿಗಿ ಭದ್ರತೆಯ ನಡುವೆ ದರ್ಶನ ಪಡೆದ ಭಕ್ತರು
ವಾರ್ಷಿಕ ಅಮರನಾಥ ಯಾತ್ರೆ ಇಂದು ಪ್ರಾರಂಭವಾಯಿತು, ಯಾತ್ರಿಕರ ಮೊದಲ ತಂಡವು ಬಾಲ್ಟಾಲ್ ಮತ್ತು ನುನ್ವಾನ್‌ನಲ್ಲಿರುವ ಅವಳಿ ಮೂಲ ಶಿಬಿರಗಳಿಂದ ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ 3880 ಮೀಟರ್ ಎತ್ತರದ ಗುಹಾ ದೇವಾಲಯದ ಕಡೆಗೆ ಹೊರಟಿತು. ಇದು ನೈಸರ್ಗಿಕವಾಗಿ ರೂಪುಗೊಂಡ ಹಿಮಲಿಂಗವನ್ನು ಹೊಂದಿರುವ ಗುಹೆಯಾಗಿದೆ.

ನವದೆಹಲಿ, ಜುಲೈ 3: ಇಂದಿನಿಂದ ಅಮರನಾಥ ಯಾತ್ರೆ (Amarnath Yatra) ಆರಂಭವಾಗಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಬುಧವಾರ ಜಮ್ಮುವಿನಿಂದ ಬಂದ 5,892 ಯಾತ್ರಿಕರ ಮೊದಲ ತಂಡಕ್ಕೆ ಹಸಿರು ನಿಶಾನೆ ತೋರಿದರು. ಅಮರನಾಥ ಯಾತ್ರೆ ಎರಡು ಮಾರ್ಗಗಳ ಮೂಲಕ ಮುಂದುವರಿಯುತ್ತದೆ. ಒಂದು ಪಹಲ್ಗಾಮ್‌ನಿಂದ ಸಾಂಪ್ರದಾಯಿಕ 48 ಕಿಮೀ ಮಾರ್ಗ ಮತ್ತೊಂದು 14 ಕಿಮೀ ಕಡಿಮೆ ಉದ್ದದ ಬಾಲ್ಟಾಲ್ ಚಾರಣ. ಇಂದಿನಿಂದ ಶುರುವಾದ 38 ದಿನಗಳ ಈ ಯಾತ್ರೆ ಆಗಸ್ಟ್ 9ರಂದು ಕೊನೆಗೊಳ್ಳಲಿದೆ.
ಅಮರನಾಥ ಯಾತ್ರಿಕರ ಮೊದಲ ತಂಡವು ಬಾಲ್ಟಾಲ್ ಮತ್ತು ನುನ್ವಾನ್‌ನಲ್ಲಿರುವ ಅವಳಿ ಮೂಲ ಶಿಬಿರಗಳಿಂದ ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ 3880 ಮೀಟರ್ ಎತ್ತರದ ಗುಹಾ ದೇವಾಲಯದ ಕಡೆಗೆ ಹೊರಟಿತು. ಇದು ನೈಸರ್ಗಿಕವಾಗಿ ರೂಪುಗೊಂಡ ಹಿಮಲಿಂಗವನ್ನು ಹೊಂದಿರುವ ಗುಹೆಯಾಗಿದೆ. ದಕ್ಷಿಣ ಕಾಶ್ಮೀರದ ಅನಂತನಾಗ್‌ನ ಪಹಲ್ಗಾಮ್‌ನಲ್ಲಿರುವ ನುನ್ವಾನ್ ಬೇಸ್ ಕ್ಯಾಂಪ್ ಮತ್ತು ಮಧ್ಯ ಕಾಶ್ಮೀರದ ಗಂಡರ್‌ಬಾಲ್‌ನ ಸೋನಾಮಾರ್ಗ್ ಪ್ರದೇಶದ ಬಾಲ್ಟಾಲ್ ಬೇಸ್ ಕ್ಯಾಂಪ್‌ನಿಂದ ಪುರುಷರು, ಮಹಿಳೆಯರು ಮತ್ತು ಸಾಧುಗಳು ಸೇರಿದಂತೆ ಯಾತ್ರಿಕರ ಗುಂಪುಗಳು ಬೆಳಗಿನ ಜಾವವೇ ಹೊರಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾತ್ರಿಕರು ಇಂದು ಮಧ್ಯಾಹ್ನ ಕಾಶ್ಮೀರ ಕಣಿವೆಯನ್ನು ತಲುಪಿದರು. ಅವರಿಗೆ ಆಡಳಿತ ಮತ್ತು ಸ್ಥಳೀಯರಿಂದ ಅಭೂತಪೂರ್ವ ಸ್ವಾಗತ ಸಿಕ್ಕಿತು.
Amarnath Yatra 2025 begins under heavy security.
🚨 50,000 troops deployed, drones & RFID tracking in place. 📍 8,000+ pilgrims set off today chanting Bam Bam Bhole, undeterred by threats.
India’s resolve > terror.#AmarnathYatra #JammuAndKashmir pic.twitter.com/fHPL0DNZMT
— Deepti Sachdeva (@DeeptiSachdeva_) July 3, 2025
ಇದನ್ನೂ ಓದಿ: ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
ಅಮರನಾಥ ಯಾತ್ರೆಗೆ ಭದ್ರತೆಗಾಗಿ ಪೊಲೀಸರು, ಕೇಂದ್ರ ಮೀಸಲು ಪೊಲೀಸ್ ಪಡೆ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಮತ್ತು ಇತರ ಅರೆಸೈನಿಕ ಪಡೆಗಳಿಂದ ಸಾವಿರಾರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಡ್ರೋನ್ ಕ್ಯಾಮೆರಾ ಕೂಡ ಅಳವಡಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ