ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
ಜುಲೈ 3 ರಂದು ಪ್ರಾರಂಭವಾಗಲಿರುವ ಅಮರನಾಥ ಯಾತ್ರೆಯಲ್ಲಿ ಈಗಾಗಲೇ 3.3 ಲಕ್ಷಕ್ಕೂ ಹೆಚ್ಚು ಯಾತ್ರಿಕರು ನೋಂದಾಯಿಸಿಕೊಂಡಿದ್ದಾರೆ. ಆಡಳಿತವು 50,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ. ಜೊತೆಗೆ ಡ್ರೋನ್ ಕಣ್ಗಾವಲು, ಮುಖ ಗುರುತಿಸುವಿಕೆ ವ್ಯವಸ್ಥೆಗಳು ಮತ್ತು ಬಹು-ಪದರದ ಭದ್ರತಾ ಗ್ರಿಡ್‌ಗಳನ್ನು ನಿಯೋಜಿಸಿದೆ. ಈ ಬೆಂಗಾವಲು ಯಾತ್ರೆಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಚಾಲನೆ ನೀಡಿದರು. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಅದರಲ್ಲೂ ಹೆಚ್ಚಾಗಿ ಪ್ರವಾಸಿಗರು ಸಾವನ್ನಪ್ಪಿದ 2 ತಿಂಗಳಿಗಿಂತ ಹೆಚ್ಚು ಸಮಯದ ನಂತರ ಈ ವರ್ಷದ ಅಮರನಾಥ ಯಾತ್ರೆ ಆರಂಭವಾಗಲಿದೆ.
ಶ್ರೀನಗರ, ಜುಲೈ 2: ಅಮರನಾಥ ಯಾತ್ರಿಕರು (Amarnath Yatris) ಪಹಲ್ಗಾಮ್‌ನ (Pahalgam) ನುನ್ವಾನ್ ತಲುಪಿದ್ದಾರೆ. ಅಲ್ಲಿ ಯಾತ್ರಾ ನೋಡಲ್ ಅಧಿಕಾರಿ ರಾಹುಲ್ ಯಾದವ್, ಡಿಸಿ ಸೈಯದ್ ಫಕ್ರುದ್ದೀನ್ ಹಮೀದ್ ಮತ್ತು ಎಸ್‌ಎಸ್‌ಪಿ ಅಮೃತ್‌ಪಾಲ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಅವರನ್ನು ಸ್ವಾಗತಿಸಿದರು. ಯಾತ್ರಿಕರು ನಾಳೆ (ಜುಲೈ 3) ಪವಿತ್ರವಾದ ಅಮರನಾಥನ ಗುಹೆಗೆ ತೆರಳಲಿದ್ದಾರೆ. ಇಂದು 5,880 ಯಾತ್ರಿಕರ ಮೊದಲ ಬ್ಯಾಚ್ ಜಮ್ಮುವಿನ ಭಗವತಿ ನಗರ ಮೂಲ ಶಿಬಿರದಿಂದ ಹೊರಟು ಕಣಿವೆ ತಲುಪಿತು. ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ 3,880 ಮೀಟರ್ ದೇವಾಲಯಕ್ಕೆ 38 ದಿನಗಳ ತೀರ್ಥಯಾತ್ರೆ ಗುರುವಾರ ಪ್ರಾರಂಭವಾಗುತ್ತದೆ.
ಈ ಬೆಂಗಾವಲು ಯಾತ್ರೆಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಚಾಲನೆ ನೀಡಿದರು. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಅದರಲ್ಲೂ ಹೆಚ್ಚಾಗಿ ಪ್ರವಾಸಿಗರು ಸಾವನ್ನಪ್ಪಿದ 2 ತಿಂಗಳಿಗಿಂತ ಹೆಚ್ಚು ಸಮಯದ ನಂತರ ಈ ವರ್ಷದ ಅಮರನಾಥ ಯಾತ್ರೆ ಆರಂಭವಾಗಲಿದೆ. ಮೊದಲ ಬ್ಯಾಚ್‌ನಲ್ಲಿ, 2489 ಯಾತ್ರಿಕರು ಬಾಲ್ಟಾಲ್ ಮೂಲಕ ಮತ್ತು 3,403 ಯಾತ್ರಿಕರು ಪಹಲ್ಗಾಮ್ ಮೂಲಕ ಯಾತ್ರೆ ಕೈಗೊಳ್ಳಲಿದ್ದಾರೆ. ಈ ವರ್ಷ ಯಾತ್ರೆಗೆ ನೋಂದಾಯಿಸಿಕೊಂಡಿರುವ 3.31 ಲಕ್ಷ ಯಾತ್ರಿಕರಲ್ಲಿ ಹೆಚ್ಚಿನವರು ಪಹಲ್ಗಾಮ್ ಮಾರ್ಗದಿಂದ ಹೋಗಲು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ವರ್ಷ, ಈ ಯಾತ್ರೆಯು 12 ವರ್ಷಗಳಲ್ಲಿ ಅತಿ ಹೆಚ್ಚು ಪಾದಯಾತ್ರೆಯನ್ನು ದಾಖಲಿಸಿದ್ದು, 5 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಗುಹೆಗೆ ಭೇಟಿ ನೀಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ